ಮಹಿಳೆಯರಿಗೆ 30 ಸಾವಿರ ಬಡ್ಡಿಯೇ ಸಿಗಲಿದೆ! ಈ ಯೋಜನೆಗೆ ಮೊದಲು ಅರ್ಜಿ ಸಲ್ಲಿಸಿ
ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಮಹಿಳೆಯರು ಹಣಕ್ಕಾಗಿ ಯಾವತ್ತೂ ಕಷ್ಟಪಡಬೇಕಾಗಿಲ್ಲ!
ಮಹಿಳೆಯರ ಸಬಲೀಕರಣಕ್ಕಾಗಿ ಅವರ ಆರ್ಥಿಕ ಸಮಸ್ಯೆಯನ್ನು ದೂರ ಮಾಡಿ ಆರಾಮದಾಯಕ ಜೀವನ ನಡೆಸುವಂತೆ ಮಾಡಲು ಕೇಂದ್ರ ಸರ್ಕಾರ ಇವತ್ತಿನವರೆಗೂ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಇತ್ತೀಚಿನ ದಿನಗಳಲ್ಲಿ ರಾಜ್ಯ ಸರ್ಕಾರವು ಕೂಡ ಮಹಿಳಾ ಕೇಂದ್ರಿತ ಯೋಜನೆಗಳನ್ನು ಹೆಚ್ಚು ಪರಿಚಯಿಸಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
ಪ್ರಧಾನ ಮಂತ್ರಿ ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್ (pradhanmantri Mahila Samman saving certificate)
ಮಹಿಳೆಯರು ಎಷ್ಟು ಸಾಧ್ಯವೊ ಅಷ್ಟು ಹಣವನ್ನು ಉಳಿತಾಯ ಮಾಡಿ ಮಹಿಳಾ ಸಮ್ಮಾನ್ ಸೇವಿಂಗ್ ನಲ್ಲಿ ಹೂಡಿಕೆ ಮಾಡುತ್ತಾ ಬಂದರೆ ಉತ್ತಮ ಆದಾಯ (income) ವನ್ನು ಪಡೆದುಕೊಳ್ಳಬಹುದು.
ಉಚಿತ ಮನೆ ಭಾಗ್ಯ! ಸ್ವಂತ ಮನೆ ಇಲ್ಲದವರಿಗೆ ವಸತಿ ಯೋಜನೆ; ಇಲ್ಲಿದೆ ಮಾಹಿತಿ
ಅಲ್ಪಾವಧಿಯಲ್ಲಿ ಅತಿ ಕಡಿಮೆ ಹೂಡಿಕೆ ಮಾಡಿ ಹೆಚ್ಚು ಬಡ್ಡಿ ದರವನ್ನು ಪಡೆದುಕೊಳ್ಳಲು ಮಹಿಳೆಯರು ಅಂಚೆ ಕಚೇರಿಯ ಈ ಯೋಜನೆಯಲ್ಲಿ (Post Office Scheme) ಹೂಡಿಕೆ ಮಾಡಬೇಕು. ಮಹಿಳೆಯರು ಈ ಯೋಜನೆಯಡಿಯಲ್ಲಿ 7.5% ಬಡ್ಡಿದರವನ್ನು ಪಡೆದುಕೊಳ್ಳಬಹುದು.
ಎಷ್ಟು ಹೂಡಿಕೆ ಮಾಡಬೇಕು?
2023ರಲ್ಲಿ ಜಾರಿಗೆ ಬಂದ ಈ ಯೋಜನೆ ಅತಿ ಸಣ್ಣ ಹೂಡಿಕೆಗೆ ಹೇಳಿ ಮಾಡಿಸಿದಂತಹ ಯೋಜನೆಯಾಗಿದೆ ಕೇವಲ ಎರಡು ವರ್ಷಗಳ ಅವಧಿಗೆ ನೀವು ಎರಡು ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ 7.5% ಬಡ್ಡಿದರ ನೀಡಲಾಗುತ್ತದೆ.
ಸರ್ಕಾರದ ಈ ಯೋಜನೆಗಳಲ್ಲಿ ಸಿಗಲಿದೆ ಯಾವುದೇ ಬಡ್ಡಿ ಇಲ್ಲದೆ ಸಾಲ! ಬಂಪರ್ ಅವಕಾಶ
10 ವರ್ಷದ ಒಳಗಿನ ಹೆಣ್ಣು ಮಕ್ಕಳ ಹೆಸರಿನಲ್ಲಿ ಖಾತೆ ಆರಂಭಿಸಿ!
ಈ ಯೋಜನೆಯ ಅಡಿಯಲ್ಲಿ ಗರಿಷ್ಠ ಎರಡು ಲಕ್ಷ ರೂಪಾಯಿಗಳನ್ನು ಹೂಡಿಕೆ (Investment) ಮಾಡಿದರೆ ಆದಾಯ ತೆರಿಗೆ 80 c ಅಡಿಯಲ್ಲಿ ತೆರಿಗೆ ವಿನಾಯಿತಿ ಕೂಡ ಸಿಗುತ್ತದೆ. ಹತ್ತು ವರ್ಷಕ್ಕಿಂತ ಕೆಳಗಿನ ವಯಸ್ಸಿನ ಹೆಣ್ಣು ಮಕ್ಕಳ ಹೆಸರಿನಲ್ಲಿ ಖಾತೆ ಆರಂಭಿಸಬಹುದು ಇದಕ್ಕೆ ಪಾಲಕರು ಗಾರ್ಡಿಯನ್ ಆಗಿರುತ್ತಾರೆ.
ಈ ಟಗರು ಸಾಕಾಣಿಕೆ ಮಾಡಿದ್ರೆ ತಿಂಗಳಿಗೆ 60 ಸಾವಿರಕ್ಕೂ ಹೆಚ್ಚಿನ ಆದಾಯ ಗ್ಯಾರಂಟಿ
2 ಲಕ್ಷ ಹೂಡಿಕೆಯಿಂದ ಪಡೆಯಿರಿ 30,000 ಬಡ್ಡಿ!
ಎರಡು ವರ್ಷಗಳ ಅವಧಿಗೆ ನೀವು ಎರಡು ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ ವಾರ್ಷಿಕ 7.5% ಬಡ್ಡಿಯನ್ನು ಪಡೆದುಕೊಳ್ಳಬಹುದು. ಇಲ್ಲಿ ಮೊದಲ ವರ್ಷ 15,000 ಮತ್ತು ಎರಡನೇ ವರ್ಷ 16,125 ಬಡ್ಡಿ ಪಡೆಯುತ್ತೀರಿ. ಹೀಗಾಗಿ ಅವಧಿ ಮುಗಿಯುವ ಹೊತ್ತಿಗೆ ನಿಮ್ಮ ಹೂಡಿಕೆಗೆ 31,125 ಗಳ ಬಡ್ಡಿಯನ್ನು ಪಡೆಯುತ್ತೀರಿ.
ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ ಆಧಾರ್ ಕಾರ್ಡ್, ಗುರುತಿನ ಪ್ರಮಾಣ ಪತ್ರ ಮೊದಲಾದ ದಾಖಲೆಗಳನ್ನು ನೀಡಿ ನಿಮ್ಮ ಖಾತೆಯನ್ನು ಆರಂಭಿಸಿ.
ಕುರಿ ಕೋಳಿ ಸಾಕಾಣಿಕೆ ಮಾಡೋರಿಗೆ ಸಿಗಲಿದೆ 30 ಲಕ್ಷ ಸಾಲ ಸೌಲಭ್ಯ! ಇಂದೇ ಅಪ್ಲೈ ಮಾಡಿ
PM Mahila Samman saving certificate Details and Benefits