ಇದೊಂದು ಕಾರ್ಡ್ ಇರೋ ರೈತರಿಗೆ ಸಿಗಲಿದೆ 3 ಲಕ್ಷ ರೂಪಾಯಿಗಳವರೆಗಿನ ಬೆನಿಫಿಟ್!

Story Highlights

Kisan Credit Card : ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿದ್ರೆ, ಸರ್ಕಾರದಿಂದ ಬಿಡುಗಡೆಯಾಗುವ ಸಾಕಷ್ಟು ಯೋಜನೆಗಳ ಪ್ರಯೋಜನವನ್ನು ನೇರವಾಗಿ ಪಡೆದುಕೊಳ್ಳಲು ಸಾಧ್ಯವಿದೆ

Kisan Credit Card : ಕೃಷಿ (Agriculture) ಯನ್ನು ವೃತ್ತಿಯಾಗಿ ನಂಬಿಕೊಂಡಿರುವ, ಮೆಚ್ಚಿಕೊಂಡಿರುವ ರೈತರು ಸದಾ ಲಾಭವನ್ನೇ ಗಳಿಸುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಅದೆಷ್ಟೋ ಬಾರಿ ಕೃಷಿಕರು ತಮ್ಮ ಬೆಳೆ ಸರಿಯಾಗಿ ಬರದೆ ನಷ್ಟ ಅನುಭವಿಸುವ ಸಂಭವ ಇರುತ್ತೆ.

ಅಷ್ಟೇ ಅಲ್ಲದೆ ಇತ್ತೀಚಿನ ದಿನಗಳಲ್ಲಿ ಕೃಷಿ ಮಾಡುವುದು ಕೂಡ ತುಂಬಾನೇ ದುಬಾರಿ ಆಗಿದೆ, ಎಲ್ಲಾ ಕೃಷಿ ಉಪಕರಣಗಳು ಬಿತ್ತನೆ ಬೀಜಗಳು ರಸಗೊಬ್ಬರ ಪ್ರತಿಯೊಂದು ಬೆಲೆಯು ಗಗನಕ್ಕೆ ಏರಿದೆ.

ಇಂತಹ ಸಂದರ್ಭದಲ್ಲಿ ವಾರ್ಷಿಕ ಬೆಳೆಯನ್ನೇ ಮೆಚ್ಚಿಕೊಂಡಿರುವ ರೈತ ಕೃಷಿ ಖರ್ಚು ನಿರ್ವಹಣೆ ಮಾಡುವುದು ಸುಲಭವಲ್ಲ. ಇದಕ್ಕಾಗಿಯೇ ಸರ್ಕಾರ ಒಂದು ಅತ್ಯುತ್ತಮ ಯೋಜನೆ ಜಾರಿಗೆ ತಂದಿದ್ದು ಇದೊಂದು ಕಾರ್ಡ್ ಪಡೆದುಕೊಂಡರೆ ರೈತರು ಸರ್ಕಾರದಿಂದ 3 ಲಕ್ಷ ರೂಪಾಯಿಗಳ ವರೆಗೂ ಹಣ ಸಹಾಯ ಪಡೆಯಬಹುದು.

3 ಗ್ಯಾಸ್ ಸಿಲಿಂಡರ್ ಉಚಿತ! ರೇಷನ್ ಕಾರ್ಡ್ ಇರೋರಿಗೆ ಭರ್ಜರಿ ಗುಡ್ ನ್ಯೂಸ್

ಕಿಸಾನ್ ಕ್ರೆಡಿಟ್ ಕಾರ್ಡ್! (Kisan credit card)

ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ರೈತರು ಕೂಡ ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿದ್ರೆ, ಸರ್ಕಾರದಿಂದ ಬಿಡುಗಡೆಯಾಗುವ ಸಾಕಷ್ಟು ಯೋಜನೆಗಳ ಪ್ರಯೋಜನವನ್ನು ನೇರವಾಗಿ ಪಡೆದುಕೊಳ್ಳಲು ಸಾಧ್ಯವಿದೆ. ಈ ಕಾರ್ಡ್ ಇರುವ ರೈತರು ಸ್ವಂತ ಜಮೀನು (agriculture land) ಹೊಂದಿದ್ರೆ ಬೇರೆ ಯಾವುದೇ ದಾಖಲೆಗಳನ್ನು ನೀಡದೆ 3 ಲಕ್ಷ ರೂಪಾಯಿಗಳ ವರೆಗೆ ಸಾಲ ಸೌಲಭ್ಯ (Loan facility) ಪಡೆಯಬಹುದು. ಈ ಎಲ್ಲ ಬೆನಿಫಿಟ್ ಪಡ್ಕೊಬೇಕು ಅಂತ ಅಂದ್ರೆ ನಿಮ್ಮ ಬಳಿ ಕಿಸಾನ್ ಕ್ರೆಡಿಟ್ ಕಾರ್ಡ್ ಇರಬೇಕು.

ಕೇವಲ 2% ಬಡ್ಡಿಗೆ ಪಡೆದುಕೊಳ್ಳಿ ಹೋಂ ಲೋನ್; ಸ್ವಂತ ಮನೆ ಕಟ್ಟೋಕೆ ಬಂಪರ್ ಕೊಡುಗೆ

Kisan Credit Cardಕಿಸಾನ್ ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳುವುದು ಹೇಗೆ?

* ಸ್ಥಿರ ಕೃಷಿ ಆದಾಯ ಹೊಂದಿರುವ ರೈತರು ಕಾರ್ಡ್ ಪಡೆದುಕೊಳ್ಳಬಹುದು
* 18ರಿಂದ 70 ವರ್ಷ ವಯಸ್ಸಿನವರೆಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಕೊಡಲಾಗುವುದು
* ಕನಿಷ್ಠ ಒಂದು ಎಕರೆ ಗರಿಷ್ಠ 10 ಎಕರೆ ಜಮೀನು ಇರುವ ರೈತರು ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಬಹುದು.

ಕೆನರಾ ಬ್ಯಾಂಕ್ ಅಕೌಂಟ್ ಇದ್ದು ಸ್ವಂತ ಮನೆ ಕಟ್ಟೋರಿಗೆ ಸಿಗಲಿದೆ ಕಡಿಮೆ ಬಡ್ಡಿಗೆ ಹೋಂ ಲೋನ್

ದಾಖಲೆಗಳು! (Documents)

ಆಧಾರ್ ಕಾರ್ಡ್
ಸ್ವಂತ ಜಮೀನಿನ ಪಹಣಿ ಪತ್ರ
ರೇಷನ್ ಕಾರ್ಡ್
ಆದಾಯ ಪ್ರಮಾಣ ಪತ್ರ
ಬ್ಯಾಂಕ ಖಾತೆಯ ವಿವರ
ಪಾಸ್ ಪೋರ್ಟ್ ಅಳತೆಯ ಫೋಟೋ
ವೋಟರ್ ಐಡಿ ಡ್ರೈವಿಂಗ್ ಲೈಸೆನ್ಸ್ ಅಂತಹ ದಾಖಲೆಗಳು.

ನಿಮ್ಮ ಆಧಾರ್ ಕಾರ್ಡ್ ಫೋಟೋ ಚೆನ್ನಾಗಿಲ್ವಾ? ಈ ರೀತಿ ಸುಲಭವಾಗಿ ಬದಲಾಯಿಸಿಕೊಳ್ಳಿ

ಅರ್ಜಿ ಸಲ್ಲಿಸುವ ವಿಧಾನ!

ಸಣ್ಣ ಮತ್ತು ಅತಿ ಸಣ್ಣ ರೈತರಿಗಾಗಿ ನಬಾರ್ಡ್ (NABARD) ವತಿಯಿಂದ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಸಾಲ ಸೌಲಭ್ಯ (Loan) ಪಡೆಯಬಹುದು. ಅತಿ ಕಡಿಮೆ ಬಡ್ಡಿ ದರದಲ್ಲಿ 3 ಲಕ್ಷ ರೂಪಾಯಿಗಳು ವರೆಗೆ ಸಾಲ (Loan) ಪಡೆದು ಕೃಷಿ ಚಟುವಟಿಕೆಗಾಗಿ ಆ ಹಣವನ್ನು ವಿನಿಯೋಗಿಸಿಕೊಳ್ಳಬಹುದು.

ಬೇರೆ ಬೇರೆ ಬ್ಯಾಂಕುಗಳಲ್ಲಿ ಬೇರೆ ಬೇರೆ ರೀತಿಯ ಬಡ್ಡಿದರ ಇರುತ್ತದೆ. ಉದಾಹರಣೆಗೆ ಎಸ್ ಬಿ ಐ ಬ್ಯಾಂಕ್ 4% ಬಡ್ಡಿ ದರದಲ್ಲಿ ಸಾಲ ನೀಡಿದರೆ ಹೆಚ್ ಡಿ ಎಫ್ ಸಿ ಬ್ಯಾಂಕ್ ಐದರಿಂದ 9% ಬಡ್ಡಿದರ ದಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ನೀಡುತ್ತದೆ.

ನೀವು ಹತ್ತಿರದ ಬ್ಯಾಂಕ್ ಗೆ ಹೋಗಿ ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆದುಕೊಂಡು ಅದರ ಆಧಾರದ ಮೇಲೆ ಕೃಷಿ ಚಟುವಟಿಕೆಗಾಗಿ ಸಾಲ ಸೌಲಭ್ಯ ಪಡೆಯಬಹುದು.

ಪ್ಯಾನ್ ಕಾರ್ಡ್ ನಲ್ಲಿ ಹೆಸರು ವಿಳಾಸ ಮೊಬೈಲ್ ನಂಬರ್ ಬದಲಾಯಿಸುವುದು ಹೇಗೆ? ಇಲ್ಲಿದೆ ಮಾಹಿತಿ

Farmers with Kisan Credit Card will get a benefit of up to 3 lakh rupees

Related Stories