ನಿಮ್ಮತ್ರ ಡ್ಯಾಮೇಜ್ ನೋಟುಗಳು ಇದ್ರೆ ಈ ರೀತಿ ಬದಲಾಯಿಸಿಕೊಳ್ಳಿ, ಸುಲಭ ವಿಧಾನ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಡ್ಯಾಮೇಜ್ ಆಗಿರುವ ನೋಟುಗಳನ್ನು ಬದಲಾಯಿಸುವುದರ ಬಗ್ಗೆ ತನ್ನದೇ ಆದ ನಿಯಮವನ್ನು ರೂಪಿಸಿದೆ. ಕೆಲವು ಮಿತಿಯ ಆಧಾರದ ಮೇಲೆ ನಿಮ್ಮ ಬಳಿ ಇರುವ ಡ್ಯಾಮೇಜ್ ಆಗಿರುವ ನೋಟುಗಳನ್ನು ಬದಲಾಯಿಸಿಕೊಳ್ಳಲು ಅವಕಾಶವಿದೆ.
- ಡ್ಯಾಮೇಜ್ ಆಗಿರುವ ನೋಟುಗಳು ಬ್ಯಾಂಕ್ ನಲ್ಲಿ ಬದಲಾಯಿಸಿಕೊಳ್ಳಲು ಅವಕಾಶ
- ಹರಿದ ಕರೆನ್ಸಿ ನೋಟು ನಿಮ್ಮ ಬಳಿ ಇದ್ದರೆ ಅದೇ ಮೌಲ್ಯದ ಹಣ ಪಡೆಯಬಹುದು
- ಆರ್ ಬಿ ಐನ ಕರೆನ್ಸಿ ನೋಟುಗಳು ಎಕ್ಸ್ಚೇಂಜ್ ನಿಯಮ ಬದಲಾವಣೆ
torn money exchange : ಸಾಕಷ್ಟು ಬಾರಿ ನಾವು ಕ್ಯಾಶ್ ಮೂಲಕ ಹಣಕಾಸಿನ ವ್ಯವಹಾರ ಮಾಡುವಾಗ ಡ್ಯಾಮೇಜ್ ಆಗಿರುವ ನೋಟುಗಳು ನಮಗೆ ಸಿಗಬಹುದು, ಅಂತಹ ನೋಟುಗಳನ್ನು ನಿಭಾಯಿಸುವುದು ಕಷ್ಟದ ಕೆಲಸ ಅಥವಾ ಹರಿದ ನೋಟು (damaged currency) ಹಾಗೂ ಬೇರೆ ರೀತಿಯಲ್ಲಿ ಡ್ಯಾಮೇಜ್ ಆಗಿರುವ ನೋಟುಗಳನ್ನು ಚಲಾವಣೆ ಮಾಡುವುದು ಕೂಡ ಕಷ್ಟ.
ಉದಾಹರಣೆಗೆ ನೀವು ಆಟೋದಲ್ಲಿ ಪ್ರಯಾಣಿಸಿದರೆ ಅಥವಾ ಯಾವುದೇ ಹೋಟೆಲ್ನಲ್ಲಿ ಆಹಾರ ಸೇವಿಸಿದರೆ ಬಿಲ್ ಪಾವತಿ ಮಾಡುವಾಗ ಡ್ಯಾಮೇಜ್ ಆದ ಕರೆನ್ಸಿ ನೋಟನ್ನು ಕೊಟ್ಟರೆ ಅವರು ಅದನ್ನು ಸ್ವೀಕರಿಸದೆ ನಿಮಗೆ ಹಿಂತಿರುಗಿಸಬಹುದು.
ಇಂತಹ ಸಂದರ್ಭದಲ್ಲಿ ಹಣಕಾಸಿನ ಸಮಸ್ಯೆ ಉಂಟಾಗುವುದು ಸಾಮಾನ್ಯ. ಹಾಗಂತ ಚಿಂತೆ ಮಾಡುವ ಅಗತ್ಯವಿಲ್ಲ. ನಿಮ್ಮ ಬಳಿ ಡ್ಯಾಮೇಜ್ ಆಗಿರುವ ನೋಟುಗಳಿದ್ದರೆ ಅದನ್ನು ಬ್ಯಾಂಕ್ ನಲ್ಲಿ ಬದಲಾಯಿಸಿಕೊಳ್ಳಬಹುದು.
ಹಸು ಸಗಣಿಗೂ ಬಂತು ಡಿಮ್ಯಾಂಡ್; ಒಂದು ಕೆಜಿ 50 ರೂಪಾಯಿಗಳಿಗೆ ಮಾರಾಟ
ಆರ್ ಬಿ ಐ ನಿಯಮ ಏನನ್ನುತ್ತೆ?
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಡ್ಯಾಮೇಜ್ ಆಗಿರುವ ನೋಟುಗಳನ್ನು ಬದಲಾಯಿಸುವುದರ ಬಗ್ಗೆ ತನ್ನದೇ ಆದ ನಿಯಮವನ್ನು ರೂಪಿಸಿದೆ. ಕೆಲವು ಮಿತಿಯ ಆಧಾರದ ಮೇಲೆ ನಿಮ್ಮ ಬಳಿ ಇರುವ ಡ್ಯಾಮೇಜ್ ಆಗಿರುವ ನೋಟುಗಳನ್ನು ಬದಲಾಯಿಸಿಕೊಳ್ಳಲು ಅವಕಾಶವಿದೆ.
ಯಾವುದೇ ಹರಿದು ಹೋಗಿರುವ, ಹಾಳಾದ ನೋಟುಗಳನ್ನು ಬ್ಯಾಂಕ್ ಗೆ (Bank) ತೆಗೆದುಕೊಂಡು ಹೋದರೆ ಅದರ ಪರಿಸ್ಥಿತಿಯನ್ನು ಪರಿಶೀಲಿಸಿ ಬ್ಯಾಂಕ್ ನೋಟು ಬದಲಾವಣೆ ಮಾಡಿಕೊಡಬೇಕು ಎಂದು ಆರ್‌ಬಿಐ ತಿಳಿಸಿದೆ.
ಎಟಿಎಂ ನಲ್ಲಿ ಹರಿದ ನೋಟು ಸಿಕ್ಕರು ಟೆನ್ಶನ್ ಬೇಡ!
ಇತರರೊಂದಿಗೆ ಹಣಕಾಸು ವ್ಯವಹಾರ ಮಾಡುವಾಗ ಮಾತ್ರವಲ್ಲದೆ, ಎಟಿಎಂನಲ್ಲಿ (Bank ATM) ಹಣ ವಿಥ್ ಡ್ರಾ ಮಾಡಿದಾಗಲೂ ಹರಿದಿರುವ ನೋಟುಗಳು ಸಿಗುವ ಸಾಧ್ಯತೆ ಇರುತ್ತದೆ. ಅಂತಹ ಸಂದರ್ಭದಲ್ಲಿ ನೀವು ನೇರವಾಗಿ ಬ್ಯಾಂಕಿಗೆ ಹೋಗಿ, ದೂರು ಸಲ್ಲಿಸಿ ನಿಮ್ಮ ನೋಟನ್ನು ಬದಲಾಯಿಸಿಕೊಳ್ಳಬಹುದು.
ಈ ಒಂದು ನೋಟ್ ನಿಮ್ಮತ್ರ ಇದ್ರೆ ನೀವು ಲಕ್ಷಾಧಿಪತಿಯಾಗುವುದು ಪಕ್ಕ! ಲಕ್ಷಗಟ್ಟಲೆ ದುಡ್ಡು
ಆರ್ ಬಿ ಐ ನಿಯಮದ ಪ್ರಕಾರ ಯಾವುದೇ ಬ್ಯಾಂಕ್ ಗ್ರಾಹಕರಿಗೆ ಡ್ಯಾಮೇಜ್ ಆಗಿರುವ ನೋಟು ಬದಲಾವಣೆ ಮಾಡಿಕೊಳ್ಳದೆ ತಿರಸ್ಕರಿಸುವಂತಿಲ್ಲ. ನೀವು ಕೊಟ್ಟಿರುವ ಡ್ಯಾಮೇಜಾಗಿರುವ ನೋಟು ಯಾವ ಸ್ಥಿತಿಯಲ್ಲಿ ಇದೆ ಎನ್ನುವುದರ ಆಧಾರದ ಮೇಲೆ ಆ ನೋಟಿನ ಮೌಲ್ಯ ನಿರ್ಧಾರಿತವಾಗುತ್ತದೆ.
ಉದಾಹರಣೆಗೆ ನಿಮ್ಮ ಬಳಿ ಇರುವ ಐವತ್ತು ರೂಪಾಯಿ ನೋಟು ಹೆಚ್ಚು ಡ್ಯಾಮೇಜ್ ಆಗಿದ್ದರೆ ಅದಕ್ಕೆ 30 ರೂಪಾಯಿಗಳಷ್ಟು ಮೌಲ್ಯ ಸಿಗಬಹುದು. ಡ್ಯಾಮೇಜ್ ಆಗಿರುವ ನೋಟು ಬದಲಾಯಿಸಿಕೊಳ್ಳಲು ಮಿತಿಯನ್ನು ಕೂಡ ಆರ್‌ಬಿಐ ತಿಳಿಸಿದೆ
ಒಬ್ಬ ವ್ಯಕ್ತಿ ಒಂದು ದಿನಕ್ಕೆ 20 ಡ್ಯಾಮೇಜ್ ಆಗಿರುವ ನೋಟುಗಳು ಅಂದರೆ 5,000 ಮೌಲ್ಯದ ನೋಟುಗಳನ್ನು ಮಾತ್ರ ಬದಲಾಯಿಸಿಕೊಳ್ಳಲು ಅವಕಾಶವಿದೆ.
Exchange Damaged Currency Notes at Banks for Full Value