ಇನ್ನು 15 ದಿನದಲ್ಲಿ ಈ ಕೆಲಸ ಮಾಡದೆ ಇದ್ರೆ ನಿಮ್ಮ ಬ್ಯಾಂಕ್ ಅಕೌಂಟ್ ಕ್ಲೋಸ್ ಆಗುತ್ತೆ
Bank Account : ಬ್ಯಾಂಕ್ ನಲ್ಲಿ ಉಳಿತಾಯ ಖಾತೆಯನ್ನು ಹೊಂದಿದ್ದರೆ ಆ ಖಾತೆಗೆ ಸಂಬಂಧಪಟ್ಟಂತೆ ಹಣಕಾಸಿನ ವ್ಯವಹಾರವನ್ನು ಆಗಾಗ ಮಾಡುತ್ತಿರುವುದು ಬಹಳ ಮುಖ್ಯ.
ಅಂದರೆ ನಿಮ್ಮ ಖಾತೆಯಲ್ಲಿ ಹಣವನ್ನು ಠೇವಣಿ ಮಾಡುವುದು ಅಥವಾ ಇಟ್ಟ ಹಣವನ್ನು ಹಿಂಪಡೆಯುವುದು, ಇರುವ ಹಣದ ಮೇಲೆ ಸಾಲ ಸೌಲಭ್ಯ (Loan) ಪಡೆದುಕೊಳ್ಳುವುದು ಹೀಗೆ ಬ್ಯಾಂಕ್ ನಲ್ಲಿ ಒಂದಲ್ಲ ಒಂದು ರೀತಿಯ ವ್ಯವಹಾರವನ್ನು ಮಾಡಬೇಕಾಗುತ್ತದೆ.
ಒಂದು ವೇಳೆ ನೀವು ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದು ಯಾವುದೇ ರೀತಿಯ ಹಣಕಾಸಿನ ವಹಿವಾಟನ್ನು ಮಾಡುತ್ತಿಲ್ಲ ಎಂದರೆ ಆ ಖಾತೆಯನ್ನು ಕಳೆದುಕೊಳ್ಳಬೇಕಾಗುತ್ತದೆ.
PNB ಬ್ಯಾಂಕ್ ಕೊನೆಯ ದಿನಾಂಕವನ್ನು ಘೋಷಿಸಿದೆ!
ಡಿಸೆಂಬರ್ 31. 2024 ರಿಂದ ಖಾತೆಯನ್ನು ನಿಷ್ಕ್ರಿಯಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ (Punjab National Bank) ನೀವು ಉಳಿತಾಯ ಖಾತೆಯನ್ನು ಹೊಂದಿದ್ದು ಮೂರು ವರ್ಷಗಳವರೆಗೆ ಆ ಖಾತೆಯಲ್ಲಿ ಯಾವುದೇ ವಹಿವಾಟು ಮಾಡದೆ ಇದ್ದರೆ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗುವುದು ಎಂದು ಬ್ಯಾಂಕ್ ತಿಳಿಸಿದೆ.
ಬ್ಯಾಂಕಿನಲ್ಲಿ ಮಿನಿಮಮ್ ಬ್ಯಾಲೆನ್ಸ್ (Bank Balance) ಅಥವಾ ವಹಿವಾಟು ನಡೆಸದೇ ಇದ್ದ ಕಾರಣ ಹಲವು ಗ್ರಾಹಕರು ಇಂದು ಖಾತೆಯನ್ನು ಕಳೆದುಕೊಳ್ಳಬೇಕಾಗಿದೆ. PNB ಬ್ಯಾಂಕ್ ಅಧಿಕೃತವಾಗಿ ಈ ಬಗ್ಗೆ ಮಾಹಿತಿ ನೀಡಿದ್ದು, ಬ್ಯಾಂಕಿನಲ್ಲಿ ಯಾವುದೇ ವಹಿವಾಟು ನಡೆಸದೇ ಇರುವ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.
ಯಾವುದೇ ರೀತಿಯ ದುರುಪಯೋಗ ಅಥವಾ ಇತರ ಸಮಸ್ಯೆಗಳು ಆಗಬಾರದು ಎನ್ನುವ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬ್ಯಾಂಕ್ ಮಾಹಿತಿ ನೀಡಿದೆ.
ಆಧಾರ್ ಕಾರ್ಡ್ ಒಂದು ಇದ್ರೆ ಸಾಕು, 2 ಲಕ್ಷ ರೂಪಾಯಿ ಸಾಲ ಸಿಗುತ್ತೆ, ಅರ್ಜಿ ಹೀಗೆ ಸಲ್ಲಿಸಿ
ಖಾತೆಯನ್ನು ಉಳಿಸಿಕೊಳ್ಳುವುದು ಹೇಗೆ?
ಇನ್ನು ನಿಮ್ಮ ಖಾತೆ ನಿಷ್ಕ್ರಿಯಗೊಳ್ಳುವುದನ್ನು ತಪ್ಪಿಸಲು ಬ್ಯಾಂಕ್ ಗೆ ಹೋಗಿ ಅರ್ಜಿಯನ್ನು ಸಲ್ಲಿಸಿ ಅಗತ್ಯ ಇರುವಷ್ಟು ಶುಲ್ಕವನ್ನು ಪಾವತಿ ಮಾಡಬೇಕು. ನಿಮ್ಮ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಮೊದಲಾದ ದಾಖಲೆಗಳನ್ನು ನೀಡಿ ಸಕ್ರಿಯಗೊಳ್ಳುವಂತೆ ಮಾಡಿಕೊಳ್ಳಬಹುದು.
ಇದರ ಜೊತೆಗೆ ಬ್ಯಾಂಕ್ ಖಾತೆಗೆ ಇ – ಕೆ ವೈ ಸಿ ಕೂಡ ಕಡ್ಡಾಯ. ನಿಮ್ಮ ಖಾತೆ ಸಕ್ರಿಯವಾಗಿದ್ದು ಇನ್ನೂ ಈಕೆ ವೈ ಸಿ ಮಾಡಿಸಿಕೊಳ್ಳದೆ ಇದ್ದರೆ ತಕ್ಷಣ ಮಾಡಿಸಿಕೊಳ್ಳಿ. ಇದನ್ನು ಆನ್ಲೈನಲ್ಲಿ ಮಾಡಬಹುದು.
ಇನ್ನು ಪಿ ಎನ್ ಬಿ ಬ್ಯಾಂಕಿನ ವೆಬ್ಸೈಟ್ಗೆ ಹೋಗಿ ಕೆ ವೈ ಸಿ ಪ್ರಕ್ರಿಯೆ ಮುಗಿಸಬಹುದು. ಅದೇ ರೀತಿ ನಿಮಗೆ ಬ್ಯಾಂಕ್ ಖಾತೆ ನಿಷ್ಕ್ರಿಯ ವಾಗುತ್ತದೆ ಎನ್ನುವ ನೋಟಿಸ್ ಬಂದಿದ್ದರೆ ತಕ್ಷಣ ಖಾತೆಯನ್ನು ಆಕ್ಟಿವೇಟ್ ಮಾಡಿಕೊಳ್ಳಬಹುದು.
ಇನ್ನು ಖಾತೆ ಆಕ್ಟಿವೇಟ್ ಮಾಡಿಕೊಳ್ಳುವುದಕ್ಕೆ ಫೆಬ್ರವರಿ 15 2025 ರವರೆಗೆ ಕಾಲಾವಕಾಶ ನೀಡಲಾಗಿದೆ. ಅವಧಿಯ ಒಳಗೆ ಗ್ರಾಹಕರಿಂದ ಯಾವುದೇ ಪ್ರತಿಕ್ರಿಯೆ ಬಾರದೆ ಇದ್ದಲ್ಲಿ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.
ಬಂಪರ್ ಕೊಡುಗೆ, ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಮಿತಿ ಮೂರರಿಂದ ಐದು ಲಕ್ಷಕ್ಕೆ ಏರಿಕೆ!
ಒಂದು ವೇಳೆ ನಿಮ್ಮ ಖಾತೆ ಈಗಾಗಲೇ ನಿಷ್ಕ್ರಿಯಗೊಂಡಿದ್ದು ಪುನಃ ಆ ಖಾತೆಯನ್ನು ಆಕ್ಟಿವೇಟ್ ಮಾಡಿಕೊಳ್ಳಬೇಕಿದ್ದರೆ ಆನ್ಲೈನ್ ಅಲ್ಲಿ ಮಾಡಿಕೊಡಲು ಸಾಧ್ಯವಿಲ್ಲ ಇದಕ್ಕೆ ನೀವು ನೇರವಾಗಿ ಬ್ಯಾಂಕ್ ನ ಶಾಖೆಗೆ ಭೇಟಿ ನೀಡಬೇಕು.
ಫೆಬ್ರವರಿ 15, 2025 ಒಳಗೆ ಈ ಕೆಲಸ ಮಾಡದೆ ಇದ್ರೆ ಬ್ಯಾಂಕ್ ಖಾತೆ ನಿಷ್ಕ್ರಿಯಗೊಳ್ಳುತ್ತೆ
Your Bank Account Will Be Closed If This Task Is Not Completed Within 15 Days