Business News

ಮನೆಯಲ್ಲಿ ಎಷ್ಟು ಚಿನ್ನವನ್ನು ಇಟ್ಟುಕೊಳ್ಳಬಹುದು ಗೊತ್ತಾ? ಹೊಸ ನಿಯಮ

ಚಿನ್ನ (Gold) ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಚಿಕ್ಕ ಮಕ್ಕಳಿಂದ ಹಿಡಿದು ಮುದುಕರು ಕೂಡ ಚಿನ್ನ ಆಭರಣ ಧರಿಸಲು ಇಷ್ಟಪಡುತ್ತಾರೆ. ಅದರಲ್ಲೂ ಹೆಂಗಸರಿಗೆ ಚಿನ್ನ ಅಂದ್ರೆ ಒಂದು ಕೈ ಜಾಸ್ತಿ ಪ್ರೀತಿ ಎನ್ನಬಹುದು.

ಯಾವುದೇ ಸಣ್ಣಪುಟ್ಟ ಸಮಾರಂಭಗಳು ಇದ್ದರೂ ಅಥವಾ ಮದುವೆಯಂತಹ ದೊಡ್ಡ ಸಂಭ್ರಮ ಇದ್ದರೂ ಕೂಡ ಭಾರತೀಯರು ಚಿನ್ನ ಖರೀದಿ ಮಾಡುವುದನ್ನು ಮರೆಯುವುದಿಲ್ಲ.

If you want a gold loan, you don't need a CIBIL score anymore

ಕೇವಲ 151 ರೂಪಾಯಿ ಉಳಿತಾಯಕ್ಕೆ 31 ಲಕ್ಷ ನಿಮ್ಮದಾಗಿಸಿಕೊಳ್ಳಿ! ಬೆಸ್ಟ್ ಎಲ್ಐಸಿ ಸ್ಕೀಮ್

ನಮ್ಮಲ್ಲಿ ಚಿನ್ನ ಖರೀದಿ ಮಾಡುವುದೇ ಒಂದು ದೊಡ್ಡ ಸಂಭ್ರಮ. ಚಿನ್ನದ ಬೆಲೆ (Gold Price) ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಲೇ ಇದೆ. ಹಾಗಂದ ಮಾತ್ರಕ್ಕೆ ಚಿನ್ನ ಖರೀದಿ ನಿಂತಿದ್ಯಾ ಎಂದು ಕೇಳಿದರೆ ಖಂಡಿತವಾಗಿಯೂ ಇಲ್ಲ.

ಚೆಚಿನ್ನ ಖರೀದಿ ಮಾಡುವವರ ಸಂಖ್ಯೆ ಇಳಿಕೆ ಆಗಿಲ್ಲ. ಎಷ್ಟೋ ಸಂದರ್ಭದಲ್ಲಿ ಚಿನ್ನವನ್ನ ನಾವು ಉಡುಗೊರೆಯಾಗಿಯೂ ಪಡೆಯುತ್ತೇವೆ ಅದರಲ್ಲೂ ಮದುವೆ ಸಂದರ್ಭದಲ್ಲಿ ಮದುವೆಯ ಹೆಣ್ಣು ಮತ್ತು ಗಂಡು ತಮ್ಮ ಆಪ್ತರಿಂದ ಚಿನ್ನವನ್ನ ಉಡುಗೊರೆಯಾಗಿ ಪಡೆಯುತ್ತಾರೆ.

ಎಷ್ಟು ಚಿನ್ನವನ್ನ ನೀವು ಇಟ್ಟುಕೊಳ್ಳಬಹುದು ಗೊತ್ತಾ?

ಹೀಗೆ ಬೇರೆ ಬೇರೆಯವರು ಉಡುಗೊರೆಯಾಗಿ ಕೊಟ್ಟ ಅಥವಾ ನೀವೇ ಖರೀದಿಸಿದ ಚಿನ್ನವನ್ನು ನೀವು ಇಟ್ಟುಕೊಳ್ಳುವುದಾದರೆ ಅದಕ್ಕೂ ಕೂಡ ತೆರಿಗೆ ಇಲಾಖೆ (Income Tax department) ತನ್ನದೇ ಆದ ನಿಯಮವನ್ನು ಹೊಂದಿದೆ ಎಂಬುದು ನಿಮಗೆ ನೆನಪಿರಲಿ.

Central Board of Direct Tax (CBDT) ಪ್ರಕಾರ ನಿಮ್ಮ ಬಳಿ ಇರುವ ಚಿನ್ನಕ್ಕೆ ಮಿತಿ ಹೇರಿಕೆ ಮಾಡಿರುವುದು ಮಾತ್ರವಲ್ಲದೆ, ಒಂದು ವೇಳೆ ದಾಖಲೆ ಇಲ್ಲದ ಚಿನ್ನ ನಿಮ್ಮ ಬಳಿ ಇದ್ದರೆ ಅದಕ್ಕೆ ಹೆಚ್ಚುವರಿ ಟ್ಯಾಕ್ಸ್ ಕೂಡ ಪಾವತಿ ಮಾಡಬೇಕು.

ಬ್ಯಾಂಕ್ ಲಾಕರ್ ನಲ್ಲಿ ಚಿನ್ನಾಭರಣ ಇಡೋರಿಗೆ ಬಂತು ಹೊಸ ರೂಲ್ಸ್! ಇಲ್ಲಿದೆ ಮಾಹಿತಿ

Gold Jewelleryಎಷ್ಟು ಚಿನ್ನವನ್ನು ಮನೆಯಲ್ಲಿ ಇಟ್ಟುಕೊಳ್ಳಬಹುದು?

ಹೌದು, ನಿಮಗೆ ಉಡುಗೊರೆಯಾಗಿ ಸಿಕ್ಕ ಚಿನ್ನಾಭರಣಗಳನ್ನ ಅಥವಾ ಬೇರೆ ಯಾವುದೇ ರೂಪದಲ್ಲಿ ನಿಮ್ಮ ಕೈ ಸೇರಿದ ಚಿನ್ನವನ್ನು ನೀವು ಎಷ್ಟು ಬೇಕಾದರೂ ಅಷ್ಟು ಇಟ್ಟುಕೊಳ್ಳಲು ಸಾಧ್ಯವಿಲ್ಲ. ಹಾಗೆ ನಿಮ್ಮ ಬಳಿ ಹೆಚ್ಚಿನವನ್ನು ಇಟ್ಟುಕೊಳ್ಳಬೇಕಾದರೆ ಅದಕ್ಕೆ ಸರಿಯಾದ ದಾಖಲೆ ಇರಬೇಕು.

ಇನ್ನು ನಿಮ್ಮ ಬಳಿ ದಾಖಲೆ ಇಲ್ಲದೆ ಎಷ್ಟು ಚಿನ್ನವನ್ನು ಇಟ್ಟುಕೊಳ್ಳಬಹುದು ಎನ್ನುವುದನ್ನು ನೋಡುವುದಾದರೆ, ವಿವಾಹಿತ ಮಹಿಳೆ 500 ಗ್ರಾಂ ಚಿನ್ನ ತಮ್ಮ ಬಳಿ ಇರಿಸಿಕೊಳ್ಳಬಹುದು. ಅವಿವಾಹಿತ ಮಹಿಳೆಯ ಬಳಿ 250 ಗ್ರಾಂ ಚಿನ್ನ ಹಾಗೂ ಒಬ್ಬ ಪುರುಷನ ಬಳಿ 100 ಗ್ರಾಮ್ ಚಿನ್ನ ಇಟ್ಟುಕೊಳ್ಳಲು ಅವಕಾಶ ಇದೆ ಅಂದ್ರೆ ದಾಖಲೆ ಇಲ್ಲದೆ ಇಷ್ಟು ಚಿನ್ನವನ್ನ ಮನೆಯಲ್ಲಿ ಇರಿಸಿಕೊಳ್ಳಬಹುದು.

ಇನ್ಮುಂದೆ ವಾಟ್ಸಪ್ ನಲ್ಲಿಯೇ ಸಿಗಲಿದೆ ಸರ್ಕಾರಿ ಸೇವೆಗಳು; ವಾಟ್ಸಪ್ ನಂಬರ್ ಇಲ್ಲಿದೆ!

ಎಷ್ಟು ಟ್ಯಾಕ್ಸ್ ಪಾವತಿಸಬೇಕು!

ಇನ್ನು ನಿಮ್ಮ ಬಳಿ ಯಾವುದೇ ರೂಪದಲ್ಲಿ ಚಿನ್ನ ಬಂದು ಸೇರಿದರು ಕೂಡ ಅದಕ್ಕೆ ಸರಿಯಾದ ದಾಖಲೆಗಳು (Documents) ಇದ್ದರೆ ಅಂದರೆ ರಶೀದಿ, ಖರೀದಿ ಮಾಡಿದ ಸಮಯ ಸ್ಥಳ ಅಥವಾ ಉಡುಗೊರೆ ಮಾಡಿದ್ದಕ್ಕೆ ರಶೀದಿ ಇದ್ದರೆ ನೀವು ಒಂದು ಮಿತಿಯವರೆಗೆ ತೆರಿಗೆ ಪಾವತಿ ಮಾಡುವ ಅಗತ್ಯ ಇರುವುದಿಲ್ಲ.

ಇನ್ನು ನೀವು ಚಿನ್ನವನ್ನ ಖರೀದಿಸಿ, ಮೂರು ವರ್ಷಗಳ ನಂತರ ಅದನ್ನು ಮಾರಾಟ ಮಾಡುವುದಾದರೆ, ನಿಮ್ಮ ತೆರಿಗೆ ಸ್ಲ್ಯಾಬ್ ಪ್ರಕಾರ ಎಷ್ಟು ನಿಗದಿಪಡಿಸಲಾಗುತ್ತದೆಯೋ ಅಷ್ಟು ತೆರಿಗೆ ಪಾವತಿಸಬೇಕು.

ಸ್ಟೇಟ್ ಬ್ಯಾಂಕ್ ಅಕೌಂಟ್ ಇದ್ದೋರಿಗೆ ಸೂಚನೆ! ಮಾರ್ಚ್ 31ರ ಒಳಗೆ ಅವಕಾಶ

ಅದೇ ರೀತಿ ಮೂರು ವರ್ಷಗಳ ವರೆಗೆ ನಿಮ್ಮ ಬಳಿ ಇಟ್ಟುಕೊಂಡು ಅದರ ನಂತರದಲ್ಲಿ ನೀವು ಮಾರಾಟ ಮಾಡಿದ್ರೆ ಅದಕ್ಕೆ 20% ನಷ್ಟು ತೆರಿಗೆ ಪಾವತಿಸಬೇಕು. ಇದನ್ನು ಆದಾಯ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ನೀವು ಖರೀದಿ ಮಾಡಿದ್ದಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಸಾಧ್ಯತೆ ಇರುವುದರಿಂದ ಇದನ್ನು ಆದಾಯದ ಮೂಲ ಎಂದು ಪರಿಗಣಿಸಿ, ತೆರಿಗೆ ಪಾವತಿ ಮಾಡಬೇಕಾಗುತ್ತದೆ.

ಹಾಗಾಗಿ ಇನ್ನು ಮುಂದೆ ನೀವು ಚಿನ್ನ ಖರೀದಿ ಮಾಡುವುದಾದರೆ ಅಥವಾ ನಿಮ್ಮ ಬಳಿ ಚಿನ್ನ ಇರಿಸಿಕೊಳ್ಳುವುದಾದರೆ ನಿಯಮಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.

Do you know how much gold you can keep at home

Our Whatsapp Channel is Live Now 👇

Whatsapp Channel

Kannada News Today

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories