Business News

ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಇದೆಯೇ? ಅಷ್ಟಕ್ಕೂ ಯಾರಿಗೆಲ್ಲಾ ನಿಜವಾದ ಹಕ್ಕಿದೆ ಗೊತ್ತಾ

ನಮ್ಮ ದೇಶದಲ್ಲಿ ಆಸ್ತಿ ವಿಚಾರಕ್ಕೆ (property issue) ಕುಟುಂಬ ಕುಟುಂಬಗಳ ನಡುವೆ ಸಾಕಷ್ಟು ಜಗಳ, ವೈಮನಸ್ಸು, ಮನಸ್ತಾಪ ಉಂಟಾಗಿರುವುದನ್ನ ನೀವು ನೋಡಿರಬಹುದು. ಅಥವಾ ಅನುಭವಿಸಿರಬಹುದು.

ಆಸ್ತಿ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಕಾನೂನಿನಲ್ಲಿ ಸಾಕಷ್ಟು ನಿಯಮಗಳು (law about property) ಇವೆ. ಬೇರೆ ಬೇರೆ ಸಂದರ್ಭದಲ್ಲಿ ಬೇರೆ ಬೇರೆ ನಿಯಮಗಳು ಅನ್ವಯವಾಗುತ್ತವೆ.

Property Rights

ಹೀಗಿರುವಾಗ ಪಿತ್ರಾರ್ಜಿತ ಆಸ್ತಿ (Inherited property) ಎನ್ನುವ ವಿಚಾರದಲ್ಲಿ ಯಾರಿಗೆ ಪಿತ್ರಾರ್ಜಿತ ಆಸ್ತಿಯ ಮೇಲೆ ನಿಜವಾದ ಹಕ್ಕಿದೆ ಎನ್ನುವ ವಿಚಾರ ಬರುತ್ತದೆ. ಈ ಬಗ್ಗೆ ಇಲ್ಲಿದೆ ಮಾಹಿತಿ!

ಹೊಸ ನಿಯಮ! ಒಬ್ಬ ಸಾಮಾನ್ಯ ವ್ಯಕ್ತಿ ಎಷ್ಟು ಬ್ಯಾಂಕ್ ಅಕೌಂಟ್ ಹೊಂದಿರಬಹುದು ಗೊತ್ತ?

ಪಿತ್ರಾರ್ಜಿತ ಆಸ್ತಿ ಎಂದರೆ ಏನು?

ಹಿಂದೂ ಉತ್ತರಾಧಿಕಾರ ಕಾಯ್ದೆ ಪ್ರಕಾರ ನಾಲ್ಕು ತಲೆಮಾರಿನಿಂದ ಅವಿಭಕ್ತ ಕುಟುಂಬದಿಂದ ಬಂದಿರುವ ಆಸ್ತಿಯನ್ನು ಪಿತ್ರಾರ್ಜಿತ ಆಸ್ತಿ (property) ಎಂದು ಹೇಳಲಾಗುತ್ತದೆ. ಇದು ತಲೆಮಾರಿನಿಂದ ತಲೆಮಾರಿಗೆ ವರ್ಗಾವಣೆ ಆಗುತ್ತದೆ.

ಅಂದ್ರೆ ಮುತ್ತಾತನಿಂದ ತಾತನಿಗೆ, ತಾತನಿಂದ ಮಗನಿಗೆ, ಮಗನಿಂದ ಮೊಮ್ಮಕ್ಕಳಿಗೆ ವರ್ಗಾವಣೆ ಆಗುವುದು. ಪಿತ್ರಾರ್ಜಿತ ಆಸ್ತಿ ಎಷ್ಟೇ ತಲೆಮಾರು ಕಳೆದರೂ ಆ ಆಸ್ತಿಯ ಮೇಲಿನ ಹಕ್ಕು ವಾರಸುದಾರರಿಗೆ ಮಾತ್ರ ಇರುತ್ತದೆ

ಉದಾಹರಣೆಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಮಗನಿಗೆ ಹಕ್ಕು ಇರುತ್ತದೆ, ಆದರೆ ಆ ಮಗ ಮರಣ ಹೊಂದಿದ್ದರೆ ಆ ಆಸ್ತಿಯನ್ನು ಆತನ ಮಗ ಅಥವಾ ಮಗಳು ಬಳಸಿಕೊಳ್ಳಬಹುದು ಹೊರತು ಬೇರೆ ಯಾರು ಆ ಆಸ್ತಿಗೆ ಹಕ್ಕುದಾರರಾಗಿರುವುದಿಲ್ಲ.

ಚಿನ್ನ ಖರೀದಿಗೆ ಹೊಸ ನಿಯಮ, ಆಧಾರ್ ಮತ್ತು ಪ್ಯಾನ್ ಕಾರ್ಡ್ ಇಲ್ಲದೆ ಎಷ್ಟು ಚಿನ್ನ ಖರೀದಿಸಬಹುದು ಗೊತ್ತೇ?

ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಇದೆಯೇ?

Property Rightsಹಿಂದೂ ಉತ್ತರಾಧಿಕಾರಿ ಕಾಯ್ದೆ 2005ರಲ್ಲಿ ತಿದ್ದುಪಡಿಗೊಂಡ (Hindu Inheritance Act amendment) ನಂತರ ಗಂಡು ಮಗುವಿಗೆ ಹೇಗೆ ಹುಟ್ಟಿದ ತಕ್ಷಣವೇ ತಂದೆಯ ಆಸ್ತಿಯಲ್ಲಿ ಪಾಲು (Property Share) ಅಥವಾ ಹಕ್ಕು (Rights) ಇರುತ್ತದೆಯೋ ಅದೇ ರೀತಿ ಹೆಣ್ಣು ಮಗುವಿಗೂ ಕೂಡ ಹುಟ್ಟಿದ ಮರುಘಳಿಗೆಯಿಂದಲೇ ತಂದೆಯ ಆಸ್ತಿಯ ಮೇಲೆ ಹಕ್ಕು ಆರಂಭವಾಗುತ್ತದೆ.

ಈ ಹಕ್ಕನ್ನು ಯಾರು ಪ್ರಶ್ನೆ ಮಾಡುವಂತಿಲ್ಲ, ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡು ಮಗುವಿಗೆ ಹೆಚ್ಚು ಆಸ್ತಿ, ಹೆಣ್ಣು ಮಗುವಿಗೆ ಕಡಿಮೆ ಎನ್ನುವ ಭೇದ ಇಲ್ಲ. ಗಂಡು ಹಾಗೂ ಹೆಣ್ಣು ಮಕ್ಕಳಿಗೆ ಈ ಆಸ್ತಿಯಲ್ಲಿ ಸಮಾನವಾದ ಪಾಲು ಇರುತ್ತದೆ.

ಒಂದು ವೇಳೆ ಗಂಡು ಮಕ್ಕಳು ತನ್ನ ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಪಾಲು ಕೊಡಲು ನಿರಾಕರಿಸಿದರೆ ಅಂಥವರು ನೇರವಾಗಿ ನ್ಯಾಯಾಲಯದ ಮೂಲಕ ತಮ್ಮ ಹಕ್ಕನ್ನು ಪಡೆದುಕೊಳ್ಳಬಹುದು.

ಚಿನ್ನ ಅಸಲಿಯೋ ನಕಲಿಯೋ 5 ನಿಮಿಷದಲ್ಲಿ ಪತ್ತೆ ಮಾಡಿ! ಚಿನ್ನದ ಗುಣಮಟ್ಟ ತಿಳಿಯಿರಿ

ಆದರೆ ಇಲ್ಲಿ ಒಂದು ವಿಷಯವನ್ನು ಗಮನಿಸಬೇಕು, ಕುಟುಂಬದ ಮೂಲದಿಂದ ಬಂದ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಕೇಳಬಹುದೇ ಹೊರತು ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ (freehold property) ಯಾರು ಪಾಲನ್ನು ಕೇಳಲು ಸಾಧ್ಯವಿಲ್ಲ ಅದು ಸ್ವತ: ತಂದೆಯ ನಿರ್ಧಾರವಾಗಿದ್ದು ಯಾರಿಗೆ ಬೇಕಾದರೂ ತಮ್ಮ ಆಸ್ತಿಯನ್ನು ಬರೆದು ಕೊಡಬಹುದು.

Do daughters have a share in inherited property, know who has a right

Our Whatsapp Channel is Live Now 👇

Whatsapp Channel

Related Stories