ಈ ಯೋಜನೆಯಲ್ಲಿ ಗಂಡ-ಹೆಂಡತಿಗೆ ಪ್ರತಿ ತಿಂಗಳು ಸಿಗಲಿದೆ 10 ಸಾವಿರ ರೂಪಾಯಿ

ಸರ್ಕಾರದ ಈ ಯೋಜನೆಯಲ್ಲಿ ಫಲಾನುಭವಿಗಳಾದರೆ ದಂಪತಿಗೆ ಪ್ರತಿ ತಿಂಗಳು ಸಿಗುತ್ತೆ 10 ಸಾವಿರ

ಯುವಕರಿದ್ದಾಗ ದುಡಿದ ಹಣವನ್ನು ಯಾವಾಗಲೂ ಸ್ವಲ್ಪವಾದರೂ ಉಳಿತಾಯ (savings) ಮಾಡಲು ಕಲಿತುಕೊಳ್ಳಬೇಕು. ಹೀಗೆ ಉಳಿತಾಯ ಮಾಡಿದ ಹಣವನ್ನು ಪಿಂಚಣಿ ಯೋಜನೆಗಳಲ್ಲಿ (Pension Scheme) ತೊಡಗಿಸುವುದರಿಂದ ನಿವೃತ್ತಿಯ ನಂತರ ಅಥವಾ ವೃದ್ಧಾಪ್ಯದಲ್ಲಿ ದಂಪತಿಗಳು ಮಕ್ಕಳ ಸಹಕಾರ ಕೇಳುವ ಅಗತ್ಯ ಬೀಳುವುದಿಲ್ಲ.

ಕೆಲವೊಮ್ಮೆ ಸಮಸ್ಯೆಗಳು ಎದುರಾಗಿ ಮಕ್ಕಳು ತಂದೆ ತಾಯಿಯನ್ನು ನೋಡಿಕೊಳ್ಳಲು ಹಿಂಜರಿಯಬಹುದು. ಇಂತಹ ಸಂದರ್ಭದಲ್ಲಿಯೂ ಸಹ ನೀವು ಪ್ರಾಯದಲ್ಲಿದ್ದಾಗ ಮಾಡಿದ ಉಳಿತಾಯ ಯೋಜನೆ (Savings scheme) ನಿಮ್ಮ ಸಹಾಯಕ್ಕೆ ಬರುತ್ತದೆ.

ಹಾಗಾಗಿ ಕೇಂದ್ರ ಸರ್ಕಾರವು ವೃದ್ಧಾಪ್ಯದಲ್ಲಿ ಜನರಿಗೆ ನೆರವಾಗಬೇಕು ಎನ್ನುವ ಸಲುವಾಗಿ ಒಂದು ಯೋಜನೆ ಜಾರಿಗೆ ತಂದಿದೆ. ಆ ಯೋಜನೆಯಲ್ಲಿ ನೀವು ಹೂಡಿಕೆ (Investment) ಮಾಡುವುದರಿಂದ ವೃದ್ಧಾಪ್ಯವನ್ನು ಸಂತಸದಿಂದ ಕಳೆಯಬಹುದಾಗಿದೆ. ಹಾಗಾದರೆ ಕೇಂದ್ರ ಸರ್ಕಾರ ಜಾರಿಗೆ ತಂದ ಯೋಜನೆ ಯಾವುದು ಎಂದು ಈಗ ನೋಡೋಣ.

ಈ ಯೋಜನೆಯಲ್ಲಿ ಗಂಡ-ಹೆಂಡತಿಗೆ ಪ್ರತಿ ತಿಂಗಳು ಸಿಗಲಿದೆ 10 ಸಾವಿರ ರೂಪಾಯಿ - Kannada News

ಮಹಿಳೆಯರು ಈ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ರೆ ಸಾಕು, ಲಕ್ಷ ಲಕ್ಷ ಆದಾಯ!

ಕೇಂದ್ರ ಸರ್ಕಾರವು ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಅಟಲ್ ಜೀ ಪಿಂಚಣಿ ಯೋಜನೆ (Atal pension scheme) ಯನ್ನು ಪರಿಚಯಿಸಿದೆ. ಯೋಜನೆಯ ಫಲಾನುಭವಿಗಳಾಗುವುದರಿಂದ ನಿಮಗೆ ವೃದ್ಧಾಪ್ಯದಲ್ಲಿ ಪ್ರತಿ ತಿಂಗಳು 10 ಸಾವಿರ ರೂ. ಸಿಗಲಿದೆ. ಈ ಹಣದಲ್ಲಿ ದಂಪತಿಗಳು ಸಂತಸದಿಂದ ಸಾಮಾನ್ಯ ಜೀವನಸ ಸಾಗಿಸಬಹುದಾಗಿದೆ.

ಅಸಂಘಟಿತ ಕಾರ್ಮಿಕರಿಗೆ (non organised sector labour) ವೃದ್ಧಾಪ್ಯದಲ್ಲಿ ಪಿಂಚಣಿ ನೀಡುವ ಯೋಜನೆಯೇ ಅಟಲ್ ಜೀ ಪಿಂಚಣಿ ಯೋಜನೆ. ಈ ಯೋಜನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 2015 ರಲ್ಲಿಯೇ ಜಾರಿಗೆ ತಂದರು. ಈ ಯೋಜನೆಯು ಕೊಟ್ಯಂತರ ವೃದ್ಧ ದಂಪತಿಗಳಿಗೆ ಆಸರೆಯಾಗಿದೆ ಎಂದರೆ ಅತಿಶಯೋಕ್ತಿ ಆಗಲಾರದು.

ಯಾವುದೇ ಗ್ಯಾರಂಟಿ ಬೇಕಿಲ್ಲ! ಕೇಂದ್ರ ಸರ್ಕಾರದಿಂದಲೇ ಸಿಗುತ್ತೆ 2 ಲಕ್ಷ ಲೋನ್

Pension Schemeಈ ಯೋಜನೆ ಅಡಿಯಲ್ಲಿ ನೀವು ಫಲಾನುಭವಿ ಆಗಬೇಕು ಎಂದರೆ ನೀವು 18 ರಿಂದ 40 ವರ್ಷದೊಳಗೆ ಹೂಡಿಕೆ ಆರಂಭಿಸಬೇಕಾಗುತ್ತದೆ. ಪತಿ-ಪತ್ನಿ ಇಬ್ಬರು ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಪತಿ-ಪತ್ನಿ ಇಬ್ಬರಿಗೂ 60 ವರ್ಷ ದಾಟಿದ ನಂತರ ಪ್ರತಿಯೊಬ್ಬರಿಗೂ 5 ಸಾವಿರ ರೂ. ಸಿಗಲಿದೆ. ಅಂದರೆ ಇಬ್ಬರಿಗೆ 1೦ ಸಾವಿರ ರೂ. ಸಿಗಲಿದೆ.

18 ರಿಂದ 40 ವರ್ಷದೊಳಗೆ ಯೋಜನೆಯ ಕಂತುಗಳನ್ನು ಕಟ್ಟಲು ಆರಂಭಿಸಿದರೆ ಕನಿಷ್ಟ 1 ಸಾವಿರ ರೂ.ನಿಂದ 5 ಸಾವಿರ ರೂ. ವರೆಗೆ ವೃದ್ಧಾಪ್ಯದಲ್ಲಿ ಪಿಂಚಣಿ ಸಿಗುತ್ತದೆ.

ಹಸು, ಕುರಿ, ಕೋಳಿ ಸಾಕಾಣಿಕೆಗೆ ಸಿಗುತ್ತೆ 50% ಸಹಾಯಧನ; ಇಂದೇ ಅರ್ಜಿ ಸಲ್ಲಿಸಿ!

ಕಳೆದ ವರ್ಷ ಈ ಯೋಜನೆ ಅಡಿಯಲ್ಲಿ ನಮ್ಮ ದೇಶದಲ್ಲಿ 75 ಲಕ್ಷಕ್ಕೂ ಅಧಿಕ ಮಂದಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ. ಇಲ್ಲಿಯವರೆಗೆ ದೇಶದಲ್ಲಿ 4 ಕೋಟಿ ಜನರು ಈ ಯೋಜನೆ ಲಾಭ ಪಡೆದುಕೊಂಡಿದ್ದಾರೆ.

ನೀವು ಎಷ್ಟು ವರ್ಷಕ್ಕೆ ಈ ಯೋಜನೆಗೆ ಅರ್ಜಿ ಸಲ್ಲಿಸುತ್ತೀರಿ ಎನ್ನುವುದರ ಆದಾರದ ಮೇಲೆ ನೀವು ಪ್ರತಿ ತಿಂಗಳು ಹಣ ಪಾವತಿ ಮಾಡಬೇಕಾಗುತ್ತದೆ. ಕನಿಷ್ಟ 42 ರೂ. ನಿಂದ ಗರಿಷ್ಟ 210 ರೂ.ಗಳ ವರೆಗೆ ಪಾವತಿ ಮಾಡಬೇಕಾಗುತ್ತದೆ.

ನೀವು 18 ವರ್ಷದಲ್ಲಿ ಈ ಯೋಜನೆ ಅರ್ಜಿ ಸಲ್ಲಿಸಿದರೆ ಪ್ರತಿ ತಿಂಗಳು 42 ರೂ.ಗಳನ್ನು 2೦ ವರ್ಷಗಳ ವರೆಗೆ ಪಾವತಿ ಮಾಡಬೇಕಾಗುತ್ತದೆ. ನಂತರ ನಿಮಗೆ ಪಿಂಚಣಿ ಯೋಜನೆಗೆ ಅರ್ಹತೆ ಬರುತ್ತದೆ. ಯಾರ್ಯಾರು ಇಲ್ಲಿಯವರೆಗೆ ಅರ್ಜಿ ಸಲ್ಲಿಸಿಲ್ಲವೋ ಅಂತಹವರು ಕೂಡಲೇ ಅರ್ಜಿ ಸಲ್ಲಿಸಿ.

ಈ ಬ್ಯಾಂಕ್ ಖಾತೆ ಇದ್ರೆ ಸರ್ಕಾರವೇ ನೀಡುತ್ತೆ 2.30 ಲಕ್ಷ ರೂಪಾಯಿ; ಬೆನಿಫಿಟ್ ಪಡೆಯಿರಿ

In this scheme, husband and wife will get 10 thousand rupees every month

Follow us On

FaceBook Google News

In this scheme, husband and wife will get 10 thousand rupees every month