Business News

ಸ್ಟೇಟ್ ಬ್ಯಾಂಕ್ ಅಕೌಂಟ್ ಇದ್ದೋರಿಗೆ ಸೂಚನೆ! ಮಾರ್ಚ್ 31ರ ಒಳಗೆ ಅವಕಾಶ

ಹೊಸ ಹಣಕಾಸಿನ ವರ್ಷ (new financial year) ಆರಂಭವಾಗುವುದಕ್ಕೆ ಇನ್ನೇನು ಒಂದು ತಿಂಗಳು ಬಾಕಿ ಇದೆ. March ತಿಂಗಳು ಕೊನೆಗೊಳ್ಳುತ್ತಿದ್ದಂತೆ ಏಪ್ರಿಲ್ ನಿಂದ 2024ರ ಆರ್ಥಿಕ ವರ್ಷ ಆರಂಭವಾಗುತ್ತದೆ.

ಬ್ಯಾಂಕಿನ ಹಣಕಾಸಿನ ವ್ಯವಹಾರಕ್ಕೆ ಸಂಬಂಧಪಟ್ಟ ಹಾಗೆ ಕೆಲವು ಬದಲಾವಣೆಗಳನ್ನು ತರಲಾಗಿದೆ. ಅದರಲ್ಲೂ ನೀವು ಎಸ್‌ಬಿಐ ಬ್ಯಾಂಕ್ ನ (State Bank Of India) ಗ್ರಾಹಕರಾಗಿದ್ರೆ ಖಂಡಿತವಾಗಿಯೂ ಈ ವಿಚಾರಗಳು ನಿಮಗೆ ತಿಳಿದಿರಲಿ. ಹಾಗೂ ಎಸ್ಬಿಐ ಗ್ರಾಹಕರಲ್ಲದೆ ಇರುವವರು ತಕ್ಷಣ ಈ ಯೋಜನೆಗಳಿಗೆ ಅಪ್ಲೈ ಮಾಡಿದ್ರೆ ಹೆಚ್ಚು ಲಾಭವನ್ನು ಪಡೆದುಕೊಳ್ಳುತ್ತೀರಿ.

State Bank Fixed Deposit

ನಿಮ್ಮ ಬ್ಯಾಂಕ್ ಸೇವಿಂಗ್ಸ್ ಖಾತೆಯಲ್ಲಿ ಎಷ್ಟಿದೆ ಹಣ! ಅದಕ್ಕೂ ಇದೆ ಲಿಮಿಟ್ ಗೊತ್ತಾ?

ಎಸ್ ಬಿ ಐ ಅಮೃತ್ ಕಲಷ್ ಯೋಜನೆ! (SBI Amrit Kalash scheme)

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) , ದೇಶದ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾಗಿದ್ದು, ಗ್ರಾಹಕರ ಬೇಡಿಕೆಯ ಮೇರೆಗೆ ಈ ಹಿಂದೆ ಸ್ಥಗಿತಗೊಳ್ಳಬೇಕಿದ್ದ ಅಮೃತ ಕಲಾಷ್ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಮಾರ್ಚ್ 31ರ ವರೆಗೆ ಮುಂದುವರೆಸಿದೆ.

ಈ ಯೋಜನೆಯಲ್ಲಿ 400 ದಿನಗಳ ಹೂಡಿಕೆಗೆ 7.10% ನಷ್ಟು ಬಡ್ಡಿ ಪಡೆಯಬಹುದು. ಹೂಡಿಕೆ (investment ) ಮಾಡಿ 400 ದಿನಕ್ಕಿಂತ ಮೊದಲೇ ನಿಮ್ಮ ಹಣವನ್ನು ಹಿಂಪಡೆಯಲು ಬಯಸಿದರೆ, 0.50% -1% ಗಿಂತಲೂ ಕಡಿಮೆ ದಂಡ ಪಾವತಿ ಮಾಡಬೇಕು. ಅಂದರೆ ಇಷ್ಟು ಬಡ್ಡಿ ದರವನ್ನ ಕಡಿತಗೊಳಿಸಲಾಗುತ್ತದೆ.

ಬೆಂಗಳೂರಿನ ಈ ಸ್ಥಳಗಳಲ್ಲಿ ಬಾಡಿಗೆ ದರ ತುಂಬಾ ಕಡಿಮೆ; ಬಾಡಿಗೆ ಫ್ಲ್ಯಾಟ್ ಖರೀದಿಸಿ

State Bank Of Indiaಎಸ್ ಬಿ ಐ ವಿ ಕೇರ್ ಎಫ್ ಡಿ ಯೋಜನೆ! (We care FD scheme)

SBI, ಹಿರಿಯ ನಾಗರಿಕರಿಗಾಗಿ (senior citizen) care FD scheme ಪರಿಚಯಿಸಿದೆ. ಇದರಲ್ಲಿ ಕನಿಷ್ಠ ಐದು ವರ್ಷದಿಂದ ಗರಿಷ್ಠ 10 ವರ್ಷಗಳ ವರೆಗೆ ಹೂಡಿಕೆ ಮುಂದುವರಿಸಬಹುದು. ಅಷ್ಟೇ ಅಲ್ಲ ಹಿರಿಯ ನಾಗರಿಕರು 7.50%ವರೆಗೆ ಬಡ್ಡಿ ಲಾಭವನ್ನು ಪಡೆದುಕೊಳ್ಳುತ್ತಾರೆ.

ಇದಕ್ಕಾಗಿ ಅರ್ಜಿ ಸಲ್ಲಿಸಲು ಮಾರ್ಚ್ 31 2024 ಕೊನೆಯ ದಿನಾಂಕವಾಗಿದೆ. ಉತ್ತಮ ಬಡ್ಡಿ ದರ ಪಡೆದುಕೊಳ್ಳಲು ಈ ಯೋಜನೆಯಡಿಯಲ್ಲಿ ಇಂದೇ ಹೂಡಿಕೆ ಆರಂಭಿಸಿ.

ಹಿರಿಯ ನಾಗರಿಕರ 1 ಲಕ್ಷ ಹೂಡಿಕೆಗೆ ಸಿಗುತ್ತೆ 26 ಸಾವಿರ ಬಡ್ಡಿ! ಬಂಪರ್ ಯೋಜನೆ

ಗೃಹ ಸಾಲದ ಮೇಲಿನ ಬಡ್ಡಿ ದರ ಕೊಡುಗೆ! (Interest rate decreased on home loan)

ಎಸ್ ಬಿ ಐ ಬ್ಯಾಂಕ್ ನಲ್ಲಿ ಹೊಸ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಇದರ ಅಡಿಯಲ್ಲಿ ಗೃಹ ಸಾಲಕ್ಕೆ (Home Loan) ಕಡಿಮೆ ಬಡ್ಡಿ ದರವನ್ನು ಎಸ್‌ಬಿಐ ಬ್ಯಾಂಕ್ ವಿಧಿಸಿದೆ.

ಇದು ಕೂಡ ಸೀಮಿತ ಅವಧಿಯ ಕೊಡುಗೆ ಆಗಿದ್ದು ಮಾರ್ಚ್ 31ರವರೆಗೆ ಮಾತ್ರ ಲಭ್ಯವಿದೆ 750 ರಿಂದ 800 ಸಿಬಿಲ್ ಸ್ಕೋರ್ (CIBIL Score) ಇರುವ ವ್ಯಕ್ತಿ ಎಸ್ ಬಿ ಐ ನಲ್ಲಿ ಗೃಹ ಸಾಲ ತೆಗೆದುಕೊಂಡರೆ 8.60% ಬಡ್ಡಿ ದರದಲ್ಲಿ ಸಾಲ ಸಿಗುತ್ತದೆ. ಇಷ್ಟು ಉತ್ತಮ ಸಿಬಿಲ್ ಸ್ಕೋರ್ ಇಲ್ಲದೆ ಇರುವವರಿಗೆ 9.15% ಬಡ್ಡಿ ವಿಧಿಸಲಾಗುವುದು.

ಈ ಎಲ್ಲಾ ಯೋಜನೆಯ ಪ್ರಯೋಜನ ಪಡೆದುಕೊಳ್ಳುವುದಕ್ಕೆ ಎಸ್‌ಬಿಐ ಮಾರ್ಚ್ 31 2024 ಕೊನೆಯ ದಿನಾಂಕವನ್ನು ನಿಗದಿಪಡಿಸಿದ್ದು, ಈ ದಿನಾಂಕದ ಒಳಗೆ ಎಸ್‌ಬಿಐ ಘೋಷಿಸಿರುವ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಿ.

ಈ ದಿನಾಂಕದ ಒಳಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಿ! ಇಲ್ಲದಿದ್ರೆ 10,000 ದಂಡ

Notice to those who have a State Bank account

Our Whatsapp Channel is Live Now 👇

Whatsapp Channel

Kannada News Today

Kannada News Today 🌐

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
FacebookX
We value your thoughts!
Send your feedback to us at kannadanewstoday@gmail.com

Related Stories