Story Highlights
Bank Account Cash Limit : ನೀವು ಉಳಿತಾಯ ಖಾತೆ ಹೊಂದಿದ್ದೀರಾ? ಹಾಗಾದ್ರೆ ಅದರಲ್ಲಿ ಎಷ್ಟು ಹಣ ಠೇವಣಿ ಮಾಡಬಹುದು ಗೊತ್ತಾ?
Bank Account Cash Limit : ಈಗ ಡಿಜಿಟಲ್ (digital) ಯುಗ. ಎಲ್ಲ ಕೆಲಸಗಳು ಆನ್ಲೈನ್ನಲ್ಲಿಯೇ (online) ನಡೆಯುತ್ತದೆ. ಇದಕ್ಕೆ ಬ್ಯಾಂಕ್ಗಳು ಕೂಡ ಹೊರತಾಗಿಲ್ಲ. ಹಾಗಾಗಿ ಈಗ ಪ್ರತಿಯೊಬ್ಬರೂ ಸಹ ಉಳಿತಾಯ ಖಾತೆ (savings account) ಹೊಂದಿರುತ್ತಾರೆ. ಅಲ್ಲದೆ ಕೆಲವರು ಒಂದಕ್ಕಿಂತ ಹೆಚ್ಚು ಉಳಿತಾಯ ಖಾತೆ ತೆರೆದಿರುತ್ತಾರೆ.
ಇದು ಒಂದು ರೀತಿಯಲ್ಲಿ ಒಳ್ಳೆಯ ಕೆಲಸವೇ ಸರಿ. ಯಾವಾಗಲಾದರೂ ಒಂದು ಖಾತೆಯಲ್ಲಿ ಸಮಸ್ಯೆ ಆದಲ್ಲಿ ಮತ್ತೊಂದು ಖಾತೆಯನ್ನು ಬಳಕೆ ಮಾಡಬಹುದು. ಅಲ್ಲದೆ ಹೆಚ್ಚಿನ ಹಣವನ್ನು ನಾವು ಇಡಬಹುದಾಗಿದೆ.
ಬೆಂಗಳೂರಿನ ಈ ಸ್ಥಳಗಳಲ್ಲಿ ಬಾಡಿಗೆ ದರ ತುಂಬಾ ಕಡಿಮೆ; ಬಾಡಿಗೆ ಫ್ಲ್ಯಾಟ್ ಖರೀದಿಸಿ
ಹೀಗೆ ಹಣ ಇಡುವಾಗಲು ಸಹ ಆರ್ಬಿಐ (Reserve Bank of India RBI) ತಿಳಿಸಿದ ನಿಯಮಗಳ ಪಾಲನೆ ಮಾಡುವುದು ಅವಶ್ಯ. ಹಾಗಾಗಿ ಉಳಿತಾಯ ಖಾತೆಯಲ್ಲಿ ಎಷ್ಟು ಠೇವಣಿ ಇಡಬಹುದು. ಹೆಚ್ಚಿನ ಠೇವಣಿ ಇಟ್ಟರೆ ಏನಾಗುತ್ತದೆ ಎಂದು ತಿಳಿದುಕೊಳ್ಳೋಣ.
ನಾವು ಪ್ರತಿಯೊಂದು ಬ್ಯಾಂಕ್ ಖಾತೆಯಲ್ಲಿಯೂ ಬ್ಯಾಂಕ್ಗಳು ತಿಳಿಸಿದ ಕನಿಷ್ಠ ಮೊತ್ತವನ್ನು ಇಡಬೇಕಾಗುತ್ತದೆ. ಇಲ್ಲದಿದ್ದಲ್ಲಿ ದಂಡ ಪಾವತಿ ಮಾಡುವ ಸ್ಥಿತಿ ಬಂದರೂ ಬರಬಹುದು.
ದೇಶದಲ್ಲಿ ಇರುವ ವಿವಿಧ ಬ್ಯಾಂಕ್ಗಳು ಒಂದೊಂದು ರೀತಿಯ ಕನಿಷ್ಠ ಬ್ಯಾಲೆನ್ಸ್ (minimum balance) ಮಿತಿಯನ್ನು ನಿಗದಿ ಪಡಿಸಿವೆ. ಕೆಲವೊಂದು ಬ್ಯಾಂಕ್ಗಳು 5೦೦ ರೂ. ಇನ್ನು ಕೆಲವು ಬ್ಯಾಂಕ್ಗಳು 1೦೦೦ ರೂ. ಮತ್ತು ಹಲವು ಬ್ಯಾಂಕ್ಗಳು 1೦ ಸಾವಿರ ರೂ. ಮಿತಿಯನ್ನು ನಿಗದಿಪಡಿಸಿವೆ. ಹೀಗೆಯೇ ಉಳಿತಾಯ ಖಾತೆಯಲ್ಲಿ ನಗದನ್ನು ಇಡಲು ಸಹ ಮಿತಿ ಇದೆ.
ಹಿರಿಯ ನಾಗರಿಕರ 1 ಲಕ್ಷ ಹೂಡಿಕೆಗೆ ಸಿಗುತ್ತೆ 26 ಸಾವಿರ ಬಡ್ಡಿ! ಬಂಪರ್ ಯೋಜನೆ
ಆದಾಯ ತೆರಿಗೆ ನಿಯಮಗಳ ಪ್ರಕಾರ ನಾವು ನೋಡುವುದಾದರೆ ಒಬ್ಬ ವ್ಯಕ್ತಿ ಒಂದು ವರ್ಷಕ್ಕೆ 1೦ ಲಕ್ಷ ರೂ. ವರೆಗೆ ತನ್ನ ಉಳಿತಾಯ ಖಾತೆಯಲ್ಲಿ ಇಡಬಹುದಾಗಿದೆ. ಇದಕ್ಕಿಂತ ಹೆಚ್ಚಿನ ಠೇವಣಿ ಇಡಲು ಬಯಸಿದರೆ ಆ ವ್ಯಕ್ತಿ ಬ್ಯಾಂಕ್ಗಳಿಗೆ ಮಾಹಿತಿ ನೀಡಬೇಕಾಗುತ್ತದೆ.
ಇದರ ಜೊತೆ ಆದಾಯ ತೆರಿಗೆ ಇಲಾಖೆಗೂ ಮಾಹಿತಿ ನೀಡಬೇಕಾಗುತ್ತದೆ. ಇದರ ಜೊತೆ 5 ಸಾವಿರ ರೂ.ಗಿಂತ ಹೆಚ್ಚಿನ ಹಣ ಇಡುವಾಗ ಪಾನ್ ಕಾರ್ಡ್ (PAN card) ಕಾಪಿಯನ್ನು ಬ್ಯಾಂಕ್ಗೆ ನೀಡಬೇಕಾಗುತ್ತದೆ. ಒಬ್ಬ ವ್ಯಕ್ತಿ ಒಂದು ದಿನದಲ್ಲಿ 1 ಲಕ್ಷ ರೂ. ವರೆಗೆ ಡಿಫಾಸಿಟ್ ಮಾಡಬಹುದಾಗಿದೆ.
ಈ ದಿನಾಂಕದ ಒಳಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಿ! ಇಲ್ಲದಿದ್ರೆ 10,000 ದಂಡ
ನಿಗದಿಗಿಂತ ಹೆಚ್ಚು ಇಟ್ಟರೆ ಬೀಳುತ್ತೆ ಭಾರೀ ದಂಡ:
ಒಂದು ವೇಳೆ ನೀವು ನಿಮ್ಮ ಉಳಿತಾಯ ಖಾತೆಯಲ್ಲಿ 1೦ ಲಕ್ಷ ರೂ.ಗಳಿಗಿಂತ ಹೆಚ್ಚಿನ ಹಣ ಇಟ್ಟು ಆ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡದಿದ್ದರೆ ಅದು ಒಂದು ರೀತಿಯಲ್ಲಿ ಅಪರಾಧವಾಗುತ್ತದೆ. ಹಾಗಾಗಿ ಇದನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪರಿಶೀಲನೆ ಮಾಡಿದಾಗ ಗೊತ್ತಾದಲ್ಲಿ ನಿಮಗೆ ಭಾರೀ ದಂಡ ವಿಧಿಸಬಹುದು.
ನೀವು ಹಣದ ಮೂಲವನ್ನು ಬಹಿರಂಗ ಪಡಿಸಿದ್ದಲ್ಲಿ ನಿಮ್ಮ ಠೇವಣಿ ಮೊತ್ತದ ಶೇ.6೦ ರಷ್ಟು ತೆರಿಗೆ, ಶೇ.25 ಸರ್ಚಾರ್ಜ್, ಶೇ.4 ರಷ್ಟು ಸೆಸ್ ವಿಧಿಸಬಹುದಾಗಿದೆ. ಹಾಗಾಗಿ ನೀವು ಏನಾದರೂ ಹೆಚ್ಚಿನ ಹಣ ಠೇವಣಿ ಮಾಡುವುದಾದರೆ ಆದಾಯ ತೆರಿಗೆ ಇಲಾಖೆಗೆ ಮೊದಲು ಮಾಹಿತಿ ನೀಡಿ.
ನಿಮ್ಮ ಫಿಕ್ಸೆಡ್ ಡೆಪಾಸಿಟ್ ಗೆ ಅತಿ ಹೆಚ್ಚು ಬಡ್ಡಿ ನೀಡುವ ಬ್ಯಾಂಕ್‌ಗಳ ಪಟ್ಟಿ ಇಲ್ಲಿದೆ!
How much money is in your bank savings account, know there is a limit to that