ಕೇವಲ 151 ರೂಪಾಯಿ ಉಳಿತಾಯಕ್ಕೆ 31 ಲಕ್ಷ ನಿಮ್ಮದಾಗಿಸಿಕೊಳ್ಳಿ! ಬೆಸ್ಟ್ ಎಲ್ಐಸಿ ಸ್ಕೀಮ್

Story Highlights

ಕೇವಲ 151 ರೂಪಾಯಿ ಉಳಿತಾಯ ಮಾಡ್ತಾ ಬಂದ್ರೆ 31 ಲಕ್ಷ ರೂಪಾಯಿ ಹಿಂಪಡೆಯಬಹುದು; ಈ ಎಲ್ಐಸಿ ಯೋಜನೆಯ ಬಗ್ಗೆ ಇನ್ನಷ್ಟು ತಿಳಿಯಿರಿ!

ನಿಮ್ಮ ಹೆಣ್ಣು ಮಗಳ ಭವಿಷ್ಯದ ಬಗ್ಗೆ ನಿಮಗೆ ಯೋಚನೆ ಆಗ್ತಾ ಇದೆಯಾ ? ಆಕೆಯ ಉನ್ನತ ವಿದ್ಯಾಭ್ಯಾಸ (higher education) ಮದುವೆ ಮೊದಲಾದ ಖರ್ಚುಗಳಿಗೆ ಹಣ ಹೇಗೆ ಹೊಂದಿಸುವುದು ಎಂದು ಈಗಿನಿಂದಲೇ ಚಿಂತೆ ಮಾಡುತ್ತಿದ್ದೀರಾ?

ಹಾಗಾದ್ರೆ ನೀವು ಎಲ್ಐಸಿ ಉಳಿತಾಯ ಯೋಜನೆಯ (LIC savings scheme) ಬಗ್ಗೆ ತಿಳಿದುಕೊಳ್ಳಲೇಬೇಕು. ನೀವು ಪ್ರತಿದಿನ ಅತಿ ಕಡಿಮೆ ಹೂಡಿಕೆ (Investment) ಹಣವನ್ನು ಮೀಸಲಿಟ್ಟರೆ ನಿಮ್ಮ ಹೆಣ್ಣು ಮಗಳ ಉನ್ನತ ವಿದ್ಯಾಭ್ಯಾಸಕ್ಕೆ ಅಥವಾ ಮದುವೆ ವಯಸ್ಸಿಗೆ ಬಂದಾಗ ಬಹಳ ದೊಡ್ಡ ಮೊತ್ತದ ಹಣವನ್ನು ನೀವು ಆಕೆಗೆ ಉಡುಗೊರೆಯಾಗಿ ಕೊಡಬಹುದು.

ಬ್ಯಾಂಕ್ ಲಾಕರ್ ನಲ್ಲಿ ಚಿನ್ನಾಭರಣ ಇಡೋರಿಗೆ ಬಂತು ಹೊಸ ರೂಲ್ಸ್! ಇಲ್ಲಿದೆ ಮಾಹಿತಿ

ಅಂತಹ ಒಂದು ಎಲ್ಐಸಿಯ ಉತ್ತಮ ಯೋಜನೆಯ ಬಗ್ಗೆ ಲೇಖನದಲ್ಲಿದೆ ಸಂಪೂರ್ಣ ಮಾಹಿತಿ.

ಎಲ್ಐಸಿ ಕನ್ಯಾದಾನ ನೀತಿ ಯೋಜನೆ! (LIC kanyadan scheme)

ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಆರಂಭಿಸಲಾಗಿರುವ ಈ ಯೋಜನೆ, ತಂದೆ ತಾಯಿಯ ಜವಾಬ್ದಾರಿಯನ್ನು ಬಹಳಷ್ಟು ಕಡಿಮೆ ಮಾಡುತ್ತದೆ. ಎನ್ನಬಹುದು. ತಂದೆ ತಾಯಿ ಸದಾ ಹೆಣ್ಣು ಮಕ್ಕಳ ಭವಿಷ್ಯದ ಬಗ್ಗೆ ಹೆಚ್ಚು ಚಿಂತಿತರಾಗಿರುತ್ತಾರೆ ಆದರೆ ಆರ್ಥಿಕವಾಗಿ ಇನ್ನು ಮುಂದೆ ಯಾವುದೇ ಯೋಚನೆ ಮಾಡುವ ಅಗತ್ಯ ಇಲ್ಲ. ನೀವು ನಿಮಗೆ ತಿಳಿಯದೆ ಇರುವ ರೀತಿಯಲ್ಲಿ ಅತ್ಯಲ್ಪ ಹಣ ಹೂಡಿಕೆ ಮಾಡುವುದರ ಮೂಲಕ ಯೋಜನೆಯ ಮುಕ್ತಾಯದ ಹೊತ್ತಿಗೆ ದೊಡ್ಡ ಮೊತ್ತದ ಹಣವನ್ನು ಹಿಂಪಡೆಯಲು ಸಾಧ್ಯವಿದೆ.

ಸ್ಟೇಟ್ ಬ್ಯಾಂಕ್ ಅಕೌಂಟ್ ಇದ್ದೋರಿಗೆ ಸೂಚನೆ! ಮಾರ್ಚ್ 31ರ ಒಳಗೆ ಅವಕಾಶ

LIC Policyಎಲ್ಐಸಿ ಕನ್ಯಾದಾನ ಪಾಲಿಸಿಯಲ್ಲಿ ಎಷ್ಟು ಹೂಡಿಕೆ ಮಾಡಬೇಕು!

ಈ ಪಾಲಿಸಿಯಲ್ಲಿ ದಿನಕ್ಕೆ 151 ರೂಪಾಯಿಗಳನ್ನು ಹೂಡಿಕೆ ಮಾಡಿದ್ರೆ ಪಾಲಿಸಿ ಮೆಚುರಿಟಿ ಅವಧಿಯಲ್ಲಿ 31 ಲಕ್ಷಗಳ ದೊಡ್ಡ ಮೊತ್ತದ ಹಣವನ್ನು ಪಡೆಯಬಹುದು. ನಿಮ್ಮ ಹೆಣ್ಣು ಮಗುವಿಗೆ 13 ವರ್ಷದಿಂದ 25 ವರ್ಷ ಅವಧಿಗೆ ಈ ಪಾಲಿಸಿ (LIC policy) ಖರೀದಿಸಬೇಕು.

ಇಲ್ಲಿ ಹೆಣ್ಣು ಮಗುವಿಗೆ ಕನಿಷ್ಠ ಒಂದು ವರ್ಷ ವಯಸ್ಸಾಗಿರಬೇಕು. ಪಾಲಕರಿಗೆ ಕನಿಷ್ಠ 30 ವರ್ಷ ವಯಸ್ಸಾಗಿರಬೇಕು. ಪಾಲಿಸಿಯ ಅವಧಿ 25 ವರ್ಷಗಳು ಹಾಗೂ ಪ್ರಿಮಿಯಂ ಪಾವತಿ ಮಾಡುವ ಅವಧಿ 22 ವರ್ಷಗಳು.

ಈ ಪಾಲಿಸಿಯ ಮತ್ತೊಂದು ಪ್ರಯೋಜನ ಅಂದರೆ ನಿಮ್ಮ ಹೆಣ್ಣು ಮಗುವಿನ ಮದುವೆ ವಯಸ್ಸಿಗೆ ಅನುಗುಣವಾಗಿ ನೀವು ಪಾಲಿಸಿ ಖರೀದಿಸಬಹುದು. ಅಂದರೆ 18 ವರ್ಷ ವಯಸ್ಸಿಗೆ ಮದುವೆ ಮಾಡುವುದಾದರೆ ಕಡಿಮೆ ಅವಧಿಯ ಪಾಲಿಸಿ ಪಡೆದುಕೊಳ್ಳಬಹುದು. ಅಂತಹ ಸಂದರ್ಭದಲ್ಲಿ 17 ವರ್ಷಗಳ ಅವಧಿಗೆ ಎಲ್ಐಸಿ ಪಾಲಿಸಿ ಖರೀದಿಸಬಹುದು.

ನಿಮ್ಮ ಬ್ಯಾಂಕ್ ಸೇವಿಂಗ್ಸ್ ಖಾತೆಯಲ್ಲಿ ಎಷ್ಟಿದೆ ಹಣ! ಅದಕ್ಕೂ ಇದೆ ಲಿಮಿಟ್ ಗೊತ್ತಾ?

ಕನ್ಯಾ ದಾನ ಪಾಲಿಸಿ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳು! (Documents to get policy)

ಹೆಣ್ಣು ಮಗುವಿನ ಜನನ ಪ್ರಮಾಣ ಪತ್ರ
ಪೋಷಕರ ಆಧಾರ್ ಕಾರ್ಡ್
ಪೋಷಕರ ಪಾನ್ ಕಾರ್ಡ್
ಬ್ಯಾಂಕ್ ಖಾತೆಯ ವಿವರ (ಯೋಜನೆ ಮುಕ್ತಾಯದ ಸಮಯದಲ್ಲಿ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು)
ಪಾಸ್ ಪೋರ್ಟ್ ಅಳತೆಯ ಫೋಟೋ

ಇನ್ನು ಕನ್ಯಾದಾನ ನೀತಿ ಪಾಲಿಸಿ ಹೂಡಿಕೆ ಬಗ್ಗೆ ತಿಳಿದುಕೊಳ್ಳೋಣ. ನೀವು ಪ್ರತಿದಿನ 151 ರೂಪಾಯಿಗಳನ್ನ ಹೂಡಿಕೆ ಮಾಡುತ್ತೀರಿ ಎಂದು ಭಾವಿಸಿ. ಅಂದರೆ ತಿಂಗಳಿಗೆ 4,530 ರೂಪಾಯಿಗಳು. ಪ್ರತಿ ತಿಂಗಳು ಕೇವಲ 15 ಸಾವಿರ ದುಡಿಯುವವರು ಕೂಡ ಮಗಳಿಗಾಗಿ ಈ ಪಾಲಿಸಿ ಆರಂಭಿಸಬಹುದು.

ಪಾಲಿಸಿ ತೆಗೆದುಕೊಂಡ ಮುಂದಿನ 22 ವರ್ಷಗಳವರೆಗೆ ಈ ಪ್ರೀಮಿಯಂ ಮೊತ್ತವನ್ನು ಪಾವತಿಸಬೇಕು. ಪಾಲಿಸಿ ಅವಧಿ 21 ವರ್ಷ ಪೂರ್ಣಗೊಂಡ ನಂತರ 31 ಲಕ್ಷ ರೂಪಾಯಿಗಳನ್ನು ಹಿಂಪಡೆಯಬಹುದು. ಇನ್ನು ಪ್ರತಿದಿನ 121 ಠೇವಣೆ ಮಾಡಿದರೆ ಪಾಲಿಸಿ ಮೆಚುರಿಟಿ ಅವಧಿಯಲ್ಲಿ 27 ಲಕ್ಷ ರೂಪಾಯಿಗಳನ್ನು ಪಡೆಯಬಹುದು.

ಇನ್ನು ಈ ಪಾಲಿಸಿಗೆ ವಿಮಾ ರಕ್ಷಣೆ (insurance) ಕೂಡ ಒದಗಿಸಲಾಗುವುದು. ಪಾಲಿಸಿ ಸಂದರ್ಭದಲ್ಲಿ ಅಪ್ಪ ಅಪಘಾತದಲ್ಲಿ ಮರಣ ಹೊಂದಿದರೆ ಕುಟುಂಬಕ್ಕೆ 10 ಲಕ್ಷ ರೂಪಾಯಿಗಳ ಪರಿಹಾರ ಸಿಗುತ್ತದೆ.

ಇನ್ನು ಕನ್ಯಾದಾನ ನೀತಿ ಪಾಲಿಸಿ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಕಚೇರಿಗೆ ಭೇಟಿ ನೀಡಿ ಅಥವಾ ಏಜೆಂಟ್ ಗಳನ್ನು ಸಂಪರ್ಕಿಸಿ. ಜೊತೆಗೆ ಎಲ್ಐಸಿ ವೆಬ್ ಪೋರ್ಟಲ್ ನಲ್ಲಿಯೂ ಮಾಹಿತಿ ಲಭ್ಯವಿದೆ.

31 lakhs by saving just 151 rupees, By this Best LIC scheme

Related Stories