ಇನ್ಮುಂದೆ ವಾಟ್ಸಪ್ ನಲ್ಲಿಯೇ ಸಿಗಲಿದೆ ಸರ್ಕಾರಿ ಸೇವೆಗಳು; ವಾಟ್ಸಪ್ ನಂಬರ್ ಇಲ್ಲಿದೆ!

Story Highlights

ವಾಟ್ಸಪ್ ನಲ್ಲಿ ಇನ್ನು ಸಿಗಲಿದೆ ಸರ್ಕಾರದ ಎಲ್ಲಾ ಯೋಜನೆಯ ಪ್ರಯೋಜನ; ವಾಟ್ಸಪ್ ನಂಬರ್ ಇಲ್ಲಿದೆ!

ಸಾಮಾನ್ಯವಾಗಿ ಹಳ್ಳಿಗಳಲ್ಲಿ ಸರ್ಕಾರದ ಯಾವುದೇ ಯೋಜನೆಯ ಪ್ರಯೋಜನ ಪಡೆದುಕೊಳ್ಳುವುದಕ್ಕೆ ಅಥವಾ ಸರ್ಕಾರದ ಇತರ ಸೌಲಭ್ಯಗಳನ್ನು ಪಡೆದುಕೊಳ್ಳುವುದಕ್ಕೆ ಗ್ರಾಮ ಪಂಚಾಯತ್ (Gram Panchayat) ಗಳು ಸಹಕರಿಸುತ್ತವೆ.

ಗ್ರಾಮ ಪಂಚಾಯತ್ ಮೂಲಕವೇ ಕೇಂದ್ರ ಸರ್ಕಾರದಿಂದ ಜಾರಿಗೆ ಬಂದಿರುವ ಯೋಜನೆಗಳಾಗಿರಲಿ ಅಥವಾ ರಾಜ್ಯ ಸರ್ಕಾರದಿಂದ ಘೋಷಿಸಲ್ಪಟ್ಟ ಯೋಜನೆಗಳಾಗಿರಲಿ, ಸಾರ್ವಜನಿಕರ ಕೈ ಸೇರುತ್ತದೆ. ಹೀಗಾಗಿ ಪ್ರತಿ ಒಂದು ಕೆಲಸಕ್ಕೂ ಗ್ರಾಮ ಪಂಚಾಯತ್ ಗೆ ಜನರು ಅಲೆದಾಡುವುದು ಸಹಜ.

ಗ್ರಾಮ ಒನ್ ಪ್ರಾಂಚೈಸಿ ತೆರೆಯಲು ಆನ್ಲೈನ್ ಅರ್ಜಿ ಸಲ್ಲಿಸಿ! ಈ ದಾಖಲೆ ಇದ್ರೆ ಸಾಕು

ಇದೀಗ ಗ್ರಾಮ ಅಭಿವೃದ್ಧಿ ಸಚಿವರಾಗಿರುವ ಪ್ರಿಯಾಂಕ್ ಖರ್ಗೆ ಅವರು ಮಾರ್ಚ್ ಒಂದು 2024ಕ್ಕೆ ಗ್ರಾಮ ಪಂಚಾಯತ್ ಸೇವೆಗಳನ್ನು ಆನ್ಲೈನ್ ನಲ್ಲಿಯೇ ಸಿಗುವಂತೆ ಮಾಡುವ ಸರ್ಕಾರದ ಹೊಸ ಉಪಕ್ರಮಕ್ಕೆ ಚಾಲನೆ ನೀಡಿದ್ದಾರೆ.

ಹೌದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (Rural Development Panchayath Raj Department) ಹೊಸ ಉಪಕ್ರಮ ಒಂದನ್ನು ಕೈಗೊಂಡಿದ್ದು ಇನ್ನೂ ಮುಂದೆ ಸಾರ್ವಜನಿಕರು ಗ್ರಾಮ ಪಂಚಾಯತ್ ಗೆ ಪದೇ ಪದೇ ಅಲೆದಾಡದೆ ಒಂದೇ ಒಂದು ಕ್ಲಿಕ್ ಮೂಲಕ ಸರ್ಕಾರಿ ಸೇವೆಗಳನ್ನು ಆನ್ಲೈನ್ ನಲ್ಲಿ ಪಡೆದುಕೊಳ್ಳುವುದಕ್ಕೆ ಸಾಧ್ಯವಿದೆ ಇದಕ್ಕಾಗಿ ವಿಶೇಷವಾದ ವಾಟ್ಸಪ್ ಚಾಟ್ ವ್ಯವಸ್ಥೆಯನ್ನು ಆರಂಭಿಸಲಾಗಿದೆ.

ಜಮಾ ಆಗಲಿದೆ 7ನೇ ಕಂತಿನ ಗೃಹಲಕ್ಷ್ಮಿ ಯೋಜನೆ ಹಣ; ನಿಮ್ಮ ಖಾತೆ ಚೆಕ್ ಮಾಡಿಕೊಳ್ಳಿ

whatsappಗ್ರಾಮ ಪಂಚಾಯತ್ ಸೇವೆಗಳು ಇನ್ನು ಮುಂದೆ ಆನ್ಲೈನ್ ನಲ್ಲಿ!

ಕಳೆದ ಶುಕ್ರವಾರ ವಿಧಾನಸೌಧದಲ್ಲಿ ಪಂಚಮಿತ್ರ ವಾಟ್ಸಾಪ್ ಚಾಟ್ (panchamitra WhatsApp chat) ಹಾಗೂ ಪಂಚಮಿತ್ರ ವೆಬ್ ಪೋರ್ಟಲ್ (panchamitra web portal) ಗೆ ಚಾಲನೆ ನೀಡಲಾಯಿತು. ಇನ್ನು ಮುಂದೆ ಗ್ರಾಮ ಪಂಚಾಯತ್ ನ ಮೂಲಕ ಗ್ರಾಹಕರು ಪಡೆದುಕೊಳ್ಳುತ್ತಿದ್ದ ಯಾವುದೇ ಯೋಜನೆಯ ಬಗ್ಗೆ ಮಾಹಿತಿ, ಕುಂದುಕೊರತೆಗಳ ಬಗ್ಗೆ ದೂರು ಸಲ್ಲಿಸುವುದು ಎಲ್ಲವನ್ನು ಕೂಡ ವಾಟ್ಸಾಪ್ ಮೂಲಕವೇ ಮಾಡಬಹುದು ಅದು ಸಂಬಂಧಪಟ್ಟ ಅಧಿಕಾರಿಗಳಿಗೆ ತಲುಪುತ್ತದೆ ಹಾಗೂ ಗ್ರಾಹಕರಿಗೆ ಸೂಕ್ತ ಉತ್ತರವು ನೀಡಲಾಗುವುದು.

ರೇಷನ್ ಕಾರ್ಡ್ ವಿತರಣೆಗೆ ದಿನಾಂಕ ಫಿಕ್ಸ್; ಹೊಸ ರೇಷನ್ ಕಾರ್ಡ್ ಅರ್ಜಿಗೂ ಅವಕಾಶ!

ರಾಜ್ಯದ 5,991 ಗ್ರಾಮಗಳಲ್ಲಿ ಡಿಜಿಟಲೀಕರಣಗಳಿಸಲು ಈ ಹೊಸ ಉಪಕ್ರಮ ಕೈಗೊಳ್ಳಲಾಗಿದೆ. ಪಂಚಮಿತ್ರ ವಾಟ್ಸಾಪ್ ಮತ್ತು ಪಂಚಮಿತ್ರ ವೆಬ್ ಪೋರ್ಟಲ್ ಮೂಲಕ, ಗ್ರಾಮ ಪಂಚಾಯತ್ ನಲ್ಲಿ ಸಿಗಲಿರುವ 17 ಸೇವೆಗಳು ಹಾಗೂ ಸರ್ಕಾರದ ಇತರ ಇಲಾಖೆಗೆ ಸಂಬಂಧಪಟ್ಟ 72 ಸೇವೆಗಳು, ಒಟ್ಟಾರೆಯಾಗಿ 89 ಸೇವೆಗಳ ಬಗ್ಗೆ ಸಂಪೂರ್ಣ ವಿವರವನ್ನು ವಾಟ್ಸಾಪ್ನಲ್ಲಿಯೇ ಪಡೆಯಬಹುದು.

ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಈ ಒಂದು ಹೊಸ ಉಪಕ್ರಮವನ್ನು ಕೈಗೊಂಡಿದ್ದು ಇದರಿಂದ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲ ಆಗಲಿದೆ ಇದಕ್ಕಾಗಿ ನೀವು ಸರ್ಕಾರ ನೀಡಿರುವ 82775 06000 ಸಂಖ್ಯೆ ಗೆ ವಾಟ್ಸಪ್ ಮಾಡುವ ಮೂಲಕ ಮಾಹಿತಿ ಪಡೆಯಬಹುದು ನಿಮ್ಮ ಮೊಬೈಲ್ ನಲ್ಲಿ ಈಗಲೇ ಈ ನಂಬರ್ ಸೇವ್ ಮಾಡಿಕೊಳ್ಳಿ.

ಗೃಹಲಕ್ಷ್ಮಿ ಯೋಜನೆ ಬಗ್ಗೆ ಮಹತ್ವದ ಅಪ್ಡೇಟ್! ಮಹಿಳೆಯರಿಗೆ ಇನ್ನೊಂದು ಸಿಹಿ ಸುದ್ದಿ

ಈ ಸಂಖ್ಯೆಗೆ ನೀವು ಒಂದು ಹಾಯ್ (HI) ಎಂದು ಮೆಸೇಜ್ ಮಾಡಿದರೆ ನಿಮಗೆ ಭಾಷೆ ಆಯ್ಕೆ ಲಭ್ಯವಾಗುತ್ತದೆ ಕನ್ನಡ ಅಥವಾ ಇಂಗ್ಲೀಷ್ ಎನ್ನುವುದನ್ನು ಆಯ್ಕೆ ಮಾಡಿಕೊಂಡು ನಂತರ ನಿಮ್ಮ ಹತ್ತಿರದ ಹೋಬಳಿ ಗ್ರಾಮ ಪಂಚಾಯತ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು. ಬಳಿಕ ನಿಮಗೆ ಬೇಕಿರುವ ಸೌಲಭ್ಯದ ಬಗ್ಗೆ ತಿಳಿಸಿದರೆ ಆ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿ ವಾಟ್ಸಪ್ ಮೂಲಕವೇ ಪಡೆದುಕೊಳ್ಳಬಹುದು.

From now on, government services will be available on WhatsApp, Here is the WhatsApp number