ಇದು ಸೋಷಿಯಲ್ ಮೀಡಿಯಾ ಯುಗ, ಇಲ್ಲಿ ಪ್ರತಿದಿನ ಹಲವಾರು ಸುದ್ದಿಗಳು ವೈರಲ್ ಆಗುತ್ತಲೇ ಇರುತ್ತದೆ. ಅವುಗಳು ಸುಳ್ಳಾಗಿದ್ದರೂ, ಸತ್ಯವೇ ಆಗಿದ್ದರೂ ಜನರು ಮಾತ್ರ ಕೆಲವೊಮ್ಮೆ ಹಿಂದೂ ಮುಂದು ಯೋಚಿಸದೇ ಅಂಥ ಸುದ್ದಿಗಳನ್ನು ನಂಬಿಬಿಡುತ್ತಾರೆ. ಇದೀಗ ಅಂಥದ್ದೇ ಮತ್ತೊಂದು ಸುದ್ದಿ ವೈರಲ್ ಆಗಿದೆ. ಅಷ್ಟಕ್ಕೂ ಈ ಬಾರಿ ವೈರಲ್ ಆಗಿರುವುದು ನಕಲಿ ನೋಟ್ ಸುದ್ದಿ. ಹೌದು, ವಿಚಾರದ ಬಗ್ಗೆ ಸರಿಯಾಗಿ ತಿಳಿದುಕೊಂಡಷ್ಟು ನಿಮಗೆ ಒಳ್ಳೆಯದು..
ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ 500 ರೂಪಾಯಿಯ ಮೌಲ್ಯದ ನೋಟ್ ಬಗ್ಗೆ ಒಂದು ವಿಷಯ ಭಾರಿ ಸದ್ದು ಮಾಡುತ್ತಿದೆ. ಅದೇನು ಎಂದರೆ, 500 ರೂಪಾಯಿಯ ನೋಟ್ ನಲ್ಲಿ ಸ್ಟಾರ್ ಮಾರ್ಕ್ ಇದ್ದರೆ ಅದು, ಅಸಲಿ ನೋಟ್ ಅಲ್ಲ, ನಕಲಿ ನೋಟ್ ಎನ್ನುವ ವಿಷಯ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಜನರಿಗೆ ಈ ಬಗ್ಗೆ ಗೊಂದಲ ಶುರುವಾಗಿದೆ, ಹಾಗಿದ್ದಲಿ ಇದು ನಕಲಿ ನೋಟ್ ಇರಬಹುದಾ ಎನ್ನುವ ಮಾತುಕತೆ, ಚರ್ಚೆ ಜೋರಾಗಿಯೇ ನಡೆಯುತ್ತಿದೆ.
ಲೋನ್ ತಗೊಂಡು EMI ಕಟ್ಟಲು ಆಗುತ್ತಿಲ್ಲ ಅಂತ ಚಿಂತೆ ಬೇಡ, ಈ ಟಿಪ್ಸ್ ಫಾಲೋ ಮಾಡಿ ಸಾಕು!
ಈ ಬಗ್ಗೆ ಇದೀಗ PBI Fact Check ಎನ್ನುವ ಸಂಸ್ಥೆಯು ವಿಚಾರಣೆ ನಡೆಸಿ, ಕ್ರಾಸ್ ವೆರಿಫೈ ಮಾಡಿ ಮಾಹಿತಿ ತಂದಿದ್ದು, ಇದರ ಅನುಸಾರ ಸ್ಟಾರ್ ಮಾರ್ಕ್ ಹೊಂದಿರುವ 500 ರೂಪಾಯಿಯ ನೋಟ್ ನ ಅಸಲಿ ಸತ್ಯ ಹೊರಬಂದಿದೆ. ಅದು ಏನು ಎಂದು ನೋಡುವುದಾದರೆ, ಸ್ಟಾರ್ ಮಾರ್ಕ್ ಹೊಂದಿರುವ ನೋಟ್ ನಕಲಿ ನೋಟ್ ಅಲ್ಲ ಎಂದು ತಿಳಿದುಬಂದಿದೆ. 2016 ರಿಂದಲೂ ಕೂಡ ಸ್ಟಾರ್ ಮಾರ್ಕ್ ಇರುವ 500 ರೂಪಾಯಿಯ ನೋಟ್ ಗಳು ಚಾಲ್ತಿಯಲ್ಲಿದೆ ಎಂದು ಕೂಡ ಮಾಹಿತಿ ಸಿಕ್ಕಿದೆ. ಜನರು ಕೂಡ ಇದನ್ನು ಬಳಕೆ ಮಾಡುತ್ತಿದ್ದಾರೆ.
ಆದರೆ ಇವುಗಳು ನಕಲಿ ನೋಟ್ ಅಲ್ಲ, ಕೆಲವೊಮ್ಮೆ ದೋಷದ ಜೊತೆಗೆ ಪ್ರಿಂಟ್ ಆಗಿರುವ 500 ರೂಪಾಯಿಯ ನೋಟ್ ಗಳಿಗೆ ಈ ರೀತಿ ಸ್ಟಾರ್ ಮಾರ್ಕ್ ಜೊತೆಗೆ ಬಿಡುಗಡೆ ಮಾಡಲಾಗುತ್ತಿದೆ, ನೋಟ್ ನಲ್ಲಿ ಅಕ್ಷರಗಳು ಶುರುವಾಗಿ, ನಂಬರ್ ಗಳು ಶುರುವಾಗುವ ಮೊದಲು ಈ ಒಂದು ಸ್ಟಾರ್ ಮಾರ್ಕ್ ನೋಡಬಹುದು. ಆದರೆ ಇದು ನಕಲಿ ನೋಟ್ ಅಲ್ಲಿ, ಕಾನೂನಿನ ಅನುಮತಿ ಇರುವ, ಅಧಿಕತ ನೋಟ್ ಎಂದು ಮಾಹಿತಿ ಸಿಕ್ಕಿದೆ, ಜನರು ಈ ನೋಟ್ ಬಳಸಬಹುದು.
ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ಧಿಡೀರ್ ಶಾಕ್! ಇನ್ಮುಂದೆ ದುಬಾರಿಯಾಗಲಿದೆ ಕಾರು, ಮನೆ ಮೇಲಿನ ಇಎಂಐ
ಇನ್ನು ಒಂದು ನೋಟ್ ನಕಲಿ ಎಂದು ಪತ್ತೆ ಹಚ್ಚುವುದು ಹೇಗೆ? ಇದನ್ನು ನೋಟ್ ನೋಡಿ ಕಂಡುಹಿಡಿಯುವ ಪ್ರಯತ್ನ ಮಾಡಬಹುದು. ಈ ನೋಟ್ ಗಳು ಸಾಮಾನ್ಯ ನೋಟ್ ಗಿಂತ ತೆಳುವಾಗಿ ಇರುತ್ತದೆ. ನಮ್ಮ ದೇಶದ ನೋಟ್ ಗಳ ವಿಷಯದಲ್ಲಿ ಬೇರೆ ಬೇರೆ ಬಣ್ಣಗಳು ಇರುತ್ತದೆ. ಅದೆಲ್ಲವನ್ನು ಕೂಡ ನೀವು ಚೆಕ್ ಮಾಡಿ, ಆ ನೋಟ್ ಅಸಲಿ ಅಥವಾ ನಕಲಿ ಎನ್ನುವುದನ್ನ ಕಂಡು ಹಿಡಿಯಬಹುದು.
Is this note with star mark fake or original
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.