ಹಸು, ಕುರಿ, ಕೋಳಿ ಸಾಕಾಣಿಕೆಗೆ ಸಿಗುತ್ತೆ 50% ಸಹಾಯಧನ; ಇಂದೇ ಅರ್ಜಿ ಸಲ್ಲಿಸಿ!

ಕೋವಿಡ್ (covid-19) ನಂತರದಲ್ಲಿ ಅನೇಕ ಯುವಕರು ಕೆಲಸ ಕಳೆದುಕೊಂಡರು. ಹೀಗೆ ಕೆಲಸ ಕಳೆದುಕೊಂಡವರು ತಮ್ಮ ಊರಿಗೆ ವಾಪಸ್ ಆಗಿ ಸ್ವಂತ ಉದ್ಯೋಗ (own business) ಆರಂಭಿಸಿದ್ದಾರೆ. ಇನ್ನು ಕೆಲವರು ಪಿತ್ರಾರ್ಜಿತ ಆಸ್ತಿಯಲ್ಲಿ ಕೃಷಿ (Agriculture ) ಮಾಡುತ್ತಿದ್ದಾರೆ.
ಇನ್ನು ಕೆಲವರು ಯಾವ ಉದ್ಯೋಗ ಮಾಡಬಹುದು ಎನ್ನುವ ಚಿಂತನೆಯಲ್ಲಿದ್ದಾರೆ. ಹಾಗಾದರೆ ನೀವು ಚಿಂತೆ ಬಿಡಿ. ನಿಮ್ಮಂತಹ ಸ್ವಂತ ಉದ್ಯಮ ಸ್ಥಾಪಿಸುವ ಯುವಕರನ್ನು ಪ್ರೋತ್ಸಾಹಿಸುವ ಸಲುವಾಗಿಯೇ ಸರ್ಕಾರವು ಒಂದು ಯೋಜನೆಯನ್ನು ಜಾರಿಗೆ ತಂದಿದೆ.
ಆ ಯೋಜನೆಯಲ್ಲಿ ನೀವು ಫಲಾನುಭವಿಯಾದರೆ ನಿಮಗೆ ಶೇ.5೦ ರಷ್ಟು ಸಹಾಯಧನ ಸಿಗುತ್ತದೆ. ಇದರಿಂದ ನಿಮ್ಮ ಆರ್ಥಿಕ ವೆಚ್ಚ ತಗ್ಗಲಿದೆ.
ಈ ಬ್ಯಾಂಕ್ ಖಾತೆ ಇದ್ರೆ ಸರ್ಕಾರವೇ ನೀಡುತ್ತೆ 2.30 ಲಕ್ಷ ರೂಪಾಯಿ; ಬೆನಿಫಿಟ್ ಪಡೆಯಿರಿ
ನೀವೇನಾದರೂ ಕೋಳಿ, ಕುರಿ, ಮೇಕೆ, ಹಂದಿಗಳಿಗಾಗಿ ರಸಮೇವು ಘಟಕ ಸ್ಥಾಪನೆ ಮಾಡಬೇಕು ಎನ್ನುವ ಹಂಬಲ ಹೊಂದಿದ್ದರೆ ನೀವು ಕೇಂದ್ರ ಸರ್ಕಾರದ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆ (NLM EDP) ಅಡಿಯಲ್ಲಿ ಶೇ.5೦ ರಷ್ಟು ಸಹಾಯಧನ ಪಡೆಯಬಹುದು.
ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆ ಅಡಿಯಲ್ಲಿ ಗ್ರಾಮೀಣ ಜನರ ಅಭಿವೃದ್ಧಿಗಾಗಿ ಅವರು ಮಾಡಬಹುದಾದ ಕೋಳಿ ಸಾಕಾಣಿಕೆ, ಕುರಿ, ಮೇಕೆ, ಹಂದಿ ಸಾಕಾಣಿಕೆ ಹಾಗೂ ರಸಮೇವು ಘಟಕ ಸ್ಥಾಪನೆಗೆ ಶೇ.5೦ ರಷ್ಟು ಸಹಾಯಧನ (subsidy) ನೀಡಲಾಗುತ್ತದೆ. ಹಾಗಾಗಿ ರೈತರು ಮಾತ್ರ ಈ ಯೋಜನೆ ಅಡಿಯಲ್ಲಿ ಲಾಭ ಪಡೆದುಕೊಳ್ಳಬಹುದಾಗಿದೆ.
ಗ್ರಾಮೀಣ ಕೋಳಿ ಉದ್ದಿಮೆ
ಇದಕ್ಕಾಗಿ 5೦ ಲಕ್ಷ ರೂ. ವರೆಗೆ ನಿಮಗೆ ಸಾಲ ಸೌಲಭ್ಯ (Loan facility) ನೀಡಲಾಗುತ್ತದೆ. ಇದರಲ್ಲಿ 25 ಲಕ್ಷ ರೂ. ಸಹಾಯ ಧನ ಆಗಿರುತ್ತದೆ.
ಕುರಿ-ಕೋಳಿ ಸಂವರ್ಧನಾ ಘಟಕ: (poultry farming) ಈ ಯೋಜನೆ ಅಡಿಯಲ್ಲಿ 1 ಕೋಟಿ ರೂ.ಗಳವರೆಗೆ ಸಾಲ ಸೌಲಭ್ಯ ನೀಡಲಾಗುತ್ತದೆ. ನೀವು ಎಷ್ಟು ಪ್ರಾಣಿಗಳನ್ನು ಸಾಕುತ್ತೀರಿ ಎನ್ನುವ ಆಧಾರದ ಮೇಲೆ ಸಾಲ ಸೌಲಭ್ಯ ನೀಡಲಾಗುತ್ತದೆ. ನೀಡಲಾದ ಸಾಲದಲ್ಲಿ ಶೇ.5೦ ಸಹಾಯಧನವಾಗಿರುತ್ತದೆ.
ನೀವೇನಾದ್ರೂ ಈ ಬಿಸಿನೆಸ್ ಶುರು ಮಾಡಿದ್ರೆ, ದಿನಕ್ಕೆ 15,000 ಆದಾಯ ಫಿಕ್ಸ್!
ಹಂದಿ ಸಂವರ್ಧನಾ ಘಟಕ
1೦೦+1೦ ಹಂದಿಗಳ ಸಾಕಾಣಿಕೆಗೆ 6೦ ಲಕ್ಷ ರೂ. ಸಾಲ ಸೌಲಭ್ಯ ನೀಡಲಾಗುತ್ತದೆ. 5೦+5 ಹಂದಿ ಸಾಕಾಣಿಕೆ 3೦ ಲಕ್ಷ ರೂ. ಸಾಲ ಸೌಲಭ್ಯ ಒದಗಿಸಿಕೊಡಲಾಗುತ್ತದೆ.
ರಸಮೇವು ಉತ್ಪಾದನಾ ಘಟಕ (ವಾರ್ಷಿಕ 2೦೦೦-25೦೦ ಮೆಟ್ರಿಕ್ ಟನ್ ಉತ್ಪಾದನೆ) 1 ಕೋಟಿ ರೂ. ಸಾಲ ಸೌಲಭ್ಯ ಒದಗಿಸಿಕೊಡಲಾಗುತ್ತದೆ. ಇದರಲ್ಲಿ ನೀವು 5೦ ಲಕ್ಷ ರೂ. ಸಾಲದ ರೂಪದಲ್ಲಿ ಇರುತ್ತದೆ.
ಒಬ್ಬ ವ್ಯಕ್ತಿ ವರ್ಷಕ್ಕೆ ಎಷ್ಟು ಗ್ಯಾಸ್ ಸಿಲೆಂಡರ್ ಖರೀದಿಸಬಹುದು ಗೊತ್ತಾ? ಇಲ್ಲಿದೆ ಲೆಕ್ಕಚಾರ
ಯಾವ ಯಾವ ದಾಖಲೆ ಬೇಕು
ವಿಸ್ತೃತಾ ಯೋಜನಾ ವರದಿ
ಭೂಮಿ ಪಹಣಿ ಪತ್ರಿಕೆ
ಭೂಮಿ ಇಲ್ಲದವರು ಬಾಡಿಗೆ ಭೂಮಿ ಪಡೆದಿರುವುದರ ಕರಾರು ಪತ್ರ
ಆಧಾರ್ ಕಾರ್ಡ್, ಪಾನ್ ಕಾರ್ಡ್, ವಿಳಾಸ ದೃಢಿಕರಣ ಪತ್ರ
6 ತಿಂಗಳ ಬ್ಯಾಂಕ್ ವಹಿವಾಟು ದಾಖಲೆ
ತರಬೇತಿ ಪ್ರಮಾಣ ಪತ್ರವನ್ನು ಸಲ್ಲಿಸಬೇಕಾಗುತ್ತದೆ.
ಇವಿಷ್ಟು ದಾಖಲೆಗಳು ಇದ್ದು, ನೀವು ಕೂಡ ಕೃಷಿಯ ಜೊತೆಗೆ ಉಪಕಸುಬು ಮಾಡಲು ಇಷ್ಟಪಟ್ಟರೆ ಸರ್ಕಾರದಿಂದ 50 ವರೆಗಿನ ಸಬ್ಸಿಡಿ ಪಡೆಯಬಹುದು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿ.
ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ಬಂಪರ್ ಗಿಫ್ಟ್! ಮಾರ್ಚ್ 31ರ ತನಕ ಮಾತ್ರ ಅವಕಾಶ
50 Percent subsidy Loan is available for cow, sheep, chicken Farming
ಹಂದಿ ಸಂವರ್ಧನಾ ಘಟಕ



