ಮದುವೆಯಾದ ಮೇಲೂ ಕೂಡ ಅಪ್ಪನ ಆಸ್ತಿಯಲ್ಲಿ ಮಗಳಿಗೆ ಪಾಲು ಸಿಗುತ್ತಾ?

ತಂದೆ ಆಸ್ತಿಯಲ್ಲಿ ಗಂಡು ಮಕ್ಕಳ ರೀತಿಯಲ್ಲೇ ಹೆಣ್ಣು ಮಕ್ಕಳಿಗೂ ಕೂಡ ಆಸ್ತಿಯಲ್ಲಿ ಪಾಲು ಸಿಗುತ್ತಾ ಎನ್ನುವುದರ ಬಗ್ಗೆಯೂ ಸಾಕಷ್ಟು ಗೊಂದಲಗಳಿವೆ.

- - - - - - - - - - - - - Story - - - - - - - - - - - - -
  • ತಂದೆ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಸಮಾನ ಪಾಲಿದೆಯಾ?
  • ಮದುವೆಯಾದ ನಂತರ ಕೂಡ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಸಿಗುತ್ತಾ?
  • ಉತ್ತರಾಧಿಕಾರತ್ವದ ಕಾಯಿದೆ ಯಾವಾಗ ಬದಲಾವಣೆ ಆಯಿತು ಎನ್ನುವ ಮಾಹಿತಿ ಇಲ್ಲಿದೆ.

Property Rules : ನಮ್ಮ ಭಾರತ ದೇಶದಲ್ಲಿ ಇರುವಂತಹ ಜನಸಂಖ್ಯೆಯಲ್ಲಿ ಪ್ರತಿಯೊಬ್ಬರಿಗೂ ಭಾರತದ ಕಾನೂನು ಹಾಗೂ ನಿಯಮಗಳ ಸಂಪೂರ್ಣ ಜ್ಞಾನ ಇಲ್ಲ. ಅದರಲ್ಲಿ ವಿಶೇಷವಾಗಿ ಸಾಕಷ್ಟು ಜನರಿಗೆ ತಂದೆ ಆಸ್ತಿಯಲ್ಲಿ (Father’s Property) ಗಂಡು ಮಕ್ಕಳ ರೀತಿಯಲ್ಲೇ ಹೆಣ್ಣು ಮಕ್ಕಳಿಗೂ ಕೂಡ ಆಸ್ತಿಯಲ್ಲಿ ಪಾಲು ಸಿಗುತ್ತಾ ಎನ್ನುವುದರ ಬಗ್ಗೆಯೂ ಸಾಕಷ್ಟು ಗೊಂದಲಗಳಿವೆ.

ಅದೇ ಗೊಂದಲವನ್ನ ಇವತ್ತಿನ ಲೇಖನದ ಮೂಲಕ ನಿಮಗೆ ಬಗೆಹರಿಸಲು ಹೊರಟಿದ್ದೇವೆ.

ತಿಂಗಳಿಗೆ ಒಂದರಿಂದ ಎರಡು ಲಕ್ಷ ಆದಾಯ, ಮನೆಯಲ್ಲಿಯೇ ಮಾಡಿ ಈ ಬಿಸಿನೆಸ್

ಮದುವೆಯಾದ ಮೇಲೂ ಕೂಡ ಅಪ್ಪನ ಆಸ್ತಿಯಲ್ಲಿ ಮಗಳಿಗೆ ಪಾಲು ಸಿಗುತ್ತಾ?

ತಂದೆ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಪಾಲಿದೆಯಾ?

ಆಸ್ತಿಯ ಕಾನೂನಿನ ಪ್ರಕಾರ ಗಂಡು ಮಕ್ಕಳ ರೀತಿಯಲ್ಲೇ ತಂದೆ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಕೂಡ ಪಾಲಿದೆ. ಅವರು ಮದುವೆ ಆಗಿರಲಿ ಅಥವಾ ಆಗ್ದೇ ಇರ್ಲಿ, ಗಂಡು ಮಕ್ಕಳ ರೀತಿಯಲ್ಲಿ ಸಮಾನ ಹಕ್ಕನ್ನು ಹೊಂದಿರುತ್ತಾರೆ. 1956 ರಲ್ಲಿ ಇದ್ದಂತಹ ಆಸ್ತಿ ವಿಭಜನೆಯ ಕಾನೂನು 2005ರವರೆಗೆ ಕೂಡ ಜಾರಿಯಲ್ಲಿತ್ತು.

ಇದರಲ್ಲಿ ಹೆಣ್ಣು ಮಕ್ಕಳಿಗೆ ಸಮಾನವಾದ ಹಕ್ಕನ್ನು ಆಸ್ತಿ ವಿಭಜನೆಯ ಸಂದರ್ಭದಲ್ಲಿ ನೀಡಲಾಗುತ್ತಿರಲಿಲ್ಲ. ಹಿಂದೂ ಉತ್ತರಾಧಿಕಾರತ್ವ ಕಾಯ್ದೆಯನ್ನು 2005ರಲ್ಲಿ ತಿದ್ದುಪಡಿ ಮಾಡಲಾಯಿತು. ಇದರ ಪ್ರಕಾರ ಗಂಡು ಮಕ್ಕಳ ರೀತಿಯಲ್ಲಿ ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಕೂಡ ಸಮಾನವಾದ ಹಕ್ಕಿದೆ ಎಂಬುದನ್ನು ಪ್ರತಿಪಾದಿಸಲಾಯಿತು.

ಹೆಣ್ಣು ಮಕ್ಕಳು ಮದುವೆಯಾದ ನಂತರದಲ್ಲಿ ಕೂಡ ಅವರಿಗೆ ಸಿಗಬೇಕಾಗಿರುವಂತಹ ಆಸ್ತಿಯಲ್ಲಿ ಯಾವುದೇ ರೀತಿಯಲ್ಲಿ ಕೊರತೆಯನ್ನು ಕಾಣೋದಿಲ್ಲ. ಸಿಗಬೇಕಾಗಿರೋ ಆಸ್ತಿಯ ಮೊತ್ತ ಸ್ಥಿರವಾಗಿರಲಿದೆ.

ಕಸ ಅಂತ ಬಿಸಾಡಬೇಡಿ, ತೆಂಗಿನಕಾಯಿ ಚಿಪ್ಪಿನಿಂದ ಮಾಡಬಹುದು ಕೈ ತುಂಬಾ ಸಂಪಾದನೆ

property-rulesಈ ಸಮಯದಲ್ಲಿ ಹೆಣ್ಣು ಮಕ್ಕಳಿಗೆ ಆಸ್ತಿ ಸಿಗದಿರುವ ಸಾಧ್ಯತೆ ಇದೆ

ತಂದೆಯು ತಾನೇ ಆ ಆಸ್ತಿಯನ್ನು ಸ್ವಂತವಾಗಿ ದುಡಿದು ಸಂಪಾದನೆ ಮಾಡಿದ್ರೆ, ಹಾಗೂ ಬದುಕಿರುವಾಗ ವಿಲ್ ನಲ್ಲಿ ನನ್ನ ಆಸ್ತಿ ಯಾರಿಗೆ ಸೇರಬೇಕು ಎನ್ನುವುದನ್ನು ನಿರ್ದಿಷ್ಟವಾಗಿ ಬರೆದಿಟ್ಟಿದ್ರೆ ಹಾಗೂ ಮಗಳಿಗೆ ಸಿಗಬಾರದು ಅನ್ನೋದನ್ನ ಉಲ್ಲೇಖ ಮಾಡಿದ್ರೆ ಮಾತ್ರ ಅಂತಹ ಸಂದರ್ಭದಲ್ಲಿ ಮಗಳಿಗೆ ತಂದೆಯ ಆಸ್ತಿ ಸಿಗೋದಿಲ್ಲ.

ಇದರ ಜೊತೆಗೆ ಕಾನೂನು ವಿವಾದಗಳಲ್ಲಿ ಭಾಗಿಯಾಗಿರುವಂತಹ ತಂದೆಯ ಆಸ್ತಿ ಕೂಡ ಕುಟುಂಬದ ಸದಸ್ಯರಿಗೆ ಅಂದರೆ ಮಗಳನ್ನು ಸೇರಿಸಿ ಯಾರಿಗೂ ಸಿಗೋದಿಲ್ಲ. 2005ರ ಕಾಯ್ದೆ ಗಿಂತ ಮುಂಚೆ ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಸಮಾನ ಅಧಿಕಾರ ಇರಲಿಲ್ಲ.

2005ರ ನಂತರ ಬಂದಂತಹ ತಿದ್ದುಪಡಿಯಿಂದಾಗಿ ಗಂಡು ಮಕ್ಕಳ ರೀತಿಯಲ್ಲಿ ಆಸ್ತಿಯಲ್ಲಿ ಹೆಣ್ಣುಮಕ್ಕಳು ಸಮಾನ ಪಾಲುದಾರರಾಗಿರುತ್ತಾರೆ. ಈ ರೀತಿ ಹಿಂದೂ ಉತ್ತರಾಧಿಕಾರತ್ವದ ಕಾಯ್ದೆ ಹಾಗೂ ಕಾನೂನುಗಳನ್ನು ತಿಳಿದರೆ ಆಸ್ತಿ ಪಾಲು ಮಾಡುವ ಸಂದರ್ಭದಲ್ಲಿ ಯಾವುದೇ ರೀತಿಯ ಗೊಂದಲಗಳು ಇರೋದಿಲ್ಲ.

Do Daughters Have a Right to Father’s Property After Marriage

Related Stories