ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಪ್ರತಿ ತಿಂಗಳು ಪಡೆಯಬಹುದು 10,000 ರೂಪಾಯಿ!
ಬೇರೆ ಬೇರೆ ಬ್ಯಾಂಕ್ಗಳಲ್ಲಿ ಎಫ್ ಡಿ (FD in banks) ಅಥವಾ ಇತರ ಯೋಜನೆಗಳಲ್ಲಿ ಹೂಡಿಕೆ (Investment) ಮಾಡಿದರೆ ಒಂದಷ್ಟು ಉತ್ತಮ ಇನ್ಕಮ್ ಪಡೆದುಕೊಳ್ಳಬಹುದು.
ಅದೇ ರೀತಿ ಮ್ಯೂಚುವಲ್ ಫಂಡ್ಗಳಲ್ಲಿಯೂ (mutual funds) ಕೂಡ ಹೂಡಿಕೆ ಮಾಡಬಹುದು, ಆದರೆ ಇದು ಮಾರುಕಟ್ಟೆ ಅಪಾಯವನ್ನು ಒಳಗೊಂಡಿರುತ್ತದೆ. ಆದರೆ ನಿಮಗೆ ಯಾವುದೇ ರೀತಿಯ ರಿಸ್ಕ್ ಬೇಡ ಎನ್ನುವುದಾದರೆ ಅಂಚೆ ಕಚೇರಿಯ ಉಳಿತಾಯ ಯೋಜನೆಯನ್ನು (Savings Scheme) ಆಯ್ದುಕೊಳ್ಳುವುದು ಒಳ್ಳೆಯದು.
ಸ್ವಂತ ಮನೆ ಇಲ್ಲದವರಿಗೆ ಉಚಿತ ಮನೆ! ಸರ್ಕಾರದ ಈ ಯೋಜನೆಗೆ ಅರ್ಜಿ ಸಲ್ಲಿಸಿ
ಹೌದು, ಇತ್ತೀಚೆಗೆ ಅಂಚೆ ಕಚೇರಿ (post office) ಅತ್ಯುತ್ತಮ ಇನ್ಕಮ್ ಕೊಡುವಂತಹ ಯೋಜನೆಗಳನ್ನು ಪರಿಚಯಿಸಿದೆ. ಅಲ್ಪ ಅವಧಿಯಿಂದ ಹಿಡಿದು ದೀರ್ಘಾವಧಿಯವರೆಗೆ ನೀವು ಅಂಚೆ ಕಚೇರಿಯ ಬೇರೆ ಬೇರೆ ಪಾಲಿಸಿಗಳಲ್ಲಿ ಹೂಡಿಕೆ ಮಾಡಿ ಉತ್ತಮ ರಿಟರ್ನ್ ಪಡೆದುಕೊಳ್ಳಬಹುದು.
ಅದು ಅಲ್ಲದೆ ಸರ್ಕಾರದ ಬೆಂಬಲದೊಂದಿಗೆ ಪೋಸ್ಟ್ ಆಫೀಸ್ ಯೋಜನೆಗಳನ್ನು ಪರಿಚಯಿಸುವುದರಿಂದ ನಿಮಗೆ ಇಲ್ಲಿ ಹೂಡಿಕೆ ಮಾಡಿದರೆ ಯಾವುದೇ ಮಾರುಕಟ್ಟೆ ಅಪಾಯದ ಭಯ ಇಲ್ಲ.
ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆ (post office monthly income scheme)
Post office monthly income scheme (POMIS) ಇತ್ತೀಚಿನ ದಿನಗಳಲ್ಲಿ ಹೆಚ್ಚು ಫೇಮಸ್ ಆಗಿರುವ ಯೋಜನೆ ಆಗಿದೆ, ಇದರಲ್ಲಿ ನೀವು ಹೂಡಿಕೆ ಮಾಡಿದರೆ ಪ್ರತಿ ತಿಂಗಳು 10 ಸಾವಿರ ರೂಪಾಯಿಗಳ ವರೆಗೆ ಆದಾಯ ಪಡೆಯಬಹುದು.
ಸಾಮಾನ್ಯವಾಗಿ ಎಲ್ಲಾ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಪಿಂಚಣಿ (pension) ದೊರೆಯುವುದಿಲ್ಲ ಹಾಗಾಗಿ ವೃದ್ಧಾಪ್ಯದ ಸಮಯದಲ್ಲಿ ಪಿಂಚಣಿ ಬೇಕು ಎಂದಾದರೆ ಅಂಚೆ ಕಚೇರಿಯ ಈ ಯೋಜನೆಯನ್ನು ಆಯ್ದುಕೊಳ್ಳುವುದು ಒಳ್ಳೆಯದು.
ಕೆನರಾ ಬ್ಯಾಂಕ್ ಅಕೌಂಟ್ ಹೊಂದಿರುವವರಿಗೆ ಸಿಹಿ ಸುದ್ದಿ! ಯುಗಾದಿ ಬಂಪರ್ ಆಫರ್
ಎಷ್ಟು ಹೂಡಿಕೆ ಮಾಡಬೇಕು?
ಉತ್ತಮ ಆದಾಯ ಪಡೆದುಕೊಳ್ಳಲು ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆಯಲ್ಲಿ ಐದು ವರ್ಷಗಳ ಅವಧಿಗೆ ಹೂಡಿಕೆ ಮಾಡಬಹುದು. ಇದು ಅಲ್ಪಾವಧಿಯ ಯೋಜನೆಯಾಗಿದ್ದರು ನೀವು ದೀರ್ಘಾವಧಿಯವರೆಗೆ ವಿಸ್ತರಿಸಿಕೊಳ್ಳುವ ಅವಕಾಶ ಇದೆ.
ಈ ಯೋಜನೆಯಲ್ಲಿ ಗಂಡ ಹೆಂಡತಿ ಜಂಟಿಯಾಗಿ ಖಾತೆ ತೆರೆಯಲು ಅವಕಾಶ ಇದೆ, ಈ ರೀತಿ ಮಾಡುವುದರಿಂದ ಹೆಚ್ಚಿನ ಪಿಂಚಣಿ ಮೊತ್ತವನ್ನು ಪ್ರತಿ ತಿಂಗಳು ಪಡೆಯಬಹುದು.
ಈ ಕಾರ್ಡ್ ಇದ್ರೆ ಸರ್ಕಾರದಿಂದ ಪ್ರತಿ ತಿಂಗಳು ಸಿಗಲಿದೆ 3000 ರೂಪಾಯಿ! ಬಂಪರ್ ಕೊಡುಗೆ
ಒಂದು ಖಾತೆಯಲ್ಲಿ ಎಷ್ಟು ಹೂಡಿಕೆ ಮಾಡಬಹುದು?
ನೀವು ಜಂಟಿ ಖಾತೆಯ ಬದಲು ಏಕ ಖಾತೆಯನ್ನು ತೆರೆದು ಹೂಡಿಕೆ ಮಾಡಲು ಬಯಸಿದರೆ ಒಂಬತ್ತು ಲಕ್ಷ ರೂಪಾಯಿಗಳವರೆಗೆ ಹೂಡಿಕೆ ಮಾಡಬಹುದು. ಅಂದರೆ ಪ್ರತಿ ತಿಂಗಳು 5,500 ಗಳಂತೆ 5 ವರ್ಷ ಹೂಡಿಕೆ ಮಾಡಬೇಕಾಗುತ್ತದೆ. ಅದೇ ರೀತಿ ಜಂಟಿ ಖಾತೆ ತೆರೆದರೆ 15 ಲಕ್ಷ ರೂಪಾಯಿಗಳವರೆಗೆ ಹೂಡಿಕೆ ಮಾಡಲು ಅವಕಾಶ ಇದೆ. 7.4% ಬಡ್ಡಿ ದರದಲ್ಲಿ, ವರ್ಷಕ್ಕೆ ಒಟ್ಟು 1,11,000ಗಳನ್ನು ಬಡ್ಡಿಯಾಗಿ ಪಡೆಯಬಹುದು.
ಅಂಚೆ ಕಚೇರಿಯ ಉಳಿತಾಯ ಯೋಜನೆಗಳಲ್ಲಿ ಮಾಸಿಕ ಆದಾಯ ಯೋಜನೆ ಹೆಚ್ಚು ಪ್ರಚಲಿತವಾಗಿದ್ದು ಇಂದು ಸಾಕಷ್ಟು ಜನ ಈ ಯೋಜನೆಯಡಿಯಲ್ಲಿ ಖಾತೆ ಆರಂಭಿಸಿದ್ದಾರೆ. ನೀವು ಕೂಡ ಹೂಡಿಕೆ ಮಾಡಲು ಬಯಸಿದರೆ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ ಅಥವಾ ಆನ್ಲೈನ್ ನಲ್ಲಿ ಅಂಚೆ ಕಚೇರಿಯ ಅಧಿಕೃತ ವೆಬ್ಸೈಟ್ ಗೆ ಹೋಗಿ ನಿಮ್ಮ ಖಾತೆ ಆರಂಭಿಸಬಹುದು.
ಸ್ವಂತ ಬಿಸಿನೆಸ್ ಮಾಡೋಕೆ ಸರ್ಕಾರವೇ ಕೊಡುತ್ತೆ 50 ಲಕ್ಷ ರೂಪಾಯಿ ಸಾಲ! ಅರ್ಜಿ ಸಲ್ಲಿಸಿ
Get 10,000 rupees per month in this post office scheme