3 ಗ್ಯಾಸ್ ಸಿಲಿಂಡರ್ ಉಚಿತ! ರೇಷನ್ ಕಾರ್ಡ್ ಇರೋರಿಗೆ ಭರ್ಜರಿ ಗುಡ್ ನ್ಯೂಸ್

ಸರ್ಕಾರ ಮಹಿಳೆಯರಿಗೆ ಉಚಿತ ಗ್ಯಾಸ್ ಕನೆಕ್ಷನ್ (Free Gas Connection), ಗ್ಯಾಸ್ ಸ್ಟವ್ (Gas Stove), ಸಿಲಿಂಡರ್ (Gas Cylinder) ಮೊದಲಾದ ಸೌಲತ್ತನ್ನೂ ಒದಗಿಸುತ್ತಿದೆ

Bengaluru, Karnataka, India
Edited By: Satish Raj Goravigere

2016ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರ ನೇತೃತ್ವದ ಕೇಂದ್ರ ಸರ್ಕಾರ (Central government) ಜಾರಿಗೆ ತಂದಿರುವ ಪ್ರಧಾನಮಂತ್ರಿ ಉಜ್ವಲ ಯೋಜನೆ (pradhanmantri Ujjwala Yojana) ನಿಜಕ್ಕೂ ದೊಡ್ಡ ಕ್ರಾಂತಿಯನ್ನೇ ಉಂಟುಮಾಡಿದೆ ಎನ್ನಬಹುದು. ಲಕ್ಷಾಂತರ ಕುಟುಂಬಗಳು ಕಷ್ಟಪಟ್ಟು ಸೌದೆ ಒಲೆ ಉರಿಸಿ ಅಡುಗೆ ಮಾಡುವ ಸಮಸ್ಯೆಯಿಂದ ಉಜ್ವಲ ಯೋಜನೆ ಶಾಶ್ವತ ಪರಿಹಾರ ನೀಡಿದೆ.

ಹೌದು, ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಉಚಿತ ಗ್ಯಾಸ್ ಕನೆಕ್ಷನ್ (Free Gas Connection), ಗ್ಯಾಸ್ ಸ್ಟವ್ (Gas Stove), ಸಿಲಿಂಡರ್ (Gas Cylinder) ಮೊದಲಾದ ಸೌಲತ್ತನ್ನೂ ಒದಗಿಸುತ್ತಿದೆ.

3 gas cylinder free, Great news for ration card Holders

ಕೇವಲ 2% ಬಡ್ಡಿಗೆ ಪಡೆದುಕೊಳ್ಳಿ ಹೋಂ ಲೋನ್; ಸ್ವಂತ ಮನೆ ಕಟ್ಟೋಕೆ ಬಂಪರ್ ಕೊಡುಗೆ

9 ಕೋಟಿಗೂ ಹೆಚ್ಚಿನ ಮಹಿಳಾ ಫಲಾನುಭವಿಗಳು!

ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರು ಉಜ್ವಲ ಯೋಜನೆಯ ಜಾರಿಗೆ ತಂದ ನಂತರ ಸುಮಾರು 9 ಕೋಟಿ ಹೆಚ್ಚಿನ ಮಹಿಳಾ ಫಲಾನುಭವಿಗಳು ಈ ಯೋಜನೆಯ ಅಡಿಯಲ್ಲಿ ಉಚಿತ ಗ್ಯಾಸ್ ಸಿಲೆಂಡರ್ ಪಡೆದುಕೊಂಡಿದ್ದಾರೆ.

ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0 ಇದೀಗ ಚಾಲ್ತಿಯಲ್ಲಿ ಇದ್ದು ಉಚಿತ ಗ್ಯಾಸ್ ಕನೆಕ್ಷನ್ ಜೊತೆಗೆ 300 ರೂಪಾಯಿಗಳ ಸಬ್ಸಿಡಿಯನ್ನು ಗ್ಯಾಸ್ ಸಿಲಿಂಡರ್ (subsidy gas cylinder) ಗೆ ನೀಡಲಾಗುವುದು, ಅಂದರೆ ಕೇವಲ 603 ರೂಪಾಯಿಗಳನ್ನು ಪ್ರತಿ ಸಿಲಿಂಡರ್ ಗೆ ಪಾವತಿ ಮಾಡಿದ್ರೆ ಸಾಕು. ಆದರೆ ವರ್ಷದಲ್ಲಿ 12 ಸಿಲೆಂಡರ್ ಪಡೆದುಕೊಳ್ಳುವವರಿಗೆ ಮಾತ್ರ ಈ ಸಬ್ಸಿಡಿ ಸಿಗುತ್ತದೆ ಅದಕ್ಕಿಂತ ಹೆಚ್ಚಿಗೆ ಸಿಲಿಂಡರ್ ಖರೀದಿ ಮಾಡಿದ್ರೆ ಸಬ್ಸಿಡಿ ಹಣ ಸಿಗುವುದಿಲ್ಲ.

ಕೆನರಾ ಬ್ಯಾಂಕ್ ಅಕೌಂಟ್ ಇದ್ದು ಸ್ವಂತ ಮನೆ ಕಟ್ಟೋರಿಗೆ ಸಿಗಲಿದೆ ಕಡಿಮೆ ಬಡ್ಡಿಗೆ ಹೋಂ ಲೋನ್

ಇಂಥವರಿಗೆ ಸಿಗುತ್ತೆ ಮೂರು ಗ್ಯಾಸ್ ಸಿಲೆಂಡರ್! (Free gas cylinder)

ಇಂದಿನ ಏರುತ್ತಿರುವ ಬೆಲೆಯ ನಡುವೆ ಗ್ಯಾಸ ಸಿಲೆಂಡರ್ ಗೆ 300 ಗಳ ಸಬ್ಸಿಡಿಯನ್ನು ಘೋಷಿಸಲಾಗಿದೆ. ಇದರ ಜೊತೆಗೆ ಈಗ ರೇಷನ್ ಕಾರ್ಡ್ (Ration Card) ಹೊಂದಿರುವ ಮಹಿಳೆಯರಿಗೆ 3 ಗ್ಯಾಸ್ ಸಿಲಿಂಡರ್ ಉಚಿತವಾಗಿ ಸಿಗಲಿದೆ.

Gas Cylinder subsidyಯಾರಿಗೆ ಸಿಗುತ್ತೆ ಮೂರು ಗ್ಯಾಸ್ ಸಿಲೆಂಡರ್?

* ಅರ್ಜಿದಾರರು ಮಹಿಳೆಯರೇ ಆಗಿರಬೇಕು
* 18 ವರ್ಷ ಮೇಲ್ಪಟ್ಟ ಭಾರತೀಯ ನಿವಾಸಿಗಳೇ ಆಗಿರಬೇಕು
* ಬಡತನ ರೇಖೆಗಿಂತ ಕೆಳಗಿನ ಕುಟುಂಬದವರಾಗಿದ್ದು ಬಿಪಿಎಲ್ ರೇಷನ್ ಕಾರ್ಡ್ ಹೊಂದಿರಬೇಕು
* ಗ್ರಾಮೀಣ ಪ್ರದೇಶದಲ್ಲಿ ವಾಸಿಸುವವರ ಕುಟುಂಬದ ವಾರ್ಷಿಕ ವರಮಾನ ಒಂದು ಲಕ್ಷ ರೂಪಾಯಿಗಳಿಗಿಂತ ಕಡಿಮೆ ಹಾಗೂ ನಗರ ಭಾಗದಲ್ಲಿ ವಾಸಿಸುವ ಕುಟುಂಬದವಾರ್ಷಿಕ ವರಮಾನ ಎರಡು ಲಕ್ಷ ರೂಪಾಯಿಗಳಿಗಿಂತ ಕಡಿಮೆ ಇರಬೇಕು.
* ಈ ಹಿಂದೆ ಯಾವುದೇ ಗ್ಯಾಸ್ ಕನೆಕ್ಷನ್ ಹೊಂದಿರಬಾರದು.

ನಿಮ್ಮ ಆಧಾರ್ ಕಾರ್ಡ್ ಫೋಟೋ ಚೆನ್ನಾಗಿಲ್ವಾ? ಈ ರೀತಿ ಸುಲಭವಾಗಿ ಬದಲಾಯಿಸಿಕೊಳ್ಳಿ

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು (documents)

* ಬಿಪಿಎಲ್ ರೇಷನ್ ಕಾರ್ಡ್
* ಆದಾಯ ಪ್ರಮಾಣ ಪತ್ರ
* ಅಡ್ರೆಸ್ ಪ್ರೂಫ್
* ಆಧಾರ್ ಕಾರ್ಡ್
* ವೋಟರ್ ಐಡಿ
* ಬ್ಯಾಂಕ್ ಖಾತೆ ವಿವರ
* ಪಾಸ್ ಪೋರ್ಟ್ ಅಳತೆಯ ಫೋಟೋ

ಪ್ಯಾನ್ ಕಾರ್ಡ್ ನಲ್ಲಿ ಹೆಸರು ವಿಳಾಸ ಮೊಬೈಲ್ ನಂಬರ್ ಬದಲಾಯಿಸುವುದು ಹೇಗೆ? ಇಲ್ಲಿದೆ ಮಾಹಿತಿ

ಈ ಎಲ್ಲಾ ದಾಖಲೆಗಳನ್ನು ನೀಡಿ ಒಂದಲ್ಲ ಎರಡಲ್ಲ ಮೂರು ಉಚಿತ ಗ್ಯಾಸ್ ಸಿಲಿಂಡರ್ ಪಡೆದುಕೊಳ್ಳಲು ಸಾಧ್ಯವಿದೆ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಗ್ಯಾಸ್ ವಿತರಕರನ್ನು ಸಂಪರ್ಕಿಸಬಹುದು.

3 gas cylinder free, Great news for ration card Holders