ಈ ಯೋಜನೆಯಲ್ಲಿ ಪ್ರತಿ ತಿಂಗಳು 20 ಸಾವಿರ ಬಡ್ಡಿಯೇ ಸಿಗುತ್ತೆ! ಹೇಗೆ ಗೊತ್ತಾ?
ನಿವೃತ್ತಿಯ ನಂತರದ ಬದುಕು ಆರ್ಥಿಕವಾಗಿ ಯಾವ ಸಮಸ್ಯೆಯನ್ನು ಅನುಭವಿಸಬಾರದು ಅಂದ್ರೆ, ಇಷ್ಟು ವರ್ಷ ಎಷ್ಟು ಹಣವನ್ನು ದುಡಿದಿರುತ್ತೀರೋ ಅದರಲ್ಲಿ ಒಂದಷ್ಟು ಪಾಲನ್ನು ಸ್ಥಿರ ಠೇವಣಿ (fixed deposit) ಅಥವಾ ಉಳಿತಾಯ ಯೋಜನೆ (savings scheme) ಯಲ್ಲಿ ಹಾಕಿಬಿಡಬೇಕು.
ಆಗ ಅರವತ್ತು ವರ್ಷದ ನಂತರ ಯಾವುದೇ ಆರ್ಥಿಕ ಸಮಸ್ಯೆ ಇಲ್ಲದೆ, ಜೀವನ ನಡೆಸಲು ಸಾಧ್ಯವಾಗುತ್ತದೆ. ನಿವೃತ್ತಿಯ ನಂತರ ತಿಂಗಳ ಸಂಬಳ ಬರುವುದಿಲ್ಲ. ಹಾಗಾಗಿ ಆ ರೀತಿ ಹಣ ಬರುವಂತೆ ಮಾಡಿಕೊಳ್ಳಲು ನಿಶ್ಚಿತ ಠೇವಣಿ ಅಥವಾ ಉಳಿತಾಯ ಯೋಜನೆಗಳು ಲಭ್ಯವಿವೆ.
ಬಡವರಿಗೆ ವಸತಿ ಯೋಜನೆ! ಸ್ವಂತ ಮನೆ ಕಟ್ಟಿಕೊಳ್ಳಲು ಸಿಗುತ್ತೆ ಸಬ್ಸಿಡಿ ಸಾಲ
ಅಂಚೆ ಕಚೇರಿಯ ಉಳಿತಾಯ ಖಾತೆ! (Indian post office savings scheme)
ಹಿರಿಯ ನಾಗರಿಕರ (senior citizens FD Scheme) ಎಫ್ ಡಿ ಮೇಲೆ ಉತ್ತಮ ಬಡ್ಡಿ ದರವನ್ನು ಬ್ಯಾಂಕ್ ನೀಡುತ್ತಿದ್ದರು ಕೂಡ ಅಂಚೆ ಕಚೇರಿಯಲ್ಲಿ ಹಿರಿಯ ನಾಗರಿಕರ ಉಳಿತಾಯ ಖಾತೆ ತೆರೆದರೆ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದು.
ಇದರಲ್ಲಿ ನೀವು ಹೂಡಿಕೆ ಮಾಡುವ ಹಣದ ಆಧಾರದ ಮೇಲೆ ನೀವು ಹಿಂಪಡೆಯುವ ತಿಂಗಳ ಬಡ್ಡಿ ನಿರ್ಧಾರ ಆಗುತ್ತದೆ. ಹಾಗಾಗಿ ಕನಿಷ್ಠ ಸಾವಿರ ರೂಪಾಯಿಗಳಿಂದ ನೀವು ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
ಫೋನ್ ಪೇ, ಯುಪಿಐ ಪೇಮೆಂಟ್ ಮಾಡೋರಿಗೆ ಬಿಗ್ ಅಪ್ಡೇಟ್! ಹೊಸ ನಿಯಮ
ಎಷ್ಟು ಹೂಡಿಕೆ ಮಾಡಿದ್ರೆ ಎಷ್ಟು ಸಿಗುತ್ತೆ ಲಾಭ?
60 ವರ್ಷ ಮೇಲ್ಪಟ್ಟವರು ತಮ್ಮ ವೃತ್ತಿ ಜೀವನದಲ್ಲಿ ದುಡಿದ ಹಣವನ್ನು ಅಂಚೆ ಕಚೇರಿಯ ಉಳಿತಾಯ ಖಾತೆ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. 55 ವರ್ಷಕ್ಕೆ ವಿ ಆರ್ ಎಸ್ ತೆಗೆದುಕೊಳ್ಳುವವರು ಕೂಡ ಹೂಡಿಕೆ ಮಾಡಲು ಅವಕಾಶವಿದೆ. 60 ವರ್ಷಕ್ಕಿಂತ ಕೆಳಗಿನ ವಯಸ್ಸಿನವರು ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಸಾಧ್ಯವಿಲ್ಲ.
ಬ್ಯಾಂಕ್ ನಲ್ಲಿ ಎಫ್ ಡಿ ಮೇಲೆ 6.50% ಬಡ್ಡಿಯನ್ನು ನಿಗದಿಪಡಿಸಿದರೆ ಅಂಚೆ ಕಚೇರಿಯಲ್ಲಿ ಹಿರಿಯ ನಾಗರಿಕರ ಉಳಿತಾಯ ಠೇವಣಿ ಮೇಲೆ 8.2% ಬಡ್ಡಿ ಪಡೆಯಬಹುದು. ಇದರಿಂದಾಗಿ ನೀವು ಠೇವಣಿ ಇಟ್ಟ ಹಣಕ್ಕೆ ಲಕ್ಷಾಂತರ ಬಡ್ಡಿ ಸಿಗುತ್ತದೆ.
ಈ ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿ 25,000 ಇಟ್ರೆ ಎಷ್ಟು ಬಡ್ಡಿ ಸಿಗುತ್ತೆ ಗೊತ್ತಾ?
SCSS ಲೆಕ್ಕಾಚಾರದ ಪ್ರಕಾರ, 60 ವರ್ಷದ ನಂತರ 30 ಲಕ್ಷ ರೂಪಾಯಿಗಳನ್ನು ನೀವು ಠೇವಣಿ ಇಟ್ಟರೆ 8.2% ಬಡ್ಡಿ ದರದಲ್ಲಿ, 12,30,000ಗಳನ್ನು ಬಡ್ಡಿಯಾಗಿ ಪಡೆಯಬಹುದು. ಅಂದರೆ ಒಂದು ವರ್ಷಕ್ಕೆ 2.40 ಲಕ್ಷ ರೂಪಾಯಿ ಬಡ್ಡಿ ಸಿಗುತ್ತದೆ. ಹಾಗಾಗಿ ನೀವು ಪ್ರತಿ ತಿಂಗಳು 20 ಸಾವಿರ ರೂಪಾಯಿಗಳನ್ನು ಕುಳಿತಲ್ಲೇ ಗಳಿಕೆ ಮಾಡಬಹುದು.
ಈ ಅಂಚೆ ಕಚೇರಿಯ ಹಿರಿಯ ನಾಗರಿಕರ ಉಳಿತಾಯ ಠೇವಣಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ. ಅಥವಾ ಆನ್ಲೈನ್ ನಲ್ಲಿ ಇಂಡಿಯನ್ ಪೋಸ್ಟ್ ಆಫೀಸ್ ವೆಬ್ಸೈಟ್ನಲ್ಲಿ ಮಾಹಿತಿ ಪಡೆಯಬಹುದು.
In this Fixed Deposit Scheme, you will get 20 thousand interest every month
Our Whatsapp Channel is Live Now 👇