ನಮ್ಮ ದೇಶದಲ್ಲಿ ಕಾರ್ ಓಡಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಹೊರತು, ಕಡಿಮೆ ಅಂತೂ ಆಗುತ್ತಿಲ್ಲ. ಕಾರ್ ಗಳಲ್ಲಿ ಕೂಡ ಹಲವು ಬಗೆಯ ಪೆಟ್ರೋಲ್ ಕಾರ್ (Petrol Car), ಡೀಸೆಲ್ ಕಾರ್, ಹೈಬ್ರಿಡ್, ಎಲೆಕ್ಟ್ರಿಕ್ ಹೀಗೆ ಹಲವು ವಿಧವಾದ ಕಾರ್ ಗಳಿವೆ. ಪ್ರಪಂಚ ಮುಂದುವರೆಯುತ್ತಿದೆ. ಆದರೆ ನಮ್ಮ ದೇಶದಲ್ಲಿ ಪೆಟ್ರೋಲ್ ಡೀಸೆಲ್ ಕಾರ್ ಬಳಕೆ ಮಾಡುವವರ ಸಂಖ್ಯೆ ಹೆಚ್ಚು. ಕಾರ್ ಪರ್ಫಾರ್ಮೆನ್ಸ್ ಉತ್ತಮವಾಗಿರಬೇಕು ಎನ್ನುವುದಕ್ಕೆ ಹೆಚ್ಚು ಜನ ಪೆಟ್ರೋಲ್ ವಾಹನ ಖರೀದಿ ಮಾಡುತ್ತಾರೆ.
ಪೆಟ್ರೋಲ್ ಕಾರ್ ನ ಬೆಲೆ ಹೆಚ್ಚು, ಡೀಸೆಲ್ ಕಾರ್ ನ (Diesel Car) ಬೆಲೆ ಕಡಿಮೆ ಎನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ವಿಷಯ ಆಗಿದೆ. ಹಾಗೆಯೇ ಇವುಗಳ ಬಗ್ಗೆ ಒಂದು ಪ್ರಮುಖ ವಿಷಯ ತಿಳಿಯಬೇಕು. ಅಕಸ್ಮಾತ್ ಪೆಟ್ರೋಲ್ ಕಾರ್ ಗೆ ಡೀಸೆಲ್ ಹಾಕಿ, ಡಿಸೇಲ್ ಕಾರ್ ಗೆ ಪೆಟ್ರೋಲ್ ಹಾಕಿ ಓಡಿಸಿದರೆ ಏನಾಗುತ್ತದೆ? ಈ ಬಗ್ಗೆ ನೀವು ತಿಳಿದಿರಬೇಕು. ಅಪ್ಪಿತಪ್ಪಿ ಈ ಥರದ ತಪ್ಪುಗಳು ನಡೆಯುವುದಕ್ಕೆ ಬಿಡಬಾರದು, ಇದರಿಂದ ನಿಮಗೆ ಸಮಸ್ಯೆ ಉಂಟಾಗಬಹುದು.
ಸ್ಟಾರ್ ಮಾರ್ಕ್ ಇರೋ ಈ 500 ರೂಪಾಯಿ ನೋಟ್ ಅಸಲೀನಾ ನಕಲಿನಾ? ಇಲ್ಲಿದೆ ಬಿಗ್ ಅಪ್ಡೇಟ್
ನೀವು ಅಕಸ್ಮಾತ್ ಪೆಟ್ರೋಲ್ ಕಾರ್ ಗೆ ಡೀಸೆಲ್ ಹಾಕಿ ಓಡಿಸಿದರೆ, ಅದರಿಂದ ಇಂಜಿನ್ ಗೆ ಹೆಚ್ಚು ಸಮಸ್ಯೆ ಆಗುತ್ತದೆ. ನಿಮ್ಮ ಇಂಜಿನ್ ಹಾಳಾಗುತ್ತದೆ. ಪೆಟ್ರೋಲ್ ಕಾರ್ ಗಳು ಥಿಕ್ ಆಗಿರುವಂಥ ಡೀಸೆಲ್ ಸುಡುವುದಕ್ಕೆ ಆಗೋದಿಲ್ಲ, ಇದರಿಂದ ಫ್ಯುಲ್ ಫಿಲ್ಟರ್ ಹಾಗೂ ಸ್ಪಾರ್ಕ್ ಪ್ಲಗ್ ಗೆ ಹಾನಿಯಾಗುತ್ತದೆ.
ಹಾಗೆಯೇ ಕಾರ್ ಇಂಜಿನ್ ಪೂರ್ತಿಯಾಗಿ ಹದಗೆಟ್ಟು, ಕಾರ್ ಸ್ಟಾರ್ಟ್ ಮಾಡಿದರೆ ನಿಧಾನವಾಗಿ ಹೋಗುತ್ತದೆ. ಈ ಕಾರಣದಿಂದ ಕಾರ್ ಇಂದ ಜಾಸ್ತಿ ಹೊಗೆ ಬರುವುದು, ಕಾರ್ ಸೌಂಡ್ ಮಾಡುವುದು ಇದೆಲ್ಲವೂ ಶುರುವಾಗುತ್ತದೆ. ಇಂಜಿನ್ ಹಾಳಾಗಿ ರಿಪೇರಿ ಮಡಿಸುವುದಕ್ಕೆ ಹೆಚ್ಚು ಹಣ ಖರ್ಚಾಗುತ್ತದೆ.
ಇನ್ನು ಡೀಸೆಲ್ ಕಾರ್ ಗೆ ಪೆಟ್ರೋಲ್ ಹಾಕಿದರೆ, ಫ್ಯುಲ್ ಟ್ಯಾಂಕ್, ಪೈಪ್, ಇಂಜೆಕ್ಟರ್ ಹೀಗೆ ಕಾರ್ ಪಾರ್ಟ್ ಗಳು ತೊಂದರೆಗೆ ಒಳಗಾಗುತ್ತದೆ. ಪೆಟ್ರೋಲ್ ಅನ್ನು ಡೀಸೆಲ್ ಇಂಜಿನ್ ನಲ್ಲಿ ಸುಡಲು ಆಗುವುದಿಲ್ಲ..
ಪೆಟ್ರೋಲ್ ಸಂಕುಚಿತವಾಗಿರದೇ ಬಹಳ ಬೇಗ ಉರಿಯುವ ಕಾರಣ, ಡೀಸೆಲ್ ಇಂಜಿನ್ ಕಾರ್ ಇಂದ ಜೋರಾದ ಶಬ್ದಗಳು ಬರುವುದಕ್ಕೆ ಶುರುವಾಗುತ್ತದೆ, ಈ ಕಾರಣಗಳಿಂದಾಗಿ ಯಾವಾಗಲೇ ನಿಮ್ಮ ವೆಹಿಕಲ್ ಗೆ ಫ್ಯುಲ್ ಹಾಕಿಸುವಾಗ ಬಹಳ ಹುಷಾರಾಗಿ ಇರಬೇಕು. ಎಚ್ಚರ ತಪ್ಪಿದರೆ, ನಿಮಗೆ ಸಮಸ್ಯೆ ಉಂಟಾಗುತ್ತದೆ.
ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ಧಿಡೀರ್ ಶಾಕ್! ಇನ್ಮುಂದೆ ದುಬಾರಿಯಾಗಲಿದೆ ಕಾರು, ಮನೆ ಮೇಲಿನ ಇಎಂಐ
ಒಂದು ವೇಳೆ ಈ ರೀತಿ ಬೇರೆ ಫ್ಯುಲ್ ಹಾಕಿರುವ ವಿಷಯ ನಿಮಗೆ ಮೊದಲೇ ಗೊತ್ತಾದರೆ, ಅದಕ್ಕಾಗಿ ನೀವು ಕ್ರಮಗಳನ್ನು ತೆಗೆದುಕೊಳ್ಳಬಹುದು. ಕಾರ್ ಸ್ಟಾರ್ಟ್ ಮಾಡದೆಯೇ ಇರುವುದರಿಂದ ಬಹಳಷ್ಟು ತೊಂದರೆಗಳನ್ನು ತಪ್ಪಿಸಬಹುದು, ಹಾಗೆಯೇ ನಿಮ್ಮ ಕಾರ್ ಕಂಪನಿಯ, ಕಸ್ಟಮರ್ ಕೇರ್ ಗೆ ಕರೆ ಮಾಡಿ ವಿಷಯ ತಿಳಿಸಿ, ಅವರಿಂದ ಸಹಾಯ ಪಡೆಯಬಹುದು. ಅಥವಾ ನಿಮ್ಮ ಹತ್ತಿರದ ಗ್ಯಾರೇಜ್ ಗೆ ಕಾರ್ ತೆಗೆದುಕೊಂಡು ಹೋಗಿ, ಮೆಕ್ಯಾನಿಕ್ ಇಂದ ಸರಿ ಮಾಡಿಸಿಕೊಳ್ಳಬಹುದು.
Do you know what happens if you accidentally put diesel in a petrol car
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.