ನಿಮ್ಮ ಆಧಾರ್ ಕಾರ್ಡ್ ಫೋಟೋ ಚೆನ್ನಾಗಿಲ್ವಾ? ಈ ರೀತಿ ಸುಲಭವಾಗಿ ಬದಲಾಯಿಸಿಕೊಳ್ಳಿ

Story Highlights

ಆಧಾರ್ ಕಾರ್ಡ್ ನಲ್ಲಿ ಇರುವ ನಿಮ್ಮ ಫೋಟೋವೇ ನಿಮಗೆ ಇಷ್ಟವಾಗುತ್ತಿಲ್ಲ ಎಂದಾದರೆ ಅದನ್ನು ಬದಲಾಯಿಸಲು ಅವಕಾಶ ಇದೆ

ಭಾರತೀಯ ಪ್ರತಿಯೊಬ್ಬ ನಾಗರಿಕರ ಬಳಿ ವೋಟರ್ ಐಡಿ (voter ID) ಇರುವುದು ಎಷ್ಟು ಸಾಮಾನ್ಯವೋ ಅದೇ ರೀತಿ ಆಧಾರ್ ಕಾರ್ಡ್ (Aadhaar card) ಕೂಡ ಬಹಳ ಮುಖ್ಯವಾಗಿರುವ ದಾಖಲೆಯಾಗಿದೆ.

ಇನ್ನು ಆಧಾರ್ ಕಾರ್ಡ್ ನಲ್ಲಿ ನಿಮಗೆ ಹೆಸರು, ವಿಳಾಸ, ಲಿಂಗ, ಹುಟ್ಟಿದ ದಿನಾಂಕ ಎಲ್ಲಾ ರೀತಿಯ ಬದಲಾವಣೆಗಳನ್ನು ಮಾಡಿಕೊಳ್ಳಲು ಅವಕಾಶ ಇದೆ ಅದರಲ್ಲೂ ಸರ್ಕಾರ ಆಧಾರ್ ಕಾರ್ಡ್ ಅಪ್ಡೇಟ್ಗೆ ಜೂನ್ 14 2024ರ ವರೆಗೆ ಅವಕಾಶ ಕೊಟ್ಟಿದೆ.

ಪ್ಯಾನ್ ಕಾರ್ಡ್ ನಲ್ಲಿ ಹೆಸರು ವಿಳಾಸ ಮೊಬೈಲ್ ನಂಬರ್ ಬದಲಾಯಿಸುವುದು ಹೇಗೆ? ಇಲ್ಲಿದೆ ಮಾಹಿತಿ

ಆಧಾರ್ ಕಾರ್ಡ್ ನಲ್ಲಿ ಬೇರೆ ಎಲ್ಲ ರೀತಿಯ ಬದಲಾವಣೆಗಳನ್ನು ಮಾಡಿಕೊಳ್ಳಬಹುದು. ಎರಡು ಬಾರಿ ಹೆಸರು ಬದಲಾವಣೆಗೆ ಅವಕಾಶ ಇದೆ ವಿಳಾಸವನ್ನ ಎಷ್ಟು ಬಾರಿ ಬೇಕಾದರೂ ಬದಲಾಯಿಸಬಹುದು, ಜನ್ಮ ದಿನಾಂಕವನ್ನು ಎರಡು ಬಾರಿ ಹಾಗೂ ಲಿಂಗವನ್ನು ಒಂದು ಬಾರಿ ಮಾತ್ರ ಬದಲಾಯಿಸಲು ಅವಕಾಶ ಇದೆ.

ಇದೆಲ್ಲದರ ಜೊತೆಗೆ ಆಧಾರ್ ಕಾರ್ಡ್ ನಲ್ಲಿ ನಿಮ್ಮ ಫೋಟೋವನ್ನು ಕೂಡ ಬದಲಾಯಿಸಬಹುದು ಎನ್ನುವುದು ನಿಮಗೆ ಗೊತ್ತಾ?

ಆಧಾರ್ ಕಾರ್ಡ್ ಫೋಟೋ ಬದಲಾಯಿಸಿ (change your Aadhar Card photo)

ಹೌದು, ಆಧಾರ್ ಕಾರ್ಡ್ ನಲ್ಲಿ ಇರುವ ನಿಮ್ಮ ಫೋಟೋವೇ ನಿಮಗೆ ಇಷ್ಟವಾಗುತ್ತಿಲ್ಲ ಎಂದಾದರೆ ಅದನ್ನು ಬದಲಾಯಿಸಲು ಅವಕಾಶ ಇದೆ, ನಿಮ್ಮ ಆಧಾರ್ ಕಾರ್ಡ್ ನಲ್ಲಿ ಇರುವ ಹಳೆಯ ಫೋಟೋವನ್ನು ಡಿಲೀಟ್ ಮಾಡಿ ಹೊಸ ಫೋಟೋ ಅಪ್ಲೋಡ್ ಮಾಡಿಕೊಳ್ಳಬಹುದು. ಇದನ್ನ ಯಾವ ರೀತಿ ಮಾಡಬಹುದು ಎಂಬುದನ್ನು ನೋಡೋಣ.

ಮಹಿಳೆಯರಿಗೆ 30 ಸಾವಿರ ಬಡ್ಡಿಯೇ ಸಿಗಲಿದೆ! ಈ ಯೋಜನೆಗೆ ಮೊದಲು ಅರ್ಜಿ ಸಲ್ಲಿಸಿ

Aadhaar Cardಮನೆಯಿಂದ ಫೋಟೋ ಬದಲಾಯಿಸಬಹುದೆ?

ಆಧಾರ್ ಕಾರ್ಡ್ ಗೆ ಸಂಬಂಧಪಟ್ಟಂತೆ ಬೇರೆ ಎಲ್ಲ ರೀತಿಯ ಬದಲಾವಣೆಗಳನ್ನು ಮಾಡಿಕೊಳ್ಳಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ತನ್ನದೇ ವೆಬ್ಸೈಟ್ನಲ್ಲಿ ಅವಕಾಶ ನೀಡಿದೆ. ಆದರೆ ನಿಮ್ಮ ಫೋಟೋವನ್ನು ನೀವು ಮನೆಯಲ್ಲಿಯೇ ಕುಳಿತು ಮಾಡಿಕೊಳ್ಳಲು ಸಾಧ್ಯವಿಲ್ಲ. ಅ

ದನ್ನು ಆಧಾರ್ ಕೇಂದ್ರಕ್ಕೆ ಹೋಗಿ ಅಲ್ಲಿ ಇನ್ನೊಂದು ಫೋಟೋವನ್ನ ತೆಗೆಸಿ ನಂತರ ಬದಲಾವಣೆ ಮಾಡಿಕೊಳ್ಳಬಹುದು. ಆದರೆ ಫೋಟೋ ಬದಲಾವಣೆಗೆ ನೀವು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಸ್ಲಾಟ್ ಬುಕ್ ಮಾಡಿಕೊಂಡು ಆಧಾರ್ ಕಾರ್ಡ್ ಕೇಂದ್ರಕ್ಕೆ ಹೋದರೆ ನಿಮ್ಮ ಕೆಲಸ ಬೇಗ ಆಗುತ್ತದೆ.

ಉಚಿತ ಮನೆ ಭಾಗ್ಯ! ಸ್ವಂತ ಮನೆ ಇಲ್ಲದವರಿಗೆ ವಸತಿ ಯೋಜನೆ; ಇಲ್ಲಿದೆ ಮಾಹಿತಿ

ಅರ್ಜಿ ಫಾರ್ಮ್ ಡೌನ್ಲೋಡ್ ಮಾಡಿಕೊಳ್ಳಿ (download application form )

ಇದಕ್ಕಾಗಿ ನೀವು ಯುಐಡಿಎಐ (uidai.gov.in) ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ. ನಂತರ ನಿಮ್ಮ ಆಧಾರ್ ಸಂಖ್ಯೆಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಗೆ ಓಟಿಪಿ ಕಳುಹಿಸಲಾಗುತ್ತದೆ ಅದನ್ನ ನಮೂದಿಸಿದರೆ, ನೀವು ಆಧಾರ್ ಕಾರ್ಡ್ ಫೋಟೋ ಬದಲಾವಣೆಗೆ ಫಾರ್ಮ್ ಪಡೆಯುತ್ತೀರಿ ಅದನ್ನು ಡೌನ್ಲೋಡ್ ಮಾಡಿಕೊಂಡು, ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ.

ಭರ್ತಿ ಮಾಡಿದ ಆಧಾರ್ ಕಾರ್ಡ್ ಅರ್ಜಿಯನ್ನು ಹತ್ತಿರದ ಆಧಾರ್ ಕೇಂದ್ರಕ್ಕೆ ತೆಗೆದುಕೊಂಡು ಹೋಗಿ ನಂತರ ಅಲ್ಲಿ ಬಯೋಮೆಟ್ರಿಕ್ (biometric) ವಿವರಗಳನ್ನು ನೀಡಬೇಕಾಗುತ್ತದೆ.

ಸರ್ಕಾರದ ಈ ಯೋಜನೆಗಳಲ್ಲಿ ಸಿಗಲಿದೆ ಯಾವುದೇ ಬಡ್ಡಿ ಇಲ್ಲದೆ ಸಾಲ! ಬಂಪರ್ ಅವಕಾಶ

ಬಳಿಕ ನಿಮ್ಮ ಫೋಟೋ ಅಪ್ಡೇಟ್ ಮಾಡಿಕೊಳ್ಳಬಹುದು. ಇದಕ್ಕೆ ನೂರು ರೂಪಾಯಿಗಳ ಶುಲ್ಕ ಪಾವತಿಸಬೇಕು. ಫೋಟೋ ಅಪ್ಡೇಟ್ ಆದ ಬಳಿಕ ನಿಮ್ಮ ಆಧಾರ್ ಕಾರ್ಡನ್ನು ನೀವು ಆನ್ಲೈನ್ ನಲ್ಲಿಯೂ ಡೌನ್ಲೋಡ್ (Download) ಮಾಡಿಕೊಳ್ಳಲು ಅವಕಾಶ ಇದೆ.

Change Aadhaar card photo online, here is the information

Related Stories