ಸಾಮಾನ್ಯವಾಗಿ ಯಾವುದೇ ಉದ್ಯಮ (business) ಆರಂಭಿಸುತ್ತೇವೆ ಎಂದುಕೊಂಡರು, ಅದಕ್ಕೆ ಒಂದಷ್ಟು ಬಂಡವಾಳ (Investment) ಬೇಕೇ ಬೇಕು. ಇನ್ನು ಬಂಡವಾಳ ಹೂಡಿಕೆಗೆ ಬ್ಯಾಂಕ್ (Bank) ಮೊರೆ ಹೋಗುವುದು ಸಾಮಾನ್ಯ ಆದರೆ ಬ್ಯಾಂಕ್ನಲ್ಲಿ ಬಡ್ಡಿ ದರ ಜಾಸ್ತಿ.
ವೈಯಕ್ತಿಕ ಸಾಲ (personal loan) ತೆಗೆದುಕೊಂಡರೆ ಅತಿ ಹೆಚ್ಚು ಬಡ್ಡಿ ದರ ಇರುತ್ತದೆ, ಹಾಗಾಗಿ ಆ ಸಾಲವನ್ನ ಮರುಪಾವತಿ ಮಾಡುವುದಕ್ಕೂ ಕೂಡ ಕಷ್ಟಪಡುವ ಪರಿಸ್ಥಿತಿ ಎದುರಾಗಬಹುದು.
ಇದಕ್ಕಾಗಿ ಕೇಂದ್ರ ಸರ್ಕಾರ ಒಂದು ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು, ಅತಿ ಕಡಿಮೆ ಬಡ್ಡಿ ದರದಲ್ಲಿ ಸ್ವಂತ ಉದ್ಯಮ (Own Business) ಮಾಡಲು ಬಯಸುವವರು ಸಾಲ ಸೌಲಭ್ಯ (Loan) ಪಡೆಯಬಹುದಾಗಿದೆ.
ಸ್ವಂತ ಮನೆ ನಿರ್ಮಾಣಕ್ಕೆ ಈ ಯೋಜನೆ ಅಡಿ ಸರ್ಕಾರದಿಂದಲೇ ಸಿಗುತ್ತೆ 1.5 ಲಕ್ಷ!
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ! (Pradhanmantri Vishwakarma Yojana)
ಕರಕುಶಲ ಕಾರ್ಮಿಕರು ಸಾಂಪ್ರದಾಯಿಕ ಉದ್ಯಮವನ್ನು ಮೆಚ್ಚಿಕೊಂಡು ಬಂದಿರುವವರು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಸಾಲ ಸೌಲಭ್ಯ (Loan facility) ಪಡೆದು ತಮ್ಮ ಉದ್ಯಮವನ್ನು ಇನ್ನಷ್ಟು ಅಭಿವೃದ್ಧಿಪಡಿಸಿಕೊಳ್ಳಬಹುದು.
ಸುಮಾರು 18ಕ್ಕೂ ಹೆಚ್ಚಿನ ಉದ್ಯಮೆಗಳಿಗೆ ಸರ್ಕಾರದಿಂದ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ 2ಲಕ್ಷದವರೆಗೆ ಸಾಲ ಸೌಲಭ್ಯ ಪಡೆಯಬಹುದು. ಹಾಗೂ ಇದಕ್ಕೆ ಬಡ್ಡಿದರವೂ ಕೂಡ ತುಂಬಾ ಕಡಿಮೆ.
ಕೇಂದ್ರ ಸರ್ಕಾರದ ಉಚಿತ ವಿದ್ಯುತ್ ಸ್ಕೀಮ್! ಈಗಲೇ ಅರ್ಜಿ ಸಲ್ಲಿಸಿ; ಇಲ್ಲಿದೆ ಡೀಟೇಲ್ಸ್
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು!
* ಭಾರತೀಯ ನಾಗರಿಕರಾಗಿರಬೇಕು
* ಸ್ವಂತ ಉದ್ಯಮ ಮಾಡುವವರಾಗಿರಬೇಕು. ಹಾಗೂ 18 ವರ್ಷ ದಾಟಿರಬೇಕು.
* ಕುಟುಂಬದಲ್ಲಿ ಯಾವುದೇ ಸದಸ್ಯ ಸರ್ಕಾರಿ ನೌಕರಿಯಲ್ಲಿ ಇದ್ದರೆ ಈ ಯೋಜನೆ ಪ್ರಯೋಜನ ಸಿಗುವುದಿಲ್ಲ.
* ಕಳೆದ ಐದು ವರ್ಷಗಳಲ್ಲಿ ಸರ್ಕಾರದ ಇತರ ಯೋಜನೆಗಳಲ್ಲಿ ಸಾಲ ಸೌಲಭ್ಯ ಪಡೆದುಕೊಂಡರೆ ಈ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.
* ಈ ಯೋಜನೆಯ ಪ್ರಯೋಜನ ಅಂದ್ರೆ ಮೊದಲ ಕಂತಿನಲ್ಲಿ ಒಂದು ಲಕ್ಷ ರೂಪಾಯಿ ಹಾಗೂ ಅದನ್ನು ಮರುಪಾವತಿ ಮಾಡಿದ ನಂತರ ಈ ಎರಡನೇ ಕಂತಿನ ಹಣ ಅಂದರೆ ಎರಡು ಲಕ್ಷ ರೂಪಾಯಿಗಳನ್ನು ಪಡೆದುಕೊಳ್ಳಬಹುದು. 30 ತಿಂಗಳ ಅವಧಿಯಲ್ಲಿ ಈ ಹಣವನ್ನು ಹಿಂತಿರುಗಿಸಬೇಕು.
ನಿಮ್ಮ ಹಣ ಡಬಲ್ ಮಾಡುವ ಸರ್ಕಾರಿ ಸ್ಕೀಮ್ ಇದು! 5 ಲಕ್ಷಕ್ಕೆ 10 ಲಕ್ಷ ಆದಾಯ ಸಿಗುತ್ತೆ
* ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಿದರೆ 5% ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಸಿಗುತ್ತದೆ.
* ಈ ಯೋಜನೆಯಲ್ಲಿ ನೋಂದಾಯಿಸಿಕೊಂಡವರಿಗೆ ಐದರಿಂದ ಏಳು ದಿನಗಳ ಕಾಲ ಕೌಶಲ್ಯ ತರಬೇತಿ ನೀಡಲಾಗುತ್ತದೆ. ಹಾಗೂ ತರಬೇತಿ ಸಮಯದಲ್ಲಿ 500 ರೂಪಾಯಿಗಳನ್ನು ಪ್ರತಿ ಸದಸ್ಯರಿಗೆ ಕೊಡಲಾಗುವುದು.
* ತರಬೇತಿ ಮುಗಿದ ಬಳಿಕ ತಮ್ಮ ಉದ್ಯಮವನ್ನು ಇನ್ನಷ್ಟು ವಿಸ್ತರಿಸಿಕೊಳ್ಳಲು 15,000 ಟೂಲ್ ಕಿಟ್ ವಿತರಿಸಲಾಗುತ್ತದೆ.
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಈ ಸ್ಕೀಮ್ ನಲ್ಲಿ ಸಣ್ಣ ಬಿಸಿನೆಸ್ ಮಾಡೋಕೆ 15 ಸಾವಿರ ಸರ್ಕಾರವೇ ಕೊಡುತ್ತೆ; ಅರ್ಜಿ ಸಲ್ಲಿಸಿ!
https://www.pmvishwakarma.gov.in/ ಈ ಅಧಿಕೃತ ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ PAN Card, ಆಧಾರ್ ಕಾರ್ಡ್ ವಿಳಾಸ ಪುರಾವೆ ಮೊದಲಾದ ದಾಖಲೆಗಳನ್ನು ನೀಡಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.
ವಿಶ್ವಕರ್ಮ ಯೋಜನೆಯಲ್ಲಿ ಹೆಸರು ನೋಂದಾಯಿಸಿಕೊಂಡರೆ ಬ್ಯಾಂಕ್ನಿಂದ ಸಾಲ ಸೌಲಭ್ಯ ಸಿಗುತ್ತದೆ ಹಾಗೂ ಸರ್ಕಾರ ಸಬ್ಸಿಡಿ ಹಣವನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತದೆ.
Get loans up to Rs 2 lakh at low interest rates
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.