ನಿಮ್ಮ ಕಾರ್ ಗೆ ನಿಮ್ಮಿಷ್ಟದ ಫ್ಯಾನ್ಸಿ ನಂಬರ್ ಪ್ಲೇಟ್ ಬೇಕಾ? ಜಾಸ್ತಿ ಖರ್ಚಿಲ್ಲದೆ ಸುಲಭವಾಗಿ ಪಡೆಯಿರಿ
ಜನರು ಈಗ ಫ್ಯಾನ್ಸಿ ವಾಹನದ ನಂಬರ್ ಪ್ಲೇಟ್ ಎಂದು ಆಸೆ ಪಡುತ್ತಾರೆ. ಇದಕ್ಕಾಗಿ ನೀವು ಹೆಚ್ಚು ಹಣ ಖರ್ಚು ಮಾಡುವ ಅವಶ್ಯಕತೆ ಇಲ್ಲ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು,
ಈಗಿನ ಕಾಲದಲ್ಲಿ ಎಲ್ಲರಿಗೂ ವಾಹನಗಳ ಕ್ರೇಜ್ ಇದೆ. ತಮ್ಮಿಷ್ಟದ ಕಾರ್ ಬೈಕ್ ಗಳನ್ನು (Car and Bikes) ಖರೀದಿ ಮಾಡಿ, ಎಲ್ಲಾ ಕಡೆ ಓಡಾಡುತ್ತಾ ಎಂಜಾಯ್ ಮಾಡುತ್ತಾರೆ. ವಾಹನಗಳಲ್ಲಿ ಓಡಾಡುವುದು ಒಂದು ಥರ ಥ್ರಿಲ್, ಖುಷಿ ಕೊಡುತ್ತದೆ. ಆದರೆ ಕೆಲವರಿಗೆ ಈ ಥ್ರಿಲ್ ಬರಿ ವಾಹನ ಓಡಿಸುವುದರಲ್ಲಿ ಮುಗಿಯುವುದಿಲ್ಲ.
ತಮ್ಮ ವಾಹನದ ನಂಬರ್ (Vehicle Number) ಕೂಡ ವಿಶೇಷವಾಗಿರಬೇಕು ಎಂದು ಬಯಸುತ್ತಾರೆ. ತಮ್ಮಿಷ್ಟದ ಫ್ಯಾನ್ಸಿ ನಂಬರ್ (Fancy Number) ತಮ್ಮ ವಾಹನಕ್ಕು ಬೇಕು ಎಂದು ಬಯಸುತ್ತಾರೆ. ಮೊದೆಲೆಲ್ಲಾ ಸೆಲೆಬ್ರಿಟಿಗಳು ಈ ರೀತಿ ಮಾಡುತ್ತಿದ್ದರು, ಸೆಲೆಬ್ರಿಟಿಗಳು ಸಾಕಷ್ಟು ಹಣ ನೀಡಿ ಫ್ಯಾನ್ಸಿ ನಂಬರ್ ಪ್ಲೇಟ್ ಪಡೆಯುತ್ತಿದ್ದರು.
ಆದರೆ ಈಗ ಸಾಮಾನ್ಯ ಜನರು ಕೂಡ ಫ್ಯಾನ್ಸಿ ವಾಹನದ ನಂಬರ್ ಬೇಕು ಎಂದು ಆಸೆ ಪಡುತ್ತಾರೆ. ಇದಕ್ಕಾಗಿ ನೀವು ಹೆಚ್ಚು ಹಣ ಖರ್ಚು ಮಾಡುವ ಅವಶ್ಯಕತೆ ಇಲ್ಲ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು, https://fancy.parivahan.gov.in/fancy/faces/public/login.xhtml ಈ ವೆಬ್ಸೈಟ್ ಓಪನ್ ಮಾಡಿ.
ಆಧಾರ್ ಕಾರ್ಡ್ ಗೆ ಲಿಂಕ್ ಆಗಿರೋ ಮೊಬೈಲ್ ನಂಬರ್ ಚೇಂಜ್ ಮಾಡೋದು ಹೇಗೆ? ಮನೆಯಲ್ಲೇ ಕುಳಿತು ಮಾಡಬಹುದಾ?
ಇಲ್ಲಿ ಲಾಗ್ ಇನ್ ಆಗಿ, Public User ಆಗಿ ರಿಜಿಸ್ಟರ್ ಮಾಡಿಕೊಳ್ಳಿ, ಲಾಗಿನ್ ಆದ ನಂತರ ಯಾವೆಲ್ಲಾ ಫ್ಯಾನ್ಸಿ ನಂಬರ್ ಗಳು ಅಲ್ಲಿ ಲಭ್ಯವಿರುತ್ತದೆ ಒಂದು ಲಿಸ್ಟ್ ನಿಮ್ಮೆದುರು ಬರುತ್ತದೆ. ಅದರಲ್ಲಿ ನಿಮಗೆ ಇಷ್ಟ ಆಗುವ ಸಂಖ್ಯೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ನಂತರ ನೀವು ಆಯ್ಕೆ ಮಾಡಿದ ನಂಬರ್ ಗೆ ನೀವು ಬಿಡ್ ಮಾಡಬೇಕಾಗುತ್ತದೆ.
ಈ ನಂಬರ್ ರಿಜಿಸ್ಟ್ರೇಶನ್ ಮತ್ತು ರಿಸರ್ವ್ ಮಾಡುವುದಕ್ಕೆ ನೀವು ಹಣ ಪಾವತಿ ಮಾಡಬೇಕಾಗುತ್ತದೆ. ಇದಕ್ಕಾಗಿ ಪಾವತಿಸುವ ಹಣ ಬೇರೆ ಬೇರೆ ರಾಜ್ಯದಲ್ಲಿ ಬೇರೆ ಬೇರೆ ರೀತಿ ಇರುತ್ತದೆ. ಪ್ರಸ್ತುತ ದೆಹಲಿಯಲ್ಲಿ 1000 ರೂಪಾಯಿ ಆಗಿದ್ದು, ಒಂದು ವೇಳೆ ಈ ನಂಬರ್ ಬೇಡ ಎಂದರೆ ಈ ಹಣ ನಿಮಗೆ ವಾಪಸ್ ಸಿಗುವುದಿಲ್ಲ.
ಜಸ್ಟ್ ₹100 ರೂಪಾಯಿ ಖರ್ಚು.. 500 ಕಿ.ಮೀ ಸುತ್ತಾಡಬಹುದು, ಬಂದೇ ಬಿಡ್ತು ಬಜೆಟ್ ಬೆಲೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್!
ಜೀರೋ ಡೌನ್ ಪೇಮೆಂಟ್, ಜೀರೋ ಬಡ್ಡಿ! ₹1 ರೂಪಾಯಿ ಪಾವತಿಸದೇ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿ.. ಇದಕ್ಕಿಂತ ಆಫರ್ ಬೇಕಾ?
ಬಿಡ್ಡಿಂಗ್ ಕುರಿತ ಎಲ್ಲಾ ಕೆಲಸಗಳು ಆನ್ಲೈನ್ ನಲ್ಲಿಯೇ ನಡೆಯುತ್ತದೆ.. ಜಾಸ್ತಿ ಬಿಡ್ ಮಾಡಿವವರಿಗೆ ಆ ನಂಬರ್ ಸಿಗುತ್ತದೆ.. ಬಿಡ್ಡಿಂಗ್ ಮಾಡಿ ಯಾರು ಆ ನಂಬರ್ ಗೆಲ್ಲುತ್ತಾರೋ ಅವರು ತಾವು ಬಿಡ್ಡಿಂಗ್ ಗೆ ರಿಜಿಸ್ಟರ್ ಮಾಡಿದ ವೆಬ್ಸೈಟ್ ಗೆ ಹೋಗಿ ಅಲ್ಲಿ ತಾವು ಬಿಡ್ ಮಾಡಿದ ಮೊತ್ತವನ್ನು ಆನ್ಲೈನ್ ಮೂಲಕ ಕಟ್ಟಬೇಕು.
ಹಣ ಕಟ್ಟಿದ ನಂತರ ನಿಮ್ಮ ಮೊಬೈಲ್ ಗೆ ಮೆಸೇಜ್ ಬರುತ್ತದೆ, ಈ ವಾಹನ ಸಂಖ್ಯೆ ನಿಮ್ಮದಾಗಿದೆ ಎನ್ನುವುದನ್ನು ಸೂಚಿಸುತ್ತದೆ. ಈಗ ನೀವು VIP ವೆಹಿಕಲ್ ನಂಬರ್ ಮಾಲೀಕರಾಗುತ್ತೀರಿ. ಈ ಬಗ್ಗೆ ನಿಮಗೆ ಇನ್ನು ಹೆಚ್ಚು ಮಾಹಿತಿ ಬೇಕಿದ್ದರೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
Fancy number registration for vehicles
Follow us On
Google News |