ಈ ಬ್ಯಾಂಕ್ ಖಾತೆ ಇದ್ರೆ ಸರ್ಕಾರವೇ ನೀಡುತ್ತೆ 2.30 ಲಕ್ಷ ರೂಪಾಯಿ; ಬೆನಿಫಿಟ್ ಪಡೆಯಿರಿ
ಈ ಯೋಜನೆಯಡಿಯಲ್ಲಿ ವಿಮಾ ಸೌಲಭ್ಯ (Life Insurance) ಹಾಗೂ ಸಾಲ ಸೌಲಭ್ಯ (Loan facility) ವನ್ನು ನೀಡಲಾಗುತ್ತದೆ
ದೇಶದಲ್ಲಿ ನಾವು ಯಾವುದೇ ಬ್ಯಾಂಕ್ ನಲ್ಲಿ ಖಾತೆ (bank account) ಯನ್ನು ತೆರೆದರು ಕೂಡ ಅದರಲ್ಲಿ ಮಿನಿಮಮ್ ಬ್ಯಾಲೆನ್ಸ್ (minimum balance) ಅಂದರೆ ಕನಿಷ್ಠ ಮೊತ್ತವನ್ನು ಕಾಯ್ದುಕೊಳ್ಳಬೇಕು.
ಈ ಮೊತ್ತ 500 ರೂಪಾಯಿಗಳಿಂದ 10,000 ವರೆಗೂ ಇರಬಹುದು. ಎಲ್ಲ ಬ್ಯಾಂಕಿಂಗ್ ವ್ಯವಹಾರಕ್ಕೆ ಬ್ಯಾಂಕಿನಲ್ಲಿ ಖಾತೆ ತೆರೆಯುವುದು ಅನಿವಾರ್ಯ. ಹಾಗಂದ ಮಾತ್ರಕ್ಕೆ ಬಡವರಿಗೂ ಕೂಡ ಖಾತೆಯಲ್ಲಿ ಮಿನಿಮಂ ಬ್ಯಾಲೆನ್ಸ್ ಇಡಲೇಬೇಕು ಎನ್ನುವ ನಿಯಮ ಇರುವುದರಿಂದ ಬಹಳ ಸಮಸ್ಯೆ ಆಗುತ್ತಿತ್ತು. ಇಲ್ಲವಾದರೆ ಹೆಚ್ಚುವರಿ ದಂಡ ಪಾವತಿಸಬೇಕಿತ್ತು.
ನೀವೇನಾದ್ರೂ ಈ ಬಿಸಿನೆಸ್ ಶುರು ಮಾಡಿದ್ರೆ, ದಿನಕ್ಕೆ 15,000 ಆದಾಯ ಫಿಕ್ಸ್!
ಈ ಸಮಸ್ಯೆನ ಗಮನಿಸಿದ ಸರ್ಕಾರ ದೇಶದ ಅತ್ಯಂತ ಸಾಮಾನ್ಯ ಜನರಿಗಾಗಿಯೇ ಹೊಸದೊಂದು ಯೋಜನೆಯನ್ನು ಪರಿಚಯಿಸಿತು. ಅದುವೇ ಪ್ರಧಾನ ಮಂತ್ರಿ ಜನ್ ಧನ್ ಯೋಜನ (Pradhan Mantri Jan Dhan Yojana).
ಈ ಯೋಜನೆಯ ಅಡಿಯಲ್ಲಿ ಸಾಮಾನ್ಯರು ಒಂದು ರೂಪಾಯಿ ಮಿನಿಮಮ್ ಬ್ಯಾಲೆನ್ಸ್ ಇಡದೆ ಅಂದರೆ ಝೀರೋ ಬ್ಯಾಲೆನ್ಸ್ (zero balance) ನಲ್ಲಿ ಬ್ಯಾಂಕ್ ಖಾತೆಯನ್ನು ತೆರೆಯಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದೆ ಅಷ್ಟೇ ಅಲ್ಲದೆ ಈ ಬ್ಯಾಂಕ್ ಖಾತೆಯನ್ನು ಯಾರು ಹೊಂದಿರುತ್ತಾರೆ, ಅವರಿಗೆ ಸಾಕಷ್ಟು ಬೆನಿಫಿಟ್ ಕೂಡ ಸಿಗುತ್ತೆ.
ಪ್ರಧಾನ ಮಂತ್ರಿ ಜನ ಧನ್ ಯೋಜನೆಯ ಪ್ರಯೋಜನಗಳು!
ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯ ಅಡಿಯಲ್ಲಿ 47 ಕೋಟಿಗು ಹೆಚ್ಚಿನ ಖಾತೆಗಳು ಆರಂಭವಾಗಿವೆ. ಯಾವುದೇ ಕನಿಷ್ಠ ಬ್ಯಾಂಕ್ ಮೊತ್ತವನ್ನು ನಿಮ್ಮ ಖಾತೆಯಲ್ಲಿ ಕಾಯ್ದುಕೊಳ್ಳುವ ಅಗತ್ಯ ಇಲ್ಲ ಅಂದ್ರೆ ಝೀರೋ ಬ್ಯಾಲೆನ್ಸ್ ಅಡಿಯಲ್ಲಿಯೂ ಕೂಡ ನೀವು ನಿಮ್ಮ ಬ್ಯಾಂಕ್ ಖಾತೆಯನ್ನು ಹೊಂದಬಹುದು. ಈ ಯೋಜನೆಯಡಿಯಲ್ಲಿ ವಿಮಾ ಸೌಲಭ್ಯ (Life Insurance) ಹಾಗೂ ಸಾಲ ಸೌಲಭ್ಯ (Loan facility) ವನ್ನು ನೀಡಲಾಗುತ್ತದೆ
ಒಬ್ಬ ವ್ಯಕ್ತಿ ವರ್ಷಕ್ಕೆ ಎಷ್ಟು ಗ್ಯಾಸ್ ಸಿಲೆಂಡರ್ ಖರೀದಿಸಬಹುದು ಗೊತ್ತಾ? ಇಲ್ಲಿದೆ ಲೆಕ್ಕಚಾರ
ಪ್ರಧಾನ ಮಂತ್ರಿ ಜನ ಧನು ಖಾತೆಯನ್ನು ನೀವು ಹೊಂದಿದ್ದರೆ ನಿಮಗೆ ರೂಪೇ ಡೆಬಿಟ್ ಕಾರ್ಡ್ (rupay debit card) ವಿತರಣೆ ಮಾಡಲಾಗುತ್ತದೆ. ಈ ಮೂಲಕ ನೀವು 10,000 ಗಳವರೆಗೆ ಸೌಲಭ್ಯವನ್ನು ಪಡೆಯಬಹುದು ಇದಕ್ಕಾಗಿ ನಿಮ್ಮ ಜನ ಧನ್ ಖಾತೆ ಆರು ತಿಂಗಳ ಹಳೆಯದಾಗಿರಬೇಕು.
ಅಂದ್ರೆ ನೀವು ಬ್ಯಾಂಕ ಖಾತೆಯನ್ನು ಆರಂಭಿಸಿ ಕನಿಷ್ಠ ಆರು ತಿಂಗಳ ಅವಧಿ ಮುಗಿದಿರಬೇಕು. ಆರು ತಿಂಗಳಿಗಿಂತ ಮೊದಲೇ ನೀವು ಓವರ್ ಡ್ರಾಫ್ಟ್ ಸೌಲಭ್ಯ (overdraft facility) ಪಡೆದುಕೊಳ್ಳುವುದಾದರೆ 10 ಸಾವಿರ ರೂಪಾಯಿಗಳ ಬದಲಿಗೆ 2,000 ರೂಪಾಯಿಗಳ ಡ್ರಾಫ್ಟ್ ಸಿಗುತ್ತದೆ.
ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ಬಂಪರ್ ಗಿಫ್ಟ್! ಮಾರ್ಚ್ 31ರ ತನಕ ಮಾತ್ರ ಅವಕಾಶ
ಪಡೆದುಕೊಳ್ಳಿ 2.30 ಲಕ್ಷ ರೂಪಾಯಿಗಳ ಪ್ರಯೋಜನ!
ಯಾವುದೇ ವ್ಯಕ್ತಿ ಪ್ರಧಾನ ಮಂತ್ರಿ ಜನ ಧನ ಯೋಜನೆಯ ಅಡಿಯಲ್ಲಿ ಬ್ಯಾಂಕ್ ಖಾತೆಯನ್ನು ಹೊಂದಿದ್ದರೆ ಆತ ಸಾಲ ಸೌಲಭ್ಯ (Loan) ಹಾಗೂ ಇತರ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.
ಇದರ ಜೊತೆಗೆ ಈ ವ್ಯಕ್ತಿ ಅಪಘಾತದ ಸಮಯದಲ್ಲಿ ಮರಣ ಹೊಂದಿದರೆ ಕುಟುಂಬದವರಿಗೆ ಎರಡು ಲಕ್ಷ ರೂಪಾಯಿಗಳ ವಿಮಾ ಹಣ ದೊರೆಯುತ್ತದೆ. ಹಾಗೂ ರೂ.30,000ಗಳ ಜೀವ ವಿಮೆ ಸೌಲಭ್ಯ ಸಿಗುತ್ತದೆ. ಅಂದರೆ ಸಾಮಾನ್ಯ ಸಮಯದಲ್ಲಿ ಮರಣ ಹೊಂದಿದರೆ 30,000 ಮನೆಯವರಿಗೆ ನೀಡಲಾಗುವುದು.
ಪ್ರತಿ ತಿಂಗಳು 3,000 ಪಡೆಯೋಕೆ ತಕ್ಷಣ ಸರ್ಕಾರದ ಈ ಯೋಜನೆಗೆ ಅಪ್ಲೈ ಮಾಡಿ!
ಪ್ರಧಾನ ಮಂತ್ರಿ ಜನ ಧನ ಯೋಜನೆ ಬಹಳ ಅನುಕೂಲಕರವಾಗಿದ್ದು, ಗ್ರಾಮೀಣ ಭಾಗದ ಜನರಿಗೆ ಹೆಚ್ಚು ಪ್ರಯೋಜನವಾಗಿದೆ. ಈ ಖಾತೆಯನ್ನು ಆರಂಭಿಸಲು ಹತ್ತಿರದ ಬ್ಯಾಂಕ್ ಗೆ ಭೇಟಿ ನೀಡಿ ಅರ್ಜಿಯನ್ನು ಭರ್ತಿ ಮಾಡಿ, ಪ್ರಧಾನಮಂತ್ರಿ ಜನ್ ಧನ್ ಖಾತೆಯನ್ನು ತೆರೆಯಬಹುದು.
If you have this bank account, the government will give 2.30 lakh rupees