ಸರ್ಕಾರದ ಈ ಯೋಜನೆಗಳಲ್ಲಿ ಸಿಗಲಿದೆ ಯಾವುದೇ ಬಡ್ಡಿ ಇಲ್ಲದೆ ಸಾಲ! ಬಂಪರ್ ಅವಕಾಶ
Loan : ನೀವು ಸ್ವಂತ ಬಿಸಿನೆಸ್ (own business) ಮಾಡಬೇಕು ಅಂದುಕೊಂಡಿದ್ದೀರಾ? ಅದಕ್ಕೆ ತಕ್ಕದಾದ ಬಂಡವಾಳ ಇಲ್ಲ ಅಂತ ಯೋಚನೆ ಆಗ್ತಿದ್ಯಾ? ಹಾಗಾದ್ರೆ ಚಿಂತೆ ಬೇಡ ಕೇಂದ್ರ ಸರ್ಕಾರ ಸ್ವಂತ ಉದ್ಯಮ ಮಾಡುವವರಿಗಾಗಿಯೇ ಪ್ರಮುಖ ಯೋಜನೆಗಳನ್ನು ಜಾರಿಗೆ ತಂದಿದೆ
ಇದರ ಲಾಭವನ್ನು ಪಡೆದುಕೊಂಡು ಸ್ವಂತ ಉದ್ಯಮ ಮಾಡಿ ಕೈ ತುಂಬಾ ಆದಾಯ ಗಳಿಸಲು ಸಾಧ್ಯ. ಹಾಗಾದ್ರೆ ಅಂತಹ ಯೋಜನೆಗಳು ಯಾವವು ಅದರಿಂದ ಏನೆಲ್ಲಾ ಬೆನಿಫಿಟ್ಸ್ ಇದೆ ಎಂಬುದನ್ನು ನೋಡೋಣ.
ಈ ಟಗರು ಸಾಕಾಣಿಕೆ ಮಾಡಿದ್ರೆ ತಿಂಗಳಿಗೆ 60 ಸಾವಿರಕ್ಕೂ ಹೆಚ್ಚಿನ ಆದಾಯ ಗ್ಯಾರಂಟಿ
* ಪ್ರಧಾನ ಮಂತ್ರಿ ಸ್ವಾನಿಧಿ ಯೋಜನಾ! (Pradhanmantri SVANidhi Yojana)
ಈ ಯೋಜನೆಯ ಅಡಿಯಲ್ಲಿ ಬೀದಿ ಬದಿಯ ವ್ಯಾಪಾರಿಗಳು ಅಥವಾ ಸಣ್ಣಪುಟ್ಟ ವ್ಯವಹಾರ ನಡೆಸುವ ಅಂಗಡಿಯವರು ಯಾವುದೇ ಗ್ಯಾರಂಟಿ ಕೊಡದೆ 50,000ಗಳ ವರೆಗೆ ಸಾಲ ಸೌಲಭ್ಯ (Loan) ಪಡೆಯಬಹುದು. ಮೊದಲ ಕಂತಿನಲ್ಲಿ 10,000ಗಳನ್ನು ನೀಡಲಾಗುವುದು ಅದನ್ನು ಮರುಪಾವತಿ ಮಾಡಿದ ನಂತರ 20,000 ಹಾಗೂ ಅದನ್ನು ಮರುಪಾವತಿ ಮಾಡಿದ ನಂತರ 50,000 ಪಡೆಯಬಹುದಾಗಿದೆ. ನಂತರ ಅಗತ್ಯ ಇದ್ದಲ್ಲಿ ಮತ್ತೆ ಪುನಹ ಸಾಲ ಸೌಲಭ್ಯ ಪಡೆಯಬಹುದು.
* ಪ್ರಧಾನ ಮಂತ್ರಿ ಲಕ್ಪತಿ ದಿದಿ ಯೋಜನೆ! (Pradhanmantri lakhpati didi Yojana)
ಇದು ವಿಶೇಷವಾಗಿ ಮಹಿಳೆಯರಿಗೆ ಮೀಸಲಿರುವ ಯೋಜನೆಯಾಗಿದ್ದು, ಸ್ವಂತ ಉದ್ಯಮ ಮಾಡಲು ಬಯಸುವ ಮಹಿಳೆಯರಿಗೆ ಒಂದು ಲಕ್ಷದಿಂದ ಒಂದು ಕೋಟಿ ರೂಪಾಯಿಗಳವರೆಗೂ ಕೂಡ ಸಾಲ ಪಡೆದುಕೊಳ್ಳಬಹುದು.
ಪ್ರಧಾನ್ ಮಂತ್ರಿ ನರೇಂದ್ರ ಮೋದಿಜಿ ಅವರು 2023 ಆಗಸ್ಟ್ 15 ರಂದು ಈ ಯೋಜನೆಗೆ ಚಾಲನೆ ನೀಡಿದರು. ಕೌಶಲ್ಯ ಅಭಿವೃದ್ಧಿ ತರಬೇತಿ ನೀಡುವ ಮೂಲಕ ಮಹಿಳೆಯರು ಸ್ವಂತ ಉದ್ಯಮ ಮಾಡುವುದಕ್ಕೆ ಈ ಯೋಜನೆಯ ಮೂಲಕ ಸಹಕರಿಸಲಾಗುವುದು.
ಸ್ವಸಹಾಯ ಗುಂಪಿನಲ್ಲಿ ಇರುವ ಮಹಿಳೆಯರು ಸಾಲ ಪಡೆಯಬಹುದು. ಸ್ಥಳೀಯ ಸಹಕಾರಿ ಬ್ಯಾಂಕ್ ಗಳು (Banks) ಅಥವಾ ನ್ಯಾಷನಲೈಸ್ಡ್ ಬ್ಯಾಂಕುಗಳಲ್ಲಿ ಸಾಲ ಪಡೆಯಬಹುದು. 5 ಲಕ್ಷಗಳವರೆಗೆ ಅಡಮಾನ ರಹಿತ ಸಾಲ ನೀಡಲಾಗುವುದು.
ಕುರಿ ಕೋಳಿ ಸಾಕಾಣಿಕೆ ಮಾಡೋರಿಗೆ ಸಿಗಲಿದೆ 30 ಲಕ್ಷ ಸಾಲ ಸೌಲಭ್ಯ! ಇಂದೇ ಅಪ್ಲೈ ಮಾಡಿ
* ಪ್ರಧಾನ ಮಂತ್ರಿ ಮುದ್ರಾ ಯೋಜನೆ (pradhanmantri mudra Yojana)
ಸ್ವಂತ ಉದ್ಯಮ ಮಾಡಲು ಬಯಸುವ ಯುವಕ ಯುವತಿಯರು ಮುದ್ರಾ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು. ಪುರುಷರಿಗೆ ಹೋಲಿಕೆ ಮಾಡಿದರೆ ಈ ಯೋಜನೆ ಅಡಿಯಲ್ಲಿ 40% ನಷ್ಟು ಹೆಚ್ಚು ಮಹಿಳೆಯರೇ ಸಾಲ ಸೌಲಭ್ಯ ಪಡೆದುಕೊಂಡಿರುವುದು ದಾಖಲಾಗಿದೆ. 2015 ರಲ್ಲಿ ಮುದ್ರಾ ಯೋಜನೆ ಆರಂಭಿಸಲಾಯಿತು.
ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಪ್ರತಿ ತಿಂಗಳು ಪಡೆಯಬಹುದು 10,000 ರೂಪಾಯಿ!
ಮೂರು ಹಂತಗಳಲ್ಲಿ ಪ್ರಧಾನ ಮಂತ್ರಿ ಮುದ್ರಾ ಯೋಜನೆ ನೀಡಲಾಗುವುದು.
ಶಿಶು ಸಾಲದ ಅಡಿಯಲ್ಲಿ 50,000, ಕಿಶೋರ ಸಾಲದ ಅಡಿಯಲ್ಲಿ 50,000 ದಿಂದ 5 ಲಕ್ಷ ರೂಪಾಯಿ ಹಾಗೂ ತರುಣ ಸಾಲದ ಅಡಿಯಲ್ಲಿ 5 ಲಕ್ಷದಿಂದ 10 ಲಕ್ಷ ರೂಪಾಯಿಗಳವರೆಗೆ ಸಾಲ ಪಡೆಯಬಹುದು.
ಸಣ್ಣಪುಟ್ಟ ವ್ಯಾಪಾರದಿಂದ ಹಿಡಿದು ದೊಡ್ಡ ಮಟ್ಟದ ಕೈಗಾರಿಕೆ ನಡೆಸುವವರೆಗೆ ಮುದ್ರಾ ಯೋಜನೆ ಅಡಿಯಲ್ಲಿ ಸಾಲ ಸೌಲಭ್ಯ ಕೊಡಲಾಗುವುದು.
ಈ ಮೇಲಿನ ಮೂರು ಕೇಂದ್ರ ಸರ್ಕಾರದ ಯೋಜನೆಗಳಾಗಿದ್ದು ಸ್ವಂತ ಉದ್ಯಮ ಮಾಡಿ ಉತ್ತಮ ಜೀವನ ನಡೆಸಲು ಬಯಸುವವರಿಗೆ ಹೆಚ್ಚು ಅನುಕೂಲವಾಗಿದೆ ಎನ್ನಬಹುದು.
ಸ್ವಂತ ಮನೆ ಇಲ್ಲದವರಿಗೆ ಉಚಿತ ಮನೆ! ಸರ್ಕಾರದ ಈ ಯೋಜನೆಗೆ ಅರ್ಜಿ ಸಲ್ಲಿಸಿ
In these government Schemes, you will get a loan without any interest