ಒಬ್ಬ ವ್ಯಕ್ತಿ ವರ್ಷಕ್ಕೆ ಎಷ್ಟು ಗ್ಯಾಸ್ ಸಿಲೆಂಡರ್ ಖರೀದಿಸಬಹುದು ಗೊತ್ತಾ? ಇಲ್ಲಿದೆ ಲೆಕ್ಕಚಾರ
LPG Gas Cylinder : ಹಣದುಬ್ಬರದ ಸಮಸ್ಯೆ ಎದುರಿಸುತ್ತಿರುವವರಿಗೆ, ಪ್ರತಿಯೊಂದು ವಸ್ತುವಿನ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೆ ಏರುತ್ತಿರುವುದು ದೊಡ್ಡ ಸಮಸ್ಯೆ ಆಗಿದೆ. ಎಲ್‌ಪಿಜಿ ಗ್ಯಾಸ್ ಸಿಲಿಂಡರ್ (LPG gas cylinder) ದರ ಹೆಚ್ಚಾದರೆ ಅದು ತಿಂಗಳ ಬಜೆಟ್ ನಲ್ಲಿ ದೊಡ್ಡ ವ್ಯತ್ಯಾಸವನ್ನೇ ಮಾಡುತ್ತದೆ.
ಆದರೆ ಕಳೆದ ವರ್ಷ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ (PM Narendra Modi ji) ಅವರು ಗೃಹಬಳಕೆಯ LPG ಸಿಲೆಂಡರ್ ಮೇಲೆ ಇನ್ನೂರು ರೂಪಾಯಿಗಳ ಸಬ್ಸಿಡಿ ನೀಡಿದ್ದಾರೆ. ಅದೇ ರೀತಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ (pradhanmantri Ujjwala Yojana) ಯ ಅಡಿಯಲ್ಲಿ 300 ಗಳ ಸಬ್ಸಿಡಿ ನೀಡಲಾಗಿದೆ.
ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ಬಂಪರ್ ಗಿಫ್ಟ್! ಮಾರ್ಚ್ 31ರ ತನಕ ಮಾತ್ರ ಅವಕಾಶ
ಮಹಿಳಾ ದಿನಾಚರಣೆಯ ವಿಶೇಷ ಸಂದರ್ಭದಲ್ಲಿ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ದರವನ್ನು ಇನ್ನೂ 100 ರೂಪಾಯಿಗಳಷ್ಟು ಇಳಿಕೆ ಮಾಡುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ತಿಳಿಸಿದ್ದಾರೆ. ಹಾಗಾಗಿ ಮೊದಲು ಸಾವಿರ ರೂಪಾಯಿಗಳ ಗಡಿ ದಾಟಿದ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ (LPG gas cylinder) ಈಗ 800 ಇಂದ 900 ರೂಪಾಯಿಗಳ ಆಸುಪಾಸಿನಲ್ಲಿ ಖರೀದಿಸಲು ಸಾಧ್ಯವಾಗುತ್ತದೆ.
ವರ್ಷಕ್ಕೆ ಎಷ್ಟು ಗ್ಯಾಸ್ ಸಿಲೆಂಡರ್ ಖರೀದಿಸಬಹುದು ಗೊತ್ತಾ?
ಸರ್ಕಾರ, ಸಬ್ಸಿಡಿ (subsidy ) ದರದಲ್ಲಿ ಗ್ಯಾಸ್ ಸಿಲೆಂಡರ್ ನೀಡುತ್ತದೆ. ಎನ್ನುವ ಕಾರಣಕ್ಕೆ ನೀವು ಎಷ್ಟು ಬೇಕಾದರೂ ಸಿಲಿಂಡರ್ ಖರೀದಿಸಬಹುದೇ? ಖಂಡಿತ ಇಲ್ಲ. ಅದಕ್ಕೂ ನಿಯಮ ಇದೆ. ಈ ನಿಯಮವನ್ನು ಪಾಲನೆ ಮಾಡದೆ ಇದ್ರೆ ದಂಡ ಪಾವತಿಸ ಬೇಕಾಗಬಹುದು ಅಥವಾ ಹೆಚ್ಚುವರಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಗೆ ಸಬ್ಸಿಡಿ ಕೂಡ ಸಿಗದೇ ಇರಬಹುದು.
ಪ್ರತಿ ತಿಂಗಳು 3,000 ಪಡೆಯೋಕೆ ತಕ್ಷಣ ಸರ್ಕಾರದ ಈ ಯೋಜನೆಗೆ ಅಪ್ಲೈ ಮಾಡಿ!
2022 ರಲ್ಲಿ ಕೇಂದ್ರ ಸರ್ಕಾರ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಬಳಕೆಗೆ ಸಂಬಂಧಪಟ್ಟಂತೆ ಹೊಸ ನಿಯಮವನ್ನ ಜಾರಿಗೆ ತಂದಿದೆ. ಅದರ ಪ್ರಕಾರ ಕೇಂದ್ರ ಸರ್ಕಾರ ಎಷ್ಟು ನಿಗದಿಪಡಿಸಿದೆಯೋ ಅಷ್ಟು ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಅನ್ನು ವರ್ಷಕ್ಕೆ ಪಡೆದುಕೊಳ್ಳಬಹುದು. ಒಂದು ವೇಳೆ ಇದಕ್ಕಿಂತ ಹೆಚ್ಚಿಗೆ ಗ್ಯಾಸ್ ಸಿಲಿಂಡರ್ ಖರೀದಿ ಮಾಡಿದರೆ, ಸರ್ಕಾರ ಗ್ಯಾಸ್ ಸಿಲಿಂಡರ್ ಮೇಲೆ ಸಬ್ಸಿಡಿ ನೀಡುವುದಿಲ್ಲ.
ಹಾಗಾದ್ರೆ ಒಬ್ಬ ವ್ಯಕ್ತಿ ವರ್ಷಕ್ಕೆ ಎಷ್ಟು ಸಿಲೆಂಡರ್ ಖರೀದಿ ಮಾಡಬಹುದು? ವರದಿಯ ಪ್ರಕಾರ ಗರಿಷ್ಠ ಒಂದು ವರ್ಷಕ್ಕೆ 15 ಎಲ್‌ಪಿಜಿ ಸಿಲಿಂಡರ್ ಖರೀದಿ ಮಾಡಬಹುದು ಆದರೆ ಇದರಲ್ಲಿ 12 ಸಿಲಿಂಡರ್ ಗಳಿಗೆ ಮಾತ್ರ ಸರಕಾರದ ಸಬ್ಸಿಡಿ ಸಿಗುತ್ತದೆ ಅದಕ್ಕಿಂತ ಹೆಚ್ಚಿನ ಸಿಲಿಂಡರ್ ಖರೀದಿಯ ಮೇಲೆ ಸಬ್ಸಿಡಿ ಸಿಗುವುದಿಲ್ಲ. ನೀವು ಸಂಪೂರ್ಣ ಹಣವನ್ನು ಪಾವತಿ ಮಾಡಬೇಕು.
ಜಸ್ಟ್ 1 ಸಾವಿರ ಹೂಡಿಕೆ ಮಾಡಿದ್ರು ಸಾಕು, ಪ್ರತಿ ತಿಂಗಳು ಸಿಗುತ್ತೆ 20 ಸಾವಿರ ಆದಾಯ
ಪೆಟ್ರೋಲಿಯಂ ಸಚಿವಾಲಯ ನೀಡಿರುವ ಮಾಹಿತಿಯ ಪ್ರಕಾರ ಸಬ್ಸಿಡಿ ರಹಿತ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಅನ್ನು ಖರೀದಿ ಮಾಡಬಹುದು ಸಂಖ್ಯೆಯನ್ನು ಮೀರಿದರೆ, ವಿಶೇಷ ಸಂದರ್ಭ ದಲ್ಲಿ ಗ್ಯಾಸ್ ಸಿಲೆಂಡರ್ ಖರೀದಿ ಮಾಡಿದರೆ, ಉದಾಹರಣೆಗೆ ಮದುವೆ ಮತ್ತಿತರ ಸಮಾರಂಭಗಳಿಗೆ ಹೆಚ್ಚುವರಿ ಗ್ಯಾಸ್ ಸಿಲೆಂಡರ್ ಖರೀದಿ ಮಾಡುವುದಿದ್ದರೆ ಅದಕ್ಕೆ ಪರ್ಮಿಷನ್ ಪಡೆದುಕೊಳ್ಳಬೇಕು. ಹಾಗೂ ಇಂತಹ ಹೆಚ್ಚುವರಿ ಗ್ಯಾಸ್ ಸಿಲೆಂಡರ್ ಖರೀದಿಗೆ ಯಾವುದೇ ಸಬ್ಸಿಡಿ ಅಪ್ಲೈ ಆಗುವುದಿಲ್ಲ.
Do you know how many gas cylinders a person can buy per year