ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಪ್ರತಿ ತಿಂಗಳು 7,000 ಸಿಗಲಿದೆ, ಏನಿದು ಯೋಜನೆ?
- ಮಹಿಳೆಯರಿಗೆ ಸರ್ಕಾರವೇ ಕೊಡುತ್ತೆ ಪ್ರತಿ ತಿಂಗಳು 7,000 ರೂಪಾಯಿ ಸ್ಟೈಫಂಡ್
- ಎಲ್ಐಸಿ ಬೀಮಾ ಸಖಿ ಯೋಜನೆಯಲ್ಲಿ 50,000ಕ್ಕೂ ಅಧಿಕ ಮಹಿಳೆಯರ ನೋಂದಣಿ
- ಗ್ರಾಮೀಣ ಭಾಗದ ಮಹಿಳೆಯರಿಗೆ ಹೆಚ್ಚು ಅನುಕೂಲ
LIC Scheme : ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಒತ್ತುಕೊಡುವ ಸಲುವಾಗಿ ಬೇರೆ ಬೇರೆ ಯೋಜನೆಗಳನ್ನು ರೂಪಿಸಿರುವ ಸರ್ಕಾರ ಇದೀಗ ಮಹಿಳೆಯರಿಗೆ ಉದ್ಯೋಗಾವಕಾಶಗಳನ್ನು ಒದಗಿಸಿ ಪ್ರತಿ ತಿಂಗಳು 7,000 ವರೆಗೆ ದುಡಿಮೆ ಮಾಡುವಂತೆ ಅವಕಾಶ ಕಲ್ಪಿಸಿಕೊಡುತ್ತದೆ. ಈ ಬಗ್ಗೆ ಇನ್ನಷ್ಟು ಡಿಟೈಲ್ಡ್ ಮಾಹಿತಿಯನ್ನು ನೋಡೋಣ.
ಎಲ್ಐಸಿ ಬೀಮಾ ಸಖಿ ಯೋಜನೆ!
ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರೇ ಇತ್ತೀಚಿಗೆ ಈ ಯೋಜನೆಗೆ ಚಾಲನೆ ನೀಡಿದ್ದು ಮಹಿಳೆಯರಿಗೆ ಹೆಚ್ಚು ಪ್ರಯೋಜನಕಾರಿಯಾಗಲಿದೆ. ಈ ಯೋಜನೆಯ ಅಡಿಯಲ್ಲಿ 10ನೇ ತರಗತಿ ಪಾಸ್ ಆಗಿರುವ ಮಹಿಳೆಯರು ಎಲ್ಐಸಿ ಏಜೆಂಟ್ ಗಳಾಗಿ (LIC Agent) ಕೆಲಸ ನಿರ್ವಹಿಸಬಹುದು.
ಈ ರೀತಿ ಮಾಡುವುದರಿಂದ ಪ್ರತಿ ತಿಂಗಳು 7 ಸಾವಿರ ರೂಪಾಯಿಗಳನ್ನು ಸುಲಭವಾಗಿ ದುಡಿಯಬಹುದು. ಮೊದಲು ಎಲ್ ಐ ಸಿ ಯಲ್ಲಿ ಮಹಿಳೆಯರಿಗೆ ಟ್ರೈನಿಂಗ್ ನೀಡಲಾಗುತ್ತದೆ. ಬಳಿಕ 3 ವರ್ಷಗಳ ಕಾಲ ಸ್ಟೈಫಂಡ್ ಕೊಡಲಾಗುತ್ತದೆ. ಪದವಿ ಮುಗಿದಿರುವ ಮಹಿಳೆಯರು ಡೆವಲಪ್ಮೆಂಟ್ ಆಫೀಸರ್ ಆಗಿ ಕಾರ್ಯನಿರ್ವಹಿಸಬಹುದು.
ಪ್ಯಾನ್ ಕಾರ್ಡ್ ಇಲ್ಲದೆ ಸಿಬಿಲ್ ಸ್ಕೋರ್ ಚೆಕ್ ಮಾಡಬಹುದಾ! ಇಲ್ಲಿದೆ ಮಾಹಿತಿ
ಪಾಲಿಸಿ ಮಾರಾಟದಲ್ಲಿ ತೊಡಗಿರುವ ಮಹಿಳೆಯರು!
ಈ ಯೋಜನೆ ಆರಂಭವಾದ ಕೇವಲ ಒಂದು ತಿಂಗಳಿನಲ್ಲಿ 52 ಸಾವಿರದಷ್ಟು ಮಹಿಳೆಯರು ತಮ್ಮ ಹೆಸರನ್ನು ನೋಂದಣಿ ಮಾಡಿಸಿಕೊಂಡಿದ್ದಾರೆ. ಅವುಗಳಲ್ಲಿ 27,695 ಮಹಿಳೆಯರಿಗೆ ನೇಮಕಾತಿ ಪತ್ರ ಕೊಡಲಾಗಿದೆ. 14583 ಮಹಿಳೆಯರು ಈಗಾಗಲೇ ಪಾಲಿಸಿ (Life Insurance Policy), ಮಾರಾಟದಲ್ಲಿ ತೊಡಗಿಕೊಂಡಿದ್ದಾರೆ.
ಹಣಕಾಸು ವಿಷಯ ಬಂದಾಗ ಮಹಿಳೆಯರು ತುಂಬಾನೇ ಮುತುವರ್ಜಿಯಿಂದ ಕೆಲಸ ನಿರ್ವಹಿಸುತ್ತಾರೆ ಎನ್ನುವುದಕ್ಕೆ ಇದೊಂದು ನಿದರ್ಶನ.
ಕಡಿಮೆ ಸಮಯದಲ್ಲಿ ನಿಶ್ಚಿತ ಆದಾಯವನ್ನು ತಂದು ಕೊಡುವಂತಹ ಈ ಯೋಜನೆ ಮಹಿಳೆಯರಿಗೆ ಫಲಪ್ರದವಾಗಿದೆ. 14 ರಿಂದ 70 ವರ್ಷ ವಯಸ್ಸಿನ ಮಹಿಳೆಯರು 10ನೇ ತರಗತಿ ತೇರ್ಗಡೆ ಹೊಂದಿದ್ದರೆ, ಯೋಜನೆಗೆ ಅರ್ಜಿ ಸಲ್ಲಿಸಬಹುದು ಮುಂದಿನ ಮೂರು ವರ್ಷಗಳಲ್ಲಿ ಎರಡು ಲಕ್ಷ ಬಿಮಾ ಸಖಿಯರನ್ನು ನೇಮಿಸುವ ಗುರಿ ಹೊಂದಿದ್ದೇವೆ ಎಂದು ಎಲ್ಐಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚಿನ್ನದ ಬಣ್ಣ ನಿಮಗೆ ಗೊತ್ತಿದೆ, ಆದ್ರೆ ಬಿಳಿ ಬಂಗಾರದ ಬಗ್ಗೆ ನಿಮಗೆ ಗೊತ್ತಾ?
ಇನ್ನು ಈ ಕೆಲಸಕ್ಕೆ ಅರ್ಜಿ ಸಲ್ಲಿಸಿದರೆ ಆಯ್ಕೆಯಾದ ಮಹಿಳೆಯರಿಗೆ ಮೊದಲ ವರ್ಷ 7,000 ರೂಪಾಯಿ ಎರಡನೇ ವರ್ಷ 6,000 ಹಾಗೂ ಮೂರನೇ ವರ್ಷ 5,000 ರೂಪಾಯಿಗಳನ್ನು ಕೊಡಲಾಗುವುದು. ಇನ್ನು ಈ ಯೋಜನೆಯ ಪಾಲುದಾರರಾಗಲು ಮಹಿಳೆಯರು ನೇರವಾಗಿ ಎಲ್ ಐಸಿ ಕಚೇರಿಗೆ ಹೋಗಿ ಅಗತ್ಯ ಇರುವ ದಾಖಲೆಗಳನ್ನು ನೀಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.
LIC Beema Sakhi Scheme, 7,000 Monthly Stipend for Women