ಪೋಸ್ಟ್ ಆಫೀಸ್ನಲ್ಲಿ 2 ಲಕ್ಷ ಹಣ ಫಿಕ್ಸೆಡ್ ಇಟ್ಟರೆ ಬರುವ ಬಡ್ಡಿ ಎಷ್ಟು ಗೊತ್ತಾ? ಇಲ್ಲಿದೆ ಲೆಕ್ಕಾಚಾರ
Fixed Deposit : ಪ್ರತಿ ತಿಂಗಳು ಪ್ರೀಮಿಯಂ ಪಾವತಿ ಮಾಡುವ ಅಗತ್ಯವಿಲ್ಲ. ಇಲ್ಲಿ ಇಡುವ FD ಮೇಲೆ 6.19% ನಿಂದ 7.5% ವರೆಗೆ ಬಡ್ಡಿ ಸಿಗುತ್ತದೆ.
Fixed Deposit : ಉಳಿತಾಯ ಯೋಜನೆಗೆ (savings Scheme) ಪೋಸ್ಟ್ ಆಫೀಸ್ ಅತ್ಯುತ್ತಮ ಆಯ್ಕೆಯಾಗಿದೆ, ಸುಮಾರು 13 ರಿಂದ 14 ಉಳಿತಾಯ ಯೋಜನೆಗಳನ್ನು ಪ್ರಸ್ತುತ ವರ್ಷದಲ್ಲಿ ಪೋಸ್ಟ್ ಆಫೀಸ್ ಪರಿಚಯಿಸಿದೆ.
ಯಾವುದೇ ಮಾರುಕಟ್ಟೆ ಅಪಾಯ ಇರುವುದಿಲ್ಲ. ಸರ್ಕಾರ ಬೆಂಬಲಿತ ಕಂಪನಿ ಆಗಿರುವ ಹಿನ್ನೆಲೆಯಲ್ಲಿ ನೀವು ಯಾವುದೇ ಹಿಂಜರಿಕೆ ಇಲ್ಲದೆ ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡಬಹುದು. ಅದರಲ್ಲೂ ಇತ್ತೀಚಿಗೆ ಬಡ್ಡಿ ದರವು ಕೂಡ ಜಾಸ್ತಿಯಾಗಿದ್ದು ನೀವು ಅತ್ಯುತ್ತಮ ರಿಟರ್ನ್ ಪಡೆಯುತ್ತೀರಿ.
ನಿಮ್ಮ ಸ್ವಂತ ಜಾಗವಾದ್ರೂ ಮನೆ ಕಟ್ಟುವುದಕ್ಕೆ ಬೇಕು ಪರ್ಮಿಷನ್; ಸರ್ಕಾರದ ಹೊಸ ರೂಲ್ಸ್
ಅಂಚೆ ಕಚೇರಿಯ ಎಫ್ ಡಿ ಯೋಜನೆ! (Post office fixed deposit scheme)
ಸಾಮಾನ್ಯವಾಗಿ ಬ್ಯಾಂಕುಗಳಲ್ಲಿ ನಾವು ಎಫ್ ಡಿ ಖಾತೆಯನ್ನು ತೆರೆಯುತ್ತೇವೆ. ಆದರೆ ಅಂಚೆ ಕಚೇರಿಯಲ್ಲಿ ನೀವು ಎಫ್ ಡಿ (FD) ಖಾತೆಯನ್ನು ಆರಂಭಿಸಿದರೆ ಅತ್ಯುತ್ತಮ ಬಡ್ಡಿಯನ್ನು ಪಡೆದುಕೊಳ್ಳಬಹುದು.
ನ್ಯಾಷನಲ್ ಸೇವಿಂಗ್ಸ್ ಟೈಮ್ ಡಿಪಾಸಿಟ್ ಸ್ಕೀಮ್! (National Savings time deposit scheme)
ಅಂಚೆ ಕಚೇರಿ ಅತ್ಯುತ್ತಮ ಎಫ್‌ಡಿ ಯೋಜನೆ ಇದಾಗಿದ್ದು, ಇದರಲ್ಲಿ ಒಂದು ಬಾರಿ ಮಾತ್ರ ಹೂಡಿಕೆ ಮಾಡಿದರೆ ಸಾಕು, ಪ್ರತಿ ತಿಂಗಳು ಪ್ರೀಮಿಯಂ ಪಾವತಿ ಮಾಡುವ ಅಗತ್ಯವಿಲ್ಲ. ಇಲ್ಲಿ ಇಡುವ FD ಮೇಲೆ 6.19% ನಿಂದ 7.5% ವರೆಗೆ ಬಡ್ಡಿ ಸಿಗುತ್ತದೆ.
18 ವರ್ಷ ಮೇಲ್ಪಟ್ಟ ಯಾರಾದರೂ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಇನ್ನು ಹತ್ತು ವರ್ಷದ ಒಳಗಿನ ಮಕ್ಕಳ ಹೆಸರಿನಲ್ಲಿ ಹೂಡಿಕೆ ಮಾಡುವುದಾದರೆ ಪಾಲಕರು ಗಾರ್ಡಿಯನ್ ಆಗಿರಬೇಕು.
ಹೊಲಿಗೆ ಮಷೀನ್ ಖರೀದಿಗೆ ಸರ್ಕಾರವೇ ಕೊಡುತ್ತೆ, 15,000 ರೂಪಾಯಿ; ಅರ್ಜಿ ಸಲ್ಲಿಸಿ
2,00,000 FD ಇದ್ದರೆ ಎಷ್ಟು ಸಿಗುತ್ತೆ ರಿಟರ್ನ್?
ಎರಡು ವರ್ಷಗಳ ಅವಧಿಗೆ ಎರಡು ಲಕ್ಷ ರೂಪಾಯಿಗಳನ್ನು ಪೋಸ್ಟ್ ಆಫೀಸ್ನ ಎಫ್ ಡಿ ಯೋಜನೆಯಲ್ಲಿ ಹೂಡಿಕೆ ಮಾಡಿದರೆ 7% ಬಡ್ಡಿದರದಲ್ಲಿ, 2,29,776ಗಳನ್ನು ಹಿಂಪಡೆಯಬಹುದು.
ಅದೇ ನೀವು ಮೂರು ವರ್ಷಗಳ ಅವಧಿಗೆ 2 ಲಕ್ಷ ರೂಪಾಯಿಗಳನ್ನು ಡಿಪಾಸಿಟ್ ಇಡುವುದಾದರೆ 7.1% ಬಡ್ಡಿ ದರದಲ್ಲಿ 2,47, 015 ರೂಪಾಯಿಗಳನ್ನು ಹಿಂಪಡೆಯಬಹುದು.
ಯಾವುದೇ ಬ್ಯಾಂಕ್ ನಲ್ಲಿ ಸಾಲ ತೆಗೆದುಕೊಂಡವರಿಗೆ ರಾತ್ರೋ-ರಾತ್ರಿ ಭರ್ಜರಿ ಸುದ್ದಿ!
ಇನ್ನು ಐದು ವರ್ಷಗಳ ಅವಧಿಗೆ 2 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ, ಸಿಗುವ ಬಡ್ಡಿ 7.5%. ಹಾಗೂ ನೀವು ಹಿಂಪಡೆಯುವ ಮೊತ್ತ 2,89,990 ರೂಪಾಯಿಗಳು.
ಈ ರೀತಿ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ಅವಧಿಯನ್ನು ಆಯ್ಕೆ ಮಾಡಿ ಹೂಡಿಕೆ ಮಾಡಿ. ಹೆಚ್ಚಿನ ಮಾಹಿತಿಗಾಗಿ ಅಂಚೆ ಕಚೇರಿಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಥವಾ ಅಂಚೆ ಕಚೇರಿಗೆ ಭೇಟಿ ನೀಡಿ.
ಸ್ಟೇಟ್ ಬ್ಯಾಂಕ್ ಅಕೌಂಟ್ ಇರೋರಿಗೆ ಬೆಳ್ಳಂಬೆಳ್ಳಗೆ ಸಿಹಿ ಸುದ್ದಿ! ಬಂಪರ್ ಕೊಡುಗೆ
Do you know how much interest you get if you keep 2 lakh fixed in post office