ಬಿಸಿಲೆರಿ ವಾಟರ್ ಡೀಲರ್ಶಿಪ್ ಬಿಸಿನೆಸ್ ಮಾಡಿ! ಪ್ರತಿ ತಿಂಗಳು 80,000 ಆದಾಯ

ಈ ಬಿಸಿನೆಸ್ ಆರಂಭಿಸಿದರೆ ಪ್ರತಿ ತಿಂಗಳು 80,000 ಆದಾಯ; ನೀವು ತೆಗೆದುಕೊಳ್ಳಿ ಡೀಲರ್ಶಿಪ್!

ನಿಮಗೆ ಕಚೇರಿಗೆ ಹೋಗಿ ಕೆಲಸ ಮಾಡಲು ಆಸಕ್ತಿ ಇಲ್ವಾ? ನಿಮ್ಮದೇ ಆಗಿರುವ ಸ್ವಂತ ಉದ್ಯಮ (own business) ಆರಂಭಿಸಬೇಕು ಎಂದುಕೊಂಡಿದ್ದೀರಾ? ಹಾಗಾದ್ರೆ ಈ ಲೇಖನ ನಿಮಗಾಗಿ.

ಹಳ್ಳಿಯಾಗಿರಲಿ ಅಥವಾ ನಗರ ಪ್ರದೇಶವೇ ಇರಲಿ ನಮಗೆ ಮನಸ್ಸು ಇದ್ದರೆ ಎಂತಹ ಉದ್ಯಮವನ್ನಾದರೂ ಮಾಡಿ ಸಕ್ಸಸ್ ಆಗಬಹುದು ಎನ್ನುವುದಕ್ಕೆ ಸಾಕಷ್ಟು ಇವತ್ತಿನ ಯುವಕರು ಮಾದರಿಯಾಗಿದ್ದಾರೆ.

ಕೋವಿಡ್ – 19 ಸಮಯದಲ್ಲಿ ನಗರವನ್ನು ಬಿಟ್ಟು ಊರುಗಳಿಗೆ ಪ್ರವೇಶಿಸಿದ ಯುವಕರು ಸ್ವಂತ ಉದ್ಯಮ ಮಾಡಲು ಆರಂಭಿಸಿದ್ದಾರೆ, ಹಾಗಾಗಿ ನೀವು ಕೂಡ ನಿಮ್ಮದೇ ಆಗಿರುವ ಉದ್ಯಮ ಆರಂಭಿಸಲು ಬಯಸಿದರೆ ಒಂದು ಉತ್ತಮ ಡೀಲರ್ಶಿಪ್ ಇಲ್ಲಿದೆ ನೋಡಿ.

ಬಿಸಿಲೆರಿ ವಾಟರ್ ಡೀಲರ್ಶಿಪ್ ಬಿಸಿನೆಸ್ ಮಾಡಿ! ಪ್ರತಿ ತಿಂಗಳು 80,000 ಆದಾಯ - Kannada News

ಮಹಿಳೆಯರಿಗೆ ₹15,000 ಸಿಗುವ ಮತ್ತೊಂದು ಬಂಪರ್ ಯೋಜನೆ! ಇಲ್ಲಿದೆ ಮಾಹಿತಿ

ಬಿಸಲರಿ ಬಾಟಲ್ ಮಾರಾಟ ಮಾಡುವ ಡೀಲರ್ಶಿಪ್ ತೆಗೆದುಕೊಳ್ಳಿ! (Bisleri water bottle dealership)

ದೇಶದಲ್ಲಿ ವಾಟರ್ ಬಾಟಲ್ ಸಪ್ಲೈ ಮಾಡುವ ಹೆಸರಾಂತ ಕಂಪನಿ ಬಿಸ್ಲರಿ. ನೀವು ಈ ಕಂಪನಿಯ ಫ್ರಾಂಚೈಸಿ (bisleri company franchise) ತೆಗೆದುಕೊಂಡರೆ ಸುಲಭವಾಗಿ ಆದಾಯ ಗಳಿಸಬಹುದು.

ನಿಮ್ಮದೇ ಆಗಿರುವ ಸ್ವಂತ ಉದ್ಯಮ ಆರಂಭಿಸಬೇಕು, ಆದರೆ ಅದಕ್ಕೆ ಸರಿಯಾದ ಐಡಿಯಾ ಇಲ್ಲ ಎಂದು ಯೋಚನೆ ಮಾಡುತ್ತಿದ್ದರೆ ಇದು ನಿಮಗೆ ಅತ್ಯುತ್ತಮ ಆಯ್ಕೆಯಾಗಲಿದೆ. ನೀವು ಯಾವುದೇ ಸ್ಥಳದಲ್ಲಿ ಬಿಸಿಲರಿ ವಾಟರ್ ಬಾಟಲ್ ಮಾರಾಟ ಮಾಡುವ ಡೀಲರ್ಶಿಪ್ ತೆಗೆದುಕೊಂಡು ಹೆಚ್ಚಿನ ಆದಾಯ ಗಳಿಸಿಕೊಳ್ಳಬಹುದು.

ಒಬ್ಬ ವ್ಯಕ್ತಿ ಎಷ್ಟು ಬ್ಯಾಂಕ್ ಅಕೌಂಟ್ ಹೊಂದಿರಬಹುದು ಗೊತ್ತ; ಹೊಸ ರೂಲ್ಸ್

ಬಿಸಿಲರಿ ಫ್ರಾಂಚೈಸಿ ಆರಂಭಿಸುವುದು ಹೇಗೆ? (How to get Bisleri franchise)

Own Businessಬಿಸಿಲಿರಿ ಕಂಪನಿ, ದೇಶದಾದ್ಯಂತ 112 ಪ್ಲಾಂಟ್ ಗಳನ್ನು ಹೊಂದಿದೆ. ಇದರಲ್ಲಿ 13 ಪ್ಲಾಂಟ್ ಗಳನ್ನು ಮಾತ್ರ ಸ್ವಂತವಾಗಿ ನಿರ್ವಹಿಸುತ್ತಿದ್ದರೆ ಉಳಿದವುಗಳನ್ನು ಡೀಲರ್ಶಿಪ್ ಕೊಡಲಾಗಿದೆ.

ಬಿಸಿಲರಿ ಕಂಪನಿ ದೇಶದ ಅತ್ಯಂತ 4,500 ಡಿಸ್ಟ್ರಿಬ್ಯೂಟರ್ ಹಾಗೂ 5,000 ಬಿಸಿಲರಿ ಬಾಟಲ್ ಸಪ್ಲೈ ಮಾಡುವಂತಹ ಟ್ರಕ್ ಹೊಂದಿದೆ. ನೀರು ಯಾವುದೇ ಕಾರಣಕ್ಕೂ ಕಡಿಮೆ ಆಗದೆ ಇರುವ ಬೇಡಿಕೆ ವಸ್ತು. ಹಾಗಾಗಿ ಬಿಸಿಲರಿ ಬಾಟಲ್ ಬಿಸಿನೆಸ್ ಕೂಡ ಯಾವುದೇ ಕಾರಣಕ್ಕೂ ಕೈಕೊಡುವುದಿಲ್ಲ!

ಬಿಸಲರಿ ಬಿಸಿನೆಸ್ ಆರಂಭಿಸುವುದಾದರೆ ನೀವು ಯಾವುದಕ್ಕೆ ಡೀಲರ್ ಶಿಪ್ ತೆಗೆದುಕೊಳ್ಳುತ್ತೀರಿ ಎನ್ನುವುದರ ಆಧಾರದ ಮೇಲೆ ಅಷ್ಟು ಸ್ಥಳಾವಕಾಶ ನಿಮಗೆ ಬೇಕು. ಉದಾಹರಣೆಗೆ ಆಫೀಸ್ ಸ್ಪೇಸ್ ಅಷ್ಟೇ ಮಾಡಿಕೊಳ್ಳುವುದಿದ್ದರೆ 200 ರಿಂದ 300 ಸ್ಕ್ವೇರ್ ಫೀಟ್ ಜಾಗ ಸಾಕು ಆದರೆ ನೀವು ಪ್ಲಾಂಟ್ ಆರಂಭಿಸುವುದಾದರೆ ಹೆಚ್ಚಿನ ಜಾಗ ಬೇಕಾಗುತ್ತದೆ.

ನೀರಿನ ಬಾಟಲ್ ಸಂಗ್ರಹಣೆಗೆ ಟ್ರಕ್ ನಿಂದ ಲೋಡಿಂಗ್ ಅಂಡ್ ಲೋಡಿಂಗ್ ಮಾಡಿಸಿಕೊಳ್ಳಲು ಸುಮಾರು 1500 ರಿಂದ 2000 ಸ್ಕ್ವೇರ್ ಫಿಟ್ ಜಾಗ ಬೇಕು. ಹಾಗಾಗಿ ಹೆಚ್ಚು ವಿಸ್ತಾರವಾಗಿರುವ ಜಾಗ ಹೊಂದಿದ್ದರೆ ಈ ಡೀಲರ್ಶಿಪ್ ಪಡೆದುಕೊಳ್ಳಲು ಸುಲಭವಾಗುತ್ತದೆ.

ಈ ಎಲ್ಐಸಿ ಯೋಜನೆಯಲ್ಲಿ ಪ್ರತಿ ತಿಂಗಳು 12,338 ರೂಪಾಯಿ ಪಿಂಚಣಿ ಸಿಗುತ್ತೆ!

ಫ್ರಾಂಚೈಸಿ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳು!

ಆಧಾರ್ ಕಾರ್ಡ್
ವಿಳಾಸದ ಪುರಾವೆ
ಎಲ್ಲಿ ಆರಂಭಿಸುತ್ತೀರಿ ಎನ್ನುವ ಸ್ಥಳದ ಪುರಾವೆ
ಪ್ಯಾನ್ ಕಾರ್ಡ್ ಸಂಖ್ಯೆ
ಎನ್ ಓ ಸಿ ಸರ್ಟಿಫಿಕೇಟ್
ಬ್ಯಾಂಕ್ ಖಾತೆಯ ವಿವರ
Gst ಸಂಖ್ಯೆ
ಕಚೇರಿಯ ಅಥವಾ ಗೋಡನ್ ಜಾಗಕ್ಕೆ ಇರುವ ಅಗ್ರಿಮೆಂಟ್ (ಸ್ವಂತದಲ್ಲದೆ ಬಾಡಿಗೆ ತೆಗೆದುಕೊಳ್ಳುವುದಾದರೆ)

ಈ ಯೋಜನೆಯಲ್ಲಿ ಪ್ರತಿ ತಿಂಗಳು 20 ಸಾವಿರ ಬಡ್ಡಿಯೇ ಸಿಗುತ್ತೆ! ಹೇಗೆ ಗೊತ್ತಾ?

ಬಿಸಿಲರಿ ವಾಟರ್ ಬಾಟಲ್ ಡೀಲರ್ಶಿಪ್ ಪಡೆದುಕೊಳ್ಳುವುದು ಹೇಗೆ?

ನಿಮ್ಮಲ್ಲಿ ಮಾರ್ಕೆಟಿಂಗ್ ಸ್ಕಿಲ್ಸ್ (marketing skills) ಇದ್ದರೆ ಉತ್ತಮವಾಗಿ ನೀವು ಮಾತನಾಡಬಲ್ಲವರಾಗಿದ್ದರೆ ಸುಲಭವಾಗಿ ಈ ದಿನ ಪಡೆದುಕೊಳ್ಳಬಹುದು ಇನ್ನು ಬಂಡವಾಳದ ವಿಚಾರಕ್ಕೆ ಬಂದರೆ ಎರಡರಿಂದ ನಾಲ್ಕು ಲಕ್ಷ ರೂಪಾಯಿಗಳ ಆರಂಭಿಕ ಬಂಡವಾಳ ಬೇಕು.

ನೀವು ಉತ್ತಮವಾಗಿ ವ್ಯಾಪಾರ ಮಾಡುವ ಮನೋಭಾವ ಹೊಂದಿದ್ದರೆ ಹಾಗೂ ಆ ಚಾಕಚಕ್ಯತೆ ನಿಮ್ಮಲ್ಲಿ ಇದ್ದರೆ ಪ್ರತಿ ತಿಂಗಳು 80,000 ಕ್ಕಿಂತ ಹೆಚ್ಚಿನ ಆದಾಯವನ್ನು ಗಳಿಸಿಕೊಳ್ಳಬಹುದು. ಇನ್ನು ಬಿಸಿಲರಿ ವಾಟರ್ ಬಾಟಲ್ ಮಾರಾಟಕ್ಕೆ ಪ್ರತಿ ಬಾಟಲ್ ಮೇಲೆ 10% ನಷ್ಟು ಮಾರ್ಜಿನ್ ಸಿಗುತ್ತದೆ. ಹಾಗಾಗಿ ಉತ್ತಮ ಆದಾಯ ನಿಶ್ಚಿತ.

ಬಿಸಿಲರಿ ವಾಟರ್ ಬಾಟಲ್ ಡೀಲರ್ಶಿಪ್ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಹಾಗೂ ಅರ್ಜಿ ಸಲ್ಲಿ https://www.bisleri.com/distributor ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. ಬಿಸ್ಲರಿ ವಾಟರ್ ಬಾಟಲ್ ಡೀಲರ್ಶಿಪ್ ಪಡೆದುಕೊಂಡು ಉತ್ತಮ ಆದಾಯ ಗಳಿಸಿಕೊಳ್ಳಿ.

Bisleri Water Dealership Business, 80,000 income per month

Follow us On

FaceBook Google News

Bisleri Water Dealership Business, 80,000 income per month