ನೀವೇನಾದ್ರೂ ಈ ಬಿಸಿನೆಸ್ ಶುರು ಮಾಡಿದ್ರೆ, ದಿನಕ್ಕೆ 15,000 ಆದಾಯ ಫಿಕ್ಸ್!

ಸ್ವಂತ ಉದ್ಯಮ (Own business) ಮಾಡಬೇಕು ಅಂತ ಅಂದುಕೊಂಡರೆ ಅದಕ್ಕೆ ನಿಮ್ಮ ಸ್ಮಾರ್ಟ್ ಯೋಚನೆಗಳು ಬಹಳ ಮುಖ್ಯ. ನೀವು ಯಾವ ರೀತಿಯ ಐಡಿಯಾ ಬಳಸಿ ಉದ್ಯಮ ಆಯ್ದುಕೊಳ್ಳುತ್ತೀರಿ ಎನ್ನುವುದರ ಆಧಾರದ ಮೇಲೆ ಆದಾಯವನ್ನು ಗಳಿಸಬಹುದು.
ಈ ರೀತಿ ಉತ್ತಮ ಆದಾಯ (good profit) ಬರುವಂತಹ ಹಾಗೂ ಬಹಳ ಮುತುವರ್ಜಿಯಿಂದ ಮಾಡಬಹುದು ಆದಂತಹ ಉದ್ಯಮ ಅಂದ್ರೆ ಅದು ಹೋಟೆಲ್ ಉದ್ಯಮ.
ಸಾಮಾನ್ಯವಾಗಿ ಹೋಟೆಲ್ ಉದ್ಯಮ (hotel business) ವನ್ನು ಆರಂಭಿಸಿದವರು ಸೋಲುವ ಮಾತೇ ಇಲ್ಲ. ಅದರಲ್ಲೂ ಅತ್ಯುತ್ತಮ ಫುಡ್ ನೀವು ನೀಡುತ್ತಿರಿ ಎಂದಾದರೆ ನಿಮ್ಮ ಹೋಟೆಲ್ ನಲ್ಲಿ ಜನ ಜಿಗಿಜಿಗಿ ಅಂತ ತುಂಬಿರುತ್ತಾರೆ.
ಬೇರೆ ಯಾವುದೇ ಕ್ಷೇತ್ರದಲ್ಲಿಯೂ ಕೂಡ ಜನರು ಹೆಚ್ಚು ಎಫರ್ಟ್ ಹಾಕಿ ಗ್ರಾಹಕರನ್ನ ಸೆಳೆಯಬೇಕು. ಆದರೆ ಹೋಟೆಲ್ ಉದ್ಯಮ ಹಾಗಲ್ಲ. ನೀವು ಉತ್ತಮ ಗುಣಮಟ್ಟದ ಉತ್ತಮ ರುಚಿಯ ಫುಡ್ ನೀಡಿದರೆ ಸಾಕು ಗ್ರಾಹಕರು ನಿಮ್ಮ ಹೋಟೆಲ್ ಎಲ್ಲೇ ಇದ್ದರೂ ಹುಡುಕಿಕೊಂಡು ಬರುತ್ತಾರೆ.
ಒಬ್ಬ ವ್ಯಕ್ತಿ ವರ್ಷಕ್ಕೆ ಎಷ್ಟು ಗ್ಯಾಸ್ ಸಿಲೆಂಡರ್ ಖರೀದಿಸಬಹುದು ಗೊತ್ತಾ? ಇಲ್ಲಿದೆ ಲೆಕ್ಕಚಾರ
ಹೋಟೆಲ್ ಉದ್ಯಮ ಆರಂಭಿಸುವುದು ಹೇಗೆ? (How to start a hotel business)
ಇತ್ತೀಚಿಗೆ ಬೆಂಗಳೂರಿನ ಹೋಟೆಲ್ ಒಂದರ ಮಾಲೀಕರು ಹೋಟೆಲ್ ಉದ್ಯಮ ಆರಂಭಿಸುವುದು ಹೇಗೆ ಎನ್ನುವುದರ ಬಗ್ಗೆ ಮಾಹಿತಿ ನೀಡಿದ್ದಾರೆ. ಇದನ್ನ ನೀವು ಕೂಡ ತಿಳಿದುಕೊಂಡು ನಿಮ್ಮ ಸ್ವಂತ ಹೋಟೆಲ್ ಆರಂಭಿಸಲು ಸಹಾಯವಾಗಬಹುದು ಅದರ ಬಗ್ಗೆ ಇಲ್ಲಿದೆ ಮಾಹಿತಿ.
ಹೋಟೆಲ್ ಅನ್ನು ಬಹಳ ಚಿಕ್ಕ ಪ್ರಮಾಣದಲ್ಲಿ ಆರಂಭಿಸುವುದಾದರೂ 400 ಸ್ಕ್ವೇರ್ ಫಿಟ್ ಜಾಗ ಬೇಕು. ಬಂಡವಾಳ (investment ) ಎಂಟರಿಂದ ಹತ್ತು ಲಕ್ಷ ರೂಪಾಯಿಗಳು. ಉತ್ತಮ ಗುಣಮಟ್ಟ ಹಾಗೂ ರುಚಿಯ ಆಧಾರದ ಮೇಲೆ ನೀವು ಗ್ರಾಹಕರನ ಸೆಳೆಯಬಹುದು.
ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ಬಂಪರ್ ಗಿಫ್ಟ್! ಮಾರ್ಚ್ 31ರ ತನಕ ಮಾತ್ರ ಅವಕಾಶ

ವರ್ಷದ 365 ದಿನವೂ ಕೂಡ ಒಂದೇ ರೀತಿಯ ಲಾಭ ಇರುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ನಿಮ್ಮ ಮನಸ್ಸಿಟ್ಟು ಈ ಉದ್ಯಮವನ್ನು ಮಾಡಿದ್ರೆ ಹೆಚ್ಚಿನ ಲಾಭ ಪಡೆದುಕೊಳ್ಳಲು ಸಾಧ್ಯ.
ಅವರು ಹೇಳುವ ಪ್ರಕಾರ ಹೋಟೆಲ್ ಉದ್ಯಮದಲ್ಲಿ ಲಾಭ ಅಥವಾ ಪ್ರಾಫಿಟ್ ಇಲ್ಲ ಎಂದಲ್ಲ. ಆದರೆ ನೀವು ಗ್ರಾಹಕರನ್ನ ಎಷ್ಟರಮಟ್ಟಿಗೆ ತೃಪ್ತಿಪಡಿಸುತ್ತೀರಿ ಎನ್ನುವುದು ಮುಖ್ಯ. ಒಮ್ಮೆ ನಿಮ್ಮ ರುಚಿ ಇಷ್ಟ ಆದರೆ, ಒಬ್ಬ ಗ್ರಾಹಕ ಬಿಟ್ಟು ಬೇರೆ ಕಡೆಗೆ ಹೋದರು ಕೂಡ ಆಗಾಗ ತನ್ನ ಫ್ಯಾಮಿಲಿ, ಫ್ರೆಂಡ್ಸ್ ಜೊತೆಗೆ ಆ ಸ್ಥಳಕ್ಕೆ ಬರುತ್ತಾನೆ. ಜೊತೆಗೆ ಹತ್ತಾರು ಮಂದಿಗೆ ಈ ಹೋಟೆಲ್ ಬಗ್ಗೆ ಹೇಳಿ ಹೋಟೆಲ್ಗೆ ಜನ ಬರುವಂತೆ ಮಾಡುತ್ತಾನೆ.
ಪ್ರತಿ ತಿಂಗಳು 3,000 ಪಡೆಯೋಕೆ ತಕ್ಷಣ ಸರ್ಕಾರದ ಈ ಯೋಜನೆಗೆ ಅಪ್ಲೈ ಮಾಡಿ!
ಇನ್ನು ಎಷ್ಟೋ ಬಾರಿ ಗ್ರಾಹಕರು ಊಟ ತಿಂಡಿ ವಿಚಾರದಲ್ಲಿ ಬದಲಾವಣೆಯನ್ನು ಕೇಳುತ್ತಾರೆ. ಅದನ್ನ ತಾಳ್ಮೆಯಿಂದ ಬುದ್ಧಿವಂತಿಕೆಯಿಂದ ಅಳವಡಿಸಿಕೊಂಡು ಹೋಗುವ ಚಾಕಚಕ್ಯತೆ ನಮ್ಮಲ್ಲಿ ಇರಬೇಕು. ಹಾಗಾಗಿ ಆ ಹೋಟೆಲ್ ಮಾಲೀಕರು ಹೇಳುವ ಪ್ರಕಾರ ನಮ್ಮಲ್ಲಿ ಬುದ್ಧಿವಂತಿಕೆ ಹಾಗೂ ಗ್ರಾಹಕರನ್ನು ತೃಪ್ತಿ ಪಡಿಸುವ ಮನೋಭಾವ ಇದ್ದರೆ ಖಂಡಿತವಾಗಿಯೂ ಹೋಟೆಲ್ ಬಿಸಿನೆಸ್ ನಲ್ಲಿ ಸಕ್ಸಸ್ ಕಾಣಬಹುದು.
ಒಂದು ಅಂದಾಜಿನ ಪ್ರಕಾರ ಒಂದು ದೋಸೆ ಹೋಟೆಲ್/ಕ್ಯಾಂಪ್ ನ ಖರ್ಚು ವೆಚ್ಚಗಳು ಹೀಗಿವೆ!
ದೋಸೆ ಮಾಡಿ ಮಾರಾಟ ಮಾಡುವ ದಿನದ ಖರ್ಚು ರೂ.24,000. ಇದರಲ್ಲಿ ಕೆಲಸಗಾರರಿಗೆ ವೇತನ ರೂ.5,000, ಎಣ್ಣೆ/ ಬೆಣ್ಣೆ, ತರಕಾರಿ ತೆಂಗಿನಕಾಯಿ ವಿದ್ಯುತ್ ಬಿಲ್ ನೀರು ಮೊದಲಾದ ಖರ್ಚು ವೆಚ್ಚಗಳು ಸುಮಾರು 14 ಸಾವಿರ ರೂಪಾಯಿಗಳು. ಇನ್ನು ಪ್ರತಿ ತಿಂಗಳ ಸರಾಸರಿ ವೆಚ್ಚ ರೂ.6,12,000 ಗಳಷ್ಟು.
ಪ್ರತಿ ತಿಂಗಳ ಸರಾಸರಿ ಆದಾಯ ರೂ.8,00,000 ಹಾಗಾಗಿ ಪ್ರತಿ ತಿಂಗಳು ಸರಾಸರಿ ಲಾಭ ರೂ.1,88,000 ರೂಪಾಯಿಗಳು. ಅಲ್ಲಿಗೆ ಹೋಟೆಲ್ ಉದ್ಯಮದಲ್ಲಿ ಉತ್ತಮ ಕಮಾಯಿ ಇದೆ ಎಂದಾಯಿತು. ಒಟ್ಟಿನಲ್ಲಿ ನಿಮಗೆ ಉದ್ಯಮ ಮಾಡಬೇಕು ಎನ್ನುವ ಮನಸ್ಸು ಉತ್ಸಾಹ ಎರಡು ಇದ್ದರೆ ಖಂಡಿತವಾಗಿಯೂ ಹೋಟೆಲ್ ಬಿಸಿನೆಸ್ ಗೆಲ್ಲುತ್ತದೆ ಎನ್ನುತ್ತಾರೆ ಹೋಟೆಲ್ ಮಾಲೀಕರು.
ಬಿಸಿಲೆರಿ ವಾಟರ್ ಡೀಲರ್ಶಿಪ್ ಬಿಸಿನೆಸ್ ಮಾಡಿ! ಪ್ರತಿ ತಿಂಗಳು 80,000 ಆದಾಯ
You will get 15,000 income per day If you start hotel business



