ಪರ್ಸನಲ್ ಲೋನ್ ತೆಗೆದುಕೊಳ್ಳುವುದಕ್ಕೂ ಮುನ್ನ ಈ ವಿಚಾರಗಳು ತಿಳಿದಿರಲಿ!

Story Highlights

Personal Loan : ಬ್ಯಾಂಕುಗಳು (Banks) ನಮಗೆ ಎಷ್ಟು ಬೇಕಾದರೂ ವಯಕ್ತಿಕ ಸಾಲವನ್ನು (Personal Loan) ಕೊಡಬಹುದು. ಆದರೆ ನಾವು ಎಷ್ಟು ಹಣವನ್ನು ಪಡೆದುಕೊಳ್ಳಬೇಕು ಎನ್ನುವುದು ನಮ್ಮ ಕೈಯಲ್ಲೇ ಇದೆ.

Personal Loan : ನಮಗೆ ತುರ್ತು ಪರಿಸ್ಥಿತಿ (financial emergency) ಯಲ್ಲಿ ಹಣದ ಅಗತ್ಯ ಇದ್ದಾಗ ಬ್ಯಾಂಕ್ ಗಳ ಮೂಲಕ ವೈಯಕ್ತಿಕ ಸಾಲ (personal loan) ವನ್ನು ಸುಲಭವಾಗಿ ಪಡೆಯಬಹುದು. ಮಾಸಿಕ ವೇತನ ಪಡೆಯುವವರಿಗೆ ವೈಯಕ್ತಿಕ ಸಾಲ ಪಡೆದುಕೊಳ್ಳುವುದು ಕೂಡ ಬಹಳ ಸುಲಭ.

ಬ್ಯಾಂಕುಗಳು (Banks) ನಮಗೆ ಎಷ್ಟು ಬೇಕಾದರೂ ವಯಕ್ತಿಕ ಸಾಲವನ್ನು (Personal Loan) ಕೊಡಬಹುದು. ಆದರೆ ನಾವು ಎಷ್ಟು ಹಣವನ್ನು ಪಡೆದುಕೊಳ್ಳಬೇಕು ಎನ್ನುವುದು ನಮ್ಮ ಕೈಯಲ್ಲೇ ಇದೆ.

ಅಂದ್ರೆ ಹೆಚ್ಚಿನ ಮೊತ್ತದ ಹಣವನ್ನು ವೈಯಕ್ತಿಕ ಸಾಲವಾಗಿ ಪಡೆದುಕೊಂಡರೆ, ಅದನ್ನ ಹಿಂತಿರುಗಿಸುವುದು ದೊಡ್ಡ ಸವಾಲಾಗಿರುತ್ತದೆ. ವೈಯಕ್ತಿಕ ಸಾಲದ ಬಡ್ಡಿ ದರವು ಹೆಚ್ಚಿರುವ ಹಿನ್ನೆಲೆಯಲ್ಲಿ ಸುಲಭವಾಗಿ ಸಾಲ ಮರುಪಾವತಿ ಮಾಡಲು ಸಾಧ್ಯವಿಲ್ಲ.

ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಪ್ರತಿ ತಿಂಗಳು ಗಳಿಸಬಹುದು 20,000! ಇಲ್ಲಿದೆ ಮಾಹಿತಿ

ಅಂತಹ ಸಂದರ್ಭದಲ್ಲಿ ನೀವು ವೈಯಕ್ತಿಕ ಸಾಲ ಮಾಡುವುದಕ್ಕೂ ಮೊದಲು ಈ ಕೆಲವು ವಿಷಯಗಳ ಬಗ್ಗೆ ಗಮನ ವಹಿಸಿದರೆ ಚಿಂತೆ ಇಲ್ಲದೆ ಹಣ ಮರುಪಾವತಿ ಮಾಡಬಹುದು ಮತ್ತಷ್ಟು ವಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು.

ಆದಾಯ; ನೀವು ತಿಂಗಳ ಸಂಬಳ ಪಡೆದುಕೊಳ್ಳುವವರಾಗಿದ್ದರೆ ನಿಮ್ಮ ತಿಂಗಳ ಆದಾಯ ಎಷ್ಟು? ಹಾಗೂ ಖರ್ಚು ಎಷ್ಟು ಎಂಬುದನ್ನು ಮೊದಲು ತಿಳಿದುಕೊಳ್ಳಿ. ಪ್ರತಿ ತಿಂಗಳ ಇಎಂಐ ಪಾವತಿ ಮಾಡಲು ಸಾಧ್ಯವಿದೆಯೋ ಇಲ್ಲವೋ ಎಂಬುದನ್ನು ನೋಡಿ ನಂತರ ನಿಮ್ಮ ಸಾಮರ್ಥ್ಯದ ಆಧಾರದ ಮೇಲೆ ವೈಯಕ್ತಿಕ ಸಾಲದ ಮೊತ್ತವನ್ನು ನಿರ್ಧರಿಸಿ.

ಕ್ರೆಡಿಟ್ ಸ್ಕೋರ್; ನಿಮ್ಮ ಹಣ ಮರುಪಾವತಿ ಮಾಡುವ ಸಾಮರ್ಥ್ಯವನ್ನು ಕ್ರೆಡಿಟ್ ಸ್ಕೋರ್ (credit score) ನಿರ್ಧರಿಸುತ್ತದೆ. ಹಾಗಾಗಿ ಕ್ರೆಡಿಟ್ ಸ್ಕೋರ್ ಉತ್ತಮವಾಗಿರುವಂತೆ ನೋಡಿಕೊಳ್ಳಿ. ಇದು ಚೆನ್ನಾಗಿದ್ರೆ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಸಿಗುತ್ತದೆ.

ಮನೆಯಲ್ಲಿ ಎಷ್ಟು ಚಿನ್ನವನ್ನು ಇಟ್ಟುಕೊಳ್ಳಬಹುದು ಗೊತ್ತಾ? ಹೊಸ ನಿಯಮ

Personal Loanಉದ್ಯೋಗ; ಇನ್ನು ನೀವು ಯಾವುದೇ ಬ್ಯಾಂಕ್ ನಲ್ಲಿ ವೈಯಕ್ತಿಕ ಸಾಲಕ್ಕಾಗಿ ಅರ್ಜಿ ಸಲ್ಲಿಸಿದರೆ ನೀವು ಒಂದು ಕಂಪನಿ ಅಥವಾ ಒಂದು ಸ್ಥಳದಲ್ಲಿ ಎಷ್ಟು ವರ್ಷಗಳಿಂದ ಕೆಲಸ (Job) ದಲ್ಲಿ ಇದ್ದೀರಿ ಎಂಬುದನ್ನು ಪರಿಶೀಲಿಸುತ್ತದೆ. ಆಗಾಗ ಕೆಲಸ ಬದಲಾಯಿಸುವವರಾಗಿದ್ದರೆ ಸ್ಥಿರತೆ ಇಲ್ಲ ಎನ್ನುವುದನ್ನು ಬ್ಯಾಂಕ್ ಅರ್ಥ ಮಾಡಿಕೊಳ್ಳುತ್ತದೆ ಇದರಿಂದಾಗಿ ವೈಯಕ್ತಿಕ ಸಾಲ ಸಿಗುವುದು ಕಷ್ಟವಾಗುತ್ತದೆ. ಹಾಗಾಗಿ ಆದಷ್ಟು ಹೆಚ್ಚಿನ ಸಮಯ ಒಂದು ಸ್ಥಳದಲ್ಲಿ ಉದ್ಯೋಗ ಮಾಡಲು ಪ್ರಯತ್ನಿಸಿ.

ಬ್ಯಾಂಕ್ ಲಾಕರ್ ನಲ್ಲಿ ಚಿನ್ನಾಭರಣ ಇಡೋರಿಗೆ ಬಂತು ಹೊಸ ರೂಲ್ಸ್! ಇಲ್ಲಿದೆ ಮಾಹಿತಿ

ಎಷ್ಟು ಹಣ ಸಾಲವಾಗಿ ಪಡೆಯಬೇಕು?

ಇದನ್ನು ನೀವು ಮೊದಲು ನಿರ್ಧರಿಸಬೇಕು. ನಮ್ಮ ಖರ್ಚು ವೆಚ್ಚಗಳು ಮುಗಿಯುವಂತದ್ದಲ್ಲ. ಹಾಗಾಗಿ ಎಷ್ಟೇ ಹಣ ಸಿಕ್ಕರೂ ಅದು ನಮಗೆ ಸಾಕು ಎನಿರುವುದಿಲ್ಲ. ಆದರೆ ನೀವು ಹೆಚ್ಚಿನ ಹಣವನ್ನು ಪಡೆದುಕೊಂಡರೆ ಜಾಸ್ತಿ ಆಗುತ್ತದೆ. ಅದನ್ನ ಮರುಪಾವತಿ ಮಾಡಲು ನಿಮ್ಮ ಬಳಿ ಸಾಮರ್ಥ್ಯ ಇದೆಯೋ ಇಲ್ಲವೋ ಎನ್ನುವುದನ್ನು ಪರಿಶೀಲಿಸಿಕೊಳ್ಳಿ. ನಂತರ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಸಾಲದ ಮೊತ್ತವನ್ನು ನಿರ್ಧರಿಸಿ.

ಈ ಎಲ್ಲಾ ರೀತಿಯಲ್ಲಿಯೂ ಕೂಡ ನೀವು ಯೋಚನೆ ಮಾಡಿ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಹಾಗೂ ನಿಮ್ಮ ಅತ್ಯಂತ ಅಗತ್ಯಕ್ಕೆ ಅನುಗುಣವಾಗಿ ಸಾಲ ಸೌಲಭ್ಯ ಪಡೆದುಕೊಳ್ಳಿ.

Know these things before taking a personal loan

Related Stories