Business News

ನಿಮಗೆ ಪ್ರತಿ ತಿಂಗಳು 5550 ರೂಪಾಯಿ ಬೇಕಾದ್ರೆ ಈ ಪೋಸ್ಟ್ ಆಫೀಸ್ ಸ್ಕೀಮ್ ಬೆಸ್ಟ್ ಆಪ್ಶನ್

ಇಂದಿನ ದಿನದಲ್ಲಿ ಪ್ರತಿಯೊಬ್ಬರೂ ದುಡಿಯುತ್ತಾರೆ. ಅದಕ್ಕೆ ಪುರುಷ, ಮಹಿಳೆ ಎನ್ನುವ ಭೇದಭಾವವಿಲ್ಲ. ಹಾಗಾಗಿ ಹೀಗೆ ದುಡಿದ ಹಣದಲ್ಲಿ ಸ್ವಲ್ಪ ಹಣವನ್ನು ಉಳಿತಾಯ (savings) ಮಾಡುತ್ತಾರೆ.

ಉಳಿತಾಯ ಮಾಡಿದ ಹಣ ಹಾಗೆ ಇಟ್ಟರೆ ಅದು ಲಾಭದಾಯಕವಾಗುವುದಿಲ್ಲ. ಅದನ್ನು ಉತ್ತಮ ಸ್ಥಳದಲ್ಲಿ ಹೂಡಿಕೆ ಮಾಡಿದರೆ ಆ ಹಣ ನಿಮಗೆ ಲಾಭ ತಂದುಕೊಡುತ್ತದೆ. ಮ್ಯೂಚುವಲ್ ಫಂಡ್ (mutual fund) , ಶೇರ್ ಮಾರ್ಕೇಟ್ಗಳಲ್ಲಿ ಹೂಡಿಕೆ ಮಾಡಿದರೆ ನೀವು ರಿಸ್ಕ್ ತೆಗೆದುಕೊಳ್ಳಬೇಕಾಗುತ್ತದೆ.

ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ 2 ಸಾವಿರ ಕಟ್ಟಿದ್ರೆ 5 ವರ್ಷಕ್ಕೆ ಲಕ್ಷ ಲಕ್ಷ ಆದಾಯ

ಮನೆಯಲ್ಲೇ ಇದ್ದುಕೊಂಡು 2 ಗಂಟೆ ಕೆಲಸ ಮಾಡಿದ್ರೆ 30,000 ಗಳಿಕೆ! ಇಲ್ಲಿದೆ ಮಾಹಿತಿ

ಆದರೆ ಅಂಚೆ ಕಚೇರಿಯಲ್ಲಿ ಹೂಡಿಕೆ (investment on post office schemes) ಮಾಡಿದರೆ ಯಾವ ಭಯವೂ ಇರುವುದಿಲ್ಲ. ಹಾಗಾಗಿ ಇತ್ತಿಚಿನ ದಿನಗಳಲ್ಲಿ ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ಗಣನೀಯವಾಗಿ ಏರಿಕೆ ಆಗುತ್ತಿದೆ.

ಇದೀಗ ಅಂಚೆ ಕಚೇರಿ ಒಂದು ಸ್ಕೀಂ ಪರಿಚಯಿಸಿದ್ದು, ಅದರಲ್ಲಿ ನೀವು ಹೂಡಿಕೆ ಮಾಡಿದ್ದೇ ಆದಲ್ಲಿ ನಿಮಗೆ ಪ್ರತಿ ತಿಂಗಳು 555೦ ರೂ. ಬರಲಿದೆ. ಹಾಗಾದರೆ ಯಾವ ಸ್ಕೀಂ, ಎಷ್ಟು ಹೂಡಿಕೆ ಮಾಡಬೇಕು ಎಂದು ತಿಳಿದುಕೊಳ್ಳೋಣ.

ಮಾಸಿಕ ಆದಾಯ ಯೋಜನೆ: (monthly investment scheme)

ಪ್ರತಿ ತಿಂಗಳು ಹಣ ಪಡೆದುಕೊಳ್ಳುವವರ ಸಲುವಾಗಿಯೇ ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಲ್ಲಿ ನೀವು ಒಂದು ದೊಡ್ಡ ಮೊತ್ತವನ್ನು ಠೇವಣಿ ಮಾಡಿದರೆ ಪ್ರತಿ ತಿಂಗಳು ನಿಶ್ಚಿತ ಆದಾಯ ಪಡೆಯುತ್ತಿರಿ.

ಅಂಚೆ ಕಚೇರಿಯು ಕೇಂದ್ರ ಸರ್ಕಾರದ ಅದೀನದಲ್ಲಿ ಬರುವುದರಿಂದ ಇಲ್ಲಿ ನೀವು ಹೂಡಿಕೆ ಮಾಡಿದರೆ ಯಾವುದೇ ಶೇರು ಮಾರುಕಟ್ಟೆಯ ಭಯ ಇರುವುದಿಲ್ಲ. ನಿಮ್ಮ ಹಣ ಭದ್ರವಾಗಿರುತ್ತದೆ. ಲಾಭದ ಜೊತೆ ನಿಮಗೆ ಸಿಗುತ್ತದೆ. ಜನರು ಸಹ ಇದನ್ನೇ ಬಯಸುತ್ತಾರೆ. ತಾವು ಕಷ್ಟಪಟ್ಟು ದುಡಿದ ಹಣ ಕಳೆದುಕೊಳ್ಳಲು ಯಾರೂ ಕೂಡ ಇಷ್ಟಪಡುವುದಿಲ್ಲ.

ಈ ಯೋಜನೆಯಲ್ಲಿ ಗಂಡ-ಹೆಂಡತಿಗೆ ಪ್ರತಿ ತಿಂಗಳು ಸಿಗಲಿದೆ 10 ಸಾವಿರ ರೂಪಾಯಿ

Post office Schemeಮಾಸಿಕ ಆದಾಯ ಯೋಜನೆಯಲ್ಲಿ ನೀವು ಒಂದು ಮೊತ್ತವನ್ನು ಹೂಡಿಕೆ ಮಾಡುವುದರಿಂದ ಆದಾಯ ಗಳಿಸಬಹುದು. ನೀವು ಠೇವಣಿ (Deposit) ಇಟ್ಟ ಹಣಕ್ಕೆ ಅಂಚೆ ಕಚೇರಿ ಅಧಿಕಾರಿಗಳು ಶೇ.7.4 ರಷ್ಟು ಬಡ್ಡಿ ನೀಡುತ್ತಾರೆ.

ನೀವು ಮಾಸಿಕ ಆದಾಯ ಯೋಜನೆಯಲ್ಲಿ ಹೂಡಿಕೆ ಮಾಡುವುದಾದರೆ ಮೊದಲು ನಿಮ್ಮ ಮನೆಯ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ. ಅಲ್ಲಿ 1000 ರೂ. ಠೇವಣಿ ಇಡುವುದರಿಂದ ನಿಮ್ಮ ಖಾತೆ ತೆರೆಯಬಹುದು. ನೀವು ಒಂದು ವೇಳೆ ಜಂಟಿ ಖಾತೆ ತೆರೆಯಲು ಬಯಸಿದರೆ ಅದು ಕೂಡ ಸಾಧ್ಯವಿದೆ. ನೀವು ಒಂದು ಖಾತೆಯಲ್ಲಿ 9 ಲಕ್ಷ ರೂ. ವರೆಗೆ ಹೂಡಿಕೆ ಮಾಡಬಹುದು. ಜಂಟಿಯಾಗಿ ಖಾತೆ ತೆರೆದಲ್ಲಿ 15 ಲಕ್ಷ ರೂ. ವರೆಗೆ ಹೂಡಿಕೆ ಮಾಡಬಹುದಾಗಿದೆ.

ಮಹಿಳೆಯರು ಈ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ರೆ ಸಾಕು, ಲಕ್ಷ ಲಕ್ಷ ಆದಾಯ!

ನೀವು ಒಂದೇ ಖಾತೆಯಲ್ಲಿ 9 ಲಕ್ಷ ರೂ. ಹೂಡಿಕೆ ಮಾಡಿದಲ್ಲಿ ವಾರ್ಷಿಕ 7.4 ರ ಬಡ್ಡಿದರದಲ್ಲಿ ಪ್ರತಿ ತಿಂಗಳು 5550 ರೂ. ನೀಡಲಾಗುತ್ತದೆ. ಅದೇ ನೀವು ಜಂಟಿ ಖಾತೆ ತೆರೆದು 15 ಲಕ್ಷ ರೂ. ಹೂಡಿಕೆ ಮಾಡಿದರೆ 9250 ರೂ. ಪ್ರತಿ ತಿಂಗಳು ಸಿಗುತ್ತದೆ.

If you need Rs 5550 per month then this post office scheme is the best option

Our Whatsapp Channel is Live Now 👇

Whatsapp Channel

Related Stories