ಗ್ಯಾಸ್ ಸಿಲಿಂಡರ್ ಸಬ್ಸಿಡಿ ರದ್ದಾಗಲಿದೆ, ಕೂಡಲೇ ಈ ಕೆಲಸ ಮಾಡದಿದ್ರೆ ಸಿಗೋಲ್ಲ ಹಣ

ಉಚಿತ ಗ್ಯಾಸ್ ಕನೆಕ್ಷನ್ (free gas connection) ಜೊತೆಗೆ ಸಬ್ಸಿಡಿ ಗ್ಯಾಸ್ ಪಡೆದುಕೊಳ್ಳಬಹುದು, ಲಕ್ಷಾಂತರ ಕುಟುಂಬಗಳು ಇದರ ಪ್ರಯೋಜನ ಪಡೆದುಕೊಂಡಿದೆ.

ಕೇಂದ್ರ ಸರ್ಕಾರ (central government) ಇತ್ತೀಚಿಗಷ್ಟೇ ಗ್ಯಾಸ್ ಸಬ್ಸಿಡಿ ದರವನ್ನ (subsidy) ಹೆಚ್ಚಿಸಿದೆ. ಅಷ್ಟರಲ್ಲಿ ಕ್ಯಾನ್ಸಲ್ ಮಾಡುವಂತಹ ನಿರ್ಧಾರ ಕೈಗೊಂಡಿದ್ದು ಯಾಕೆ?

ಕೇಂದ್ರ ಸರ್ಕಾರದ ಈ ನಿಯಮ ಪಾಲಿಸದೆ ಇದ್ದಲ್ಲಿ ಸಬ್ಸಿಡಿ ದರದಲ್ಲಿ ನೀಡಲಾಗುತ್ತಿರುವ ಗ್ಯಾಸ್ ಸಿಲಿಂಡರ್ ಅನ್ನು ತಕ್ಷಣವೇ ಹೊರತು ಮಾಡುವುದಾಗಿ ಸರ್ಕಾರ ತಿಳಿಸಿದೆ, ಇದಕ್ಕೆ ಪ್ರಮುಖವಾದ ಕಾರಣ ಏನು ಗೊತ್ತಾ?

ಸರ್ಕಾರಿ ನೌಕರಿ ಯಾವಾಗ ಎಲ್ಲಿ ಖಾಲಿ ಇರುತ್ತೆ? ಇಲ್ಲಿದೆ ಲಿಂಕ್, ಎಲ್ಲೇ ಕೆಲಸ ಖಾಲಿ ಇದ್ರೂ ಗೊತ್ತಾಗುತ್ತೆ

ಗ್ಯಾಸ್ ಸಿಲಿಂಡರ್ ಸಬ್ಸಿಡಿ ರದ್ದಾಗಲಿದೆ, ಕೂಡಲೇ ಈ ಕೆಲಸ ಮಾಡದಿದ್ರೆ ಸಿಗೋಲ್ಲ ಹಣ - Kannada News

ಸಿಲಿಂಡರ್ ಬೆಲೆಯಲ್ಲಿ ವ್ಯತ್ಯಾಸ!

ಇತ್ತೀಚಿನ ದಿನಗಳಲ್ಲಿ ಹಣದುಬ್ಬರದ ಪ್ರಭಾವ ಪ್ರತಿಯೊಬ್ಬರ ಮೇಲು ಬೀರುತ್ತಿದೆ, ಇದರಿಂದಾಗಿ ಗೃಹ ಬಳಕೆಯ ವಸ್ತುಗಳಿಂದ ಹಿಡಿದು ಗೃಹ ಬಳಕೆಯ ಗ್ಯಾಸ್ (LPG gas cylinder) ಸಿಲಿಂಡರ್ ಮೇಲೂ ಕೂಡ ಪರಿಣಾಮ ಬೀರಿದೆ.

ಆದರೆ ಕಳೆದು ಜೂನ್ ಜುಲೈ ಅವಧಿಯಲ್ಲಿ ಕೇಂದ್ರ ಸರ್ಕಾರ ಎಲ್ ಪಿ ಜಿ ಸಿಲಿಂಡರ್ ದರವನ್ನು 200 ರೂಪಾಯಿಗಳಷ್ಟು ಕಡಿತಗೊಳಿಸಿತು, ಸಾವಿರಕ್ಕೂ ಹೆಚ್ಚು ಹಣವನ್ನು ಕೊಟ್ಟು ಗ್ಯಾಸ್ ಖರೀದಿ ಮಾಡಬೇಕಿದ್ದ ಜನರಿಗೆ ಇದು ಸಮಾಧಾನ ನೀಡಿತ್ತು. 1100 ರೂಪಾಯಿಗಳಿಗೆ ಸಿಗುತ್ತಿದ್ದ ಸಿಲೆಂಡರ್ 900 ರೂಪಾಯಿಗಳಿಗೆ ಸಿಗುವಂತಾಗಿದೆ.

ಸಬ್ಸಿಡಿ ಸಿಲೆಂಡರ್! (Subsidy on cylinder)

Gas Cylinderಕೇಂದ್ರ ಸರ್ಕಾರದ ಮಹತ್ವದ ಹಾಗೂ ಯಶಸ್ವಿ ಯೋಜನೆಗಳಲ್ಲಿ ಉಜ್ವಲ ಯೋಜನೆ (Ujjwala scheme) ಕೂಡ ಒಂದು, ಈ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಸಬ್ಸಿಡಿ ದರದಲ್ಲಿ ನೀಡಲಾಗುತ್ತದೆ.

ಉಚಿತ ಗ್ಯಾಸ್ ಕನೆಕ್ಷನ್ (free gas connection) ಜೊತೆಗೆ ಸಬ್ಸಿಡಿ ಗ್ಯಾಸ್ ಪಡೆದುಕೊಳ್ಳಬಹುದು, ಲಕ್ಷಾಂತರ ಕುಟುಂಬಗಳು ಇದರ ಪ್ರಯೋಜನ ಪಡೆದುಕೊಂಡಿದೆ. ಯೋಜನೆಯ ಅಡಿಯಲ್ಲಿ ಸಬ್ಸಿಡಿ ದರದಲ್ಲಿ ಸಿಗುವ ಎಲ್ ಪಿ ಜಿ ಗ್ಯಾಸ್ ಮೇಲೆ ಇನ್ನಷ್ಟು ಸಬ್ಸಿಡಿಯನ್ನು ಸರ್ಕಾರ ಘೋಷಿಸಿದೆ.

ಸಾಮಾನ್ಯ ಎಲ್ಪಿಜಿ ಗ್ಯಾಸ್ ನಲ್ಲಿ 200 ರೂಪಾಯಿ ಕಡಿತಗೊಳಿಸಲಾಗಿದ್ದರೆ ಉಜ್ವಲ ಯೋಜನೆಯ ಅಡಿಯಲ್ಲಿ ಸಿಗುವ ಗ್ಯಾಸ್ ಸಿಲೆಂಡರ್ ಬೆಲೆ ಯಲ್ಲಿ 300 ರೂಪಾಯಿ ಕಡಿತಗೊಳಿಸಲಾಗಿತ್ತು. ಹಾಗಾಗಿ ಕೇವಲ 700 ರೂಪಾಯಿಗಳಿಗೆ ಎಲ್‌ಪಿಜಿ ಉಜ್ವಲ ಯೋಜನೆಯ ಸಿಲಿಂಡರ್ ಅನ್ನು ಸಬ್ಸಿಡಿಯಾಗಿ ಪಡೆಯಬಹುದು.

ಈ ಕಾರ್ಡ್ ನಿಮ್ಮ ಬಳಿ ಇದ್ರೆ ಪ್ರತಿ ತಿಂಗಳು ಸಿಗುತ್ತೆ 3,000 ರೂಪಾಯಿ ಪಿಂಚಣಿ, ಜೊತೆಗೆ 2 ಲಕ್ಷ ವಿಮೆ

ಈ ಕೆಲಸ ಮಾಡದೆ ಇದ್ರೆ ಉಜ್ವಲ ಗ್ಯಾಸ್ ಕನೆಕ್ಷನ್ ರದ್ದಾಗುತ್ತದೆ!

ಯೋಜನೆಯಡಿಯಲ್ಲಿ ಉಚಿತ ಗ್ಯಾಸ್ ಕನೆಕ್ಷನ್ (Gas Connection) ಅನ್ನು ಬಿಪಿಎಲ್ ಕಾರ್ಡ್ (BPL card) ಹೊಂದಿರುವ ಅಥವಾ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನೀಡಲಾಗುತ್ತದೆ

ನಂತರ 12 ತಿಂಗಳು ಗ್ಯಾಸ್ ಸಿಲೆಂಡರ್ ಖರೀದಿ ಮಾಡಲು 300 ರೂಪಾಯಿಗಳ ಸಬ್ಸಿಡಿ ಕೂಡ ನೀಡಲಾಗುತ್ತದೆ. ಆದರೆ ಇನ್ನು ಮುಂದೆ ಸಬ್ಸಿಡಿ ಗ್ಯಾಸ್ ಸಿಗಬೇಕು ಅಂದ್ರೆ ಗ್ಯಾಸ್ ಸಂಪರ್ಕ ಹಾಗೂ ಆಧಾರ್ ಕಾರ್ಡ್ ಲಿಂಕ್ (Aadhaar Card link) ಆಗಬೇಕು.

ಈಗಾಗಲೇ ಬ್ಯಾಂಕ್ ಗಳಿಗೆ (Banks) ಆಧಾರ್ ಕಾರ್ಡ್ ಲಿಂಕ್ ಆಗಬೇಕು ಎನ್ನುವುದು ಕಡ್ಡಾಯವಾಗಿದೆ, ಅದರಂತೆ ಇನ್ನೂ ಮುಂದೆ ಉಜ್ವಲ ಯೋಜನೆ ಅಡಿಯಲ್ಲಿ ಸಬ್ಸಿಡಿ ಗ್ಯಾಸ್ ಪಡೆದುಕೊಂಡವರು ನಿಮ್ಮ ಆಧಾರ್ ಕಾರ್ಡ್ ಜೊತೆಗೆ ಎಲ್ಪಿಜಿ ಕನೆಕ್ಷನ್ ಲಿಂಕ್ ಮಾಡಿಕೊಳ್ಳಬೇಕು.

ಪರ್ಸನಲ್ ಲೋನ್ ತೆಗೆದುಕೊಳ್ಳೋ ಮುನ್ನ ಈ ಕೆಲಸ ಮಾಡಿ! ಬಡ್ಡಿ ಕಡಿಮೆ ಆಗುತ್ತೆ, ಬೇಗ ಸಾಲ ಸಿಗುತ್ತೆ

ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹೇಗೆ?

Gas Cylinder SubsidyUIDAI ವೆಬ್ಸೈಟ್ನಲ್ಲಿ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಬಹುದಾಗಿದೆ, ಇದಕ್ಕಾಗಿ ಅಧಿಕೃತ ವೆಬ್ಸೈಟ್ (official website – https://www.pmuy.gov.in/) ಮುಖಪುಟವನ್ನು ತೆರೆಯಿರಿ ಅದರಲ್ಲಿ ಪ್ರೆಸಿಡೆಂಟ್ ಸೆಲ್ಫ್ ಸೀಡಿಂಗ್ ಎನ್ನುವ ಆಯ್ಕೆಯನ್ನು ಕಾಣುತ್ತೀರಿ. ನಂತರ ಗ್ಯಾಸ್ ಒದಗಿಸುವ ಕಂಪನಿ ವಿತರಕರ ಸಂಖ್ಯೆ ಮೊದಲಾದ ವಿವರಗಳನ್ನು ಭರ್ತಿ ಮಾಡಬೇಕು.

ಬಳಿಕ ನಿಮ್ಮ ಗ್ಯಾಸ್ ಕನೆಕ್ಷನ್ ಸಂಖ್ಯೆ ಮೊಬೈಲ್ ಸಂಖ್ಯೆ ಇಮೇಲ್ ಐಡಿ ಮುಂತಾದ ವಿವರಗಳನ್ನು ಕೂಡ ನೀಡಬೇಕು. ನೀವು ಎಲ್ಲಾ ಸರಿಯಾದ ಮಾಹಿತಿಗಳನ್ನು ನೀಡಿದ್ದರೆ ನಿಮಗೆ ನಿಮ್ಮ ಮೊಬೈಲ್ ನಲ್ಲಿ OTP ಕಾಣಿಸುತ್ತದೆ.

ಸ್ವಂತ ಮನೆ ಕಟ್ಟಬೇಕು ಅನ್ನೋರಿಗೆ ಈ ಬ್ಯಾಂಕ್‌ಗಳಲ್ಲಿ ಕಡಿಮೆ ಬಡ್ಡಿಗೆ ಸಿಗುತ್ತೆ ಸಾಲ

ಇದನ್ನು ಸ್ಕ್ರೀನ್ ಮೇಲೆ ಕಾಣಿಸುವ ಬಾಕ್ಸ್ ನಲ್ಲಿ ನಮೂದಿಸಿ ಗೋ ಎಂದು ಪ್ರೆಸ್ ಮಾಡಿ ಇಷ್ಟ್ ಮಾಡಿದರೆ ನಿಮ್ಮ ಆಧಾರ್ ಲಿಂಕ್ ಆಗಿದೆ ಎಂದೇ ಅರ್ಥ. ತಕ್ಷಣವೇ ಈ ಕೆಲಸ ಮಾಡಿಕೊಳ್ಳಿ ಇಲ್ಲವಾದರೆ ನಿಮ್ಮ ಉಚಿತ ಗ್ಯಾಸ್ ಕನೆಕ್ಷನ್ ರದ್ದಾಗಬಹುದು ಅಥವಾ ಸಬ್ಸಿಡಿ ಹಣವನ್ನು ಸರ್ಕಾರ ಬಿಡುಗಡೆ ಮಾಡದೇ ಇರಬಹುದು.

Gas cylinder subsidy will be canceled, Link Aadhaar to get money

Follow us On

FaceBook Google News

Gas cylinder subsidy will be canceled, Link Aadhaar to get money