ಜಸ್ಟ್ 1 ಸಾವಿರ ಹೂಡಿಕೆ ಮಾಡಿದ್ರು ಸಾಕು, ಪ್ರತಿ ತಿಂಗಳು ಸಿಗುತ್ತೆ 20 ಸಾವಿರ ಆದಾಯ

ಕೇವಲ ಒಂದು ಸಾವಿರ ಹೂಡಿಕೆ ಮಾಡಿದ್ರು ಸಾಕು ಪ್ರತಿ ತಿಂಗಳು 20 ಸಾವಿರ ಆದಾಯ ಗಳಿಸಬಹುದಾದ ಯೋಜನೆಗೆ ತಕ್ಷಣ ಅಪ್ಲೈ ಮಾಡಿ!

Bengaluru, Karnataka, India
Edited By: Satish Raj Goravigere

ವಯಸ್ಸಾದ ನಂತರ ಯಾರ ಬಳಿಯೂ ಆರ್ಥಿಕವಾಗಿ ಸಹಾಯ (financial help) ಕೇಳಬಾರದು. ಒಂದು ವೇಳೆ ಹಾಗೆ ಹಣಕಾಸಿನ ಸಹಾಯವನ್ನು ನಮ್ಮ ಸ್ವಂತ ಮಕ್ಕಳ ಬಳಿಗೆ ಕೇಳಿದರೂ ಕೂಡ ಕೆಲವೊಮ್ಮೆ ಅವಮಾನ ಎದುರಿಸಬೇಕಾಗಬಹುದು. ಅಂತಹ ಸಂದರ್ಭವನ್ನು ನೀವು ತಂದುಕೊಳ್ಳಬಾರದು ಎಂದು ಯೋಚನೆ ಮಾಡುತ್ತಿದ್ದಾರೆ ಅಂತವರಿಗಾಗಿಯೇ ಈ ಲೇಖನ.

ಸರ್ಕಾರ ಕೆಲವು ಪ್ರಮುಖ ಉಳಿತಾಯ ಯೋಜನೆ (savings scheme) ಗಳನ್ನು ಕೂಡ ಜನರಿಗೆ ನೀಡುತ್ತಿದೆ. ಇಂತಹ ಯೋಜನೆಗಳಲ್ಲಿ ಅತಿ ಕಡಿಮೆ ಹೂಡಿಕೆ ಮಾಡಿ ಹೆಚ್ಚು ಲಾಭ ಪಡೆದುಕೊಳ್ಳಬಹುದಾಗಿದೆ. ಅದರಲ್ಲೂ ಹಿರಿಯ ನಾಗರಿಕರಿಗೆ ಉತ್ತಮ ಬಡ್ಡಿ ದರದ ಉಳಿತಾಯ ಯೋಜನೆಗಳು ಆರಂಭಿಸಿದರೆ ಉತ್ತಮ ಬಡ್ಡಿ ಉತ್ತರದ ಜೊತೆಗೆ ಹೆಚ್ಚಿನ ಲಾಭ ಪಡೆಯಬಹುದು.

Post Office Fixed Deposit

ವರ್ಷಕ್ಕೆ 6 ಲಕ್ಷ ಲಾಭ ಕೊಡುತ್ತೆ ಈ ಬಿಸಿನೆಸ್! ಕಡಿಮೆ ಬಂಡವಾಳ, ಕೈತುಂಬಾ ಆದಾಯ

ಅಂಚೆ ಕಛೇರಿ ಹಿರಿಯ ನಾಗರಿಕ ಉಳಿತಾಯ ಯೋಜನೆ (SCSS)

ನಿವೃತ್ತಿಯ ನಂತರ ಆರ್ಥಿಕ ಜೀವನವನ್ನು ಹೇಗಪ್ಪಾ ಸುಧಾರಿಸಿಕೊಳ್ಳುವುದು ಎಂದು ಯೋಚನೆ ಮಾಡುತ್ತಿದ್ದರೆ ಈ ಯೋಜನೆ ನಿಮಗಾಗಿ. ಅತಿ ಕಡಿಮೆ ಹೂಡಿಕೆ (low investment) ಮಾಡಿ, ಅತ್ಯಂತ ಸುರಕ್ಷಿತವಾದ, ಸುಭದ್ರವಾದ ಹಾಗೂ ಹೆಚ್ಚು ಲಾಭದಾಯಕವಾದ ರಿಟರ್ನ್ ಗಳಿಸಬಹುದು.

ಹಿರಿಯ ನಾಗರಿಕರ ಠೇವಣಿ ಯೋಜನೆಗೆ ಬಡ್ಡಿ ದರವನ್ನು ಪರಿಷ್ಕರಿಸಿರುವ ಅಂಚೆ ಕಚೇರಿ ಈಗ 8.0% ಬಡ್ಡಿ ದರದಲ್ಲಿ ಹೂಡಿಕೆಗೆ ಅವಕಾಶ ಮಾಡಿಕೊಟ್ಟಿದೆ. ಸರ್ಕಾರಿ ಬೆಂಬಲಿತ ಅಂಚೆ ಕಚೇರಿಯ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಬ್ಯಾಂಕ್ ಅಥವಾ ಫೈನಾನ್ಸ್ ಕಂಪನಿಗಳಿಗಿಂತ ಹೆಚ್ಚಿನ ಲಾಭ ಪಡೆಯಬಹುದು.

ಬಿಸಿಲೆರಿ ವಾಟರ್ ಡೀಲರ್ಶಿಪ್ ಬಿಸಿನೆಸ್ ಮಾಡಿ! ಪ್ರತಿ ತಿಂಗಳು 80,000 ಆದಾಯ

Post office Schemeಅಂಚೆ ಕಛೇರಿ ಹಿರಿಯ ನಾಗರಿಕ ಉಳಿತಾಯ ಯೋಜನೆ (SCSS) ಹೂಡಿಕೆ ಮಾಡುವುದು ಹೇಗೆ?

ಹಿರಿಯ ನಾಗರಿಕರಿಗಾಗಿ ಮೀಸಲಿಟ್ಟಿರುವ SCSC ಯೋಜನೆಯಲ್ಲಿ ಯಾವುದೇ ಭಾರತೀಯ ಹಿರಿಯ ನಾಗರಿಕರು (senior citizen) ಹೂಡಿಕೆ ಮಾಡಬಹುದು ಅರವತ್ತು ವರ್ಷ ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರು ಮಾತ್ರ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಅವಕಾಶ.

ಆದಾಗ್ಯೂ ನಾಗರಿಕ ರಕ್ಷಣಾ ಸೇವೆಯನ್ನು ಹೊರತುಪಡಿಸಿ ಇತರ ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಹಿರಿಯ ನಾಗರಿಕರು ಹಾಗೂ ವಿ ಆರ್ ಎಸ್ ಪಡೆದುಕೊಂಡವರು 55 ವರ್ಷಕ್ಕೂ ಕೂಡ ವಿಶೇಷ ಅಧಿಕಾರದ ಅಡಿಯಲ್ಲಿ ಈ ಖಾತೆಯನ್ನು ಆರಂಭಿಸಬಹುದು. ಇದರಲ್ಲಿ ಕನಿಷ್ಠ ಹೂಡಿಕೆ ಒಂದು ಸಾವಿರ ರೂಪಾಯಿಗಳು. ಯಾವುದೇ ಹಿರಿಯ ನಾಗರಿಕರು ಒಂಟಿಯಾಗಿ ಅಥವಾ ಸಂಗಾತಿಯ ಜೊತೆಗೆ ಜಂಟಿಯಾಗಿ ಖಾತೆಯನ್ನು ಆರಂಭಿಸಬಹುದು. ಆದರೆ ವಾರ್ಷಿಕವಾಗಿ 30 ಲಕ್ಷ ರೂಪಾಯಿಗಳ ವರೆಗೆ ಮಾತ್ರ ನಿಮ್ಮ ಖಾತೆಯ ವಹಿವಾಟು ನಡೆಯಬೇಕು.

ಒಬ್ಬ ವ್ಯಕ್ತಿ ಎಷ್ಟು ಬ್ಯಾಂಕ್ ಅಕೌಂಟ್ ಹೊಂದಿರಬಹುದು ಗೊತ್ತ; ಹೊಸ ರೂಲ್ಸ್

ಈ ಹೂಡಿಕೆಯ ಮೇಲೆ ಹೂಡಿಕೆದಾರರು ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನೂ ಪಡೆದುಕೊಳ್ಳಬಹುದು. ಇನ್ನು ಈ ಯೋಜನೆಯ ಅವಧಿ ಐದು ವರ್ಷಗಳು. ಅವಧಿಯ ಒಳಗೆ ಅಂದರೆ ಮೆಚ್ಯುರಿಟಿ ಮೊದಲು ಖಾತೆಯನ್ನು ಮುಚ್ಚುವುದಾದರೆ ಅಥವಾ ಹಣವನ್ನು ಹಿಂಪಡೆಯುವುದಾದರೆ, 1.5% ನಷ್ಟು ಹಣವನ್ನು ಕಡಿತಗೊಳಿಸಲಾಗುತ್ತದೆ.

ಒಟ್ಟಿನಲ್ಲಿ ಹಿರಿಯ ನಾಗರಿಕರಿಗೆ ಹೆಚ್ಚು ಆದಾಯವನ್ನು ತಂದು ಕೊಡುವ ಯೋಜನೆ ಇದಾಗಿದ್ದು ಪ್ರತಿ ತಿಂಗಳು 20 ಸಾವಿರ ರೂಪಾಯಿಗಳ ಒಬ್ಬರಿಗೆ ಪಿಂಚಣಿ ಬರುವಂತೆ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ ಅಥವಾ ಅಂಚೆ ಕಚೇರಿಯ ಅಧಿಕೃತ ವೆಬ್ಸೈಟ್ನಲ್ಲಿ SCSS ಹೂಡಿಕೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬಹುದು.

Low investing is enough, you will get 20 thousand income every month