ಪ್ಯಾನ್ ಕಾರ್ಡ್ ನಲ್ಲಿ ಹೆಸರು ವಿಳಾಸ ಮೊಬೈಲ್ ನಂಬರ್ ಬದಲಾಯಿಸುವುದು ಹೇಗೆ? ಇಲ್ಲಿದೆ ಮಾಹಿತಿ
ನೀವು ಪ್ಯಾನ್ ಕಾರ್ಡಿನಲ್ಲಿ ಕೂಡ ನಿಮ್ಮ ಹೆಸರು, ವಿಳಾಸ, ಮೊಬೈಲ್ ನಂಬರ್ ಮೊದಲಾದವುಗಳನ್ನು ಬದಲಾಯಿಸಿಕೊಳ್ಳಬಹುದು.
ಆಧಾರ್ ಕಾರ್ಡ್ (Aadhaar card) ಹೇಗೆ ಭಾರತೀಯ ನಾಗರಿಕರಿಗೆ ಪ್ರಮುಖ ದಾಖಲೆ ಎನಿಸಿದೆಯೋ ಅದೇ ರೀತಿ ಪಾನ್ ಕಾರ್ಡ್ (PAN card) ಕೂಡ ಬಹಳ ಮುಖ್ಯವಾಗಿರುವ ದಾಖಲೆ ಆಗಿದೆ. ಇದು ವೈಯಕ್ತಿಕ ದಾಖಲೆ (personal document) ಆಗಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಕೂಡ ಪಾನ್ ಕಾರ್ಡ್ ಹೊಂದಿರುವುದು ಕಡ್ಡಾಯವಾಗಿದೆ.
ಅದರಲ್ಲೂ ನೀವು ಯಾವುದೇ ತೆರಿಗೆ ಇಲಾಖೆಗೆ ಸಂಬಂಧಪಟ್ಟಂತೆ ತೆರಿಗೆ ಪಾವತಿ (Income Tax payment) ಮಾಡುವುದಿದ್ದರೆ ನಿಮ್ಮ ಬಳಿ ಪ್ಯಾನ್ ಕಾರ್ಡ್ ಇರಲೇಬೇಕು. ಪ್ಯಾನ್ ಕಾರ್ಡ್ ಇಲ್ಲದಿದ್ದರೆ ತೆರಿಗೆ ಪಾವತಿ ಮಾಡಲು ಸಾಧ್ಯವಿಲ್ಲ ಹಾಗೂ ಸಾಕಷ್ಟು ಹಣಕಾಸಿನ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.
ಮಹಿಳೆಯರಿಗೆ 30 ಸಾವಿರ ಬಡ್ಡಿಯೇ ಸಿಗಲಿದೆ! ಈ ಯೋಜನೆಗೆ ಮೊದಲು ಅರ್ಜಿ ಸಲ್ಲಿಸಿ
ಪ್ಯಾನ್ ಕಾರ್ಡ್ ಅಪ್ಡೇಟ್ ಮಾಡಿಸಿ!
ಈಗಾಗಲೇ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲು ಕೊನೆಯ ದಿನಾಂಕ ಜೂನ್ 14 2024 ಎಂದು ಸರ್ಕಾರ ತಿಳಿಸಿದೆ. ಅದೇ ರೀತಿ ನೀವು ಪ್ಯಾನ್ ಕಾರ್ಡಿನಲ್ಲಿ ಕೂಡ ನಿಮ್ಮ ಹೆಸರು, ವಿಳಾಸ, ಮೊಬೈಲ್ ನಂಬರ್ ಮೊದಲಾದವುಗಳನ್ನು ಬದಲಾಯಿಸಿಕೊಳ್ಳಬಹುದು.
ಅಂದರೆ ಯಾವುದೇ ರೀತಿಯ ಸ್ಪೆಲ್ಲಿಂಗ್ ಮಿಸ್ಟೇಕ್ ಇದ್ದರೆ ಸರಿ ಮಾಡಿಸಬಹುದು. ಜೊತೆಗೆ ವಿಳಾಸ ಬದಲಾಗಿದ್ದರೆ ಹೊಸ ವಿಳಾಸವನ್ನು ನಮೂದಿಸಬಹುದು. ಮೊಬೈಲ್ ಸಂಖ್ಯೆ ಹೊಸದಾಗಿ ಸೇರಿಸುವುದಿದ್ದರೆ ಆ ಕೆಲಸವನ್ನು ಮಾಡಬಹುದು. ಈ ರೀತಿ ಬದಲಾವಣೆಗಳನ್ನ ಮಾಡಿಕೊಳ್ಳುವುದು ಬಹಳ ಸುಲಭ ಹೇಗೆ ಎಂಬುದನ್ನ ಈ ಲೇಖನದಲ್ಲಿ ನೋಡೋಣ.
ಉಚಿತ ಮನೆ ಭಾಗ್ಯ! ಸ್ವಂತ ಮನೆ ಇಲ್ಲದವರಿಗೆ ವಸತಿ ಯೋಜನೆ; ಇಲ್ಲಿದೆ ಮಾಹಿತಿ
ಪ್ಯಾನ್ ಕಾರ್ಡ್ ನಲ್ಲಿ ಹೆಸರು ವಿಳಾಸ ಬದಲಾಯಿಸುವುದು ಹೇಗೆ?
ಈ ಟಗರು ಸಾಕಾಣಿಕೆ ಮಾಡಿದ್ರೆ ತಿಂಗಳಿಗೆ 60 ಸಾವಿರಕ್ಕೂ ಹೆಚ್ಚಿನ ಆದಾಯ ಗ್ಯಾರಂಟಿ
* ಪ್ಯಾನ್ ಕಾರ್ಡ್ ನಲ್ಲಿ ಅಗತ್ಯ ಇರುವ ಮಾಹಿತಿಗಳನ್ನು ಬದಲಾಯಿಸಿಕೊಳ್ಳುವುದಿದ್ದರೆ ಅಥವಾ ಅಪ್ಡೇಟ್ ಮಾಡುವುದಿದ್ದರೆ NSDL ಈ ಆಡಳಿತ ವೆಬ್ಸೈಟ್ಗೆ ಭೇಟಿ ನೀಡಬೇಕು.
* ಅಲ್ಲಿ ಸೇವೆಗಳು ಎನ್ನುವ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
* ಈಗ ಡ್ರಾಪ್ ಡೌನ್ ಮೆನು ಕಾಣಿಸುತ್ತದೆ. ಅದರಲ್ಲಿ ಪ್ಯಾನ್ ಎನ್ನುವ ಆಯ್ಕೆ ಮಾಡಿ.
* ಕೆಳಗೆ ಸ್ಕ್ರೋಲ್ ಮಾಡಿದ ನಂತರ ಪ್ಯಾನ್ ಡೇಟ್ ಆದಲ್ಲಿ ಬದಲಾವಣೆಗಳು ಅಥವಾ ತಿದ್ದುಪಡಿಗಳು ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ.
* ಬಳಿಕ ಅನ್ವಯಿಸು ಎಂದು ಕ್ಲಿಕ್ ಮಾಡಬೇಕು.
* ಈಗ ಪ್ಯಾನ್ ಕಾರ್ಡ್ ವಿವರಗಳಲ್ಲಿ ಬದಲಾವಣೆ ಅಥವಾ ತಿದ್ದುಪಡಿಗಾಗಿ ಅರ್ಜಿ ಸಲ್ಲಿಸಬೇಕು.
* ಸರಿಯಾದ ದಾಖಲೆಯನ್ನು ಕೊಟ್ಟು ನಂತರ ಫ್ಯಾನ್ ಸಂಖ್ಯೆಯನ್ನು ಹಾಕಿ.
* ಈಗ ಪ್ಯಾನ್ ಕಾರ್ಡ್ ಮೋಡ್ ಆಯ್ಕೆ ಮಾಡಿಕೊಳ್ಳಬೇಕು..
* ಈಗ ನಿಮ್ಮ ಅರ್ಜಿ ಸಲ್ಲಿಕೆ ಆಗಿರುತ್ತದೆ ನೋಂದಣಿ ಆದ ಬಳಿಕ ಟೋಕನ್ ಸಂಖ್ಯೆಯನ್ನು ನಿಮಗೆ ಕೊಡಲಾಗುತ್ತದೆ.
* ಇಲ್ಲಿ ನೀವು ನಿಮ್ಮ ಹೆಸರು ವಿಳಾಸ ಮೊದಲಾದವುಗಳನ್ನ ತಿದ್ದುಪಡಿ ಮಾಡಿ ನಂತರ ಮುಂದಿನ ಹಂತ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
* ಈಗ ನೀವು ಬದಲಾವಣೆ ಮಾಡಿಕೊಂಡಿರುವ ಹೆಸರು ವಿಳಾಸ ಮೊಬೈಲ್ ಸಂಖ್ಯೆ ಎಲ್ಲವೂ ಸರಿ ಇದೆಯಾ ಎಂದು ಮತ್ತೊಮ್ಮೆ ಚೆಕ್ ಮಾಡಿ. ಈಗ ಅಗತ್ಯ ಇರುವ ಡಾಕ್ಯುಮೆಂಟ್ಗಳನ್ನು ಮಾಡಬೇಕು ಬಳಿಕ ಸಲ್ಲಿಸಿ ಎನ್ನುವ ಬಟನ್ ಕ್ಲಿಕ್ ಮಾಡಿದರೆ ಎಲ್ಲಾ ಬದಲಾವಣೆಗಳು ಆಗಿರುತ್ತವೆ. ಹಾಗೂ ಹೊಸ ಪ್ಯಾನ್ ಕಾರ್ಡ್ ನಿಮ್ಮ ಮನೆಯ ಬಾಗಿಲಿಗೆ ಬರುತ್ತದೆ.
ಸರ್ಕಾರದ ಈ ಯೋಜನೆಗಳಲ್ಲಿ ಸಿಗಲಿದೆ ಯಾವುದೇ ಬಡ್ಡಿ ಇಲ್ಲದೆ ಸಾಲ! ಬಂಪರ್ ಅವಕಾಶ
ಈ ರೀತಿಯಾಗಿ ಪ್ಯಾನ್ ಕಾರ್ಡ್ ಅಪ್ಡೇಟ್ (Pan Card Update) ಮಾಡಿಕೊಳ್ಳಬಹುದು. ಪ್ಯಾನ್ ಕಾರ್ಡ್ ಅಪ್ಡೇಟ್ ಆಗಿರುವುದು ಇವತ್ತಿನ ದಿನದಲ್ಲಿ ತುಂಬಾ ಮುಖ್ಯ ಯಾಕೆಂದರೆ ನೀವು ಸರಿಯಾದ ದಾಖಲೆಗಳನ್ನು ನೀಡಿ ಆದಾಯ ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಇಲ್ಲವಾದರೆ ಸಮಸ್ಯೆ ಎದುರಿಸಬೇಕಾಗುತ್ತದೆ. ಹಾಗಾಗಿ ಆಧಾರ್ ಕಾರ್ಡ್ ಅಪ್ಡೇಟ್ (Aadhaar Card Update) ತಪ್ಪದೇ ಮಾಡಿಕೊಳ್ಳಿ.
How to change name address mobile number in PAN card, Here is the information