₹10 ಲಕ್ಷ ಲೋನ್‌ಗೆ ಬಡ್ಡಿ ಎಷ್ಟು? EMI ಎಷ್ಟು ಕಟ್ಟಬೇಕಾಗುತ್ತೆ! ಇಲ್ಲಿದೆ ಲೆಕ್ಕಾಚಾರ
ಲೋನ್ ಪಡೆದುಕೊಳ್ಳುವ ಮೊದಲು EMI ಯ ಲೆಕ್ಕಾಚಾರ, ಸರಿಯಾದ ಬ್ಯಾಂಕ್ ಆಯ್ಕೆ ಮತ್ತು ಡಾಕ್ಯುಮೆಂಟ್ ಸಿದ್ಧತೆ ಅಗತ್ಯ. ಇಲ್ಲದಿದ್ದರೆ ಸಾಲಬಾದೆ, ಕ್ರೆಡಿಟ್ ಸ್ಕೋರ್ ಕುಸಿತ ಸಾಧ್ಯ.
Publisher: Kannada News Today (Digital Media)
- ₹10 ಲಕ್ಷ ಲೋನ್‌ಗೆ ತಿಂಗಳಿಗೆ ಎಷ್ಟು EMI?
- EMI ಕಡಿಮೆ ಮಾಡಲು ಯಾವ ಸೂತ್ರಗಳು?
- ಮುಖ್ಯ ಬ್ಯಾಂಕ್‌ಗಳ ಬಡ್ಡಿದರಗಳ ಹೋಲಿಕೆ ಇಲ್ಲಿದೆ
Loan : ಅಧಿಕ ಬಡ್ಡಿದರದ ಲೋನ್ ತೆಗೆದುಕೊಂಡು ನಂತರ ತಲೆನೋವಿಗೆ ಒಳಗಾಗುವುದು ಸಾಮಾನ್ಯ. ಆದರೆ, ನೀವು ಲೋನ್ ತೆಗೆದುಕೊಳ್ಳುವ ಮೊದಲು ಸರಿಯಾದ EMI ಲೆಕ್ಕಾಚಾರ ಮಾಡಿಕೊಳ್ಳುವುದು ಅತೀ ಮುಖ್ಯ. ಹಾಗೆ ಮಾಡಿದರೆ ನಿಮ್ಮ ತಿಂಗಳ ಖರ್ಚುಗಳಲ್ಲಿ ಸಮತೋಲನ ಇರುತ್ತದೆ.
ಹೋಮ್ ಲೋನ್ (Home Loan) ಅಥವಾ ಪರ್ಸನಲ್ ಲೋನ್ (Personal Loan) ಆಗಿರಲಿ, ಯಾವಾಗಲೂ ಹೆಚ್ಚಿನ down payment ಮಾಡುವುದು ಉತ್ತಮ. ಇದರಿಂದ EMI ಕಡಿಮೆಯಾಗುತ್ತದೆ. ಜೊತೆಗೆ ಉತ್ತಮ CIBIL Score (750+) ಇಟ್ಟುಕೊಳ್ಳುವುದು ನಿಮಗೆ ಕಡಿಮೆ ಬಡ್ಡಿದರದ ಲೋನ್ ದೊರೆಯುವ ಸಾಧ್ಯತೆ ಹೆಚ್ಚಿಸುತ್ತದೆ.
ಇದನ್ನೂ ಓದಿ: ಬರಿ ₹500 ರೂಪಾಯಿಗೆ ಲಕ್ಷ ಲಕ್ಷ ಗಳಿಸುವ ಪೋಸ್ಟ್ ಆಫೀಸ್ ಯೋಜನೆಗಳು ಇವು
₹10 ಲಕ್ಷ ಲೋನ್‌ಗೆ EMI ಎಷ್ಟು? (2025 ಲೆಕ್ಕಾಚಾರ)
ಒಬ್ಬ ವ್ಯಕ್ತಿ ₹10 ಲಕ್ಷ ಲೋನ್ ತೆಗೆದುಕೊಂಡರೆ, ಅವಧಿ ಮತ್ತು ಬಡ್ಡಿದರದ ಮೇಲೆ ಅವನ EMI ಮತ್ತು ಒಟ್ಟು ಪಾವತಿಸಬೇಕಾದ ಮೊತ್ತ ಹೇಗಿರುತ್ತೆ ನೋಡಿ:
ಅವಧಿ | ಬಡ್ಡಿ | EMI | ಒಟ್ಟು ಪಾವತಿ | ಬಡ್ಡಿ ಮೊತ್ತ |
---|---|---|---|---|
1 ವರ್ಷ | 10% | ₹87,915 | ₹10,54,980 | ₹54,980 |
3 ವರ್ಷ | 10% | ₹32,267 | ₹11,61,612 | ₹1,61,612 |
5 ವರ್ಷ | 10% | ₹21,247 | ₹12,74,820 | ₹2,74,820 |
10 ವರ್ಷ | 10% | ₹13,215 | ₹15,85,800 | ₹5,85,800 |
15 ವರ್ಷ | 10% | ₹10,746 | ₹19,34,280 | ₹9,34,280 |
ಸಾಲ ಪಾವತಿಯಲ್ಲಿ ತಡ ಮಾಡಿದರೆ ಮಾತ್ರವಲ್ಲ, ಹೆಚ್ಚಿನ ಅವಧಿ ಆಯ್ಕೆ ಮಾಡಿದರೆ ಹೆಚ್ಚಾಗಿ ಬಡ್ಡಿ ಕೊಡುವ ಸಾಧ್ಯತೆ ಇದೆ. ಕೆಲವರು pre-payment ಮಾಡಿದರೂ ಲೆಕ್ಕ ಹಾಕದೆ ಪ್ಲ್ಯಾನ್ ಮಾಡುತ್ತಾರೆ. ಇದರಿಂದ ಲಾಭದ ಬದಲಿಗೆ ನಷ್ಟವಾಗುತ್ತದೆ. EMI ಪಾವತಿಸಲು ಆಗದ ಸ್ಥಿತಿಗೆ ತಲುಪದಿರಲು ಮುಂಚಿತದ ಹಣಕಾಸು ಯೋಜನೆ ಮಾಡಬೇಕು.
ಇದನ್ನೂ ಓದಿ: ಹೊಸ ಮನೆಕಟ್ಟೋ ಕೆನರಾ ಬ್ಯಾಂಕ್ ಗ್ರಾಹಕರಿಗೆ ಕಡಿಮೆ ಬಡ್ಡಿಗೆ ಸಾಲ! ಬಂಪರ್ ಕೊಡುಗೆ
ಲೋನ್‌ಗೆ ಅಗತ್ಯವಿರುವ ಮುಖ್ಯ ದಾಖಲೆಗಳು
ಬ್ಯಾಂಕ್ ಅಥವಾ ಫೈನಾನ್ಸ್ ಸಂಸ್ಥೆಯಿಂದ ಯಾವುದೇ ರೀತಿಯ ಸಾಲ (loan) ಪಡೆಯಲು ಕೆಲ ಮುಖ್ಯ ದಾಖಲೆಗಳನ್ನು ಮುಂಚಿತವಾಗಿ ಸಿದ್ಧಪಡಿಸಿಕೊಳ್ಳುವುದು ಅತ್ಯವಶ್ಯಕ. ಇದು ನಿಮ್ಮ ಲೋನ್ ಪ್ರಕ್ರಿಯೆಯನ್ನು ವೇಗವಾಗಿ ಮುಗಿಸಲು ಸಹಾಯಕವಾಗುತ್ತದೆ:
ಇದನ್ನೂ ಓದಿ: ಬ್ಯಾಂಕ್ ಚೆಕ್ ಮೇಲೆ Only ಅಂತ ಬರೆಯೋದು ಏಕೆ ಗೊತ್ತಾ? 99% ಜನಕ್ಕೆ ಗೊತ್ತಿಲ್ಲ
- ಪಾನ್ ಕಾರ್ಡ್
- ಆಧಾರ್ ಕಾರ್ಡ್
- ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಸ್ಟೇಟ್ಮೆಂಟ್ (6 ತಿಂಗಳ)
- ಉದ್ಯೋಗ ದೃಢೀಕರಣ ಪತ್ರ
- ಹೋಮ್ ಲೋನ್‌ಗೆ – ಆಸ್ತಿ ದಾಖಲೆಗಳು
2025ರ ಶ್ರೇಷ್ಠ ಬ್ಯಾಂಕ್‌ಗಳು ಮತ್ತು ಬಡ್ಡಿದರಗಳ ಹೋಲಿಕೆ
ವಿವಿಧ ಬ್ಯಾಂಕ್‌ಗಳು ನೀಡುತ್ತಿರುವ ಹೋಮ್ ಲೋನ್ ಮತ್ತು ಪರ್ಸನಲ್ ಲೋನ್‌ಗಳ ಬಡ್ಡಿದರದಲ್ಲಿ ವ್ಯತ್ಯಾಸವಿದೆ. ಕೆಳಗಿನ ಟೇಬಲ್ ಮೂಲಕ 2025ರ ಅಂದಾಜು ಬಡ್ಡಿದರಗಳನ್ನು ಹೋಲಿಸಬಹುದು:
ಬ್ಯಾಂಕ್ ಹೆಸರು | ಹೋಮ್ ಲೋನ್ (%) | ಪರ್ಸನಲ್ ಲೋನ್ (%) |
---|---|---|
SBI | 8.5 – 9% | 11.5 – 14.5% |
HDFC | 8.7 – 9.3% | 10.75 – 13.5% |
ICICI | 8.75 – 9.5% | 11 – 15% |
Axis Bank | 8.8 – 9.5% | 12 – 16% |
EMI Planning Before Loan, A Must to Avoid Financial Stress