ಗೃಹಲಕ್ಷ್ಮಿಯರಿಗಾಗಿಯೇ ಇರುವ ಸರ್ಕಾರಿ ಯೋಜನೆಗಳು ಇವು! ಎಷ್ಟೋ ಜನಕ್ಕೆ ಇವುಗಳ ಬಗ್ಗೆ ಗೊತ್ತಿಲ್ಲ

ನೀವು ಅಂಚೆ ಕಚೇರಿ (Post Office Scheme) ಹಾಗೂ ಬ್ಯಾಂಕುಗಳಲ್ಲಿ (Banks) ಸರ್ಕಾರದ ಪ್ರಮುಖ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ (Investment) ಮಾಡಿ ಅತಿ ಹೆಚ್ಚು ಲಾಭ ಗಳಿಸಬಹುದಾಗಿದೆ.

Bengaluru, Karnataka, India
Edited By: Satish Raj Goravigere

ಕೇಂದ್ರ ಸರ್ಕಾರ (Central government) ಮಹಿಳೆಯರ ಸಬಲೀಕರಣಕ್ಕಾಗಿ (women empowerment) ಆರ್ಥಿಕವಾಗಿ ಹೆಚ್ಚು ಸಶಕ್ತರನ್ನಾಗಿ ಮಾಡಲು ಹೆಣ್ಣುಮಕ್ಕಳಿಗೆ ಸಾಕಷ್ಟು ಯೋಜನೆಗಳನ್ನು ಪರಿಚಯಿಸಿದೆ.

ಯೋಜನೆಗಳ ಬಗ್ಗೆ ತಿಳಿದುಕೊಂಡು ಸರಿಯಾಗಿ ಅದರ ಪ್ರಯೋಜನ ಪಡೆದುಕೊಂಡರೆ ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಬದುಕಬಹುದು. ಹಾಗಾದ್ರೆ ಕೇಂದ್ರ ಸರ್ಕಾರ ಪರಿಚಯಿಸಿರುವ ಯೋಜನೆಗಳು (Govt Schemes) ಯಾವವು ನೋಡೋಣ.

Such women will get 11,000 rupees, 90 Percent people do not know about this scheme

ನೀವು ಅಂಚೆ ಕಚೇರಿ (Post Office Scheme) ಹಾಗೂ ಬ್ಯಾಂಕುಗಳಲ್ಲಿ (Banks) ಸರ್ಕಾರದ ಪ್ರಮುಖ ಉಳಿತಾಯ ಯೋಜನೆಗಳಾಗಿರುವ ಪಿಪಿಎಫ್, ಮಹಿಳಾ ಸಮ್ಮಾನ್ ಯೋಜನೆ, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಗಳಲ್ಲಿ ಹೂಡಿಕೆ (Investment) ಮಾಡಿ ಅತಿ ಹೆಚ್ಚು ಲಾಭ ಗಳಿಸಬಹುದಾಗಿದೆ.

ಜೇಬಲ್ಲಿ ಕೇವಲ 10,000 ಇದ್ರೆ ಸಾಕು ತಿಂಗಳಿಗೆ ಲಕ್ಷ ಲಕ್ಷ ಗಳಿಸುವ ಈ ಬಿಸಿನೆಸ್ ಆರಂಭಿಸಬಹುದು

ಸಾರ್ವಜನಿಕ ಭವಿಷ್ಯ ನಿಧಿ

ಇದು ಅತ್ಯುತ್ತಮ ಹೂಡಿಕೆ (investment) ಮಾರ್ಗವಾಗಿದ್ದು ಇದರಲ್ಲಿ ಹಣ ಹೂಡಿಕೆ ಮಾಡಿದರೆ ಅತಿ ಹೆಚ್ಚು ಲಾಭ ಪಡೆದುಕೊಳ್ಳಲು ಸಾಧ್ಯವಿದೆ. ಯೋಜನೆಯಲ್ಲಿ ಮಹಿಳೆಯರು ಹೂಡಿಕೆ ಮಾಡಿ 7.1% ಬಡ್ಡಿದರದಲ್ಲಿ ವಾರ್ಷಿಕ ಗರಿಷ್ಠ 1.5 ಲಕ್ಷ ರೂಪಾಯಿಗಳನ್ನು ಗಳಿಸಿಕೊಳ್ಳಬಹುದು. ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ತೆರಿಗೆ ವಿನಾಯಿತಿ ಕೂಡ ಲಭ್ಯವಿದೆ.

ಮಹಿಳಾ ಉಳಿತಾಯ ಯೋಜನೆ: (MSSC)

Government Schemes for Womenಮಹಿಳಾ ಉಳಿತಾಯ ಯೋಜನೆ ಅಥವಾ ಮಹಿಳಾ ಸನ್ಮಾನ ಪ್ರಮಾಣ ಪತ್ರ 2023 -24ರ ಬಜೆಟ್ (Budget) ನಲ್ಲಿ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಪರಿಚಯಿಸಿದರು. ಇದು ಕೂಡ ಕೇವಲ ಮಹಿಳೆಯರಿಗೆ ಮಾತ್ರ ಮೀಸಲಾಗಿದ್ದು ಮಹಿಳೆಯರು ಹೆಚ್ಚು ಲಾಭಗಳಿಸಿಕೊಳ್ಳುವಂತಹ ಯೋಜನೆ ಇದಾಗಿದೆ.

ಕನಿಷ್ಠ ಸಾವಿರ ರೂಪಾಯಿಗಳಿಂದ ಗರಿಷ್ಟ ಎರಡು ಲಕ್ಷ ರೂಪಾಯಿಗಳನ್ನು ಎರಡು ವರ್ಷಗಳ ಅವಧಿಗೆ ಉಳಿತಾಯ ಮಾಡಬಹುದು. 10 ವರ್ಷದ ಒಳಗಿನ ಬಾಲಕಿಯರ ಹೆಸರಿನಲ್ಲಿಯೂ ಪಾಲಕರು ಹೂಡಿಕೆ ಮಾಡಬಹುದು.

ಅಪ್ಪಿತಪ್ಪಿಯೂ ಚಿನ್ನ ಮತ್ತು ಬೆಳ್ಳಿ ಒಡವೆಗಳನ್ನು ಒಟ್ಟಿಗೆ ಇಡಬೇಡಿ! ಇಟ್ಟರೆ ಏನಾಗುತ್ತದೆ ಗೊತ್ತಾ?

ರಾಷ್ಟ್ರೀಯ ಉಳಿತಾಯ ಯೋಜನೆ

ಐದು ವರ್ಷಗಳವರೆಗೆ ಮಹಿಳೆಯರು ಹೂಡಿಕೆ ಮಾಡಬಹುದಾದ ಯೋಜನೆ ಇದಾಗಿದೆ. ಇದರಲ್ಲಿ ವಾರ್ಷಿಕವಾಗಿ ಕನಿಷ್ಠ 250ಗಳಿಂದ ಗರಿಷ್ಠ 1.5 ಲಕ್ಷ ರೂಪಾಯಿಗಳ ವರೆಗೆ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ (Savings Scheme) ಹೂಡಿಕೆ ಮಾಡಿದರೆ ಮಹಿಳೆಯರಿಗೆ 7.7% ಬಡ್ಡಿ ನೀಡಲಾಗುವುದು.

ಟೈಮ್ ಠೇವಣಿ

ಇನ್ನೊಂದು ಅತ್ಯುತ್ತಮ ಹೂಡಿಕೆ ಯೋಜನೆ ಅಂದರೆ ಟೈಮ್ ಠೇವಣಿ (Time deposit). ಇದನ್ನು ಪೋಸ್ಟ್ ಆಫೀಸ್ (post office) ನಲ್ಲಿ ಆರಂಭಿಸಬೇಕು. ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಮಹಿಳೆಯರು ಠೇವಣಿ ಹಣಕ್ಕೆ 7.5% ವರೆಗೆ ಬಡ್ಡಿ ಪಡೆಯುತ್ತಾರೆ.

ಇವಿಷ್ಟು ಸರ್ಕಾರದಿಂದ ಘೋಷಿತವಾಗಿರುವ ಅತ್ಯಂತ ಭರವಸೆಯ ಉಳಿತಾಯ ಯೋಜನೆಗಳಾಗಿದ್ದು ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬನೆ ಜೀವನ ನಡೆಸಲು ಸಹಕಾರಿಯಾಗಿವೆ.

ಯಾವುದೇ ಬ್ಯಾಂಕ್‌ನಲ್ಲಿ ಚಿನ್ನ ಅಡವಿಟ್ಟು ಸಾಲ ಮಾಡಿರುವವರಿಗೆ ಗುಡ್ ನ್ಯೂಸ್! ಹೊಸ ಆದೇಶ

Government Schemes For Women Apply From Bank and Post Office