ಮಹಿಳೆಯರಿಗೆ ₹15,000 ಸಿಗುವ ಮತ್ತೊಂದು ಬಂಪರ್ ಯೋಜನೆ! ಇಲ್ಲಿದೆ ಮಾಹಿತಿ

ಮಹಿಳೆಯರಿಗೆ ಸಾಲ ಸೌಲಭ್ಯವನ್ನು (Loan) ನೀಡಲಾಗುತ್ತಿದೆ. ಇದರ ಜೊತೆಗೆ ಕೃಷಿ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ರೈತ ಮಹಿಳೆಯರಿಗೂ ಕೂಡ ಅನುಕೂಲವಾಗುವಂತೆ ಮಹತ್ತರ ಯೋಜನೆ ಸರ್ಕಾರ ಘೋಷಿಸಿದೆ

Bengaluru, Karnataka, India
Edited By: Satish Raj Goravigere

ಕೇಂದ್ರ ಸರ್ಕಾರ ಮಹಿಳೆಯರ ಸಬಲೀಕರಣ(women empowerment) ಕ್ಕಾಗಿ ಈಗಾಗಲೇ ಕೆಲವು ಪ್ರಮುಖ ಯೋಜನೆಗಳನ್ನು ಜಾರಿಗೆ ತಂದಿದೆ, ಇದರಿಂದ ದೇಶದಾದ್ಯಂತ ಸಾಕಷ್ಟು ಮಹಿಳೆಯರು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಎನ್ನಬಹುದು.

ಉದ್ಯೋಗ ಮಾಡುವ ಮಹಿಳೆಯರಿಗೆ ಸಾಲ ಸೌಲಭ್ಯವನ್ನು (Loan) ನೀಡಲಾಗುತ್ತಿದೆ. ಇದರ ಜೊತೆಗೆ ಕೃಷಿ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ರೈತ ಮಹಿಳೆಯರಿಗೂ ಕೂಡ ಅನುಕೂಲವಾಗುವಂತೆ ಮಹತ್ತರ ಯೋಜನೆ ಒಂದನ್ನು ಸರ್ಕಾರ ಘೋಷಿಸಿದೆ ಅದುವೇ ಡ್ರೋನ್ ದಿದಿ ಯೋಜನೆ!

Women will get 3 lakh interest-free loan to start their own business

ಒಬ್ಬ ವ್ಯಕ್ತಿ ಎಷ್ಟು ಬ್ಯಾಂಕ್ ಅಕೌಂಟ್ ಹೊಂದಿರಬಹುದು ಗೊತ್ತ; ಹೊಸ ರೂಲ್ಸ್

ಏನಿದು ಡ್ರೋನ್ ದಿದಿ ಯೋಜನೆ? (Pradhanmantri drone didi scheme)

ಮಹಿಳಾ ಸ್ವಸಹಾಯ ಗುಂಪುಗಳಿಗೆ ಡ್ರೋನ್ ನೀಡುವ ಯೋಜನೆ ಇದಾಗಿದೆ. ಮಹಿಳೆಯರು ಈ ಡ್ರೋನ್ ಅನ್ನು ಪಡೆದುಕೊಂಡು ಅದನ್ನು ಕೃಷಿ ಭೂಮಿಯಲ್ಲಿ ಗೊಬ್ಬರ ಸಿಂಪಡಣೆ ಮತ್ತು ಕೀಟನಾಶಕಗಳ ಸಿಂಪಡಣೆಗೆ ಬಳಸಿಕೊಳ್ಳಬಹುದು. ಮುಂದಿನ ನಾಲ್ಕು ವರ್ಷಗಳ ಅವಧಿಗೆ ಅಂದರೆ 2023- 24ನೇ ಸಾಲಿನಿಂದ 2025- 26ನೇ ಹಣಕಾಸಿನ ವರ್ಷದವರೆಗೆ ಡ್ರೋನ್ ಅನ್ನು ರೈತಾಪಿ ಮಹಿಳೆಯರು ತಮ್ಮ ಕೃಷಿ ಚಟುವಟಿಕೆಗಾಗಿ ಬಳಸಿಕೊಳ್ಳಬಹುದು.

Drone ಬಳಕೆಗೆ ಸಿಗುತ್ತದೆ ಟ್ರೈನಿಂಗ್!

ಕೃಷಿ ಚಟುವಟಿಕೆಗೆ ಬಳಸಬಹುದಾದ ಡ್ರೋನ್ ಅನ್ನು ಹೇಗೆ ಬಳಕೆ ಮಾಡಬೇಕು ಎಂದು ಮಹಿಳೆಯರಿಗೆ ತಿಳಿದಿರುವುದಿಲ್ಲ. ಅದನ್ನ ತಿಳಿಸುವುದಕ್ಕಾಗಿ ಕೆಲವು ಮಹಿಳಾ ಪೈಲೆಟ್ ಗಳನ್ನು ಸರ್ಕಾರ ನಿಗದಿಪಡಿಸಲಿದೆ, ಹಾಗೂ ಅಂತಹ ಪೈಲೆಟ್ ಗಳಿಗೆ ಗೌರವಧನವನ್ನು ಕೂಡ ಸರ್ಕಾರದ ಕಡೆಯಿಂದ ನೀಡಲಾಗುತ್ತದೆ. ಕೃಷಿ ಚಟುವಟಿಕೆಗೆ ಡ್ರೋನ್ ಬಳಕೆ ಮಾಡಿದರೆ ಸುಮಾರು 10 ಜನ ಕೃಷಿಕರು ಮಾಡುವ ಕೆಲಸವನ್ನು ಒಂದೇ ಒಂದು ಡ್ರೋನ್ ಮಾಡುತ್ತದೆ.

ಈ ಎಲ್ಐಸಿ ಯೋಜನೆಯಲ್ಲಿ ಪ್ರತಿ ತಿಂಗಳು 12,338 ರೂಪಾಯಿ ಪಿಂಚಣಿ ಸಿಗುತ್ತೆ!

droneಹಾಗಾಗಿ ಕೃಷಿ ಚಟುವಟಿಕೆಗೆ ಅಗತ್ಯ ಇರುವ ಗೊಬ್ಬರ ಮತ್ತು ಔಷಧ ಸಿಂಪಡಣೆಗೆ ಡ್ರೋನ್ ಬಳಕೆ ಮಾಡಿದರೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದು ಸರ್ಕಾರ ಮನಗಂಡಿದೆ. ಇದಕ್ಕಾಗಿ ರೈತಾಪಿ ಮಹಿಳೆಯರಿಗೆ ಡ್ರೋನ್ ನೀಡುವುದರ ಮೂಲಕ ಅವರ ಕೃಷಿ ಚಟುವಟಿಕೆಯನ್ನು ಇನ್ನಷ್ಟು ಸರಾಗವಾಗಿಸಲು ಸರ್ಕಾರ ಮುಂದಾಗಿದೆ.

15,000 ವೇತನ ಪಡೆಯಿರಿ!

ಸ್ವ ಸಹಾಯ ಗುಂಪಿನಲ್ಲಿ ಮಹಿಳೆಯರು ಸದಸ್ಯತ್ವವನ್ನು ಹೊಂದಿರುತ್ತಾರೆ, ಹಾಗಾಗಿ ಈ ಗುಂಪಿನಲ್ಲಿ ಯಾವುದಾದರೂ ಒಬ್ಬ ಮಹಿಳೆಗೆ ಮೊದಲು ಡ್ರೋನ್ ತರಬೇತಿಯನ್ನು ನೀಡಲಾಗುತ್ತದೆ. ಮತ್ತು 15 ಸಾವಿರ ರೂಪಾಯಿ ತಿಂಗಳು ವೇತನ ನೀಡಲಾಗುತ್ತಿದೆ.

ಈ ಯೋಜನೆಯಲ್ಲಿ ಪ್ರತಿ ತಿಂಗಳು 20 ಸಾವಿರ ಬಡ್ಡಿಯೇ ಸಿಗುತ್ತೆ! ಹೇಗೆ ಗೊತ್ತಾ?

ಡ್ರೋನ್ ಖರೀದಿ ಹೇಗೆ?

ಸ್ವಸಹಾಯ ಗುಂಪಿನಲ್ಲಿ ಮಹಿಳೆಯರು ಕೃಷಿ ಚಟುವಟಿಕೆಗಾಗಿ ಡ್ರೋನ್ ಖರೀದಿ ಮಾಡುವುದಿದ್ದರೆ ಶೇಕಡ 80% ನಷ್ಟು ಆರ್ಥಿಕ ನೆರವನ್ನು ಸರ್ಕಾರ ನೀಡುತ್ತದೆ. ಡ್ರೋನ್ ಪರಿಕರ ಗಳಿಗಾಗಿ 8 ಲಕ್ಷ ರೂಪಾಯಿಗಳವರೆಗೆ ನೆರವು ಪಡೆಯಬಹುದು.

ಅಗ್ರಿಕಲ್ಚರಲ್ ಇನ್ಫ್ರಾ ಫೈನಾನ್ಸಿಂಗ್ ಫೆಸಿಲಿಟಿ ಉಳಿದ ಮೊತ್ತವನ್ನು 3% ಬಡ್ಡಿ ದರದಲ್ಲಿ ನೀಡುತ್ತದೆ. ಒಟ್ಟಿನಲ್ಲಿ ಮಹಿಳೆಯರು ಇನ್ನೂ ಮುಂದೆ ತಮ್ಮ ಹೊಲಕ್ಕೆ ಹೋಗದೆ, ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಕೃಷಿ ಚಟುವಟಿಕೆಗಳನ್ನು ಮಾಡಿಕೊಳ್ಳಬಹುದು.

ಬಡವರಿಗೆ ವಸತಿ ಯೋಜನೆ! ಸ್ವಂತ ಮನೆ ಕಟ್ಟಿಕೊಳ್ಳಲು ಸಿಗುತ್ತೆ ಸಬ್ಸಿಡಿ ಸಾಲ

Another bumper scheme where women get 15,000, Here is the information