ಬ್ಯಾಂಕ್ ಲಾಕರ್ ನಲ್ಲಿ ಚಿನ್ನಾಭರಣ ಇಡೋರಿಗೆ ಬಂತು ಹೊಸ ರೂಲ್ಸ್! ಇಲ್ಲಿದೆ ಮಾಹಿತಿ

Story Highlights

ನಿಮ್ಮ ಅಮೂಲ್ಯವಾದ ವಸ್ತುಗಳನ್ನು ಬ್ಯಾಂಕ್ ಲಾಕರ್ ನಲ್ಲಿ ಇಡುವುದಕ್ಕೂ ಮೊದಲು ಈ ನಿಯಮಗಳನ್ನು ತೆಗೆದುಕೊಳ್ಳಿ!

ಮನೆಯಲ್ಲಿ ಅಮೂಲ್ಯವಾದ ವಸ್ತುಗಳನ್ನು ಇಟ್ಟುಕೊಳ್ಳುವುದು ಅಷ್ಟು ಸೂಕ್ತವಲ್ಲ. ಉದಾಹರಣೆಗೆ ಚಿನ್ನಾಭರಣ (Gold) ಅಥವಾ ಆಸ್ತಿಗೆ ಸಂಬಂಧಪಟ್ಟ ಕಾಗದ ಪತ್ರ ಮೊದಲಾದವುಗಳನ್ನು ಮನೆಯಲ್ಲಿ ಇಟ್ಟುಕೊಂಡು ಯಾವುದೇ ಕಳ್ಳ ಕಾಕರ ಭಯ ಇದ್ದೇ ಇರುತ್ತದೆ.

ಹಾಗೇನಾದರೂ ಸಮಸ್ಯೆ ಆದರೆ ಆಗ ಪಶ್ಚಾತಾಪ ಪಟ್ಟುಕೊಳ್ಳುವುದು ನಾವೇ! ಹೀಗಾಗಿ ನಮ್ಮ ಅಮೂಲ್ಯವಾದ ವಸ್ತುಗಳನ್ನು ಇನ್ನಷ್ಟು ಸೇಫ್ ಮಾಡಿ ಇಡಲು ಬ್ಯಾಂಕ್ ಲಾಕರ್ (Bank locker) ಆಯ್ಕೆ ಬಹಳ ಮುಖ್ಯವಾಗಿರುತ್ತದೆ.

ಬ್ಯಾಂಕಿನಲ್ಲಿ ನೀವು ಲಾಕರ್ ಪಡೆದುಕೊಂಡು ಅದರಲ್ಲಿ ಅಮೂಲ್ಯವಾದ ವಸ್ತುಗಳನ್ನು ಇಡುವುದರಿಂದ ಯಾವುದೇ ಅಪಾಯ ಇಲ್ಲದೆ ನೆಮ್ಮದಿಯಿಂದ ಇರಬಹುದು. ಆದರೆ ಹೀಗೆ ಬ್ಯಾಂಕ್ ನಲ್ಲಿ ಲಾಕರ್ ತೆಗೆದುಕೊಳ್ಳುವುದಕ್ಕೆ ಅದರದ್ದೇ ಆದ ಪ್ರಮುಖ ನಿಯಮಗಳು ಇವೆ. ಅವುಗಳನ್ನ ನೀವು ಮೊದಲು ತಿಳಿದುಕೊಳ್ಳಬೇಕು.

ನಿಮ್ಮ ಬ್ಯಾಂಕ್ ಸೇವಿಂಗ್ಸ್ ಖಾತೆಯಲ್ಲಿ ಎಷ್ಟಿದೆ ಹಣ! ಅದಕ್ಕೂ ಇದೆ ಲಿಮಿಟ್ ಗೊತ್ತಾ?

1. ಬ್ಯಾಂಕ್ ಲಾಕರ್ ತೆರೆಯಬೇಕು ಎಂದರೆ ನೀವು ಅದೇ ಬ್ಯಾಂಕ್ ನಲ್ಲಿ ಖಾತೆ ಹೊಂದಿರಬೇಕಾದ ಅಗತ್ಯ ಇಲ್ಲ. ಉದಾಹರಣೆಗೆ ಒಂದು ಬ್ಯಾಂಕಿನಲ್ಲಿ ನೀವು ಸ್ಯಾಲರಿ ಖಾತೆಯನ್ನು ಹೊಂದಿದ್ದೀರಿ ಎಂದು ಭಾವಿಸಿ. ಇನ್ನೊಂದು ಬ್ಯಾಂಕ್ ನಿಮ್ಮ ಮನೆಯ ಹತ್ತಿರವೇ ಇದೆ ಅಂತಹ ಸಂದರ್ಭದಲ್ಲಿ ನೀವು ಮನೆಯ ಹತ್ತಿರದ ಬ್ಯಾಂಕ್ ನಲ್ಲಿ ಲಾಕರ್ ತೆಗೆದುಕೊಳ್ಳಬಹುದು.

2. ಇನ್ನು ಎರಡನೆಯದಾಗಿ ಬ್ಯಾಂಕ್ ಗಳು ಹೆಚ್ಚಾಗಿ ನಮ್ಮ ಬಳಿ ಲಾಕರ್ ಸೌಲಭ್ಯ ಇಲ್ಲ ಎಂದು ಹೇಳಿದ್ದು ದಾಖಲಾಗಿದೆ. ಇದಕ್ಕಾಗಿ ಆರ್‌ಬಿಐ 2021 ರಲ್ಲಿ ಹೊಸ ನಿಯಮ ಜಾರಿಗೆ ತಂದಿದ್ದು, ಬ್ಯಾಂಕ್ ಲಾಕರ್ ವಿಚಾರದಲ್ಲಿಯೂ ಕೂಡ ಗ್ರಾಹಕರ ಜೊತೆಗೆ ಪಾರದರ್ಶಕವಾಗಿ ನಡೆದುಕೊಳ್ಳಬೇಕು ಎಂದು ಬ್ಯಾಂಕ್ ಗೆ ಸೂಚನೆ ನೀಡಿದೆ.

ಒಂದು ವೇಳೆ ಲಾಕರ್ ಅನ್ನು ಪಡೆದುಕೊಳ್ಳಲು ವೇಟಿಂಗ್ ಲಿಸ್ಟ್ (waiting list) ನಲ್ಲಿ ಗ್ರಾಹಕರು ಇದ್ದರೆ ಆ ಸಂಖ್ಯೆಯನ್ನು ಅವರಿಗೆ ತಿಳಿಸಬೇಕು. ಮತ್ತೆ ಬ್ಯಾಂಕ್ ಲಾಕರ್ ಲಭ್ಯವಿದ್ದಾಗ, ಗ್ರಾಹಕರ ಸಂಖ್ಯೆ ಆರಂಭವಾಗಿರುವುದರ ಬಗ್ಗೆಯೂ ಮಾಹಿತಿ ಒದಗಿಸಬೇಕು.

ಸ್ಟೇಟ್ ಬ್ಯಾಂಕ್ ಅಕೌಂಟ್ ಇದ್ದೋರಿಗೆ ಸೂಚನೆ! ಮಾರ್ಚ್ 31ರ ಒಳಗೆ ಅವಕಾಶ

Changes in Bank Locker Rules3. ಬ್ಯಾಂಕ್ ಗಳು ಲಾಕರ್ ಗಳನ್ನು ಬಳಸಿದ ಗ್ರಾಹಕರಿಗೆ ಎಫ್ ಡಿ (FD) ಅಥವಾ ಸ್ಥಿರ ಠೇವಣಿ (fixed deposit) ಆರಂಭಿಸಲು ಸೂಚಿಸುತ್ತಾರೆ ಯಾಕಂದ್ರೆ ಗ್ರಾಹಕರು ಒಂದು ವೇಳೆ ಲಾಕರ್ ತೆರೆದು ಮುಂದಿನ ದಿನಗಳಲ್ಲಿ ಅದಕ್ಕೆ ಸರಿಯಾಗಿ ರೆಸ್ಪೋನ್ಡ್ ಮಾಡದೆ ಇದ್ದರೆ ಅಂತಹ ಸಂದರ್ಭದಲ್ಲಿ ಎಫ್ಡಿ ಸುರಕ್ಷತೆಯ ಹಣವನ್ನು ಬ್ಯಾಂಕ್ ತನ್ನದಾಗಿಸಿಕೊಳ್ಳಬಹುದು.

ಲಾಕರ್ ನಲ್ಲಿ ಇರುವ ವಸ್ತುಗಳು ಎಷ್ಟೇ ಅಮೂಲ್ಯದಾಗಿದ್ದರು ಕೂಡ ಅದು ಬ್ಯಾಂಕ್ ಗೆ ಸಂಬಂಧಪಟ್ಟ ಹಾಗಾಗಿ ಗ್ರಾಹಕರ ಜೊತೆಗೆ ಬ್ಯಾಂಕ್ ಕೂಡ ತನ್ನ ಸೇಫ್ಟಿಯನ್ನು ನೋಡಿಕೊಳ್ಳುತ್ತದೆ.

4. ನಾಮ ನಿರ್ದೇಶನಕ್ಕೆ ಅವಕಾಶ ಇದೆ. ಅಂದರೆ ಬ್ಯಾಂಕ್ ನಲ್ಲಿ (Bank) ಲಾಕರ್ ತೆಗೆದುಕೊಂಡವರು ನಾಮಿನಿಯನ್ನು ಸೂಚಿಸಬೇಕು ಹಾಗೂ ಈ ನಾಮಿನಿ, ಆ ವ್ಯಕ್ತಿ ಮರಣ ಹೊಂದಿದರೆ, ತನ್ನ ಅಧಿಕಾರವನ್ನು ಬ್ಯಾಂಕ್ ಗೆ ತಿಳಿಸಿ ಲಾಕರ್ ಗೆ ಸಂಬಂಧಪಟ್ಟಂತೆ ಮುಂದಿನ ಕೆಲಸ ಮಾಡಬಹುದು.

ಹಿರಿಯ ನಾಗರಿಕರ 1 ಲಕ್ಷ ಹೂಡಿಕೆಗೆ ಸಿಗುತ್ತೆ 26 ಸಾವಿರ ಬಡ್ಡಿ! ಬಂಪರ್ ಯೋಜನೆ

5. ಬ್ಯಾಂಕ್ ಲಾಕರ್ ನಲ್ಲಿ ಇಟ್ಟ ವಸ್ತುಗಳಿಗೆ 100% ಗ್ಯಾರೆಂಟಿ ನೀಡುವುದಿಲ್ಲ. ಅಂದರೆ ಬ್ಯಾಂಕ್ ದಿವಾಳಿಯಾದ ಸಂದರ್ಭದಲ್ಲಿ ಅಥವಾ ಬ್ಯಾಂಕ್ ಮುಚ್ಚಿ ಹೋದ ಸಂದರ್ಭದಲ್ಲಿ ಲೋಕಲ್ ಗೆ ಯಾವುದೇ ರೀತಿಯ ಇನ್ಸೂರೆನ್ಸ್ ಇರುವುದಿಲ್ಲ. ಸ್ವಲ್ಪಮಟ್ಟಿನ ಪರಿಹಾರವನ್ನು ಪಡೆದುಕೊಳ್ಳಬಹುದಾದರು ಕೂಡ ನಿಮ್ಮ ಲಾಕರ್ ನಲ್ಲಿ ಇದ್ದ ವಸ್ತು, ಅದಕ್ಕಿಂತ ಹೆಚ್ಚಿನ ಮೌಲ್ಯದಾಗಿದ್ದರೆ ಅದಕ್ಕೆ ಯಾವುದೇ ಸೇಫ್ಟಿ ಇರುವುದಿಲ್ಲ.

ಬ್ಯಾಂಕ್ ನಲ್ಲಿ ಲಾಕರ್ ತೆಗೆದುಕೊಂಡರೆ ವಾರ್ಷಿಕ ಶುಲ್ಕವನ್ನು ಕೂಡ ಪಾವತಿಸಬೇಕು ಈ ಎಲ್ಲ ನಿಯಮಗಳನ್ನು ತಿಳಿದುಕೊಂಡು ನೀವು ನಿಮ್ಮ ಮೌಲ್ಯಯುತ ವಸ್ತು ಹಣ ಚಿನ್ನಾಭರಣ ಮೊದಲಾದವುಗಳನ್ನು ಇಟ್ಟು ಸೇಫ್ ಮಾಡಿಕೊಳ್ಳಬಹುದು.

Those who keep gold jewelry in the bank locker got new rules

Related Stories