Business News

ಈ ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿ 25,000 ಇಟ್ರೆ ಎಷ್ಟು ಬಡ್ಡಿ ಸಿಗುತ್ತೆ ಗೊತ್ತಾ?

Post Office Scheme : ಇತ್ತೀಚಿನ ದಿನಗಳಲ್ಲಿ ಅಂಚೆ ಕಚೇರಿಯ ಉಳಿತಾಯ ಯೋಜನೆ (savings scheme) ಗಳು ಹೆಚ್ಚು ಫೇಮಸ್ ಆಗಿವೆ. 13ಕ್ಕೂ ಹೆಚ್ಚು ಉಳಿತಾಯ ಯೋಜನೆಗಳನ್ನು ಅಂಚೆ ಕಚೇರಿ (Indian post office) ಹೊಂದಿದೆ

ಇದರ ಜೊತೆಗೆ ಬ್ಯಾಂಕ್ ನಲ್ಲಿ ನೀವು ಫಿಕ್ಸೆಡ್ ಡೆಪಾಸಿಟ್ (fixed deposit) ಇಡುವಂತೆ, ಅಂಚೆ ಕಚೇರಿಯಲ್ಲಿಯೂ ಕೂಡ ಡೆಪಾಸಿಟ್ ಇಡಬಹುದು ಹಾಗೂ ಉತ್ತಮ ಆದಾಯವನ್ನು ಪಡೆದುಕೊಳ್ಳಬಹುದು.

ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ 2 ಸಾವಿರ ಕಟ್ಟಿದ್ರೆ 5 ವರ್ಷಕ್ಕೆ ಲಕ್ಷ ಲಕ್ಷ ಆದಾಯ

ಮನೆಯಲ್ಲೇ ಕುಳಿತು ಈ ಉದ್ಯಮ ಮಾಡಿದ್ರೆ, ಕೈ ತುಂಬಾ ಆದಾಯ! ಬಂಪರ್ ಗಳಿಕೆ

ಹಣ ಉಳಿತಾಯ ಮಾಡುವುದು ಮನುಷ್ಯನ ಮೊದಲ ಆದ್ಯತೆಯಾಗಿದೆ. ದುಡಿಯುವ ಪ್ರತಿಯೊಬ್ಬರೂ ಕೂಡ ತಮ್ಮ ಭವಿಷ್ಯಕ್ಕಾಗಿ ಒಂದಷ್ಟು ಹಣವನ್ನು ಸೇವ್ ಮಾಡಲು ಬಯಸುತ್ತಾರೆ. ಇದಕ್ಕಾಗಿ ಅಪಾಯ ಮುಕ್ತ ಹೂಡಿಕೆ ಯನ್ನು ಆಯ್ದುಕೊಳ್ಳುತ್ತಾರೆ.

ಮ್ಯೂಚುವಲ್ ಫಂಡ್ (Mutual Fund) ಅಥವಾ ಶೇರು ಮಾರುಕಟ್ಟೆ ಹೂಡಿಕೆ ಹೆಚ್ಚು ಲಾಭವನ್ನು ತಂದುಕೊಡುತ್ತದೆ, ಆದರೂ ಮಾರುಕಟ್ಟೆ ಅಪಾಯ ಇರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಇಂತಹ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡಲು ಬಯಸುವುದಿಲ್ಲ ಹಾಗಾಗಿ ನೀವು ಸೇಫ್ ಆಗಿರುವ ಹೂಡಿಕೆ ಮಾಡಲು ಬಯಸಿದರೆ ಅಂಚೆ ಕಚೇರಿಯ ಟೈಮ್ ಠೇವಣಿ (time deposit) ಯೋಚನೆಯನ್ನು ಆಯ್ದುಕೊಳ್ಳುವುದು ಒಳ್ಳೆಯದು.

ಪರ್ಸನಲ್ ಲೋನ್ ತೆಗೆದುಕೊಳ್ಳುವುದಕ್ಕೂ ಮುನ್ನ ಈ ವಿಚಾರಗಳು ತಿಳಿದಿರಲಿ!

ಏನಿದು ಟೈಮ್ ಠೇವಣಿ?

ನೀವು ಬ್ಯಾಂಕುಗಳಲ್ಲಿ ಎಫ್ ಡಿ (FD) ಇಟ್ಟಂತೆ ಭಾರತೀಯ ಅಂಚೆ ಕಚೇರಿ ಟೈಮ್ ಠೇವಣಿಯನ್ನು ಪರಿಚಯಿಸಿದೆ. ಇದು ಆಧುನಿಕ ಪ್ರಯೋಜನ ನೀಡುವ ಹಳೆಯ ಹೂಡಿಕೆಯ ವಿಧಾನವಾಗಿದೆ.

ಈ ಯೋಜನೆಯ ಅಡಿಯಲ್ಲಿ ಒಂದು, ಎರಡು, ಮೂರು ಮತ್ತು ಐದು ವರ್ಷಗಳ ಅವಧಿಯ ಠೇವಣಿಯನ್ನು ನೀವು ಆಯ್ದುಕೊಳ್ಳಬಹುದು. ಪ್ರತಿ ತ್ರೈಮಾಸಿಕಕ್ಕೆ ಒಮ್ಮೆ ಬಡ್ಡಿದರ ಪರಿಷ್ಕರಣೆ ಮಾಡಲಾಗುತ್ತದೆ ಹಾಗೂ ವರ್ಷಕ್ಕೆ ಬಡ್ಡಿದರವನ್ನ ನೀಡಲಾಗುತ್ತದೆ.

ಐದು ವರ್ಷಗಳ ಕಾಲ ಅಂಚೆ ಕಚೇರಿಯ ಟೈಮ್ ಠೇವಣಿಯಲ್ಲಿ ಹೂಡಿಕೆ ಮಾಡಿದ್ರೆ ಆದಾಯ ತೆರಿಗೆ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಪಡೆದುಕೊಳ್ಳಬಹುದು.

ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಪ್ರತಿ ತಿಂಗಳು ಗಳಿಸಬಹುದು 20,000! ಇಲ್ಲಿದೆ ಮಾಹಿತಿ

Post office Schemeಟೈಮ್ ಠೇವಣಿ ಹೂಡಿಕೆ ಮಾಡುವುದು ಹೇಗೆ?

ಕನಿಷ್ಠ 200 ಗಳಿಂದ ಹೂಡಿಕೆ ಆರಂಭಿಸಬಹುದು. ಒಂದು ಖಾತೆಗೆ ಒಂದು ನಿಶ್ಚಿತ ಠೇವಣಿ ಇಡಬಹುದು ಆದರೆ ಒಂದಕ್ಕಿಂತ ಹೆಚ್ಚಿನ ಖಾತೆ ತೆರೆಯಲು ಅವಕಾಶವಿದೆ. ನೀವು ಒಂದು ಅಂಚೆ ಕಚೇರಿಯಲ್ಲಿ ಟೈಮ್ ಟೇಬಲ್ ಆರಂಭಿಸಿದ್ರೆ ಆ ಠೇವಣಿಯನ್ನು ಇನ್ನೊಂದು ಅಂಚೆ ಕಚೇರಿಗೆ ಬದಲಾಯಿಸಿಕೊಳ್ಳಲು ಸಾಧ್ಯವಿದೆ. ಟೈಮ್ ಠೇವಣಿ ಮೇಲೆ ಸಾಲ ಸೌಲಭ್ಯ (Loan) ಪಡೆಯಬಹುದು.

ಅಂಚೆ ಕಚೇರಿ ಟೈಮ್ ಠೇವಣಿ ಎಲ್ಲಿ ಹೂಡಿಕೆ ಮಾಡಿದರೆ ಮೊದಲ ಆರು ತಿಂಗಳು ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ. ನಂತರದಲ್ಲಿ ಮೆಚುರಿಟಿ ಅವಧಿಗೂ ಮೊದಲು ಹಣ ಹಿಂಪಡೆದರೆ 1% ನಷ್ಟು ದಂಡ ಪಾವತಿಸಬೇಕು. ಮೆಚ್ಯುರಿಟಿ ಅವಧಿ ಮುಗಿದ ನಂತರವೂ ನಿಮ್ಮ ಖಾತೆಯನ್ನು ನವೀಕರಿಸಿಕೊಂಡು ಮತ್ತೆ ಠೇವಣಿ ಮುಂದುವರಿಸಬಹುದು.

ಮನೆಯಲ್ಲಿ ಎಷ್ಟು ಚಿನ್ನವನ್ನು ಇಟ್ಟುಕೊಳ್ಳಬಹುದು ಗೊತ್ತಾ? ಹೊಸ ನಿಯಮ

ಅಂಚೆ ಕಚೇರಿಯ ಟೈಮ್ ಠೇವಣಿ ಗೆ ಬಡ್ಡಿ ದರ!

ಒಂದು ವರ್ಷದ ಹೂಡಿಕೆಗೆ 6.90% ನಷ್ಟು ಬಡ್ಡಿದರ (rate of interest), ಒಂದರಿಂದ ಮೂರು ವರ್ಷಗಳ ಅವಧಿಯ ಹೂಡಿಕೆಗೆ 7% ಬಡ್ಡಿದರ ಹಾಗೂ ಮೂರರಿಂದ ಐದು ವರ್ಷಗಳ ಅವಧಿಯ ಹೂಡಿಕೆಗೆ 7.50% ನಷ್ಟು ಬಡ್ಡಿದರ ಪಡೆಯಬಹುದು.

ಒಬ್ಬ ವ್ಯಕ್ತಿ ಇಪ್ಪತ್ತೈದು ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡಲು ಬಯಸಿದರೆ ಒಂದು ವರ್ಷದ ಅವಧಿಯ ಹೂಡಿಕೆಗೆ 1,775 ರೂಪಾಯಿಗಳನ್ನು 6.50% ಬಡ್ಡಿ ದರದಲ್ಲಿ ಹೆಚ್ಚುವರಿಯಾಗಿ ಹಿಂಪಡೆಯಬಹುದು. ಅಂದ್ರೆ ಒಂದು ವರ್ಷ ಮೆಚ್ಯೂರ್ ಆದ ನಂತರ 26,775 ಗಳನ್ನು ಪಡೆಯುತ್ತೀರಿ. ಇದೇ ರೀತಿ ನೀವು ಎಷ್ಟು ವರ್ಷಗಳ ಅವಧಿಗೆ ಹೂಡಿಕೆ ಮಾಡುತ್ತಿರುವ ಅಷ್ಟು ಹೆಚ್ಚಿನ ಮೊತ್ತದ ಹಣವನ್ನು ನಿಮ್ಮದಾಗಿಸಿಕೊಳ್ಳಬಹುದು.

Do you know how much interest will be earned on 25,000 in this post office scheme

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories