ನಿಮ್ಮತ್ರ ಇರುವ ನೂರು ರೂಪಾಯಿ ನೋಟು ನಕಲಿಯೋ ಅಸಲಿಯೋ ತಿಳಿಯುವುದು ಹೇಗೆ?
- ಮಾರುಕಟ್ಟೆಯಲ್ಲಿ ನಕಲಿ ನೋಟುಗಳ ಹಾವಳಿ
- ನಿಮ್ಮ ಬಳಿ ಇರುವ ನೋಟುಗಳು ಅಸಲಿಯೋ ನಕಲಿಯೋ ಚೆಕ್ ಮಾಡಿಕೊಳ್ಳಿ
- ಇಲ್ಲಿದೆ ಆರ್ ಬಿ ಐ ನೀಡಿರುವ ಪ್ರಮುಖ ಮಾರ್ಗಸೂಚಿ
ಯಾರಾದ್ರೂ ಗರ್ ಗರಿಯಾಗಿರುವ ನೂರು ರೂಪಾಯಿ ನೋಟನ್ನ ಕೈಗೆ ಇಟ್ಟರೆ ನಮಗಂತೂ ಬಹಳ ಖುಷಿಯಾಗುತ್ತೆ. ಆಹಾ ಹೊಸ ನೋಟು ಸಿಕ್ತು ಅಂತ ಅಂದುಕೊಳ್ಳುತ್ತೇವೆ ಆದರೆ ಇದು ಫೇಕ್ ನೋಟ್ ಆಗಿದ್ರೆ?!
ಹೌದು, ಇತ್ತೀಚಿಗೆ ನಕಲಿ ನೋಟುಗಳ ಹಾವಳಿ ಹೆಚ್ಚಾಗಿದೆ ಅದರಲ್ಲಿ 500 ಮತ್ತು 100 ರೂಪಾಯಿಗಳ ನಕಲಿ ನೋಟುಗಳು ಮಾರುಕಟ್ಟೆಯಲ್ಲಿ ಹೆಚ್ಚು ಚಲಾವಣೆಯಾಗುತ್ತಿವೆ. ಇತ್ತೀಚೆಗೆ ತೆಲಂಗಾಣದಲ್ಲಿ 200 ರೂಪಾಯಿಗಳ ಸಾಕಷ್ಟು ನಕಲಿ ನೋಟುಗಳು ಪತ್ತೆಯಾಗಿವೆ.
ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಪ್ರತಿ ತಿಂಗಳು 7,000 ಸಿಗಲಿದೆ, ಏನಿದು ಯೋಜನೆ?
ಆರ್ ಬಿ ಐ ಮಾರ್ಗಸೂಚಿ
ಸಾವಿರ ರೂಪಾಯಿಗಳ ನೋಟುಗಳನ್ನು ಅಮಾನ್ಯಗೊಳಿಸಿದ ನಂತರ ನಕಲಿ ನೋಟುಗಳ ಹಾವಳಿ ಜಾಸ್ತಿಯಾಗಿದೆ ಎನ್ನಬಹುದು. 500 ಮತ್ತು 100 ರೂಪಾಯಿಗಳ ಬಣ್ಣದ ನೋಟುಗಳನ್ನು ಯಥಾವತ್ ಅಸಲಿ ನೋಟಿನಂತೆಯೇ ಮುದ್ರಣ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ.
ಹೀಗಾಗಿ ಸಾಕಷ್ಟು ಜನ ಮೋಸ ಹೋಗುತ್ತಿದ್ದಾರೆ. ಇದೀಗ ಅಸಲಿ ನೋಟನ್ನು ಗುರುತಿಸುವುದಕ್ಕೆ ಆರ್ಬಿಐ ಮಾರ್ಗಸೂಚಿಯನ್ನು ತಿಳಿಸಿದ್ದು, ನಿಮ್ಮ ಬಳಿ ಇರುವ ನೋಟಿನಲ್ಲಿ ಈ ರೀತಿ ಲಕ್ಷಣಗಳು ಇದ್ದರೆ ಅವು ಅಸಲಿ ಎಂದು ಅರ್ಥ.
100 ರೂಪಾಯಿ ನೋಟನ್ನು ಹೀಗೆ ಪರಿಶೀಲಿಸಿ!
ವಾಟರ್ ಮಾರ್ಕಿನಲ್ಲಿ ಗಾಂಧೀಜಿ ಫೋಟೋ ಕಾಣಬಹುದು. ನೋಟಿನ ಮಧ್ಯ ಭಾಗದಲ್ಲಿ ಮಹಾತ್ಮ ಗಾಂಧೀಜಿ ಫೋಟೋ ಇದೆ. ಸುರಕ್ಷಿತ ಲೈನ್ ಹಸಿರು ಬಣ್ಣದಲ್ಲಿದ್ದು ನೋಟನ್ನು ಕ್ರಾಸ್ ಮಾಡಿದರೆ ನೀಲಿ ಬಣ್ಣದಲ್ಲಿ ಕಾಣಿಸುತ್ತದೆ. ಅಲ್ಲಿ ಆರ್ ಬಿ ಐ ಮತ್ತು ಭಾರತ್ ಎಂದು ಬರೆದಿರುವುದನ್ನು ಕಾಣಬಹುದು. ಮಹಾತ್ಮ ಗಾಂಧೀಜಿ ಮತ್ತು ಸುರಕ್ಷಿತ ಲೈನ್ ನಡುವೆ 100 ಮತ್ತು ಆರ್‌ಬಿಐ ಎಂದು ಬರೆದಿರುವುದನ್ನು ಕಾಣಬಹುದು.
ಚಿನ್ನದ ಬಣ್ಣ ನಿಮಗೆ ಗೊತ್ತಿದೆ, ಆದ್ರೆ ಬಿಳಿ ಬಂಗಾರದ ಬಗ್ಗೆ ನಿಮಗೆ ಗೊತ್ತಾ?
ಈ ಮೇಲಿನ ಯಾವುದೇ ಒಂದು ಚಿನ್ನೆ ನಿಮ್ಮ ನೋಟಿನಲ್ಲಿ ಇಲ್ಲದೆ ಇದ್ದರೂ ಅದನ್ನು ಫೇಕ್ ಎಂದು ಪರಿಗಣಿಸಬಹುದು. ಆರ್‌ಬಿಐ ತಿಳಿಸಿರುವ ಪ್ರಕಾರ ಪ್ರತಿ ಬಾರಿ ಕ್ಯಾಶ್ ವ್ಯವಹಾರ ಮಾಡುವಾಗ ನಿಮ್ಮ ಕೈ ಸೇರುವ ನೋಟುಗಳು ಅಸಲಿಯೋ ನಕಲಿಯೋ ಎಂಬುದನ್ನು ಪರಿಶೀಲಿಸಿಕೊಳ್ಳಿ.
Fake Currency Alert, RBI Guidelines to Verify Genuine Notes