ATM ನಿಂದ ಹರಿದ ನೋಟು ಹೊರಬಂದ್ರೆ ಏನು ಮಾಡಬೇಕು ಗೊತ್ತಾ? ಇಲ್ಲಿದೆ ಮಹತ್ವದ ಮಾಹಿತಿ

ಸಾಮಾನ್ಯವಾಗಿ ನೋಟುಗಳು (currency) ತುಂಬಾ ಹಳೆಯದಾಗಿದ್ದರೆ ಅಥವಾ ಹರಿದಿದ್ದರೆ ಅದನ್ನ ಯಾವುದೇ ಅಂಗಡಿಯವರು ಅಥವಾ ಟ್ಯಾಕ್ಸಿ ಓಡಿಸುವವರು ಕೂಡ ತೆಗೆದುಕೊಳ್ಳುವುದಿಲ್ಲ. ಬೇರೆ ನೋಟು ಕೊಡಿ ಅಂತ ಕೇಳುತ್ತಾರೆ. ಅಂತದ್ರಲ್ಲಿ ಎಟಿಎಂ (ATM) ನಿಂದಲೇ ಹರಿದ ನೋಟು ಆಚೆ ಬಂದ್ರೆ?
ಹರಿದ ನೋಟು ಸ್ವೀಕರಿಸುತ್ತಾ ಬ್ಯಾಂಕ್?
ಹೌದು ಎಟಿಎಂ ನಿಂದಲೇ (Bank ATM) ಹರಿದ ನೋಟು (Torn currency) ಆಚೆ ಬಂದರೆ ಪ್ಯಾನಿಕ್ ಆಗೋದು ಸಹಜ. ಈ ನೋಟನ್ನು ನಾನು ಏನು ಮಾಡಲಿ ಯಾರು ತೆಗೆದುಕೊಳ್ಳುತ್ತಾರೆ, ಬ್ಯಾಂಕ್ (Bank) ನಿಂದನೆ ಹರಿದ ನೋಟು ಸಿಕ್ಕಿದರೆ ಏನು ಮಾಡಬೇಕು ಎಂದು ಹಲವು ಪ್ರಶ್ನೆಗಳು ನಮ್ಮನ್ನು ಕಾಡುತ್ತವೆ. ಆದರೆ ಚಿಂತೆ ಮಾಡುವ ಅಗತ್ಯವಿಲ್ಲ ಆರ್‌ಬಿ ಐ (RBI) ಇದಕ್ಕಾಗಿ ಹೊಸ ನಿಯಮವನ್ನು ಹೊರಡಿಸಿದೆ.
ಗೃಹಲಕ್ಷ್ಮಿಯರಿಗಾಗಿಯೇ ಇರುವ ಸರ್ಕಾರಿ ಯೋಜನೆಗಳು ಇವು! ಎಷ್ಟೋ ಜನಕ್ಕೆ ಇವುಗಳ ಬಗ್ಗೆ ಗೊತ್ತಿಲ್ಲ
ಆರ್ ಬಿ ಐ ಹೊಸ ನಿಯಮ
ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ತಿಳಿಸಿರುವ ಪ್ರಕಾರ ಎಟಿಎಂನಿಂದ ಹಣ ತೆಗೆಯುವಾಗ ಹರಿದ ನೋಟು ಸಿಕ್ಕರೆ ಅದನ್ನು ಬ್ಯಾಂಕ್ ಗೆ ನೀಡಿ ಹಣ ವಿನಿಮಯ (exchange) ಮಾಡಿಕೊಳ್ಳಬಹುದು. ಈ ಸುದ್ದಿ ಕೇಳಿ ನಿಜಕ್ಕೂ ನಿಮಗೆ ಸಮಾಧಾನ ಆಗಿರಬಹುದು.
ಯಾಕೆಂದರೆ ಬ್ಯಾಂಕ್ನಿಂದಲೇ ನಕಲಿ ಅಥವಾ ಹರಿದ ನೋಟುಗಳು ಲಭ್ಯವಾದರೆ ಏನು ಮಾಡಬೇಕು ಎಂದು ಯೋಚನೆ ಆಗುತ್ತದೆ. ಆದರೆ ಈಗ ಆರ್ ಬಿ ಐ ತಿಳಿಸಿರುವಂತೆ ನೀವು ಹರಿದ ನೋಟುಗಳನ್ನು ಬ್ಯಾಂಕ್ ನಲ್ಲಿಯೇ ವಿನಿಮಯ ಮಾಡಿಕೊಳ್ಳಬಹುದು.
2016ರ ನಿಯಮ

ಬ್ಯಾಂಕ್ ಗಳು (Banks) ಇಂತಹ ನೋಟುಗಳನ್ನು ತೆಗೆದುಕೊಳ್ಳಲು ನಿರಾಕರಿಸಿದರೆ ತಕ್ಷಣವೇ ಆರ್‌ಬಿಐಗೆ ಗ್ರಾಹಕರು ದೂರು ನೀಡಬಹುದು. ಇದರಿಂದ ಬ್ಯಾಂಕ್ ಗಳು 10 ಸಾವಿರ ರೂಪಾಯಿಗಳವರೆಗೆ ದಂಡ ಪಾವತಿಸಬೇಕಾಗುತ್ತದೆ.
ಜೇಬಲ್ಲಿ ಕೇವಲ 10,000 ಇದ್ರೆ ಸಾಕು ತಿಂಗಳಿಗೆ ಲಕ್ಷ ಲಕ್ಷ ಗಳಿಸುವ ಈ ಬಿಸಿನೆಸ್ ಆರಂಭಿಸಬಹುದು
ಇವುಗಳನ್ನು ಪರಿಶೀಲಿಸಿ
ಬ್ಯಾಂಕ್ನಿಂದ ತೆಗೆದುಕೊಂಡು ನೋಟಿನ ಕ್ರಮಸಂಖ್ಯೆ, ಮಹಾತ್ಮಾ ಗಾಂಧಿ ಅವರ ವಾಟರ್‌ಮಾರ್ಕ್ ಮತ್ತು ರಾಜ್ಯಪಾಲರ ಪ್ರಮಾಣವಚನ ಸರಿಯಾಗಿ ಕಾಣಿಸದೆ ಇದ್ದಾಗ ಬ್ಯಾಂಕ್ ಅದನ್ನು ಬದಲಾಯಿಸಬೇಕಾಗುತ್ತದೆ.
ನೋಟುಗಳ ವಿನಿಮಯ ಮಿತಿ
ನೋಟುಗಳ ವಿನಿಮಯ ಮಿತಿಯ ಬಗ್ಗೆಯೂ ಕೂಡ ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ. ದಿನದಲ್ಲಿ ಗರಿಷ್ಠ 20 ನೋಟುಗಳ ವಿನಿಮಯ ಮಾಡಿಕೊಳ್ಳಬಹುದು. ಆದರೆ ವಿನಿಮಯ ನೋಟುಗಳ ಮೊತ್ತ 5,000ಗಳನ್ನು ಮೀರಿರಬಾರದು. ಇನ್ನು ವಿನಿಮಯ ಮಾಡಿಕೊಳ್ಳುವಾಗ ದೀರ್ಘವಾದ ಪ್ರಕ್ರಿಯೆ ಇರುತ್ತದೆ. ಹರಿದ ನೋಟುಗಳ ವಿನಿಮಯಕ್ಕೆ ಹೆಚ್ಚು ಸಮಯವೂ ಬೇಕಾಗುತ್ತದೆ.
ಅಪ್ಪಿತಪ್ಪಿಯೂ ಚಿನ್ನ ಮತ್ತು ಬೆಳ್ಳಿ ಒಡವೆಗಳನ್ನು ಒಟ್ಟಿಗೆ ಇಡಬೇಡಿ! ಇಟ್ಟರೆ ಏನಾಗುತ್ತದೆ ಗೊತ್ತಾ?
ಹರಿದ ನೋಟುಗಳ ವಿನಿಮಯ ಮಾಡಿಕೊಳ್ಳುವುದು ಹೇಗೆ?
ಇದಕ್ಕಾಗಿ ನೀವು ಎಟಿಎಂನಿಂದ ಹಣ ತೆಗೆದಿರುವ ದಾಖಲೆಯನ್ನು ಬ್ಯಾಂಕ್ ಗೆ ನೀಡಬೇಕು. ನೀವು ಯಾವ ಎಟಿಎಂ ನಲ್ಲಿ ಹಣ ತೆಗೆದಿದ್ದರೂ ಹಣ ತೆಗೆದುಕೊಂಡು ಮೊದಲಾದ ದಾಖಲೆಗಳನ್ನು ನೀಡಬೇಕಾಗುತ್ತದೆ.
ಇದಕ್ಕಾಗಿ ಒಂದು ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು. ಬಳಿಕ ಅದರಲ್ಲಿ ಕೇಳಲಾಗಿರುವ ಎಲ್ಲಾ ದಾಖಲೆಗಳನ್ನು ಸಲ್ಲಿಸಬೇಕು. ನಂತರ ಬ್ಯಾಂಕಿನಿಂದ ನೀವು ಎಟಿಎಂ ನಲ್ಲಿ ಪಡೆದುಕೊಂಡ ಹರಿದ ನೋಟಿನ ಬದಲಾಗಿ ಹಣ ಹಿಂಪಡೆಯಬಹುದು.
Do you know what to do if a torn note comes out of an Bank ATM



