ಸ್ಟೇಟ್ ಬ್ಯಾಂಕ್ ಅಕೌಂಟ್ ಇರೋರಿಗೆ ಬೆಳ್ಳಂಬೆಳ್ಳಗೆ ಸಿಹಿ ಸುದ್ದಿ! ಬಂಪರ್ ಕೊಡುಗೆ
SBI Fixed Deposit : ದೇಶದ ಸಾರ್ವಜನಿಕ ವಲಯದ ಬ್ಯಾಂಕ್ಗಳಲ್ಲಿ ಬಹಳ ಫೇಮಸ್ ಆಗಿರುವ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ. ಈ ಬ್ಯಾಂಕ್ ನಲ್ಲಿ ಗ್ರಾಹಕರಿಗೆ ಅನುಕೂಲವಾಗುವ ಬೇರೆ ಬೇರೆ ಹೂಡಿಕೆ (investment) ಯೋಜನೆಗಳನ್ನ ಪರಿಚಯಿಸಲಾಗಿದ್ದು, ಇತ್ತೀಚಿನ ದಿನಗಳಲ್ಲಿ ಈ ಯೋಜನೆಗಳ ಬಡ್ಡಿ ದರವನ್ನು ಕೂಡ ಹೆಚ್ಚಿಸಲಾಗಿದೆ.
ಬೇರೆ ಬೇರೆ ಬ್ಯಾಂಕುಗಳಲ್ಲಿ ಮತ್ತು ಅಂಚೆ ಕಚೇರಿಯಲ್ಲಿ ಇರುವ ಹೂಡಿಕೆ ಯೋಜನೆಗಳಿಗೆ ಹೋಲಿಕೆ ಮಾಡಿದರೆ ಎಸ್ ಬಿ ಐ ನಲ್ಲಿ ಕೊಡುವ ಬಡ್ಡಿದರ ಉಳಿದ ಯೋಜನೆಗಳಿಗಿಂತ ಹೆಚ್ಚಿರುತ್ತದೆ.
ಹರಾಜಿನಲ್ಲಿ ಒಂದೊಳ್ಳೆ ಮನೆ ಖರೀದಿಸಿ! ಕಡಿಮೆ ಬೆಲೆಗೆ ಮನೆ ಖರೀದಿಸಲು ಹೀಗೆ ಮಾಡಿ
ಜೊತೆಗೆ ಹೂಡಿಕೆ ಮಾಡಿದರೆ ಹೂಡಿಕೆಯ ಅವಧಿಯು ಕಡಿಮೆ ಇರುವುದರಿಂದ ನೀವು ಅಲ್ಪಾವಧಿಯಲ್ಲಿ ಹೆಚ್ಚಿನ ಲಾಭಗಳಿಸಲು ಸಾಧ್ಯವಿದೆ. ಉದಾಹರಣೆಗೆ ಒಂದು ಮತ್ತು ಎರಡು ವರ್ಷಗಳ ಅವಧಿಯಲ್ಲಿ ಮೆಚ್ಯೂಡ್ ಆಗುವ ಎಫ್ಡಿ ಯೋಜನೆಗಳನ್ನು ಹೆಚ್ಚಾಗಿ ಎಸ್ಬಿಐ ಬ್ಯಾಂಕ್ ನಲ್ಲಿ ಕಾಣಬಹುದು. ಹಾಗೂ ಇದಕ್ಕೆ ಸಾಮಾನ್ಯ ಗ್ರಾಹಕರಿಗೆ 7.4% ಹಾಗೂ ಹಿರಿಯ ನಾಗರಿಕರಿಗೆ 7.90% ಮಾಡಿಸಲಾಗುತ್ತದೆ.
ಎಸ್ ಬಿ ಐ ಸರ್ವತೋಮುಖ ಎಫ್ ಡಿ ಸ್ಕೀಮ್! (SBI FD scheme)
ಎಸ್ ಬಿ ಐ ನ ಈ ಸ್ಕೀಮ್ ನಲ್ಲಿ ಕನಿಷ್ಠ 15 ಲಕ್ಷ ರೂಪಾಯಿಗಳಿಂದ ಗರಿಷ್ಠ 2 ಕೋಟಿ ರೂಪಾಯಿಗಳವರೆಗೆ ಠೇವಣಿ ಇಡಬಹುದು. ಇನ್ನು ಒಂದು ಅಥವಾ ಎರಡು ವರ್ಷಗಳ ಅವಧಿಗೆ ನೀವು ಎಫ್ ಡಿ ಆಯ್ಕೆ ಮಾಡಿಕೊಳ್ಳಬಹುದು.
ಇದೊಂದು ಕಾರ್ಡ್ ಇರೋ ರೈತರಿಗೆ ಸಿಗಲಿದೆ 3 ಲಕ್ಷ ರೂಪಾಯಿಗಳವರೆಗಿನ ಬೆನಿಫಿಟ್!
ಬಡ್ಡಿ ದರದ ಲೆಕ್ಕಾಚಾರ! (Interest rate calculation)
ಇಲ್ಲಿ ಹಿರಿಯ ನಾಗರಿಕರು ಠೇವಣಿ ಇಟ್ಟರೆ ಒಂದು ವರ್ಷದ ಅವಧಿಯ ಫಿಕ್ಸೆಡ್ ಡಿಪಾಸಿಟ್ ಮೇಲೆ 7.82% ಬಡ್ಡಿ ದರವನ್ನು ಪಡೆಯಬಹುದು. ಎರಡು ವರ್ಷಗಳ ಠೇವಣಿಯ ಮೇಲೆ 8.14% ಬಡ್ಡಿ ದರವನ್ನು ಪಡೆಯಬಹುದು.
ಈ ಎಫ್ ಡಿ ಠೇವಣಿಯಲ್ಲಿ ನೀವು ಗಮನಿಸಬೇಕಾದ ಮುಖ್ಯ ವಿಷಯ ಅಂದ್ರೆ, ಒಮ್ಮೆ ಠೇವಣಿ ಇಟ್ಟ ನಂತರ ಎಫ್ ಡಿ ಮೆಚೂರ್ಡ್ ಆಗುವ ಮೊದಲೇ ಹಣ ಹಿಂಪಡೆಯಲು ಬಯಸಿದರೆ ಯಾವುದೇ ಬಡ್ಡಿದರ ಅಪ್ಲೈ ಆಗೋದಿಲ್ಲ ಜೊತೆಗೆ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
3 ಗ್ಯಾಸ್ ಸಿಲಿಂಡರ್ ಉಚಿತ! ರೇಷನ್ ಕಾರ್ಡ್ ಇರೋರಿಗೆ ಭರ್ಜರಿ ಗುಡ್ ನ್ಯೂಸ್
ಕೆಲಸದಿಂದ ನಿವೃತ್ತಿ ಪಡೆದುಕೊಂಡ ನಂತರ ದೊಡ್ಡ ಮೊತ್ತದ ಹಣವನ್ನು ಹೂಡಿಕೆ ಮಾಡುವ ಹಿರಿಯ ನಾಗರಿಕರಿಗೆ ಈ ಪ್ಲಾನ್ ಹೆಚ್ಚು ಪ್ರಯೋಜನಕಾರಿ ಆಗಲಿದೆ. ಅಲ್ಪಾವದಿಯವರಿಗೆ ಹೂಡಿಕೆ ಮಾಡಿ ನಂತರ ಹಣ ಹಿಂಪಡೆದರೆ ದುಪ್ಪಟ್ಟು ರಿಟರ್ನ್ ಗಳಿಸಬಹುದು. ಹೆಚ್ಚಿನ ಮಾಹಿತಿಗಾಗಿ ಎಸ್ ಬಿ ಐ ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
A bumper offer for State Bank Account Holders