ಬ್ಯಾಂಕಿನಲ್ಲಿ 5 ಲಕ್ಷ ಸಾಲ ಪಡೆಯುವುದಾದ್ರೆ ಕಟ್ಟಬೇಕಾದ ತಿಂಗಳ EMI ಎಷ್ಟು ಗೊತ್ತಾ?
Loan : ಹಣಕಾಸಿನ ಪ್ಲಾನಿಂಗ್ ಎನ್ನುವುದು ಬಹಳ ಮುಖ್ಯವಾಗಿರುವ ವಿಚಾರ. ನಾವು ಎಷ್ಟೇ ದುಡ್ಡನ್ನ ಸಂಪಾದನೆ ಮಾಡಿದರೂ ಕೂಡ ಪ್ಲಾನಿಂಗ್ ಸರಿಯಾಗಿ ಇಲ್ಲದೆ ಇದ್ದರೆ ಹಣ ಕಳೆದುಕೊಳ್ಳುವ ಪರಿಸ್ಥಿತಿ ಬರಬಹುದು.
ಇನ್ನು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಲೋನ್ ಮಾಡಿದರು ಕೂಡ ಪ್ರತಿ ತಿಂಗಳು ಪಾವತಿ ಮಾಡುವ EMI ನಮಗೆ ಹೊರೆ ಆಗಬಾರದು ಅಂದ್ರೆ ನಾವು ತೆಗೆದುಕೊಳ್ಳುವ ಸ್ಯಾಲರಿಗಿಂತ 50% ನಷ್ಟು ಕಡಿಮೆ ಮೊತ್ತವನ್ನು ಮಾತ್ರ ಸಾಲಕ್ಕೆ EMI ಆಗಿ ಪಾವತಿ ಮಾಡುವಂತೆ ನೋಡಿಕೊಂಡರೆ ಆರ್ಥಿಕ ಹೊರೆ ಎನಿಸುವುದಿಲ್ಲ.
ಇನ್ನು ಸಾಲ ತೆಗೆದುಕೊಳ್ಳುವಾಗ ಕೆಲವೊಂದಿಷ್ಟು ವಿಷಯಗಳನ್ನ ಗಮನಿಸಬೇಕು. ಮೊದಲನೆಯದಾಗಿ ನಾವು ಯಾವ ಬ್ಯಾಂಕ್ ನಲ್ಲಿ ಸಾಲ (Bank Loan) ತೆಗೆದುಕೊಳ್ಳುತ್ತೇವೆ ಎನ್ನುವುದು ಮುಖ್ಯವಾಗಿರುತ್ತದೆ.
ಉದಾಹರಣೆಗೆ ನೀವು SBI Bank ನಲ್ಲಿ ವಯಕ್ತಿಕ ಸಾಲವನ್ನು (Personal Loan) ಮಾಡುತ್ತೀರಿ ಎಂದರೆ ನಿಮ್ಮ ಸ್ಯಾಲರಿ ಎಷ್ಟಿದ್ದರೆ ಎಷ್ಟು ಸಾಲ ಸಿಗುತ್ತದೆ? ಅದಕ್ಕೆ ಇರುವ ಬಡ್ಡಿ ದರ ಎಷ್ಟು? ಪ್ರತಿ ತಿಂಗಳು ಪಾವತಿಸಬೇಕಾದ EMI ಎಷ್ಟು? ಹೀಗೆ ಪ್ರತಿಯೊಂದು ವಿಚಾರದ ಬಗ್ಗೆ ನೀವು ತಿಳಿದುಕೊಂಡಿರಬೇಕು.
ಇದೀಗ ನಾವು 5 ಲಕ್ಷ ಸಾಲ ಬೇಕು ಅಂದ್ರೆ ಸ್ಯಾಲರಿ ಎಷ್ಟಿರಬೇಕು ಎನ್ನುವ ವಿಷಯದ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.
ಬ್ಯಾಂಕ್ ಲೋನ್ ರಿಜೆಕ್ಟ್ ಆಯ್ತಾ? ಬ್ಯಾಂಕೇ ನಿಮ್ಮನ್ನ ಕರೆದು ಸಾಲ ಕೊಡಬೇಕು ಅಂದ್ರೆ ಹೀಗೆ ಮಾಡಿ
5 ಲಕ್ಷ ಸಾಲ ಪಡೆದುಕೊಳ್ಳಲು ಎಷ್ಟು ಸಂಬಳ ಇರಬೇಕು ಗೊತ್ತಾ?
ಕನಿಷ್ಠ 35 ರಿಂದ 50 ಸಾವಿರ ರೂಪಾಯಿಗಳ ಸಂಬಳ ಇದ್ದರೆ ಐದು ಲಕ್ಷ ರೂಪಾಯಿಗಳ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು. SBI ನಲ್ಲಿ 11.35% ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಪಡೆಯಬಹುದು. ಆದರೆ ವಯಕ್ತಿಕ ಸಾಲವನ್ನು ಪಡೆದುಕೊಳ್ಳುವುದಕ್ಕೆ ಕ್ರೆಡಿಟ್ ಸ್ಕೋರ್ (Credit Score) ಮುಖ್ಯವಾಗಿರುತ್ತದೆ.
ಕ್ರೆಡಿಟ್ ಸ್ಕೋರ್ 750 ಕ್ಕಿಂತ ಜಾಸ್ತಿ ಇದ್ದರೆ, ಸುಲಭವಾಗಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗಬಹುದು. ಅದೇ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೆ, ನಿಮ್ಮ ಸಾಲದ ಅರ್ಜಿ ರಿಜೆಕ್ಟ್ ಕೂಡ ಆಗಬಹುದು.
ಇನ್ನು ಐದು ವರ್ಷಗಳ ಅವಧಿಗೆ 5 ಲಕ್ಷ ರೂಪಾಯಿಗಳನ್ನು ಸಾಲವಾಗಿ ಪಡೆದುಕೊಂಡರೆ, ಪ್ರತಿ ತಿಂಗಳು ಪಾವತಿಸಬೇಕಾದ ಇಎಮ್ಐ ಮೊತ್ತ 10,959 ರೂಪಾಯಿಗಳು. ಒಟ್ಟು ಐದು ವರ್ಷಕ್ಕೆ 1,57,521 ರೂಪಾಯಿ ಬಡ್ಡಿಯಾಗಿ ಪಾವತಿಸಬೇಕು. ಅಂದರೆ ನೀವು ತೆಗೆದುಕೊಂಡ 5 ಲಕ್ಷ ಸಾಲಕ್ಕೆ ನೀವು ಪಾವತಿಸಬೇಕಾದ ಒಟ್ಟು ಹಣ 6,57,521 ರೂಪಾಯಿಗಳು.
ಇನ್ನು 15 ದಿನದಲ್ಲಿ ಈ ಕೆಲಸ ಮಾಡದೆ ಇದ್ರೆ ನಿಮ್ಮ ಬ್ಯಾಂಕ್ ಅಕೌಂಟ್ ಕ್ಲೋಸ್ ಆಗುತ್ತೆ
ವಯಕ್ತಿಕ ಸಾಲ ತೆಗೆದುಕೊಳ್ಳಲು ಬೇಕಾಗಿರುವ ದಾಖಲೆಗಳು!
ವಯಕ್ತಿಕ ಸಾಲ ಅಸುರಕ್ಷಿತ ಸಾಲವಾಗಿದೆ. ಇಲ್ಲಿ ಯಾವುದೇ ಗ್ಯಾರೆಂಟಿಯ ಅಗತ್ಯ ಇಲ್ಲ. ಆದರೆ ಕ್ರೆಡಿಟ್ ಸ್ಕೋರ್ ಉತ್ತಮವಾಗಿರುವುದು ಬಹಳ ಮುಖ್ಯ. ಇನ್ನು ನಿಮ್ಮ ಸಂಬಳದ ಸ್ಲಿಪ್, ಬ್ಯಾಂಕ್ ಸ್ಟೇಟ್ ಮೆಂಟ್, ಕೆಲಸದ ಎಕ್ಸ್ಪೀರಿಯನ್ಸ್, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಭಾವಚಿತ್ರಗಳನ್ನು ನೀಡಿ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.
Do You Know the Monthly EMI for a 5 Lakh Loan from the Bank