ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ಧಿಡೀರ್ ಶಾಕ್​! ಇನ್ಮುಂದೆ ದುಬಾರಿಯಾಗಲಿದೆ ಕಾರು, ಮನೆ ಮೇಲಿನ ಇಎಂಐ

Story Highlights

ಹೋಮ್ ಲೋನ್ (Home Loan), ಪರ್ಸನಲ್ ಲೋನ್ (Personal Loan), ವೆಹಿಕಲ್ ಲೋನ್ (Vehicle Loan)ಹೀಗೆ ಯಾವುದೇ ಥರದ ಲೋನ್ ಆಗಿದ್ದರೂ ಸಹ, ಅವುಗಳನ್ನು ಪಡೆದು Loan EMI ಕಟ್ಟುತ್ತಿರುವ ಗ್ರಾಹಕರಿಗೆ ಇದು ತೊಂದರೆ ಆಗಲಿದೆ

SBI ಇದು ನಮ್ಮ ದೇಶದಲ್ಲಿ ಅತಿಹೆಚ್ಚು ಗ್ರಾಹಕರನ್ನು ಹೊಂದಿರುವ ಬ್ಯಾಂಕ್ ಆಗಿದೆ. ಕೋಟ್ಯಾಂತರ ಜನರು State Bank Of Inida ನಲ್ಲಿ ಬ್ಯಾಂಕ್ ಅಕೌಂಟ್ ಹೊಂದಿದ್ದು, ಅವರುಗಳು ಬ್ಯಾಂಕ್ ಸೇವೆಯ ಮೇಲೆ ವಿಶ್ವಾಸವನ್ನು ಇಟ್ಟಿದ್ದಾರೆ.

ಇನ್ನಷ್ಟು ಜನರು SBI ಇಂದ Loan ಸಹ ಪಡೆದುಕೊಂಡಿದ್ದಾರೆ. ಆದರೆ ಇದೀಗ SBI ತಮ್ಮ ವಿಶ್ವಾಸಾರ್ಹ ಗ್ರಾಹಕರಿಗೆ ಒಂದು ದೊಡ್ಡ ಶಾಕ್ ನೀಡಿದೆ, ಇದರಿಂದಾಗಿ ಜನರು ಪ್ರತಿ ತಿಂಗಳು ಪಾವತಿ ಮಾಡುವ EMI ಹೆಚ್ಚಾಗಲಿದ್ದು, ಅಷ್ಟಕ್ಕೂ ಏನಾಗಿದೆ ಎಂದು ತಿಳಿಯೋಣ..

SBI ನಲ್ಲಿ ಹೋಮ್ ಲೋನ್, ವೆಹಿಕಲ್ ಲೋನ್, ಪರ್ಸನಲ್ ಲೋನ್ ಇದೆಲ್ಲವನ್ನು ಪಡೆದ ಗ್ರಾಹಕರಿಗೆ ಇದು ಬೇಸರದ ಸುದ್ದಿ ಆಗಿದ್ದು, ಇದೀಗ SBI ದಿಢೀರ್ ಎಂದು Marginal Cost of Funds Based Lending Rate (MCLR) ಅನ್ನು ಜಾಸ್ತಿ ಮಾಡಿದೆ. RBI ಸುಮಾರು 1 ವರ್ಷದಿಂದ ಕೂಡ ರೆಪೋ ರೇಟ್ ಹೆಚ್ಚಿಸಿಲ್ಲ, ಆದರೆ SBI 10 ಬೇಸಿಸ್ ಪಾಯಿಂಟ್ಸ್ ಗಳನ್ನು ಸಾಲದ ಮೇಲಿನ ದರದಲ್ಲಿ ಹೆಚ್ಚಿಸಲಾಗಿದೆ. ಇದರಿಂದ SBI ಗ್ರಾಹಕರು ಪಾವತಿ ಮಾಡುವ EMI ಮೊತ್ತ ಕೂಡ ಹೆಚ್ಚಾಗಲಿದೆ.

ಈ ಹೊಸ ದರ ಇವತ್ತಿನಿಂದಲೇ ಜಾರಿಗೆ ಬರುತ್ತದೆ ಎಂದು ತಿಳಿಸಲಾಗಿದೆ. ಈ ಮೊದಲು ಜೂನ್ ತಿಂಗಳಿನಲ್ಲಿ MCLR ಅನ್ನು ಜಾಸ್ತಿ ಮಾಡಲಾಗಿತ್ತು, ಅದಕ್ಕಿಂತ ಮೊದಲು 8.20 ಇಂದ 9.1 ಇತ್ತು. ಆದರೆ ಈಗ ಮತ್ತೆ ಹೆಚ್ಚಿಸಲಾಗಿದ್ದು, 1 ತಿಂಗಳು ಮತ್ತು 3 ತಿಂಗಳ ಸಮಯದ ಸಾಲದ ಬಡ್ಡಿದರ 8.45% ಇಂದ 8.50% ಗೆ ಹೆಚ್ಚಿಸಲಾಗಿದೆ. ಇನ್ನು 6 ತಿಂಗಳ ಅವಧಿಯ ಸಾಲದ ದರವನ್ನು 8.85% ಇಂದ 8.95% ವರೆಗು ಏರಿಕೆ ಮಾಡಲಾಗಿದೆ. 2 ವರ್ಷದ ಸಾಲದ ಮೊತ್ತವನ್ನು 9.05% ಗೆ ಏರಿಸಲಾಗಿದೆ. ಹಾಗೆಯೇ 3 ವರ್ಷದ ಅವಧಿಯ ಸಾಲಕ್ಕೆ, 9.10% ಏರಿಸಲಾಗಿದೆ.

ಲೋನ್‌ ತಗೊಂಡು EMI ಕಟ್ಟಲು ಆಗುತ್ತಿಲ್ಲ ಅಂತ ಚಿಂತೆ ಬೇಡ, ಈ ಟಿಪ್ಸ್ ಫಾಲೋ ಮಾಡಿ ಸಾಕು!

ಇದು ಬ್ಯಾಂಕ್ ಲೋನ್ ಪಡೆದಿರುವವರಿಗೆ ಹೊರೆ ಆಗುತ್ತದೆ. ಹೋಮ್ ಲೋನ್ (Home Loan), ಪರ್ಸನಲ್ ಲೋನ್ (Personal Loan), ವೆಹಿಕಲ್ ಲೋನ್ (Vehicle Loan)ಹೀಗೆ ಯಾವುದೇ ಥರದ ಲೋನ್ ಆಗಿದ್ದರೂ ಸಹ, ಅವುಗಳನ್ನು ಪಡೆದು Loan EMI ಕಟ್ಟುತ್ತಿರುವ ಗ್ರಾಹಕರಿಗೆ ಇದು ತೊಂದರೆ ಆಗಲಿದ್ದು, ಜೂನ್ ತಿಂಗಳಿನಲ್ಲಿ MCLR ಹೆಚ್ಚಿಸಿತ್ತು SBI. ಇದೀಗ ಮತ್ತೊಮ್ಮೆ MCLR ದರವನ್ನು ಹೆಚ್ಚಿಸಿರುವುದು ಗ್ರಾಹಕರಿಗೆ ಲೋನ್ EMI ಕಟ್ಟುವುದಕ್ಕೆ ಹೊರೆ ಅನ್ನಿಸುವ ಹಾಗೆ ಮಾಡಿದೆ. ಇದೀಗ ಮತ್ತೆ ಬಡ್ಡಿ ಹೆಚ್ಚಾಗಿದೆ.

MCRL ಎನ್ನುವುದು ಗ್ರಾಹಕರು ಕಟ್ಟುವ ಸಾಲ ಎಷ್ಟು ಎನ್ನುವುದನ್ನು ಸೂಚಿಸುತ್ತದೆ.

MCRL ದರವನ್ನು ನಿಗದಿ ಮಾಡಿರುವಷ್ಟೇ ಸಾಲದ ಬಡ್ಡಿಯನ್ನು ಬ್ಯಾಂಕ್ ವಿಧಿಸಬೇಕು, ಅದಕ್ಕಿಂತ ಕಡಿಮೆ ವಿಧಿಸುವ ಹಾಗಿಲ್ಲ. EMI ಪಾವತಿ ಮಾಡುವ ಹೊರೆಯನ್ನು ಕಡಿಮೆ ಮಾಡಿಕೊಳ್ಳಬೇಕು ಎಂದುಕೊಂಡಿದ್ದ ಗ್ರಾಹಕರಿಗೆ ಇದೀಗ ಬೇಸರದ ಸುದ್ದಿ ಎದುರಾಗಿದೆ.

ನಮ್ಮ ದೇಶದ ವಿಶ್ವಾಸಾರ್ಹ ಬ್ಯಾಂಕ್ ಆಗಿರುವ SBI ಈ ರೀತಿ MCLR ದರವನ್ನು ಮತ್ತೆ ಏರಿಸಿರುವುದು, ಅಲ್ಲಿ ಲೋನ್ ಪಡೆದಿರುವ ಸಾಕಷ್ಟು ಜನರಿಗೆ ಹೊರೆ ಉಂಟು ಮಾಡಲಿದೆ. ಇದರಿಂದ ಜನರಿಗೂ ಬೇಸರ ಶುರುವಾಗಿದೆ.

EMI on car, house will be more expensive for State Bank customers

Related Stories