ಬ್ಯಾಂಕ್ ಲೋನ್ ರಿಜೆಕ್ಟ್ ಆಯ್ತಾ? ಬ್ಯಾಂಕೇ ನಿಮ್ಮನ್ನ ಕರೆದು ಸಾಲ ಕೊಡಬೇಕು ಅಂದ್ರೆ ಹೀಗೆ ಮಾಡಿ
Bank Loan : ಯಾವುದೇ ಬ್ಯಾಂಕ್ ವೈಯಕ್ತಿಕ ಸಾಲ (Personal Loan), ಗೃಹ ಸಾಲ (Home Loan), ಮದುವೆ ಸಾಲ ಹೀಗೆ ಬೇರೆ ಬೇರೆ ಸಾಲಗಳನ್ನು ಮಂಜೂರು ಮಾಡಬೇಕಾದರೆ ಅದಕ್ಕೆ ಅದರದೇ ಆದ ನೀತಿ ನಿಯಮಗಳು ಇರುತ್ತವೆ.
ಯಾರಿಗೆ ಎಷ್ಟು ಪ್ರಮಾಣದ ಸಾಲವನ್ನು ಕೊಡಬೇಕು ಅವರಿಗೆ ಎಷ್ಟು ಬಡ್ಡಿ ನಿರ್ಧರಿಸಬೇಕು ಎಂಬುದು ಸಂಪೂರ್ಣವಾಗಿ ಬ್ಯಾಂಕ್ ನ ನಿರ್ಧಾರವಾಗಿರುತ್ತದೆ. ಇನ್ನು ಸಾಲ ತೆಗೆದುಕೊಳ್ಳಲು ಮುಂದಾಗುವ ನಾವು ನಮ್ಮ ಸಾಮರ್ಥ್ಯವನ್ನು ಮೊದಲು ಪರಿಶೀಲಿಸಿಕೊಳ್ಳಬೇಕು.
ಎಷ್ಟೋ ಬಾರಿ ಸಾಲ ತೆಗೆದುಕೊಂಡಾಗ ಅದನ್ನು ಹಿಂತಿರುಗಿಸಲು ಸಾಧ್ಯವಾಗದೆ ಇರಬಹುದು, ಅಂತಹ ಸಂದರ್ಭದಲ್ಲಿ ಡಿಫಾಲ್ಟರ್ ಆಗಬೇಕಾಗುತ್ತದೆ. ಇನ್ನು ಕ್ರೆಡಿಟ್ ಸ್ಕೋರ್ (Credit Score) ಕಡಿಮೆ ಇದ್ದರಂತೂ ಬ್ಯಾಂಕ್ ಸಾಲದ ಅಪ್ಲಿಕೇಶನ್ ರಿಜೆಕ್ಟ್ ಮಾಡುವುದೇ ಹೆಚ್ಚು.
ಆದರೆ ನಾವು ಈ ಲೇಖನದಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೂ ಕೂಡ ಬ್ಯಾಂಕ್ನಿಂದ ಸಾಲ (Loan) ಪಡೆಯುವುದು ಹೇಗೆ ಎನ್ನುವುದರ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ.
ಇನ್ನು 15 ದಿನದಲ್ಲಿ ಈ ಕೆಲಸ ಮಾಡದೆ ಇದ್ರೆ ನಿಮ್ಮ ಬ್ಯಾಂಕ್ ಅಕೌಂಟ್ ಕ್ಲೋಸ್ ಆಗುತ್ತೆ
- ಕ್ರೆಡಿಟ್ ಸ್ಕೋರ್ ಕಡಿಮೆ ಇದ್ರೆ ಆಸ್ತಿ ಅಥವಾ ಚಿನ್ನವನ್ನು ಅಡವಿಟ್ಟು ಸಾಲ ತೆಗೆದುಕೊಳ್ಳಬಹುದು.
- ಕ್ರೆಡಿಟ್ ಸ್ಕೋರ್ ಉತ್ತಮವಾಗಿರುವ ಗ್ಯಾರೆನ್ಟರ್ ನಿಮಗೆ ಪರಿಚಯವಿದ್ದರೆ ಅವರ ಜಾಮೀನಿನ ಮೂಲಕ ಸುಲಭವಾಗಿ ಸಾಲ ಪಡೆದುಕೊಳ್ಳಬಹುದು.
- ಬ್ಯಾಂಕ್ ಒಮ್ಮೆ ನಿಮ್ಮ ಸಾಲವನ್ನು ರಿಜೆಕ್ಟ್ ಮಾಡಿದರು ಕೂಡ ನೀವು ಮತ್ತೊಮ್ಮೆ ಅರ್ಜಿ ಸಲ್ಲಿಸಬಹುದು ಆಗ ಕಡಿಮೆ ಮೊತ್ತದ ಸಾಲವನ್ನು ಕೇಳಿದರೆ ರಿಸ್ಕ್ ಕಡಿಮೆ ಎನ್ನುವ ಕಾರಣಕ್ಕೆ ಬ್ಯಾಂಕ್ ಸಾಲ ನೀಡುವ ಸಾಧ್ಯತೆ ಇರುತ್ತದೆ.
- ನೀವು ಡೀಫಾಲ್ಟರ್ ಆಗಿದ್ದರೆ ಮೊದಲು ಪಾವತಿಸಬೇಕಾಗಿರುವ ಸಾಲವನ್ನು ಮರುಪಾವತಿ ಮಾಡಿ ನಂತರ ಮತ್ತೆ ಅರ್ಜಿ ಸಲ್ಲಿಸಿ ಸಾಲ ಪಡೆಯಬಹುದು.
- ಸಾಲಕ್ಕಾಗಿ ಬೇರೆ ಬೇರೆ ಬ್ಯಾಂಕ್ಗಳಲ್ಲಿ ವಿಚಾರಿಸಿ ಒಂದು ವೇಳೆ ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೂ ಹೆಚ್ಚಿನ ಬಡ್ಡಿ ದರಕ್ಕೆ ಸಾಲವನ್ನು ತೆಗೆದುಕೊಳ್ಳಲು ನೀವು ಸಿದ್ಧರಿದ್ದರೆ ನಿಮಗೆ ಸಾಲ ಸಿಗಬಹುದು.
ಈ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ!
ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೂ ಕೂಡ ಸಂಬಳದ ಸ್ಲಿಪ್, ಬ್ಯಾಂಕ್ ಸ್ಟೇಟ್ಮೆಂಟ್, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಜಾಮೀನುದಾರರ ಸಹಿ ಈ ಮೊದಲಾದವು ನಿಮ್ಮ ಬಳಿ ಇದ್ದರೆ ಸಾಲ ಪಡೆದುಕೊಳ್ಳಲು ಸುಲಭವಾಗುತ್ತದೆ. ಜೊತೆಗೆ ಯಾವುದಾದರೂ ಮೂಲಾಧಾರವನ್ನು ಉದಾಹರಣೆಗೆ ಆಸ್ತಿ ಅಥವಾ ಆಭರಣವನ್ನು ಅಡವಿಟ್ಟರೆ ಬೇರೆ ಯಾವುದೇ ಗ್ಯಾರಂಟಿ ಕೊಡದೆ ವಯಕ್ತಿಕ ಸಾಲವನ್ನು ಪಡೆಯಬಹುದು.
ಆಧಾರ್ ಕಾರ್ಡ್ ಒಂದು ಇದ್ರೆ ಸಾಕು, 2 ಲಕ್ಷ ರೂಪಾಯಿ ಸಾಲ ಸಿಗುತ್ತೆ, ಅರ್ಜಿ ಹೀಗೆ ಸಲ್ಲಿಸಿ
ವಂಚಕರಿಂದ ಎಚ್ಚರವಿರಿ!
ಇತ್ತೀಚಿಗೆ ಆನ್ಲೈನ್ ಮೂಲಕ ಸಾಲ ಕೊಡುತ್ತೇವೆ ಎನ್ನುವ ಅಪ್ಲಿಕೇಶನ್ಗಳು ಹೆಚ್ಚಾಗಿದೆ ನಿಮಗೆ ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೂ ನಾವು ಸುಲಭವಾಗಿ ಸಾಲ ಕೊಡುತ್ತೇವೆ ಎಂದು ಹೇಳಿ ಕೆಲವರು ನಿಮ್ಮನ್ನು ಯಾಮಾರಿಸಬಹುದು. ಹಾಗಾಗಿ ಇಂತಹ ಯಾವುದೇ ಆಮಿಷಕ್ಕೂ ಬಲಿಯಾಗದೆ, ಬ್ಯಾಂಕ್ ನಲ್ಲಿ ಸುರಕ್ಷಿತ ಸಾಲ ತೆಗೆದುಕೊಳ್ಳಿ.
If You Want the Bank to Offer You a Loan, Do This