ಬಡವರಿಗೆ ವಸತಿ ಯೋಜನೆ! ಸ್ವಂತ ಮನೆ ಕಟ್ಟಿಕೊಳ್ಳಲು ಸಿಗುತ್ತೆ ಸಬ್ಸಿಡಿ ಸಾಲ

Subsidy Loan : ಇಂದು ಬಡವರು ಮಧ್ಯಮ ವರ್ಗದವರು ಕೂಡ ಸರ್ಕಾರದಿಂದ ಸಾಲ (Loan) ಹಾಗೂ ಸಬ್ಸಿಡಿ (subsidy) ಪಡೆದುಕೊಂಡು ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳಲು ಸಾಧ್ಯವಾಗುತ್ತಿದೆ.

Subsidy Loan : ಬಡವರಿರಲಿ ಅಥವಾ ಶ್ರೀಮಂತರಲ್ಲಿ ತಮ್ಮದೇ ಆಗಿರುವ ಸ್ವಂತ ಸೂರು ಇರಬೇಕು ಎನ್ನುವುದು ಪ್ರತಿಯೊಬ್ಬರ ಕನಸು. ಅದೇ ರೀತಿ ಗುಡಿಸಲು ಮುಕ್ತ ಭಾರತ ಎನ್ನುವ ಕನಸು ಸರ್ಕಾರದ್ದು.

ಹಾಗಾಗಿ ನಾವು ನಮ್ಮದೇ ಆಗಿರುವ ಸ್ವಂತ ಮನೆ (own house) ನಿರ್ಮಾಣ ಮಾಡಿಕೊಳ್ಳಲು ಬಯಸಿದರೆ ಸರ್ಕಾರ ಅದಕ್ಕೆ ಪೂರಕ ವ್ಯವಸ್ಥೆಯನ್ನು ಮಾಡಿಕೊಡುತ್ತದೆ. ಹಾಗಾಗಿ ಇಂದು ಬಡವರು ಮಧ್ಯಮ ವರ್ಗದವರು ಕೂಡ ಸರ್ಕಾರದಿಂದ ಸಾಲ (Loan) ಹಾಗೂ ಸಬ್ಸಿಡಿ (subsidy) ಪಡೆದುಕೊಂಡು ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳಲು ಸಾಧ್ಯವಾಗುತ್ತಿದೆ.

ಫೋನ್ ಪೇ, ಯುಪಿಐ ಪೇಮೆಂಟ್ ಮಾಡೋರಿಗೆ ಬಿಗ್ ಅಪ್ಡೇಟ್! ಹೊಸ ನಿಯಮ

ಬಡವರಿಗೆ ವಸತಿ ಯೋಜನೆ! ಸ್ವಂತ ಮನೆ ಕಟ್ಟಿಕೊಳ್ಳಲು ಸಿಗುತ್ತೆ ಸಬ್ಸಿಡಿ ಸಾಲ - Kannada News

ಇನ್ನೇನು ಲೋಕಸಭಾ ಚುನಾವಣೆಯ ಪ್ರಣಾಳಿಕೆ ಬಿಡುಗಡೆ ಆಗಲಿದೆ, ಕೇಂದ್ರ ಸರ್ಕಾರ ಚುನಾವಣಾ ತಯಾರಿಯ ಹಿನ್ನೆಲೆಯಲ್ಲಿ ಜನರಿಗೆ ಅಗತ್ಯ ಇರುವ ಮೂಲಭೂತ ಸೌಕರ್ಯಗಳನ್ನು ಇನ್ನಷ್ಟು ಸರಿಯಾಗಿ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.

ಇದಕ್ಕೆ ಸಂಬಂಧಪಟ್ಟ ಹಾಗೆ ಈಗಾಗಲೇ ಸ್ವಂತ ಊರು ನಿರ್ಮಾಣ ಮಾಡಿಕೊಳ್ಳುವ ಜನರಿಗೆ ಸಬ್ಸಿಡಿ ನೀಡುವ ಬಗ್ಗೆ ಮಾಹಿತಿ ನೀಡಲಾಗಿದೆ. ಬಡವರು ಮಾಧ್ಯಮ ವರ್ಗದವರು ಕೂಡ ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳಲು ಸರ್ಕಾರ ಬಂಪರ್ ಆಫರ್ ನೀಡಲು ಮುಂದಾಗಿದೆ.

ಬಡವರಿಗೆ ಸ್ವಂತ ಮನೆ ಕಟ್ಟಿಸಿಕೊಡಲು ಸರ್ಕಾರದ ನಿರ್ಧಾರ!

ಫೆಬ್ರುವರಿ 1.2024ರಲ್ಲಿ ಮಧ್ಯಂತರ ಬಜೆಟ್ ಘೋಷಣೆ ಆಗಿತ್ತು. ಈ ಸಂದರ್ಭದಲ್ಲಿ ನಿರ್ಮಲ ಸೀತಾರಾಮನ್ (Nirmala sitaraman) ಅವರು ಬಡವರಿಗೆ ಮನೆ ಕಟ್ಟಿಸಿ ಕೊಡುವ ಸರ್ಕಾರದ ಯೋಜನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.

ಈ ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿ 25,000 ಇಟ್ರೆ ಎಷ್ಟು ಬಡ್ಡಿ ಸಿಗುತ್ತೆ ಗೊತ್ತಾ?

Free Housing Schemeಈ ವಸತಿ ಯೋಜನೆಯ ಬಗ್ಗೆ ಹಾಗೂ ಅದರ ಅನುಷ್ಠಾನದ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿದ್ದು ಈಗಾಗಲೇ ಎಲ್ಲಾ ವಾಣಿಜ್ಯ ಬ್ಯಾಂಕ್ ಗಳು (Banks) ಹಾಗೂ ಇತರ ಹಣಕಾಸು ಸಂಸ್ಥೆಗಳ ಜೊತೆಗೆ ಮಾತುಕತೆ ನಡೆಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ನಮ್ಮ ದೇಶದಲ್ಲಿ, 1.4 ಶತಕೋಟಿ ಜನಸಂಖ್ಯೆ ಇದೆ, ಇದರಲ್ಲಿ ಗ್ರಾಮೀಣ ಪ್ರದೇಶದಲ್ಲಿ 20 ದಶಲಕ್ಷದಷ್ಟು ಜನರು ಸ್ವಂತ ಮನೆ ಇಲ್ಲದೆ ಕಷ್ಟ ಪಡುವಂತೆ ಆಗಿದೆ. ನಗರ ಪ್ರದೇಶದಲ್ಲಿ 1.5 ಮಿಲಿಯನ್ ನಷ್ಟು ಜನರಿಗೆ ವಸತಿ ಸೌಲಭ್ಯ ಇಲ್ಲ. ಈ ಪರಿಸ್ಥಿತಿಯನ್ನು ಸುಧಾರಿಸಲು ವಸತಿ ಯೋಜನೆಯನ್ನು ಹೊಸದಾಗಿ ಪರಿಚಯಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಪರ್ಸನಲ್ ಲೋನ್ ತೆಗೆದುಕೊಳ್ಳುವುದಕ್ಕೂ ಮುನ್ನ ಈ ವಿಚಾರಗಳು ತಿಳಿದಿರಲಿ!

ಕೋಟಿ ಹಣ ಮೀಸಲಿಟ್ಟ ಸರ್ಕಾರ!

ಕೇಂದ್ರ ನರೇಂದ್ರ ಮೋದಿಜಿ ನೇತೃತ್ವದ ಸರ್ಕಾರ, ವಸತಿ ಯೋಜನೆಗಾಗಿ 790 ಶತಕೋಟಿ ರೂಪಾಯಿಗಳನ್ನು ಈಗಾಗಲೇ ಮೀಸಲಿಟ್ಟಿತ್ತು. 2024- 25 ನೇ ಸಾಲಿನಲ್ಲಿ 15% ನಷ್ಟು ಹಣವನ್ನು ಹೆಚ್ಚಾಗಿ ಮೀಸಲಿಡಲಾಗಿದ್ದು, 1013 ಶತ ಕೋಟಿ ರೂಪಾಯಿಗಳನ್ನು ವಸತಿ ಯೋಜನೆಗಾಗಿ ಸರ್ಕಾರ ವ್ಯಯಿಸಲಾಗಿದೆ.

ಒಟ್ಟಿನಲ್ಲಿ ಸರ್ಕಾರ, ಇನ್ನು ಐದು ವರ್ಷಗಳ ಅವಧಿಯಲ್ಲಿ ಯಾವುದೇ ಒಬ್ಬ ಭಾರತೀಯ ಕೂಡ ವಸತಿ ಇಲ್ಲದೆ ಜೀವನ ನಡೆಸುವಂತೆ ಆಗಬಾರದು ಎನ್ನುವ ಕಾರಣಕ್ಕೆ ವಸತಿ ಯೋಜನೆಯನ್ನು ಪರಿಚಯಿಸಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಬ್ಸಿಡಿ ಮೂಲಕ ಸಾಲ (Loan) ಸೌಲಭ್ಯ ಪಡೆದು ಪ್ರತಿಯೊಬ್ಬರು ಮನೆ ನಿರ್ಮಾಣ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಮನೆಯಲ್ಲೇ ಕುಳಿತು ಈ ಉದ್ಯಮ ಮಾಡಿದ್ರೆ, ಕೈ ತುಂಬಾ ಆದಾಯ! ಬಂಪರ್ ಗಳಿಕೆ

Housing Scheme for the poor, Subsidy loan available for building own house

Follow us On

FaceBook Google News