ಬೆಂಗಳೂರಿನ ಈ ಸ್ಥಳಗಳಲ್ಲಿ ಬಾಡಿಗೆ ದರ ತುಂಬಾ ಕಡಿಮೆ; ಬಾಡಿಗೆ ಫ್ಲ್ಯಾಟ್ ಖರೀದಿಸಿ
ಈಗ ನಮಗೆ ಬಾಡಿಗೆ ಮನೆ ಬೇಕಾದ್ರೆ ಬೆಂಗಳೂರಿನ ಯಾವ ಭಾಗದಲ್ಲಿ ಕಡಿಮೆ ಬೆಲೆಗೆ ಬಾಡಿಗೆ (Rented House) ಸಿಗುತ್ತದೆ ನೋಡೋಣ.
ಬೆಂಗಳೂರು (Bengaluru) ಎನ್ನುವ ಮಹಾ ಸಮುದ್ರಕ್ಕೆ ಅದೆಲ್ಲಿಂದ ದಿನಕ್ಕೆ ಅದೆಷ್ಟು ಜನ ಒಂದು ಸೇರುತ್ತಾರೆ ಎಂದು ಊಹಿಸಲು ಕೂಡ ಸಾಧ್ಯವಿಲ್ಲ. ಯಾವ ಯಾವುದೋ ಕಾರಣಕ್ಕೆ ಯಾವ್ಯಾವುದೋ ಊರುಗಳಿಂದ ಬೆಂಗಳೂರಿಗೆ ಪ್ರತಿದಿನ ಬೆಳಿಗ್ಗೆ ಸಾವಿರಾರು ಜನ ಬಂದು ಸೇರುತ್ತಾರೆ.
ಬೆಂಗಳೂರಿಗೆ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಬರುವವರೇ ಜಾಸ್ತಿ. ಹೀಗಿದ್ದಾಗ ಬೆಂಗಳೂರಿನಲ್ಲಿ ಉಳಿದುಕೊಳ್ಳಲು ಒಂದು ಸೂರು ಬೇಕೇ ಬೇಕು. ಅದಕ್ಕಾಗಿ ಸಿಲಿಕಾನ್ ಸಿಟಿ (silicon city) ಯಲ್ಲಿ ಬಾಡಿಗೆ ಮನೆಗಳು ಬೇಕಾದಷ್ಟು ಸಿಗುತ್ತವೆ.
ಹಿರಿಯ ನಾಗರಿಕರ 1 ಲಕ್ಷ ಹೂಡಿಕೆಗೆ ಸಿಗುತ್ತೆ 26 ಸಾವಿರ ಬಡ್ಡಿ! ಬಂಪರ್ ಯೋಜನೆ
ಹೌದು, ಎಲ್ಲರನ್ನೂ ಕೈ ಬೀಸಿ ಕರೆಯುವ ಉದ್ಯಾನ ನಗರಿ ಬೆಂಗಳೂರು ತನ್ನ ಪ್ರತಿಯೊಂದು ಭಾಗದಲ್ಲಿಯೂ ಕೂಡ ಜನರು ವಾಸಿಸಲು ಅನುಕೂಲವಾಗುವಂತೆ, ಬಾಡಿಗೆ ಮನೆ (rented house) ಯನ್ನು ಒದಗಿಸುತ್ತದೆ ಎನ್ನುವುದು
ಇಲ್ಲಿ ದೊಡ್ಡ ದೊಡ್ಡ ಫ್ಲ್ಯಾಟ್ (flats) ಗಳನ್ನು ನಿರ್ಮಾಣ ಮಾಡಿ ಅದನ್ನು ಬಾಡಿಗೆ ಬಿಟ್ಟು ಆರಾಮಾಗಿ ಜೀವನ ಮಾಡುವ ಅದೆಷ್ಟೋ ಬಿಲ್ಡರ್ ಗಳು ಇದ್ದಾರೆ. ಅದೇನೇ ಇರಲಿ ಈಗ ನಮಗೆ ಬಾಡಿಗೆ ಮನೆ ಬೇಕಾದ್ರೆ ಬೆಂಗಳೂರಿನ ಯಾವ ಭಾಗದಲ್ಲಿ ಕಡಿಮೆ ಬೆಲೆಗೆ ಬಾಡಿಗೆ (Rented House) ಸಿಗುತ್ತದೆ ನೋಡೋಣ.
ಕೋವಿಡ್ 19 ಮಹಾಮಾರಿ, ಎಲ್ಲಾ ಕಡೆ ಹಾವಳಿಸಿಕೊಂಡಿದ್ದಾಗ ಬೆಂಗಳೂರಿನ ತೊರೆದು ತಮ್ಮ ತಮ್ಮ ಊರುಗಳಿಗೆ ಸೇರಿದ ಜನರು ಅದೆಷ್ಟೋ! ಹಾಗಾಗಿ ಆ ಸಮಯದಲ್ಲಿ ಬಾಡಿಗೆ ಮನೆಗಳು ಸುಲಭವಾಗಿ ಸಿಗುತ್ತಿದ್ದವು. ಈಗ ಬಾಡಿಗೆದರ ಜಾಸ್ತಿಯಾಗಿದೆ.
ಈ ದಿನಾಂಕದ ಒಳಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಿ! ಇಲ್ಲದಿದ್ರೆ 10,000 ದಂಡ
ಪೂರ್ವ ಬೆಂಗಳೂರು!
ಬೆಂಗಳೂರು ಅಂದ್ರೆ ಅದರ ವಿಸ್ತೀರ್ಣದಿಂದ ದಿನಕ್ಕೆ ಜಾಸ್ತಿ ಆಗುತ್ತಿದೆ ಅಕ್ಕ ಪಕ್ಕದ ಹಳ್ಳಿಗಳು ಕೂಡ ಬೆಂಗಳೂರು ಮಹಾನಗರ ಎನಿಸಿಕೊಳ್ಳುತ್ತವೆ, ಹಾಗಾಗಿ ನೀವು ವರ್ತೂರು, ಕೆಆರ್ ಪುರಂ, ಬೂದುಗೆರೆ ಕ್ರಾಸ್ ಮೊದಲಾದ ಉಪನಗರಗಳಲ್ಲಿ ವಾಸಿಸುವುದಾದರೆ ಎರಡು ಕೋಣೆ, ಒಂದು ಹಾಲ್, ಒಂದು ಕಿಚನ್ ಇರುವ ಮನೆ ಅಂದರೆ 2 ಬಿ ಎಚ್ ಕೆ (2BHK) ಮನೆಯನ್ನು 20 ರಿಂದ 25 ಸಾವಿರ ರೂಪಾಯಿಗಳಿಗೆ ಬಾಡಿಗೆಗೆ ಪಡೆಯಬಹುದು.
ಬೆಂಗಳೂರಿನ ಕೇಂದ್ರ ಭಾಗ!
ಬಾಣಸವಾಡಿ, ಲಿಂಗರಾಜಪುರ, ಕಾಕ್ಸ್ ಟೌನ್ ಮೊದಲಾದ ಕಡೆ 2 ಬಿ ಎಚ್ ಕೆ ಮನೆಯನ್ನು 25 ರಿಂದ 35 ಸಾವಿರ ರೂಪಾಯಿಗಳ ಬಾಡಿಗೆ ಕೊಟ್ಟು ಪಡೆದುಕೊಳ್ಳಬಹುದು. ಇನ್ನು 3 ಬಿ ಹೆಚ್ ಕೆ ಫ್ಲಾಟ್ ಬೇಕಾದರೆ 40 ರಿಂದ 50,000 ವರೆಗೆ ಬಾಡಿಗೆ ಪಾವತಿಸಬೇಕು.
ಅಂಚೆ ಕಚೇರಿಯಲ್ಲಿ ಮಹಿಳೆಯರಿಗಾಗಿ ವಿಶೇಷ ಯೋಜನೆ! ಜನರಿಂದ ಭರ್ಜರಿ ರೆಸ್ಪಾನ್ಸ್
ಬೆಂಗಳೂರಿನ ದಕ್ಷಿಣ!
ಇದು ಹೆಚ್ಚಾಗಿ ರೆಸಿಡೆನ್ಸಿಯಲ್ ಪ್ರದೇಶ ಆಗಿರುವುದರಿಂದ, ಇಲ್ಲಿ ನೀವು 2 ಬಿ ಎಚ್ ಕೆ ಮನೆಯನ್ನು 25,000 ವರೆಗೆ ಬಾಡಿಗೆ ಪಡೆಯಬಹುದು ಹಾಗೂ 3 ಬಿ ಎಚ್ ಕೆ ಮನೆ 30,000 ಒಳಗೆ ಲಭ್ಯವಿದೆ.
ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಬೆಂಗಳೂರಿನಲ್ಲಿ ಈಗಿನ ಬಾಡಿಗೆ ಒಂತರ ಸಿಕ್ಕಾಪಟ್ಟೆ ಜಾಸ್ತಿ ಎನ್ನಬಹುದು. ಇನ್ನು ಕೆಲವೇ ವರ್ಷಗಳಲ್ಲಿ ಬೆಂಗಳೂರಿನಲ್ಲಿ ಬಾಡಿಗೆ ಮನೆಯನ್ನು ಪಡೆದುಕೊಳ್ಳುವುದು ಬಹಳ ದುಬಾರಿ ಆಗುವ ಸಾಧ್ಯತೆ ಇದೆ. ಅಷ್ಟರಮಟ್ಟಿಗೆ ಮಹಾ ನಗರಿ ಇನ್ನಷ್ಟು ವಿಸ್ತೀರ್ಣ ಗೊಳ್ಳುತ್ತಿದೆ!
ಮಾರುಕಟ್ಟೆಗೆ ಮೂರು ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳು ಎಂಟ್ರಿ! ಖರೀದಿಗೆ ಮುಗಿಬಿದ್ದ ಜನ
The rental rates in these places in Bangalore are very low, Buy a flat on rent