ಈ ಎಲ್ಐಸಿ ಯೋಜನೆಯಲ್ಲಿ ಪ್ರತಿ ತಿಂಗಳು 12,338 ರೂಪಾಯಿ ಪಿಂಚಣಿ ಸಿಗುತ್ತೆ!

ಭಾರತೀಯ ಜೀವ ವಿಮಾ ಕಂಪನಿ ಎಲ್ಐಸಿ ಹಿರಿಯ ನಾಗರಿಕ (senior citizen) ರಿಗಾಗಿಯೇ ಸರಳ್ ಪಿಂಚಣಿ ಯೋಜನೆಯನ್ನು (saral pension plan) ಪರಿಚಯಿಸಿದೆ.

ದೇಶದ ಎಲ್ಲಾ ವರ್ಗದ ಜನರಿಗೆ ಅನುಕೂಲವಾಗುವಂತಹ ಉಳಿತಾಯ ಯೋಜನೆಗಳನ್ನ ಪರಿಚಯಿಸಿದೆ ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ – LIC (Life Insurance Corporation of India).

ದೇಶದ ಅತಿ ದೊಡ್ಡ ವಿಮಾ ಕಂಪನಿ ಇದಾಗಿದ್ದು ಸಾಕಷ್ಟು ವರ್ಷಗಳಿಂದ ಗ್ರಾಹಕರ ನಂಬಿಕೆ ಮತ್ತು ಮೆಚ್ಚುಗೆ ಗಳಿಸಿಕೊಂಡಿದೆ. ಬೇರೆ ಬೇರೆ ವರ್ಗದವರು ಎಲ್ ಐ ಸಿ ಯಲ್ಲಿ ಇರುವ ಬೇರೆ ಬೇರೆ ರೀತಿಯ ಉಳಿತಾಯ ಯೋಜನೆ ಹಾಗೂ ಇನ್ಸೂರೆನ್ಸ್ ಗಳನ್ನು ಮಾಡಿಸಿ ಕೊಂಡು ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಬಹುದು.

ಈ ಯೋಜನೆಯಲ್ಲಿ ಪ್ರತಿ ತಿಂಗಳು 20 ಸಾವಿರ ಬಡ್ಡಿಯೇ ಸಿಗುತ್ತೆ! ಹೇಗೆ ಗೊತ್ತಾ?

ಈ ಎಲ್ಐಸಿ ಯೋಜನೆಯಲ್ಲಿ ಪ್ರತಿ ತಿಂಗಳು 12,338 ರೂಪಾಯಿ ಪಿಂಚಣಿ ಸಿಗುತ್ತೆ! - Kannada News

ಎಲ್ಐಸಿ ಸರಳ ಪಿಂಚಣಿ ಯೋಜನೆ! (LIC saral pension plan)

ಭಾರತೀಯ ಜೀವ ವಿಮಾ ಕಂಪನಿ ಎಲ್ಐಸಿ ಹಿರಿಯ ನಾಗರಿಕ (senior citizen) ರಿಗಾಗಿಯೇ ಸರಳ್ ಪಿಂಚಣಿ ಯೋಜನೆಯನ್ನು (saral pension plan) ಪರಿಚಯಿಸಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಉತ್ತಮ ಲಾಭವನ್ನು ಪಡೆದುಕೊಳ್ಳಬಹುದು.

ನಿವೃತ್ತಿಯ ನಂತರದ ಜೀವನ ಆರ್ಥಿಕವಾಗಿ ಉತ್ತಮವಾಗಿರಲು ಈ ಯೋಜನೆಯಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು. ಇಲ್ಲಿ ತ್ರೈಮಾಸಿಕ, ಅರ್ಧವಾರ್ಷಿಕ ಹಾಗೂ ವಾರ್ಷಿಕ ಪ್ರೀಮಿಯಂ ಅನ್ನು ಆಯ್ಕೆ ಮಾಡಿಕೊಳ್ಳಲು ಗ್ರಾಹಕರಿಗೆ ಅವಕಾಶವಿದೆ. ಜೀವ ವಿಮಾ ಕಂಪನಿ ಪರಿಚಯಿಸಿರುವ ಸರಳ್ ಪಿಂಚಣಿ ಯೋಜನೆಯಲ್ಲಿ ಒಬ್ಬ ವ್ಯಕ್ತಿ ಅಥವಾ ಜಂಟಿಯಾಗಿ ಪಾಲಿಸಿ ಖರೀದಿ ಮಾಡಬಹುದು.

ಬಡವರಿಗೆ ವಸತಿ ಯೋಜನೆ! ಸ್ವಂತ ಮನೆ ಕಟ್ಟಿಕೊಳ್ಳಲು ಸಿಗುತ್ತೆ ಸಬ್ಸಿಡಿ ಸಾಲ

LIC Policyಎಲ್ಐಸಿಆರ್ ಸರಳ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡುವ ಗರಿಷ್ಠ ಮೊತ್ತ ಎಷ್ಟು ಎಂದು ನಿಗದಿ ಪಡಿಸಿಲ್ಲ. ಹಾಗಾಗಿ ನೀವು ನಿಮ್ಮ ಭವಿಷ್ಯದ ಆದಾಯ ಎಷ್ಟಿರಬೇಕು ಎನ್ನುವುದರ ಆಧಾರದ ಮೇಲೆ ಅಷ್ಟು ಮೊತ್ತವನ್ನು ಹೂಡಿಕೆ ಮಾಡಬಹುದು.

ನೀವು ಹೆಚ್ಚಿನ ಹಣವನ್ನು ಹೂಡಿಕೆ (Investment) ಮಾಡಿದರೆ ಹೆಚ್ಚು ಲಾಭವನ್ನು ಪಡೆದುಕೊಳ್ಳುತ್ತೀರಿ. ಈ ಪಾಲಿಸಿ ಅಡಿ ಪ್ರತಿ ತಿಂಗಳು ಪಿಂಚಣಿ (pension) ಹಣವನ್ನು ಪಡೆದುಕೊಳ್ಳಬಹುದು. ಮಧ್ಯಮ ವರ್ಗದವರು ಹೂಡಿಕೆ ಮಾಡಲು ಅತ್ಯುತ್ತಮ ಆಯ್ಕೆ ಇದಾಗಿದೆ. ಇದರದಲ್ಲಿ ವರ್ಷಾಶನ ಪಡೆದುಕೊಳ್ಳಲು ಅವಕಾಶ ಇದೆ. ನಿವೃತ್ತಿಯ ನಂತರ ಪ್ರತಿ ತಿಂಗಳು ಪಿಂಚಣಿ ಪಡೆದುಕೊಳ್ಳಲು ಈ ಯೋಜನೆ ಸಹಕಾರಿಯಾಗಿದೆ.

ಇನ್ನು ಸರಳ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಲು ವಿವಿಧ ಪ್ರೀಮಿಯಂ (premium) ಆಯ್ದು ಕೊಳ್ಳಬಹುದು ಅಥವಾ ಏಕ ಪ್ರೀಮಿಯಂ ಆಯ್ದು ಕೊಳ್ಳಬಹುದು

ಫೋನ್ ಪೇ, ಯುಪಿಐ ಪೇಮೆಂಟ್ ಮಾಡೋರಿಗೆ ಬಿಗ್ ಅಪ್ಡೇಟ್! ಹೊಸ ನಿಯಮ

ನೀವು ಹೆಚ್ಚಿನ ಮೊತ್ತದ ಹಣವನ್ನು ಒಂದೇ ಬಾರಿಗೆ ಡಿಪಾಸಿಟ್ ಮಾಡಬಹುದು. ಇನ್ನು ಎಲ್ ಐ ಸಿ ಸರಳ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಿ ವರ್ಷಕ್ಕೆ ಎರಡು ವರ್ಷಕ್ಕೆ ಅಥವಾ ಮೂರು ವರ್ಷಕ್ಕೆ ನಿಮ್ಮ ಆಯ್ಕೆಗೆ ಅನುಗುಣವಾಗಿ ನೀವು ಹಣವನ್ನು ಹಿಂಪಡೆಯಬಹುದು.

ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಎಲ್ಐಸಿ ಏಜೆಂಟ್ ಗಳನ್ನು ಸಂಪರ್ಕಿಸಿ ಅಥವಾ www.licindia.in ಈ ವೆಬ್ಸೈಟ್ನಲ್ಲಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ.

In this LIC scheme, you will get a pension of 12,338 rupees every month

Follow us On

FaceBook Google News

In this LIC scheme, you will get a pension of 12,338 rupees every month