ಬ್ಯಾಂಕ್ ಖಾತೆಯಲ್ಲಿ ಹಣ ಇಲ್ಲದೆ ಇದ್ರೂ, ಪೇಮೆಂಟ್ ಮಾಡಬಹುದು! ಹೇಗೆ ಗೊತ್ತಾ?
ಇತ್ತೀಚಿನ ದಿನಗಳಲ್ಲಿ ನಾವು ಯಾವುದೇ ಬ್ಯಾಂಕಿಂಗ್ ವ್ಯವಹಾರ (bank transaction) ಮಾಡಬೇಕಿದ್ದರೂ ಕೂಡ ಬ್ಯಾಂಕುಗಳಿಗೆ (Banks) ಹೋಗುವುದೇ ಇಲ್ಲ, ಕೈಯಲ್ಲಿ ಮೊಬೈಲ್ ಹಿಡಿದು ಬ್ಯಾಂಕ್ ಅಪ್ಲಿಕೇಶನ್ (Bank application) ಗಳ ಮೂಲಕ ನಮ್ಮ ಎಲ್ಲಾ ಹಣಕಾಸಿನ ವ್ಯವಹಾರವನ್ನು ಮಾಡಿಕೊಳ್ಳುತ್ತೇವೆ.
ಅದು ಯುಪಿಐ ಪೇಮೆಂಟ್ (UPI Payment) ಜಾರಿಗೆ ಬಂದಾಗಿನಿಂದ ವಿವಿಧ ಪೇಮೆಂಟ್ ಅಪ್ಲಿಕೇಶನ್ (payment application) ಗಳ ಮೂಲಕ ಹಣವನ್ನು ಒಬ್ಬರ ಖಾತೆಯಿಂದ ಇನ್ನೊಬ್ಬರ ಖಾತೆಗೆ (Bank Account) ವರ್ಗಾವಣೆ ಮಾಡಬಹುದು.
ನೀವು ಎಲ್ಲಿಗೆ ಹೋಗಿ ಏನೇ ಖರೀದಿ ಮಾಡಿದರು ಯುಪಿಐ ಪೇಮೆಂಟ್ (UPI payment) ಕ್ಷಣ ಮಾತ್ರದಲ್ಲಿ ಮೊಬೈಲ್ ನಲ್ಲಿ ಮಾಡಿಕೊಳ್ಳಬಹುದು..
ಗ್ಯಾಸ್ ಸಿಲಿಂಡರ್ ಸಬ್ಸಿಡಿ ರದ್ದಾಗಲಿದೆ, ಕೂಡಲೇ ಈ ಕೆಲಸ ಮಾಡದಿದ್ರೆ ಸಿಗೋಲ್ಲ ಹಣ
ಯುಪಿಐ ನಲ್ಲಿ ಪೇ ಲೇಟರ್ ಸೌಲಭ್ಯ! (Upi pay later benefit)
ಸಾಮಾನ್ಯವಾಗಿ ನಾವು ಖರೀದಿ ಮಾಡಿದ ನಂತರ ತಕ್ಷಣಕ್ಕೆ ಹಣ ಪಾವತಿ ಮಾಡಲು ಸಾಧ್ಯವಾಗದೆ ಇದ್ದಾಗ ಕ್ರೆಡಿಟ್ ಕಾರ್ಡ್ (credit card) ಬಳಸುತ್ತೇವೆ. ಒಂದು ತಿಂಗಳವರೆಗೆ ಖಾತೆಯಲ್ಲಿ ಹಣ ಇಲ್ಲದೆ ಇದ್ದಾಗಲೂ ಕೂಡ ಕ್ರೆಡಿಟ್ ಕಾರ್ಡ್ ಮೂಲಕ ಯಾವುದೇ ರೀತಿಯ ಪೇಮೆಂಟ್ ಮಾಡಬಹುದು
ಇದೀಗ ಇದು ಕ್ರೆಡಿಟ್ ಕಾರ್ಡ್ ಗೆ ಮಾತ್ರ ಸೀಮಿತವಾಗಿರುವ ಸೌಲಭ್ಯವಾಗಿಲ್ಲ, ಯುಪಿಐ ನಲ್ಲಿಯೂ ಕೂಡ ನಿಮಗೆ ಪೇ ಲೇಟರ್ ಕ್ರೆಡಿಟ್ ಲೈನ್ (pay later credit line) ಸೌಲಭ್ಯ ನೀಡಲು ಬ್ಯಾಂಕ್ ಗಳು ಮುಂದಾಗಿವೆ.
ಬ್ಯಾಂಕ್ ನಲ್ಲಿ ಹಣ ಇಲ್ಲದೆ ಇದ್ದರೂ ಪಾವತಿ ಮಾಡಬಹುದು!
ಇತ್ತೀಚಿನ ದಿನಗಳಲ್ಲಿ ಗ್ರಾಹಕರಿಗೆ ಅನುಕೂಲವಾಗುವಂತಹ ಸಾಕಷ್ಟು ಬದಲಾವಣೆಗಳನ್ನು ಯುಪಿಐ ಪೇಮೆಂಟ್ ಗೆ ಸಂಬಂಧಪಟ್ಟಂತೆ ಮಾಡಲಾಗಿದೆ ಉದಾಹರಣೆಗೆ ನಿಮ್ಮ ಮೊಬೈಲ್ ನಲ್ಲಿ ಇಂಟರ್ನೆಟ್ (without Internet payment) ಇಲ್ಲದೆ ಇದ್ದಾಗಲೂ ಕೂಡ ನೀವು ಪೇಮೆಂಟ್ ಮಾಡಬಹುದು.
ಇದೀಗ ಮತ್ತೊಂದು ಹೊಸ ಫೀಚರ್ (new feature) ತರಲಾಗಿದ್ದು ಯುಪಿಐ ನಲ್ಲಿ ಕೂಡ ಪೇ ಲೇಟರ್ ಕ್ರೆಡಿಟ್ ಲೈನ್ ಸೌಲಭ್ಯ ನೀಡಲಾಗುತ್ತಿದೆ, ಅಂದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಒಂದು ರೂಪಾಯಿ ಇಲ್ಲದೆ ಇದ್ದರೂ ಕೂಡ ನೀವು ಖರೀದಿ ಮಾಡಿದ ವಸ್ತುವಿಗೆ ಪೇಮೆಂಟ್ ಮಾಡಬಹುದು.
ಸರ್ಕಾರಿ ನೌಕರಿ ಯಾವಾಗ ಎಲ್ಲಿ ಖಾಲಿ ಇರುತ್ತೆ? ಇಲ್ಲಿದೆ ಲಿಂಕ್, ಎಲ್ಲೇ ಕೆಲಸ ಖಾಲಿ ಇದ್ರೂ ಗೊತ್ತಾಗುತ್ತೆ
ಪೇ ಲೇಟರ್ ಯುಪಿಐ ನಲ್ಲಿ ಹೇಗೆ ವರ್ಕ್ ಆಗುತ್ತೆ?
ಪೂರ್ವ ಮಂಜೂರಾದ ಕ್ರೆಡಿಟ್ ಲೈನ್ ಅಂದರೆ ಪೇ ಲೇಟರ್ ಕ್ರೆಡಿಟ್ ಲೈನ್ ಯುಪಿಐ ಇನ್ನು ಮುಂದೆ ಲಭ್ಯವಿದೆ, ಹಣ ಇಲ್ಲದೆ ಇರುವಾಗ ಕೂಡ ಪೇಮೆಂಟ್ ಮಾಡಬಹುದು
ಬ್ಯಾಂಕ್ ನಿಮ್ಮ ಖಾತೆಗೆ ಎಷ್ಟು ಕ್ರೆಡಿಟ್ ಲೈನ್ ನೀಡಬಹುದು ಎಂಬುದನ್ನು ಮೊದಲೇ ನಿರ್ಧರಿಸುತ್ತದೆ, ಇದರ ಆಧಾರದ ಮೇಲೆ ನೀವು ಅಷ್ಟು ಮೊತ್ತದ ಹಣವನ್ನು ಮಾತ್ರ ಪೇಮೆಂಟ್ ಮಾಡಿಕೊಳ್ಳಲು ಬಳಸಬಹುದು ಎಂಬುದನ್ನು ನೆನಪಿಟ್ಟುಕೊಳ್ಳಿ.
ಯುಪಿಐ ನಲ್ಲಿ ಹಣ ಇಲ್ಲದೆ ಪೇಮೆಂಟ್ ಮಾಡಲು ಮೊದಲು ನೀವು ಬ್ಯಾಂಕ್ ನಲ್ಲಿ ಅರ್ಜಿ ಸಲ್ಲಿಸಿ ಕ್ರೆಡಿಟ್ ಕಾರ್ಡ್ ಬಳಸಿಕೊಂಡಂತೆ ಯುಪಿಐ ಬಳಸಿಕೊಳ್ಳಬಹುದು
ಇದಕ್ಕೆ ಬ್ಯಾಂಕ್ ನಿಮ್ಮ ಖಾತೆಯ ಕ್ರೆಡಿಟ್ ಸ್ಕೋರ್ (credit score) ಅನ್ನು ಪರಿಗಣಿಸಿ ನಿಮಗೆ ಎಷ್ಟು ಮೊತ್ತದ ಹಣಕ್ಕೆ ಕ್ರೆಡಿಟ್ ಲೈನ್ ನೀಡಬಹುದು ಎಂಬುದನ್ನು ನಿರ್ಧರಿಸುತ್ತದೆ.
ಪರ್ಸನಲ್ ಲೋನ್ ತೆಗೆದುಕೊಳ್ಳೋ ಮುನ್ನ ಈ ಕೆಲಸ ಮಾಡಿ! ಬಡ್ಡಿ ಕಡಿಮೆ ಆಗುತ್ತೆ, ಬೇಗ ಸಾಲ ಸಿಗುತ್ತೆ
ಅದರ ಆಧಾರದ ಮೇಲೆ ನೀವು ಅಷ್ಟು ಮೊತ್ತದ ಹಣವನ್ನು ಪಡೆದುಕೊಳ್ಳಬಹುದು. ತಿಂಗಳ ಕೊನೆಯಲ್ಲಿ ಅಥವಾ ಬ್ಯಾಂಕ್ ನಿಗದಿಪಡಿಸಿದ ದಿನಾಂಕದಂದು ನೀವು ಖರ್ಚು ಮಾಡಿದ ಹಣವನ್ನು ಪಾವತಿ ಮಾಡಬೇಕಾಗುತ್ತದೆ.
ಗ್ರಾಹಕರು ಖರ್ಚು ಮಾಡಿದ ಮೊತ್ತ ಹಾಗೂ ದಿನಗಳ ಆಧಾರದ ಮೇಲೆ ಬಡ್ಡಿ ದರವನ್ನು ಬ್ಯಾಂಕ್ ನಿರ್ಧರಿಸುತ್ತದೆ, ಗ್ರಾಹಕರ ಒಟ್ಟು ಹಣದ ಮೇಲೆ ಬಡ್ಡಿದರ (interest rate) ನಿರ್ಧಾರವಾಗುವುದಿಲ್ಲ. ಇನ್ನು ಯುಪಿಐ ಪೇಮೆಂಟ್ ಮಾಡುವಾಗ ಆಯ್ಕೆಯನ್ನು ಮಾಡಿಕೊಳ್ಳಲು ಯುಪಿಐ ಅಪ್ಲಿಕೇಶನ್ ನಲ್ಲಿ ಪೇ ಲೇಟರ್ ಎನ್ನುವ ಆಯ್ಕೆಯನ್ನು ಮಾಡಿಕೊಳ್ಳಿ.
ಸ್ವಂತ ಮನೆ ಕಟ್ಟಬೇಕು ಅನ್ನೋರಿಗೆ ಈ ಬ್ಯಾಂಕ್‌ಗಳಲ್ಲಿ ಕಡಿಮೆ ಬಡ್ಡಿಗೆ ಸಿಗುತ್ತೆ ಸಾಲ
ನಂತರ ಕ್ರೆಡಿಟ್ ಲೈನ್ ಸೌಲಭ್ಯ ನೀಡುತ್ತಿರುವ ಬ್ಯಾಂಕ್ ಆಯ್ದುಕೊಳ್ಳಬೇಕು. ಕೊನೆಯಲ್ಲಿ ಯುಪಿಐ ಪೇಮೆಂಟ್ ಮಾಡಲು ಪಿನ್ ಕೋಡ್ ಅನ್ನು ನಮೂದಿಸಿ ಪೇಮೆಂಟ್ ಮಾಡಿಕೊಳ್ಳಬಹುದು.
Even if there is no money in the bank account, payment can be made Through UPI pay later