ಬೇಸಿಗೆಯಲ್ಲಿ ಈ ಬಿಸಿನೆಸ್ ಆರಂಭ ಮಾಡಿದ್ರೆ ಕೈ ತುಂಬಾ ಆದಾಯ! ಇಲ್ಲಿದೆ ಐಡಿಯಾ

Story Highlights

ಮಿನರಲ್ ವಾಟರ್ ಮಾರಾಟ (Mineral water bottle sale) ಮಾಡುವ ಉದ್ಯಮವನ್ನು ನೀವು ಆಯ್ದುಕೊಂಡರೆ ಅತಿ ಹೆಚ್ಚಿನ ಲಾಭ ಪಡೆದುಕೊಳ್ಳಬಹುದು

ಸ್ವಂತ ಉದ್ಯಮ (own business) ಆರಂಭಿಸಬೇಕು ಎಂದು ಬಯಸುವವರಿಗೆ ಸದಾ ಸದಾ ಕಾಲಕ್ಕೆ ಬೇಡಿಕೆ ಇರುವಂತಹ ಒಂದು ಉತ್ತಮ ಬಿಸಿನೆಸ್ ಐಡಿಯಾ (business idea) ವನ್ನು ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.

ನೀವೇನಾದ್ರೂ ಈ ಬಿಸಿನೆಸ್ ಆರಂಭಿಸಿದರೆ ಯಾವುದೇ ಕಾರಣಕ್ಕೂ ನಷ್ಟ ಉಂಟಾಗುವುದಿಲ್ಲ. ಬದಲಿಗೆ ದಿನದಿಂದ ದಿನಕ್ಕೆ ನಿಮ್ಮ ಬಿಸಿನೆಸ್ ಕೂಡ ಇಂಪ್ರೂ ಆಗಬಹುದು. ಈ ಉದ್ಯಮವನ್ನು ವಿಶೇಷವಾಗಿ ಬೇಸಿಗೆಯಲ್ಲಿ ಆರಂಭಿಸಿದರೆ ಹೆಚ್ಚಿನ ಲಾಭ ಗ್ಯಾರಂಟಿ.

ಕಡಿಮೆ ಬಡ್ಡಿಯಲ್ಲಿ ಪಡೆದುಕೊಳ್ಳಿ 2 ಲಕ್ಷ ರೂಪಾಯಿವರೆಗೆ ಸಾಲ; ತಕ್ಷಣ ಅರ್ಜಿ ಸಲ್ಲಿಸಿ

ಮಿನರಲ್ ವಾಟರ್ ಬಿಸಿನೆಸ್! (Mineral water bottle sale business)

ನೀರು ಇಲ್ಲದೆ ಜೀವಿಸುವುದಕ್ಕೆ ಅಂತೂ ಸಾಧ್ಯವೇ ಇಲ್ಲ. ಹಾಗಾಗಿ ನೀರಿನ ಬೇಡಿಕೆ ಕಡಿಮೆ ಆಗುತ್ತದೆ ಎನ್ನುವ ಆತಂಕವು ಇಲ್ಲ. ವರ್ಷದಿಂದ ವರ್ಷಕ್ಕೆ 20% ಹೆಚ್ಚಾಗಿ ಬೆಳೆಯುತ್ತಿರುವ ಮಿನರಲ್ ವಾಟರ್ ಮಾರಾಟ (Mineral water bottle sale) ಮಾಡುವ ಉದ್ಯಮವನ್ನು ನೀವು ಆಯ್ದುಕೊಂಡರೆ ಅತಿ ಹೆಚ್ಚಿನ ಲಾಭ ಪಡೆದುಕೊಳ್ಳಬಹುದು. ಈ ಉದ್ಯಮ ಆರಂಭಿಸುವುದು ಹೇಗೆ? ಖರ್ಚು ವೆಚ್ಚಗಳು ಎಷ್ಟು? ಮೊದಲಾದವುಗಳ ಬಗ್ಗೆ ಇಲ್ಲಿದೆ ಮಾಹಿತಿ.

ಮಿನರಲ್ ವಾಟರ್ ಬಾಟಲ್ ಬಿಸಿನೆಸ್ ಪ್ರತಿ ವರ್ಷ 20% ನಷ್ಟು ಏರಿಕೆ ಕಾಣುತ್ತಿದ್ದು, ನೀವು ಕೂಡ ಈ ಉದ್ಯಮವನ್ನು ಆರಂಭಿಸಬಹುದು ಮಿನರಲ್ ವಾಟರ್ ಬಾಟಲ್ ಪ್ಲಾಂಟ್ ತಯಾರಿಸುವುದಕ್ಕೆ ನಿಮಗೆ, ಬೋರ್ ವೆಲ್, ಆರ್ ಓ ಫಿಲ್ಟರ್ ಮೊದಲಾದ ಯಂತ್ರೋಪಕರಣಗಳು ಬೇಕು ಸುಮಾರು ಸಾವಿರದಿಂದ 1500 ಚದರ್ ಅಡಿ ಜಾಗದಲ್ಲಿ ವಾಟರ್ ಬಾಟಲ್ ಪ್ಲಾಂಟ್ ತಯಾರಿಸಬಹುದು.

ಸ್ವಂತ ಮನೆ ನಿರ್ಮಾಣಕ್ಕೆ ಈ ಯೋಜನೆ ಅಡಿ ಸರ್ಕಾರದಿಂದಲೇ ಸಿಗುತ್ತೆ 1.5 ಲಕ್ಷ!

ಇನ್ನು ಕೆಲವು ವಾಣಿಜ್ಯ ಕಂಪನಿಗಳು ಆರ್ ಓ ಸ್ಥಾವರಗಳನ್ನು ಸ್ಥಾಪಿಸಿವೆ. ಇದನ್ನ ನೀವು ಪಡೆಯಲು 50ರಿಂದ ಎರಡು ಲಕ್ಷ ರೂಪಾಯಿಗಳವರೆಗೆ ವೆಚ್ಚವಾಗುತ್ತದೆ. 20 ಲೀಟರ್ ಸಾಮರ್ಥ್ಯದ 100 ವಾಟರ್ ಕ್ಯಾನ್ ಗಳನ್ನು ನೀವು ಸಂಗ್ರಹಿಸಬಹುದಾಗಿದೆ.

Mineral water bottle sale businessವಾಟರ್ ಬಾಟಲ್ plant ತಯಾರಿಸಲು ಸಂಪೂರ್ಣ ವೆಚ್ಚ ಸುಮಾರು ನಾಲ್ಕರಿಂದ ಐದು ಲಕ್ಷ ರೂಪಾಯಿಗಳವರೆಗೆ ಆಗುತ್ತದೆ, ನೀವು ಪ್ರತಿದಿನ ಸಾವಿರ ಲೀಟರ್ ನೀರು ಬಾಟಲ್ ಉತ್ಪಾದಿಸುವ ಸ್ಥಾವರ ಆರಂಭಿಸಬಹುದು. ಇದರಿಂದ ಕನಿಷ್ಠ 30ರಿಂದ 50,000ಗಳ ವರೆಗಿನ ಲಾಭ ಪಡೆಯಬಹುದು.

ಒಂದು ಸಣ್ಣ ಲೆಕ್ಕಾಚಾರದ ಪ್ರಕಾರ ನೋಡುವುದಾದರೆ, ನೀವು 200 ಗ್ರಾಹಕರಿಗೆ 25 ರೂಪಾಯಿಗಳ ನೀರಿನ ಬಾಟಲ್ ಅನ್ನು ದಿನಕ್ಕೆ ಒಂದರಂತೆ ಮಾರಾಟ ಮಾಡುತ್ತೀರಿ ಎಂದು ಭಾವಿಸಿ. ಅಲ್ಲಿಗೆ ದಿನಕ್ಕೆ 5,000 ಹಾಗೂ ತಿಂಗಳಿಗೆ 1,50,000ಗಳನ್ನ ನೀವು ಗಳಿಸಬಹುದು.

ನಿಮ್ಮ ಹಣ ಡಬಲ್ ಮಾಡುವ ಸರ್ಕಾರಿ ಸ್ಕೀಮ್ ಇದು! 5 ಲಕ್ಷಕ್ಕೆ 10 ಲಕ್ಷ ಆದಾಯ ಸಿಗುತ್ತೆ

ಇದರಲ್ಲಿ ಬಾಡಿಗೆ, ಕೆಲಸಗಾರರ ಖರ್ಚು ವೆಚ್ಚ ಮೊದಲಾದ ಖರ್ಚುಗಳನ್ನು ನಿಭಾಯಿಸಲು ಒಂದು ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದರು ನೆಟ್ (net profit) 50 ಸಾವಿರ ರೂಪಾಯಿಗಳನ್ನು ನೀವು ಉಳಿತಾಯ ಮಾಡಬಹುದು.

ನೀರಿಗೆ ಯಾವತ್ತಿಗೂ ಬೇಡಿಕೆ ಕಡಿಮೆ ಆಗದೆ ಇರುವ ಹಿನ್ನೆಲೆಯಲ್ಲಿ ನೀವು ಪರಿಶುದ್ಧವಾದ ನೀರನ್ನು ನೀಡಿದರೆ ಉತ್ತಮ ಬಿಸಿನೆಸ್ ಮಾಡಲು ಸಾಧ್ಯವಿದೆ.

Summer Business Idea, Earn by Mineral water bottle sale business