ಕೇವಲ 20 ಸಾವಿರ ಸಂಬಳ ಇದ್ರೂ ಈ ಬ್ಯಾಂಕ್ ನೀಡುತ್ತಿದೆ 5 ಲಕ್ಷ ರೂಪಾಯಿ ಸಾಲ
- 20 ಸಾವಿರ ಸಂಬಳ ಇರುವವರೆಗೂ ಸಿಗುತ್ತೆ ವಯಕ್ತಿಕ ಸಾಲ
- ಕಡಿಮೆ ಸಂಬಳ ಇದ್ರೂ ಸಿಗಲಿದೆ 5 ಲಕ್ಷ ರೂಪಾಯಿ ಸಾಲ
- ಸಂಬಳ ಕಡಿಮೆ ಇದ್ದರೂ ಇತರ ಆದಾಯದ ಮೂಲ ಇದ್ದರೆ ಸಾಕು
Personal Loan : ಸಾಮಾನ್ಯವಾಗಿ ಹಣದ ಅವಶ್ಯಕತೆ ಬಿದ್ದಾಗ ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳುತ್ತೇವೆ. ಈಗ ಮೊದಲಿನಂತೆ ಯಾರೊಂದಿಗೂ ಹಣದ ವ್ಯವಹಾರ ಮಾಡುವುದು ಅಷ್ಟು ಸುಲಭ ಅಲ್ಲ ಅಥವಾ ನಂಬಿಕೆಯಿಂದ ಯಾರು ಹಣವನ್ನು ಕೊಡುವುದಿಲ್ಲ ಹಾಗೂ ನೀವೇನಾದರೂ ಫೈನಾನ್ಸ್ ನಲ್ಲಿ ಸಾಲ ಮಾಡಿದ್ರೆ ಅದರ ಬಡ್ಡಿ ಪಾವತಿ ಮಾಡುವುದಕ್ಕೆ ಮತ್ತೊಂದು ಜನ್ಮವೇ ಬೇಕು. ಹಾಗಾಗಿ ಸುಲಭವಾಗಿ ಬ್ಯಾಂಕುಗಳಲ್ಲಿ ಸಾಲವನ್ನು (Bank Loan) ಮಾಡುತ್ತೇವೆ.
ಕಡಿಮೆ ಸಂಬಳ ಇರುವವರಿಗೆ ವೈಯಕ್ತಿಕ ಸಾಲ ಸಿಗುತ್ತಾ?
ಸಾಮಾನ್ಯವಾಗಿ ವೈಯಕ್ತಿಕ ಸಾಲವನ್ನು ವ್ಯಕ್ತಿಯ ಸಂಬಳದ ಆಧಾರದ ಮೇಲೆ ಮತ್ತು ಆತನ ಕ್ರೆಡಿಟ್ ಸ್ಕೋರ್ (Credit Score) ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಇದರ ಜೊತೆಗೆ ಬ್ಯಾಂಕುಗಳು ಮತ್ತು ಎನ್ ಬಿ ಎಫ್ ಸಿ ಯ ಇತರ ನಿಯಮಗಳು ಕೂಡ ಸೇರ್ಪಡೆಗೊಳ್ಳುತ್ತವೆ.
ಇನ್ನು ಕಡಿಮೆ ಸಂಬಳ (Low Salary) ಇರುವವರೆಗೂ ಕೂಡ ವೈಯಕ್ತಿಕ ಸಾಲ (Personal Loan) ಸಿಗುತ್ತದೆಯಾ ಎಂದು ನೋಡುವುದಾದರೆ ಕೆಲವು ಬ್ಯಾಂಕುಗಳು ಕಡಿಮೆ ಸ್ಯಾಲರಿ ಇದ್ದರೂ ಸಾಲವನ್ನು ಮಂಜೂರು ಮಾಡುತ್ತದೆ. ಆದರೆ ಅದಕ್ಕೆ ಇರುವ ಶರತ್ತುಗಳು ಮತ್ತು ನಿಯಮಗಳು ಜಾಸ್ತಿ.
ಈ ಸ್ಟೇಟ್ ಬ್ಯಾಂಕ್ FDಯಲ್ಲಿ 10 ಲಕ್ಷ ಆದಾಯ, ಮಾರ್ಚ್ 31ರವರೆಗೆ ಮಾತ್ರ ಅವಕಾಶ
20,000 ಸಂಬಳಕ್ಕೆ 5 ಲಕ್ಷ ಸಾಲ!
ಇತ್ತೀಚಿಗೆ SBI ಬ್ಯಾಂಕ್ ನಂತಹ ಕೆಲವು ಬ್ಯಾಂಕುಗಳು 15,000 ರೂ. ಸಂಬಳ ಇರುವವರೆಗೂ ಕೂಡ ವೈಯಕ್ತಿಕ ಸಾಲವನ್ನು ಮಂಜೂರು ಮಾಡುತ್ತಿವೆ. ಅದೇ ರೀತಿ ನೀವು ಪ್ರತಿ ತಿಂಗಳು 20 ಸಾವಿರ ಸಂಬಳವನ್ನು ತೆಗೆದುಕೊಳ್ಳುವವರಾಗಿದ್ದು, 5 ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳಬಹುದು ಆದರೆ ಇದಕ್ಕೆ ಇರುವ ಬಡ್ಡಿದರ ಪ್ರೋಸೆಸ್ಸಿಂಗ್ ಹಾಗೂ ಇತರ ಶುಲ್ಕಗಳು ಹೆಚ್ಚಿರುತ್ತವೆ.
ವಯಕ್ತಿಕ ಸಾಲ ತೆಗೆದುಕೊಳ್ಳುವಾಗ ಈ ಅಂಶಗಳನ್ನು ಗಮನಿಸಿ!
ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದು, ಸಾಲವನ್ನು ಮರುಪಾವತಿ ಮಾಡುತ್ತೀರಿ ಎನ್ನುವ ವಿಶ್ವಾಸ ಬ್ಯಾಂಕಿಗೆ ಮೂಡಿದರೆ ಕಡಿಮೆ ಸಂಬಳ ಇದ್ದರೂ ಕೂಡ ನಿಮಗೆ ಸಾಲ ಸೌಲಭ್ಯ ಸಿಗಬಹುದು.
ಆದರೆ ಕಡಿಮೆ ಸಂಬಳ ಇದ್ದು ಸಾಲ ಮಾಡಿದರೆ ಪ್ರತಿ ತಿಂಗಳು ಪಾವತಿಸಬೇಕಾದ EMI ಮೊತ್ತ ತುಂಬಾ ಜಾಸ್ತಿ. ಹಾಗಾಗಿ ನೀವು ಎಷ್ಟು ಸಾಲ ಮಾಡಿದರೆ ಮರುಪಾವತಿ ಮಾಡಬಹುದು ಎಂಬುದನ್ನು ಮೊದಲೇ ನಿರ್ಧರಿಸಬೇಕು.
ಚಿನ್ನದ ಬಣ್ಣ ನಿಮಗೆ ಗೊತ್ತಿದೆ, ಆದ್ರೆ ಬಿಳಿ ಬಂಗಾರದ ಬಗ್ಗೆ ನಿಮಗೆ ಗೊತ್ತಾ?
ಇನ್ನು ಎರಡನೆಯದಾಗಿ ನಿಮ್ಮ ಕಡಿಮೆ ಸಂಬಳದ ಜೊತೆಗೆ ಇತರ ಆದಾಯದ ಮೂಲವೂ ಇವೆ ಎಂಬುದನ್ನು ಬ್ಯಾಂಕಿಗೆ ಖಾತರಿಪಡಿಸಿದರೆ ನಿಮಗೆ ಸುಲಭವಾಗಿ ಸಾಲ ಸೌಲಭ್ಯ ಸಿಗಬಹುದು.
ಕಡಿಮೆ ಸಂಬಳ ಇದ್ದರೆ ಸಾಲ ತೆಗೆದುಕೊಂಡು ಅದನ್ನು ಮರುಪಾವತಿ ಮಾಡಲು ಕಷ್ಟವಾಗಬಹುದು ಇದರಿಂದ ಕ್ರೆಡಿಟ್ ಸ್ಕೋರ್ ಕೂಡ ಕಡಿಮೆಯಾಗುತ್ತದೆ. ಅದರಲ್ಲೂ ಡಿಫಾಲ್ಟರ್ ಆಗಿದ್ದರೆ ಬ್ಯಾಂಕ್ ನಿಮ್ಮ ಸಾಲದ ಅರ್ಜಿಯನ್ನು ತಿರಸ್ಕರಿಸಬಹುದು.
ಸಾಲ ಮಾಡುವುದಕ್ಕೂ ಮೊದಲು ಬ್ಯಾಂಕ್ ನೊಂದಿಗೆ ಚರ್ಚೆ ಮಾಡಿ ನಿಮ್ಮ ಸಂಬಳಕ್ಕೆ ಎಷ್ಟು ಸಾಲ ತೆಗೆದುಕೊಳ್ಳಬಹುದು ಅಷ್ಟನ್ನು ತೆಗೆದುಕೊಳ್ಳಿ ಅದಕ್ಕಿಂತ ಹೆಚ್ಚಿಗೆ ಸಾಲ ತೆಗೆದುಕೊಂಡಾಗ ಸಾಲದ ಹೊರೆ ನಿಮಗೆ ಹೆಚ್ಚಾಗುತ್ತದೆ.
Even with a Salary of 20,000, This Bank Offers Personal Loans Up to 5 Lakh